ಜನಸ್ಪಂದನ ನ್ಯೂಸ್, ಬೆಳಗಾವಿ : ಬೆಳಗಾವಿ ಜಿಲ್ಲೆಯ ಸವದತ್ತಿ ಯಲ್ಲಮ್ಮ (Yallamma ) ದೇವಾಲಯದಲ್ಲಿ ಕಳೆದ ಎರಡು ದಿನಗಳಿಂದ ಸುರಿದ ಭಾರೀ ಮಳೆಯಿಂದಾಗಿ ಗರ್ಭಗುಡಿಗೆ ನೀರು ನುಗ್ಗಿದ ಘಟನೆ ನಡೆದಿದೆ. ಇದರಿಂದ ಕಾಣಿಕೆ ಹುಂಡಿಗಳು ನೀರಿನಿಂದ ತುಂಬಿಕೊಂಡಿದ್ದು, ಒಳಗಿನ ನೋಟುಗಳು ಸಂಪೂರ್ಣ ತೊಯ್ದಿದ್ದವು.
ಮಳೆಯ ತೀವ್ರತೆ ಕಡಿಮೆಯಾಗುತ್ತಿದ್ದಂತೆ, ಯಲ್ಲಮ್ಮ (Yallamma) ದೇವಾಲಯದ ಆಡಳಿತ ಮಂಡಳಿ ಹುಂಡಿಗಳನ್ನು ತೆರೆಯಿಸಿ ನೋಟುಗಳನ್ನು ಹೊರತೆಗೆದು ದೇವಾಲಯದ ಆವರಣದಲ್ಲಿ ಒಣಗಿಸುವ ಕೆಲಸ ಕೈಗೊಂಡಿದೆ. ಕೆಲವು ನೋಟುಗಳಿಗೆ ಮಣ್ಣು ಮತ್ತು ಕುಂಕುಮ ಅಂಟಿಕೊಂಡಿದ್ದರಿಂದ, ಅವನ್ನು ಸ್ವಚ್ಛಗೊಳಿಸಿ ಸರಿಯಾಗಿ ಒಣಗಿಸಲಾಗುತ್ತಿದೆ.
Belagavi : ಕಾರು ಮರಕ್ಕೆ ಡಿಕ್ಕಿ ; 2 ಜನ ಸ್ಥಳದಲ್ಲೇ ಸಾವು.!
ಯಲ್ಲಮ್ಮ (Yallamma) ಗರ್ಭಗುಡಿ ಸೇರಿದಂತೆ ದೇವಾಲಯದ ಆವರಣದಲ್ಲಿ ಸುಮಾರು ಮೂರು ಅಡಿ ನೀರು ನಿಂತಿದ್ದ ಪರಿಣಾಮ, ದರ್ಶನಕ್ಕೆ ತಾತ್ಕಾಲಿಕ ಅಡಚಣೆ ಉಂಟಾಗಿತ್ತು. ಇದೀಗ ಆವರಣದಿಂದ ನೀರನ್ನು ಹೊರಹಾಕಿ ಸ್ವಚ್ಛಗೊಳಿಸುವ ಕಾರ್ಯ ಪೂರ್ಣಗೊಂಡಿದ್ದು, ಭಕ್ತರಿಗೆ ಸರತಿ ಸಾಲಿನಲ್ಲಿ ಯಲ್ಲಮ್ಮ (Yallamma) ದೇವಿ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.
“ಭಕ್ತರಿಗೆ ಯಾವುದೇ ತೊಂದರೆ ಉಂಟಾಗದಂತೆ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದೇವೆ” ಎಂದು ಯಲ್ಲಮ್ಮ ಯಲ್ಲಮ್ಮ (Yallamma) ದೇವಿ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಅಶೋಕ ದುಡಗುಂಟಿ ತಿಳಿಸಿದ್ದಾರೆ.
Courtesy : newsfirst
“ಕಾಲಿನ ನೋವಿನ ಜೊತೆ ಈ 5 ಲಕ್ಷಣಗಳು ಕಂಡುಬಂದರೆ ನಿರ್ಲಕ್ಷಿಸಬೇಡಿ ; ಅದು Kidney ಫೆಲ್ಯೂರ್‌ನ ಸೂಚನೆ ಆಗಿರಬಹುದು”

ಜನಸ್ಪಂದನ ನ್ಯೂಸ್, ಆರೋಗ್ಯ : “ಕಾಲಿನ ನೋವಿನ ಜೊತೆ ಈ 5 ಲಕ್ಷಣಗಳು ಕಂಡುಬಂದರೆ ಖಂಡಿತ ನಿರ್ಲಕ್ಷಿಸಬೇಡಿ, ಅದು ಕಿಡ್ನಿ (Kidney) ಫೆಲ್ಯೂರ್‌ನ ಸೂಚನೆ ಆಗಿರಬಹುದು”.! ಬನ್ನಿ ಈ ಬಗ್ಗೆ ತಿಳಿಯೋಣ.!
