IRIDO ನಲ್ಲಿ6300 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

IRIDO ನಲ್ಲಿ 6300 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ; 10ನೇ, 12ನೇ, ಪದವೀಧರರಿಗೆ ಅವಕಾಶ.

ಜನಸ್ಪಂದನ ನ್ಯೂಸ್‌, ನೌಕರಿ : 10ನೇ, 12ನೇ ಮತ್ತು ಪದವೀಧರರಿಗೆ ಒಂದು ಒಳ್ಳೆಯ ಸುವರ್ಣಾವಕಾಶ. ಭಾರತೀಯ ಗ್ರಾಮೀಣ ಕೈಗಾರಿಕಾ ಅಭಿವೃದ್ಧಿ ಸಂಸ್ಥೆ (IRIDO) ಯಲ್ಲಿ ದೇಶಾಧ್ಯಂತ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಆಸಕ್ತರು ಇಂದೇ ಅರ್ಜಿ ಸಲ್ಲಿಸಿ.

ಭಾರತೀಯ ಗ್ರಾಮೀಣ ಕೈಗಾರಿಕಾ ಅಭಿವೃದ್ಧಿ ಸಂಸ್ಥೆ (Indian Rural Industrial Development Organization – IRIDO) ವತಿಯಿಂದ 2026ನೇ ಸಾಲಿನ ನೇಮಕಾತಿ ಅಧಿಸೂಚನೆ ಪ್ರಕಟವಾಗಿದ್ದು, ದೇಶಾದ್ಯಂತ ಒಟ್ಟು 6300 ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ.

ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ ಮೂಲಕ ಆನ್‌ಲೈನ್‌ (Online) ನಲ್ಲಿ ಅರ್ಜಿ ಸಲ್ಲಿಸಬಹುದು. ಈ ನೇಮಕಾತಿ ಪ್ರಕ್ರಿಯೆಯಡಿ ಚಾಲಕ (Driver), ಎಂಟಿಎಸ್‌ (MTS) ಸೇರಿದಂತೆ ಹಲವು ಹುದ್ದೆಗಳು ಖಾಲಿ ಇದ್ದು, ಭಾರತದೆಲ್ಲೆಡೆ ಉದ್ಯೋಗ ಅವಕಾಶ ದೊರೆಯಲಿದೆ.

ಹುದ್ದೆಗಳ ವಿವರ :

  • ಇಲಾಖೆ ಹೆಸರು: ಭಾರತೀಯ ಗ್ರಾಮೀಣ ಕೈಗಾರಿಕಾ ಅಭಿವೃದ್ಧಿ ಸಂಸ್ಥೆ (IRIDO).
  • ಒಟ್ಟು ಹುದ್ದೆಗಳು: 6300.
  • ಹುದ್ದೆಗಳ ಹೆಸರು: ಚಾಲಕ, MTS ಹಾಗೂ ಇತರೆ ಹುದ್ದೆಗಳು.
  • ಉದ್ಯೋಗ ಸ್ಥಳ: ಅಖಿಲ ಭಾರತ.
  • ಅರ್ಜಿ ವಿಧಾನ: ಆನ್‌ಲೈನ್ (Online Mode).

ವೇತನ ಶ್ರೇಣಿ :

ಅಧಿಕೃತ ಅಧಿಸೂಚನೆಯ ಪ್ರಕಾರ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ ರೂ.18,000 ರಿಂದ ರೂ.2,15,900 ವರೆಗೆ ವೇತನ (Salary) ನೀಡಲಾಗುತ್ತದೆ. ಹುದ್ದೆಯ ಪ್ರಕಾರ ವೇತನದಲ್ಲಿ ವ್ಯತ್ಯಾಸ ಇರಲಿದೆ.

ವಯೋಮಿತಿ :

  • ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಕನಿಷ್ಠ ವಯಸ್ಸು 18 ವರ್ಷವಾಗಿರಬೇಕು, ಮತ್ತು
  • ಗರಿಷ್ಠ 45 ವರ್ಷ ಮೀರಿರಬಾರದು.

ವಯೋಮಿತಿ ಸಡಿಲಿಕೆ :

  • ಒಬಿಸಿ (OBC) ಅಭ್ಯರ್ಥಿಗಳಿಗೆ: 3 ವರ್ಷ
  • ಎಸ್‌ಸಿ/ಎಸ್‌ಟಿ (SC/ST) ಅಭ್ಯರ್ಥಿಗಳಿಗೆ: 5 ವರ್ಷ
  • ಪಿಡಬ್ಲ್ಯೂಬಿಡಿ (PwBD) ಅಭ್ಯರ್ಥಿಗಳಿಗೆ: 10 ವರ್ಷ

ಶೈಕ್ಷಣಿಕ ಅರ್ಹತೆ :

ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ 10ನೇ ತರಗತಿ, 12ನೇ ತರಗತಿ, ಪದವಿ (Degree) ಅಥವಾ ಸ್ನಾತಕೋತ್ತರ ಪದವಿ (Post Graduation) ಪೂರ್ಣಗೊಳಿಸಿರಬೇಕು.

