Saturday, July 13, 2024
spot_img
spot_img
spot_img
spot_img
spot_img
spot_img

ಬಾಲಿವುಡ್‌ ಹಾಗೂ ಕಿರುತೆರೆ ನಟಿಗೆ 3ನೇ ಹಂತದ ಸ್ತನ Cancer.!

spot_img

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ಬಾಲಿವುಡ್‌ ಹಾಗೂ ಕಿರುತೆರೆ ನಟಿ ಹಿನಾ ಖಾನ್ (Hina Khan) ಅವರಿಗೆ ಸ್ತನದ ಕ್ಯಾನ್ಸರ್ ಪತ್ತೆ ಆಗಿದೆ. ನನಗೆ ಸ್ತನ ಕ್ಯಾನ್ಸರ್ 3ನೇ ಹಂತದಲ್ಲಿದೆ ಎಂದು ಸ್ವತಃ ನಟಿಯೇ ಪೋಸ್ಟ್‌ ಮುಖಾಂತರ ಹೇಳಿಕೊಂಡಿದ್ದಾರೆ.

ನಟಿ ಹಿನಾ ಖಾನ್ ಕಿರುತೆರೆಯಲ್ಲಿ ಅತ್ಯಂತ ಜನಪ್ರಿಯ ನಟಿಯರಲ್ಲಿ ಒಬ್ಬರು. ಜನಪ್ರಿಯ TV ಧಾರಾವಾಹಿ, ‘ಯೇ ರಿಶ್ತಾ ಕ್ಯಾ ಕೆಹ್ಲಾತಾ ಹೈ’, ‘ಬಿಗ್ ಬಾಸ್’ ಮತ್ತು ‘ಖತ್ರೋನ್ ಕೆ ಖಿಲಾಡಿ’ ಯಂತಹ ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿದ್ದಾರೆ. ‘ಹ್ಯಾಕ್ಡ್’ ಮತ್ತು ‘ಡ್ಯಾಮೇಜ್ಡ್ 2’ ನಂತಹ ಸಿನಿಮಾಗಳಲ್ಲಿಯೂ ನಟಿಸಿದ್ದರು.

ಇದನ್ನೂ ಓದಿ : ಮಲಗಿದ ಯುವಕನ ಚಡ್ಡಿಯಲ್ಲಿ ಅವಿತು ಕುಳಿತ ನಾಗರ ಹಾವು : ಮುಂದೆನಾಯ್ತು Video ನೋಡಿ.!

ಈ ಬಗ್ಗೆ ಪೋಸ್ಟ್ ಹಾಕಿದ್ದಾರೆ. “ನಾನು ಒಂದು ಪ್ರಮುಖ ಸುದ್ದಿ ಹಂಚಿಕೊಳ್ಳಬೇಕು. ನನಗೆ ಮೂರನೇ ಸ್ಟೇಜ್​ನ ಸ್ತನ ಕ್ಯಾನ್ಸರ್ ಇದೆ’ ಎಂದು ಹಿನಾ ಖಾನ್ ಅವರು ಮಾಹಿತಿ ಹಂಚಿಕೊಂಡಿದ್ದಾರೆ. ‘ನಾನು ಚೆನ್ನಾಗಿಯೇ ಇದ್ದೇನೆ. ನಾನು ಗಟ್ಟಿ ಇದ್ದೇನೆ. ಈ ರೋಗದಿಂದ ಹೊರ ಬರಲು ಪ್ರಯತ್ನಿಸುತ್ತಿದ್ದೇನೆ. ನನಗೆ ಚಿಕಿತ್ಸೆ ಕೊಡಿಸುವ ಕೆಲಸ ಶುರುವಾಗಿದೆ. ಮತ್ತಷ್ಟು ಗಟ್ಟಿಯಾಗಿ ಬರಲು ಏನೆಲ್ಲ ಬೇಕೋ ಅದೆಲ್ಲವನ್ನೂ ಮಾಡುತ್ತೇನೆ” ಎಂದಿದ್ದಾರೆ ಹಿನಾ ಖಾನ್.

‘ನನಗೆ ಗೌರವ ಹಾಗೂ ಖಾಸಗಿತನವನ್ನು ನೀಡಿ. ನೀವು ನೀಡಿರುವ ಪ್ರೀತಿ ಹಾಗೂ ಆಶೀರ್ವಾದವನ್ನು ನಾನು ಪ್ರಶಂಶಿಸುತ್ತೇನೆ’ ಎಂದು ಅವರು ಬರೆದುಕೊಂಡಿದ್ದಾರೆ. ಹಿನಾಗೆ ಈಗ 36 ವರ್ಷ ವಯಸ್ಸು. ಹಿಂದಿಯಲ್ಲಿ ಕೆಲವು ಧಾರಾವಾಹಿಗಳಲ್ಲಿ ಅವರು ನಟಿಸಿದ್ದಾರೆ. ಅವರು ಸಾಕಷ್ಟು ಪಾಸಿಟಿವ್ ಆಗಿದ್ದಾರೆ.

ಇದನ್ನೂ ಓದಿ : ಜುಲೈ 3 ರಿಂದ ಜಿಯೋ, ಏರ್ಟೆಲ್ ಟ್ಯಾರಿಫ್ ಹೆಚ್ಚಳ : ಯಾವ ಪ್ಲಾನ್ ಗೆ ಎಷ್ಟು ಏರಿಕೆ? ಇಲ್ಲಿದೆ ಡಿಟೇಲ್ಸ್.

ಹಿನಾ ಅವರನ್ನು ಬೆಂಬಲಿಸಿ ಅನೇಕರು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್​ಗಳನ್ನು ಹಾಕುತ್ತಿದ್ದಾರೆ. ಹಿನಾಗೆ ಕ್ಯಾನ್ಸರ್ ವಿರುದ್ಧ ಹೋರಾಡುವ ಶಕ್ತಿಯನ್ನು ಫ್ಯಾನ್ಸ್ ನೀಡಲಿ ಎಂದು ಅನೇಕರು ಕೋರಿಕೊಳ್ಳುತ್ತಿದ್ದಾರೆ.

spot_img
spot_img
- Advertisment -spot_img