ಮೂತ್ರಪಿಂಡಗಳು (Kidney) ನಮ್ಮ ದೇಹದ ಪ್ರಮುಖ ಅಂಗಗಳಲ್ಲಿ ಒಂದಾಗಿದ್ದು, ರಕ್ತವನ್ನು ಶುದ್ಧೀಕರಿಸುವ ಫಿಲ್ಟರ್‌ನಂತಿವೆ. ಇವು ದೇಹದಿಂದ ಟಾಕ್ಸಿನ್ ಹಾಗೂ ಹೆಚ್ಚುವರಿ ದ್ರವವನ್ನು ತೆಗೆದುಹಾಕಿ, ರಕ್ತದೊತ್ತಡವನ್ನು ನಿಯಂತ್ರಿಸುತ್ತವೆ ಮತ್ತು ಮೂಳೆಗಳಿಗೆ ಅಗತ್ಯವಾದ ಹಾರ್ಮೋನುಗಳನ್ನು ಉತ್ಪಾದಿಸುತ್ತವೆ.
VTU ನೇಮಕಾತಿ 2025 : ಗ್ರಂಥಪಾಲಕ ಮತ್ತು ಲ್ಯಾಬ್ ಬೋಧಕ ಹುದ್ದೆಗಳಿಗೆ ಅರ್ಜಿ ಆಹ್ವಾನ
ಆದರೆ, ಮೂತ್ರಪಿಂಡ (Kidney) ಗಳು ಸರಿಯಾಗಿ ಕಾರ್ಯನಿರ್ವಹಿಸದಿದ್ದಾಗ ದೇಹದಲ್ಲಿ ವಿಷಕಾರಿ ವಸ್ತುಗಳು ಮತ್ತು ದ್ರವ ಸಂಗ್ರಹವಾಗಿ ಕಿಡ್ನಿ ಫೆಲ್ಯೂರ್ ಎಂಬ ಗಂಭೀರ ಸ್ಥಿತಿಗೆ ಕಾರಣವಾಗಬಹುದು.
ಈ ಕಾಯಿಲೆಯ ಆರಂಭಿಕ ಲಕ್ಷಣಗಳು ಸಾಮಾನ್ಯವಾಗಿ ಆಯಾಸ ಅಥವಾ ದೌರ್ಬಲ್ಯದಂತೆ ಕಾಣುವ ಕಾರಣ. ಅನೇಕರು ಅದನ್ನು ನಿರ್ಲಕ್ಷಿಸುತ್ತಾರೆ ಆದರೆ, ಸಮಯಕ್ಕೆ ಚಿಕಿತ್ಸೆ ಪಡೆಯದಿದ್ದರೆ ಪರಿಸ್ಥಿತಿ ಮಾರಕವಾಗಬಹುದು. ಆದ್ದರಿಂದ ದೇಹದಲ್ಲಿ ಕಾಣುವ ಕೆಳಗಿನ ಬದಲಾವಣೆಗಳಿಗೆ ತಕ್ಷಣ ಗಮನ ನೀಡುವುದು ಅತ್ಯಗತ್ಯ.!
ಹೈಕಮಾಂಡ್ ಕೆಂಗಣ್ಣಿಗೆ ಗುರಿ : KN ರಾಜಣ್ಣ ಸಚಿವ ಸ್ಥಾನಕ್ಕೆ ರಾಜೀನಾಮೆ.?
ಕಿಡ್ನಿ (Kidney) ವೈಪಲ್ಯದ ಲಕ್ಷಣಗಳು :
1. ಕಾಲುಗಳಲ್ಲಿ ನೋವು ಮತ್ತು ಊತ :
ಪಾದಗಳು ಹಾಗೂ ಕಣಕಾಲುಗಳಲ್ಲಿ ಊತ ಉಂಟಾಗುವುದು ಮೂತ್ರಪಿಂಡ ವೈಫಲ್ಯದ ಪ್ರಮುಖ ಸೂಚನೆ. ಮೂತ್ರಪಿಂಡಗಳು ಹೆಚ್ಚುವರಿ ನೀರು ಮತ್ತು ಸೋಡಿಯಂ ಅನ್ನು ಹೊರಹಾಕಲು ಅಸಮರ್ಥವಾಗುವಾಗ, ದ್ರವವು ದೇಹದ ಕೆಳಭಾಗದಲ್ಲಿ ಸಂಗ್ರಹವಾಗಿ ಊತ ಮತ್ತು ನೋವಿಗೆ ಕಾರಣವಾಗುತ್ತದೆ.