ಇದನ್ನು ಓದಿ : SSLC ಪಾಸಾಗಿದ್ದೀರಾ? ಕರ್ನಾಟಕ ಹೈಕೋರ್ಟ್‌ನಲ್ಲಿ ಗ್ರೂಪ್-ಡಿ ಹುದ್ದೆಗಳ ನೇಮಕಾತಿ.

ಅರ್ಜಿ ಶುಲ್ಕ :

  • SC/ST/OBC/EWS ಅಭ್ಯರ್ಥಿಗಳು: ₹350/-
  • ಇತರ ಅಭ್ಯರ್ಥಿಗಳು: ₹690/-

ಆಯ್ಕೆ ಪ್ರಕ್ರಿಯೆ :

ಅಭ್ಯರ್ಥಿಗಳ ಆಯ್ಕೆ ಪರೀಕ್ಷೆ, ದಾಖಲೆ ಪರಿಶೀಲನೆ (Document Verification) ಮತ್ತು ಇತರೆ ಮಾನದಂಡಗಳ ಆಧಾರದ ಮೇಲೆ ನಡೆಯುವ ಸಾಧ್ಯತೆ ಇದೆ. ಹೆಚ್ಚಿನ ಮಾಹಿತಿಗಾಗಿ ಅಧಿಕೃತ ಅಧಿಸೂಚನೆಯನ್ನು ಪರಿಶೀಲಿಸುವುದು ಉತ್ತಮ.

ಅರ್ಜಿ ಸಲ್ಲಿಸುವ ವಿಧಾನ :

1. ಅಧಿಕೃತ ವೆಬ್‌ಸೈಟ್‌ (Website) ಗೆ ಭೇಟಿ ನೀಡಿ.
2. ನೇಮಕಾತಿ ಅಧಿಸೂಚನೆ (Notification) ಯನ್ನು ಸಂಪೂರ್ಣವಾಗಿ ಓದಿ.
3. ಆನ್‌ಲೈನ್ ಅರ್ಜಿ ಲಿಂಕ್ ತೆರೆಯಿರಿ.
4. ಅಗತ್ಯ ಮಾಹಿತಿಗಳನ್ನು ಸರಿಯಾಗಿ ಭರ್ತಿ ಮಾಡಿ.
5. ಅಗತ್ಯ ದಾಖಲೆಗಳು, ಫೋಟೋ ಮತ್ತು ಸಹಿಯನ್ನು ಅಪ್‌ಲೋಡ್ (Upload) ಮಾಡಿ.
6. ಅರ್ಜಿ ಶುಲ್ಕ ಪಾವತಿಸಿ.
7. ಸಲ್ಲಿಸಿದ ಅರ್ಜಿಯ ಪ್ರಿಂಟ್‌ಔಟ್ (Printout) ತೆಗೆದುಕೊಂಡು ಭದ್ರವಾಗಿ ಇಟ್ಟುಕೊಳ್ಳಿ.

ಇಂದಿನ ಎಲ್ಲಾ ತಾಜಾ ಸುದ್ದಿಗಳನ್ನು ಇಲ್ಲಿ ಓದಿ

ಪ್ರಮುಖ ದಿನಾಂಕಗಳು :

  • ಅರ್ಜಿ ಪ್ರಾರಂಭ ದಿನಾಂಕ: 01 ಮೇ 2026
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 31 ಮೇ 2026

ಪ್ರಮುಖ ಮಾಹಿತಿ :

ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮೊದಲು ಅಧಿಕೃತ ಅಧಿಸೂಚನೆಯನ್ನು ಕಡ್ಡಾಯವಾಗಿ ಓದಬೇಕು. ತಪ್ಪು ಮಾಹಿತಿ ನೀಡಿದರೆ ಅರ್ಜಿ ತಿರಸ್ಕೃತವಾಗುವ ಸಾಧ್ಯತೆ ಇದೆ.

• ಅರ್ಜಿ ಸಲ್ಲಿಸುವ ಲಿಂಕ್ : ಇಲ್ಲಿ ಕ್ಲಿಕ್ ಮಾಡಿ


Disclaimer: ಈ ಲೇಖನದಲ್ಲಿರುವ (IRIDO) ಮಾಹಿತಿ ವಿವಿಧ ಸಾರ್ವಜನಿಕ ಮೂಲಗಳು ಹಾಗೂ ಪ್ರಕಟಿತ ಅಧಿಸೂಚನೆ ಆಧಾರಿತವಾಗಿದೆ. ಅರ್ಜಿ ಸಲ್ಲಿಸುವ ಮೊದಲು ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ ಮತ್ತು ಅಧಿಸೂಚನೆಯನ್ನು ಪರಿಶೀಲಿಸಿ ದೃಢಪಡಿಸಿಕೊಳ್ಳುವುದು ಸೂಕ್ತ.

Leave a Comment

Your email address will not be published. Required fields are marked *

Scroll to Top