Saturday, July 13, 2024
spot_img
spot_img
spot_img
spot_img
spot_img
spot_img

ಪವಿತ್ರಾ ಗೌಡಗೆ ರೇಣುಕಾಸ್ವಾಮಿ ಕಳುಹಿಸಿದ್ದು ಎಷ್ಟು ಮೆಸೇಜ್.? ಸ್ಫೋಟಕ ಮಾಹಿತಿ.!

spot_img

ಜನಸ್ಪಂದನ ನ್ಯೂಸ್, ಬೆಂಗಳೂರು : ಪಟ್ಟಣಗೆರೆ ಶೆಡ್‌ನಲ್ಲಿ ನಡೆದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದಿನ ಕಳೆದಂತೆ ಒಂದೊಂದೇ ವಿಷಯಗಳು ಬಯಲಾಗುತ್ತಿವೆ. ಕೊಲೆಯ ಕ್ರೌರ್ಯ ಒಂದು ಕಡೆಯಾದ್ರೆ ಕೊಲೆಯಾದ ರೇಣುಕಾಸ್ವಾಮಿ ಮಾಡಿದ ತಪ್ಪು ಕೂಡ ತನಿಖೆಯಲ್ಲಿ ಹೊರ ಬರುತ್ತಿದೆ.

ಇದೀಗ ಬಂದ ಸ್ಫೋಟಕ ಮಾಹಿತಿಯಲ್ಲಿ ದರ್ಶನ್ ಸಂಸಾರದಲ್ಲಿ ಹುಳಿ ಹಿಂಡಿದ್ದೇ ಪವಿತ್ರಾ ಗೌಡ ಅಂತ ಪದೇ ಪದೇ ರೇಣುಕಾಸ್ವಾಮಿ ಅಶ್ಲೀಲ ಸಂದೇಶಗಳನ್ನ A1 ಪವಿತ್ರಾ ಗೌಡ ಅವರಿಗೆ ಕಳುಹಿಸಿ ಕೊಡಬಾರದ ಕಾಟ ಕೊಟ್ಟಿದ್ದಾನೆ ಎನ್ನಲಾಗಿದೆ.

ಇದನ್ನೂ ಓದಿ : ಬೆಳ್ಳಂಬೆಳಗ್ಗೆ ವಾಟ್ಸ್ಆಪ್ ನೋಡಿ ಬೆಚ್ಚಿಬಿದ್ದ ದಂಪತಿ ; ಅಂಥದ್ದೇನಿತ್ತು ಅದರಲ್ಲಿ.? 

ಹತ್ಯೆಯಾದ ಬಳಿಕ ರೇಣುಕಾಸ್ವಾಮಿ ಮೃತದೇಹವನ್ನ ಸುಮನಹಳ್ಳಿಯ ರಾಜಕಾಲುವೆಗೆ ಬಿಸಾಡಲಾಗಿತ್ತು. ಮೊಬೈಲ್ ಫೋನ್‌ ಅನ್ನೂ ಅಲ್ಲೇ ಎಸೆಯಲಾಗಿತ್ತು. ತನಿಖೆ ನಡೆಸಿದ ಪೊಲೀಸರಿಗೆ ಎಷ್ಟೇ ಹುಡುಕಿದರೂ ರೇಣುಕಾಸ್ವಾಮಿಯ ಮೊಬೈಲ್ ಸಿಕ್ಕಿರಲಿಲ್ಲ. ಕೊನೆಗೆ ಕೋರ್ಟ್ ಅನುಮತಿ ಪಡೆದ ಪೊಲೀಸರು ಹೊಸ ಸಿಮ್ ಖರೀದಿ ಮಾಡಿ CDR ಅಂದ್ರೆ ಕಾಲ್ ಡಿಟೇಲ್ ರೆಕಾರ್ಡ್ ಮಾಹಿತಿಯನ್ನು ಕಲೆ ಹಾಕಿದ್ದಾರೆ.

