Monday, December 23, 2024
HomeInternationalATM ನಿಂದ ಹರಿದ ನೋಟುಗಳು ಬಂದ್ರೆ ಏನು ಮಾಡಬೇಕು.?
spot_img

ATM ನಿಂದ ಹರಿದ ನೋಟುಗಳು ಬಂದ್ರೆ ಏನು ಮಾಡಬೇಕು.?

WhatsApp Channel Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ಡೆಸ್ಕ್ : ಬಹುತೇಕ ಜನರಿಗೆ ಎಟಿಎಂ ಯಂತ್ರಗಳಿಂದ ಹಣ ತೆಗೆಯುವುದರಿಂದ ಅದರಲ್ಲಿ ಹರಿದ ನೋಟು ಕಂಡುಬಂದರೆ ಏನು ಮಾಡಬೇಕು ಎಂದು ತಲೆ ಕೆಡಿಸಿಕೊಳ್ಳುತ್ತಾರೆ.

ಹಾನಿಗೊಳಗಾದ ಅಥವಾ ಹರಿದ ನೋಟುಗಳನ್ನು ಬದಲಾಯಿಸಬಹುದೇ ಅಥವಾ ಇಲ್ಲವೇ? ಈ ಪ್ರಶ್ನೆಗೆ ಸ್ವತಃ Central ಬ್ಯಾಂಕ್ ( RBI ) ಉತ್ತರ ನೀಡಿದೆ. ವಿಕೃತ ಅಥವಾ ಹರಿದ ನೋಟುಗಳಿಗೆ ಸಂಬಂಧಿಸಿದಂತೆ ಭಾರತೀಯ ರಿಸರ್ವ್ ಬ್ಯಾಂಕ್ ನಿಯಮಗಳನ್ನು ಹೊರಡಿಸಿದೆ.

ATM ನಿಂದ ಹೊರ ಬಂದ ನೋಟುಗಳು ವಿರೂಪಗೊಂಡಿದ್ದರೆ, ಹರಿದಿದ್ದರೆ ಅಥವಾ ಗಲೀಜಾಗಿದ್ದರೆ, ಅದನ್ನು ಬದಲಾಯಿಸಲು ಬ್ಯಾಂಕ್ ನಿರಾಕರಣೆ ಮಾಡುವಂತಿಲ್ಲ ಎಂದು RBI ನಿಯಮ ಹೇಳುತ್ತದೆ.

ಬ್ಯಾಂಕ್‌ನಲ್ಲಿ ನೋಟುಗಳನ್ನು ಬದಲಾಯಿಸುವುದಕ್ಕೆ ದೀರ್ಘ ಪ್ರಕ್ರಿಯೆ ಇಲ್ಲ. ಬದಲಿಗೆ ಹರಿದ ಅಥವಾ ವಿರೂಪಗೊಂಡ, ಗಲೀಜಾಗಿರುವ ನೋಟುಗಳನ್ನು ನಿಮಿಷಗಳಲ್ಲಿ ಬದಲಾಯಿಸಬಹುದು.

ಒಬ್ಬ ವ್ಯಕ್ತಿ ಒಂದು ಬಾರಿಗೆ ಗರಿಷ್ಠ 20 ನೋಟುಗಳನ್ನು ಮಾತ್ರ ಬದಲಾಯಿಸಿಕೊಳ್ಳಬಹುದು ಎಂದು ಆರ್‌ಬಿಐ ನಿಯಮ ಹೇಳುತ್ತದೆ. ಅಲ್ಲದೆ, ಅವುಗಳ ಮೌಲ್ಯ 5000 ರೂ. ಮೀರಬಾರದು.

ಎಟಿಎಂನಿಂದ ತೆಗೆದ ಹರಿದ ನೋಟನ್ನು ಅದಕ್ಕೆ ಸಂಬಂಧಪಟ್ಟ ಬ್ಯಾಂಕ್‌ ಶಾಖೆಗೆ ತೆಗೆದುಕೊಂಡು ಹೋಗಬೇಕು. ಅಲ್ಲಿ ನೋಟು ಬದಲಾವಣೆಗೆ ನಿಗದಿತ ಫಾರಂ ಸಿಗುತ್ತದೆ. ಅದನ್ನು ಭರ್ತಿ ಮಾಡಿ. ಅದರಲ್ಲಿ ಹಣ ವಿತ್‌ ಡ್ರಾ ಮಾಡಿದ ದಿನಾಂಕ, ಸಮಯ ಮತ್ತು ಎಟಿಎಂ ಹೆಸರು, ಬರೆದು, ನೋಟುಗಳ ಮೌಲ್ಯ ನಮೂದಿಸಬೇಕು.

ಬಳಿಕ ನೋಟುಗಳೊಂದಿಗೆ ಈ ಫಾರಂ ಅನ್ನೂ ಕೊಡಬೇಕು. ಅವರು ಅದನ್ನು ಬದಲಾಯಿಸಿ ಕೊಡುತ್ತಾರೆ. ಹರಿದ ನೋಟುಗಳನ್ನು ನಿಮ್ಮ ಹತ್ತಿರದ ಬ್ಯಾಂಕ್ ಶಾಖೆ ಅಥವಾ ಭಾರತೀಯ ರಿಸರ್ವ್ ಬ್ಯಾಂಕ್ ಕಚೇರಿಗೆ ಭೇಟಿ ನೀಡಿ ಬೇರೆ ಹಣವನ್ನು ಪಡೆಯಬಹುದು.

ನೋಟು ಶೇ.50ಕ್ಕಿಂತ ಹೆಚ್ಚು ಹಾನಿಯಾಗಿದ್ದರೆ ಅದನ್ನು ಬದಲಾಯಿಸುವುದಿಲ್ಲ. ಇದಲ್ಲದೇ ನೋಟು ಸುಟ್ಟರೂ, ತುಂಡು ತುಂಡಾದರೂ ಬದಲಾಗುವುದಿಲ್ಲ. ಅದೇ ಸಮಯದಲ್ಲಿ, ಪ್ರತಿ ನೋಟಿನ ಮೇಲೆ ಇರುವ ಸಂಖ್ಯೆ ಮತ್ತು ಗಾಂಧೀಜಿ ಅವರ ವಾಟರ್‌ಮಾರ್ಕ್ ಸ್ಪಷ್ಟವಾಗಿಲ್ಲದಿದ್ದರೂ, ನೋಟು ಬದಲಾಗುವುದಿಲ್ಲ ಎಂದು RBI ತಿಳಿಸಿದೆ

WhatsApp Channel Join Now
Telegram Group Join Now
Instagram Account Follow Now
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments