Saturday, July 13, 2024
spot_img
spot_img
spot_img
spot_img
spot_img
spot_img

ಹೆಂಡತಿ ಜೊತೆ ಲೈಂಗಿಕ ಕ್ರಿಯೆ ನಡೆಸಿದ್ದಕ್ಕೆ 7 ವರ್ಷ ಜೈಲು ಶಿಕ್ಷೆ ; ಏನಿದು ವಿಚಿತ್ರ ಘಟನೆ.;

spot_img

ಜನಸ್ಪಂದನ ನ್ಯೂಸ್, ಡೆಸ್ಕ್ : ತಾಳಿ ಕಟ್ಟಿದ ಹೆಂಡತಿ ಜೊತೆ ಲೈಂಗಿಕ ಕ್ರಿಯೆ ನಡೆಸಿದ ಕಾರಣಕ್ಕೆ ವ್ಯಕ್ತಿಯೊಬ್ಬನಿಗೆ 7 ವರ್ಷ ಜೈಲು ಶಿಕ್ಷೆ ವಿಧಿಸಿದ ಘಟನೆ ನಡೆದಿದೆ.

ಅಪ್ರಾಪ್ತ ಬಾಲಕಿಯನ್ನು ವಿವಾಹವಾಗಿ ಲೈಂಗಿಕ ಕ್ರಿಯೆ ನಡೆಸಿದ್ದರಿಂದ ವ್ಯಕ್ತಿ ಶಿಕ್ಷೆಗೆ ಗುರಿಯಾಗಿದ್ದಾನೆ.

ವ್ಯಕ್ತಿಯು, 13 ವರ್ಷದ ಬಾಲಕಿ ಜೊತೆ ಓಡಿ ಹೋಗಿ ಮದುವೆಯಾಗಿದ್ದ. ಅಲ್ಲದೇ ಅಪ್ರಾಪ್ತಳ ಜೊತೆ ಲೈಂಗಿಕ ಕ್ರಿಯೆ ಕೂಡಾ ನಡೆಸಿದ್ದ.

ಇದನ್ನು ಓದಿ : ಮದುವೆಯನ್ನೇ ಬ್ಯುಸಿನೆಸ್ ಮಾಡಿಕೊಂಡ ಲೇಡಿ ; ಪೊಲೀಸ್‌ ಅಧಿಕಾರಿಗಳು ಸೇರಿ 50 ಜನರ ಜೊತೆ ಮದುವೆ.!

ಈಗ ಇವರಿಗೆ ಇಬ್ಬರು ಮಕ್ಕಳಿದ್ದು, ಆ ಬಾಲಕಿ ಮತ್ತೆ ಗರ್ಭಿಣಿಯಾಗಿದ್ದಾಳೆ. ಓಡಿ ಹೋಗಿ ವಿವಾಹವಾದ ಮೇಲೆ ಕುಟುಂಬದವರಿಗೆ ಭಯಬಿದ್ದು ಪೊಲೀಸ್ ಠಾಣೆಯಲ್ಲಿ ದೂರು ಕೊಟ್ಟಿದ್ದಳು. ಅನಂತರ ಆಕೆ ತಾಳಿ ಕಟ್ಟಿದವನ ಜೊತೆಯೇ ಸಂಸಾರ ನಡೆಸಿದ್ದಳು. ಈಗ ಈಕೆಗೆ 22 ವರ್ಷವಿದ್ದರೆ, ಗಂಡನಿಗೆ 30 ವರ್ಷವಿದೆ.

ವಿಚಿತ್ರವೆಂದರೆ ಈ ದಂಪತಿ ಇದೀಗ ಸುಖವಾಗಿದ್ದಾರೆ. ಆದರೆ 9 ವರ್ಷಗಳ ಹಿಂದಿನ ಪ್ರಕರಣದಲ್ಲಿ ಇದೀಗ ತೀರ್ಪು ಪ್ರಕಟವಾಗಿದೆ. ಆಗ ದೂರು ನೀಡಿದ್ದ ಯುವತಿ ಇದೀಗ 3ನೇ ಬಾರಿಗೆ ಗರ್ಭಿಣಿಯಾಗಿದ್ದು, ಈ ಸಮಯದಲ್ಲಿ ಗಂಡ ಜೈಲು ಶಿಕ್ಷೆ ಅನುಭವಿಸಬೇಕೆಂದು ತೀರ್ಪು ಬಂದಿದೆ. ಇದೀಗ ಆಕೆ ಗಂಡನನ್ನು ಬಚಾವ್ ಮಾಡಲು ಹೈ ಕೋರ್ಟ್ ಮೆಟ್ಟಿಲು ಹತ್ತಲು ನಿರ್ಧರಿಸಿದ್ದಾಳೆ ಎಂದು ವರದಿಯಿಂದ ತಿಳಿದು ಬಂದಿದೆ.

ಉತ್ತರ ಪ್ರದೇಶದ ಬರೇಲಿ ವಿಚಾರಣಾ ನ್ಯಾಯಾಲಯ ಈಗ ಈ ಆದೇಶ ನೀಡಿದೆ.

ಇದನ್ನು ಓದಿ : Video : ಕಾಲೇಜು ಮುಂದೆ ನಿಂತಿದ್ದ ಯುವತಿಯರಿಗೆ ಗುಪ್ತಾಂಗ ತೋರಿಸಿ ಪರಾರಿಯಾದ ಕಾಮುಕ ಪೊಲೀಸ್ ವಶಕ್ಕೆ.!

2015ರ ಫೆಬ್ರವರಿಯಲ್ಲಿ ಮನೆಯವರಿಗೆ ಹೇಳದೆ ಓಡಿಹೋದ ನಂತರ ಆ ಹುಡುಗಿ ಮದುವೆಯಾಗಿದ್ದಳು. ನಂತರ ಮೇ 2015ರಲ್ಲಿ ಹಿಂದಿರುಗಿದಳು. ಅದರ ನಂತರ ಆಕೆಯ ತಂದೆ ಬರೇಲಿಯಲ್ಲಿ ತನ್ನ ಅಳಿಯನ ವಿರುದ್ಧ ಅಪಹರಣದ ದೂರು ದಾಖಲಿಸಿದರು. ಐಪಿಸಿ ಸೆಕ್ಷನ್ 363 (ಅಪಹರಣ) ಮತ್ತು 366 (ಅಪಹರಣ, ಅಪಹರಣ ಅಥವಾ ಮಹಿಳೆಯ ಮದುವೆಗೆ ಒತ್ತಾಯಿಸಲು ಪ್ರೇರೇಪಿಸುವುದು ಇತ್ಯಾದಿ) ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿತ್ತು.

ಪೊಲೀಸರು ಅಪ್ರಾಪ್ತ ಬಾಲಕಿಯ ವೈದ್ಯಕೀಯ ಪರೀಕ್ಷೆಯನ್ನು ನಡೆಸಿದರು, ಅದರ ನಂತರ ಸಮಾಲೋಚನೆ ನಡೆಸಿ ವೈದ್ಯರು ಆಕೆಯೊಂದಿಗೆ ಲೈಂಗಿಕ ಕ್ರಿಯೆ ನಡೆಸಲಾಗಿದೆ ಎಂದು ವರದಿ ನೀಡಿದ್ದರು. ಈ ಹಿನ್ನೆಲೆಯಲ್ಲಿ ಅತ್ಯಾಚಾರದ ಕೇಸ್ ಕೂಡ ದಾಖಲಿಸಲಾಗಿತ್ತು.

spot_img
spot_img
- Advertisment -spot_img