ಪೊಲೀಸರ ತನಿಖೆಯಲ್ಲಿ ರೇಣುಕಾಸ್ವಾಮಿ ಕುರಿತ ಮತ್ತಷ್ಟು ರೋಚಕ ಅಂಶಗಳು ಬಯಲಾಗಿದೆ. ಅದರಲ್ಲಿ ಕೊಲೆಯಾದ ರೇಣುಕಾಸ್ವಾಮಿ ಎಷ್ಟು ತಿಂಗಳಿಂದ ಪವಿತ್ರಾ ಗೌಡಗೆ ಕಾಟ ಕೊಡಲು ಶುರು ಮಾಡಿದ್ದ. ಪವಿತ್ರಾ ಗೌಡಗೆ ಎಷ್ಟು ಮೆಸೇಜ್ ಕಳುಹಿಸಿದ್ದ ಅನ್ನೋ ಮಾಹಿತಿ ಲಭ್ಯವಾಗಿದೆ ಎನ್ನಲಾಗಿದೆ.

ಇದನ್ನೂ ಓದಿ : SSC ಇಂದ 8,326 ಹುದ್ದೆಗಳಿಗೆ ಅರ್ಜಿ ಆಹ್ವಾನ : ಜಸ್ಟ್ ಹತ್ತನೇ ತರಗತಿ ಪಾಸಾದವರು ಅರ್ಜಿ ಸಲ್ಲಿಸಬಹುದು.!

ನ್ಯೂಸ್ ಚಾನೆಲ್‌ಗಳ ಮಾಹಿತಿ ಪ್ರಕಾರ, ಕಳೆದ ಫೆಬ್ರವರಿ ತಿಂಗಳಿಂದ ರೇಣುಕಾಸ್ವಾಮಿ ಆರೋಪಿ ಪವಿತ್ರಾ ಗೌಡಗೆ ಮೆಸೇಜ್ ಮಾಡಲು ಶುರು ಮಾಡಿದ್ದ. ಅಂದ್ರೆ ಕಳೆದ 5 ತಿಂಗಳಿಂದ ರೇಣುಕಾಸ್ವಾಮಿ ಪವಿತ್ರಾ ಗೌಡ ಅವರಿಗೆ ಕಾಟ ಕೊಡುತ್ತಿದ್ದ ಎನ್ನಲಾಗಿದೆ. ಈತನ ಕಾಟ ಅತಿಯಾದಾಗ ಪವಿತ್ರಾ ಗೌಡ ಅವರು ಪವನ್‌ಗೆ ಈ ವಿಚಾರ ತಿಳಿಸಿದ್ದಾರೆ.

ಮೃತ ರೇಣುಕಾಸ್ವಾಮಿ, ಪವಿತ್ರಾ ಗೌಡಗೆ ಬರೋಬ್ಬರಿ 200 ಮೆಸೇಜ್ ಕಳುಹಿಸಿದ್ದ ಎನ್ನಲಾಗಿದೆ. ಆ 200 ಮೆಸೇಜ್‌ಗಳು ಅಶ್ಲೀಲ ಮೆಸೇಜ್‌ಗಳಾಗಿದ್ದವು ಎನ್ನಲಾಗಿದೆ. ರೇಣುಕಾಸ್ವಾಮಿ ಮೆಸೇಜ್‌ಗಳನ್ನು ನೋಡಿ, ನೋಡಿ ಪವಿತ್ರಾ ಗೌಡ ಕಿರಿಕಿರಿಗೊಂಡು ರೋಸಿ ಹೋಗಿ ಆರೋಪಿ ಪವನ್‌ಗೆ ಹೇಳಿದ್ದರು. ಆದರೆ ಕೊಲೆ ಆಗುತ್ತೆ ಅಂದುಕೊಂಡಿರಲಿಲ್ಲ ಎಂದು ಪವಿತ್ರಾ ಗೌಡ ಅವರು ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ.

spot_img
spot_img
- Advertisment -spot_img