2. ನಿರಂತರ ಆಯಾಸ :
ಮೂತ್ರಪಿಂಡಗಳು ಸರಿಯಾಗಿ ಕೆಲಸ ಮಾಡದಿದ್ದರೆ, ಎರಿಥ್ರೋಪೊಯೆಟಿನ್ ಎಂಬ ಹಾರ್ಮೋನ್ ಉತ್ಪಾದನೆ ಕಡಿಮೆಯಾಗುತ್ತದೆ. ಇದರ ಕೊರತೆಯಿಂದ ರಕ್ತಹೀನತೆ (Anemia) ಉಂಟಾಗಿ, ಅಂಗಾಂಶಗಳು ಮತ್ತು ಸ್ನಾಯುಗಳಿಗೆ ಆಮ್ಲಜನಕ ಸರಿಯಾಗಿ ತಲುಪದೆ, ವ್ಯಕ್ತಿ ಯಾವಾಗಲೂ ದಣಿದ ಹಾಗೆ ಅನುಭವಿಸುತ್ತಾರೆ.
Modelಗೆ ಖಾಸಗಿ ಅಂಗ ತೋರಿಸಿ ವಿಕೃತಿ ಮೆರೆದ ಯುವಕ ; ಅನಾಚಾರದ ವಿಡಿಯೋ ವೈರಲ್.!
3. ಚರ್ಮದಲ್ಲಿ ತುರಿಕೆ ಮತ್ತು ಬಣ್ಣ ಬದಲಾವಣೆ :
ರಕ್ತದಲ್ಲಿ ವಿಷಕಾರಿ ವಸ್ತುಗಳು ಹೆಚ್ಚಾಗಿ ಸಂಗ್ರಹವಾಗುವ ಕಾರಣ ಚರ್ಮದಲ್ಲಿ ನಿರಂತರ ತುರಿಕೆ ಉಂಟಾಗಬಹುದು. ಕೆಲವೊಮ್ಮೆ ಚರ್ಮ ಒಣಗುವುದು, ಹಳದಿ ಅಥವಾ ಕಂದು ಬಣ್ಣಕ್ಕೆ ತಿರುಗುವುದು ಸಹ ಕಿಡ್ನಿ ಸಮಸ್ಯೆಯ ಸೂಚನೆ ಆಗಬಹುದು.
4. ಮೂತ್ರ ವಿಸರ್ಜನೆಯಲ್ಲಿ ಬದಲಾವಣೆ :
ರಾತ್ರಿ ಆಗಾಗ್ಗೆ ಮೂತ್ರ ವಿಸರ್ಜನೆ, ಮೂತ್ರದ ಪ್ರಮಾಣದಲ್ಲಿ ಏರಿಕೆ ಅಥವಾ ಇಳಿಕೆ, ನೊರೆ ಮೂತ್ರ (ಪ್ರೋಟೀನ್ ಇರುವಿಕೆ), ಗಾಢ ಬಣ್ಣ ಅಥವಾ ರಕ್ತದ ಅಂಶ ಇರುವಿಕೆ. ಇವೆಲ್ಲವೂ ಮೂತ್ರಪಿಂಡಗಳ ಕಾರ್ಯನಿರ್ವಹಣೆಯಲ್ಲಿ ವ್ಯತ್ಯಾಸವನ್ನು ಸೂಚಿಸುತ್ತವೆ.
5. ಉಸಿರಾಟದ ತೊಂದರೆ :
ಮೂತ್ರಪಿಂಡ (Kidney) ವೈಫಲ್ಯದಿಂದ ಹೆಚ್ಚುವರಿ ದ್ರವವು ಶ್ವಾಸಕೋಶದ ಸುತ್ತಲೂ ಸಂಗ್ರಹವಾಗಿ ಉಸಿರಾಟ ಕಷ್ಟವಾಗಬಹುದು. ಜೊತೆಗೆ ರಕ್ತಹೀನತೆಯಿಂದಾಗಿ ದೇಹಕ್ಕೆ ಆಮ್ಲಜನಕ ಕಡಿಮೆಯಾಗುವುದರಿಂದ, ಕಡಿಮೆ ಶಾರೀರಿಕ ಚಟುವಟಿಕೆಯಲ್ಲಿಯೂ ಉಸಿರಾಟ ತೊಂದರೆ ಉಂಟಾಗುತ್ತದೆ.
Vande-Bharat : ಬೆಳಗಾವಿ – ಬೆಂಗಳೂರು ವಂದೇ ಭಾರತ್ ರೈಲಿಗೆ ಆ.10 ರಂದು ಪ್ರಧಾನಿಯಿಂದ ಚಾಲನೆ.!
ಸಂಪಾದಕೀಯ :
ಈ ಲಕ್ಷಣಗಳಲ್ಲಿ ಯಾವುದಾದರೂ ಕಂಡುಬಂದರೆ, ತಕ್ಷಣ ವೈದ್ಯಕೀಯ ಸಲಹೆ ಪಡೆಯುವುದು ಬಹಳ ಮುಖ್ಯ. ಸಮಯಕ್ಕೆ ಚಿಕಿತ್ಸೆ ಪಡೆದರೆ ಮೂತ್ರಪಿಂಡ (Kidney) ಗಳ ಆರೋಗ್ಯವನ್ನು ಕಾಪಾಡಬಹುದು ಮತ್ತು ಗಂಭೀರ ಸಮಸ್ಯೆಗಳನ್ನು ತಪ್ಪಿಸಬಹುದು.






