Thursday, June 20, 2024
spot_img
spot_img
spot_img
spot_img
spot_img
spot_img

Health : ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಪಪ್ಪಾಯಿ ತಿನ್ನುವುದರಿಂದ ಏನು ಪ್ರಯೋಜನ.?

spot_img

ಜನಸ್ಪಂದನ ನ್ಯೂಸ್, ಡೆಸ್ಕ್ : ಬೇಸಿಗೆಯಿರಲಿ, ಮಳೆಗಾಲವಿರಲಿ ಅಥವಾ ಚಳಿಗಾಲವಿರಲಿ ಪಪ್ಪಾಯಿ ಎಲ್ಲಾ ಸೀಸನ್ನಲ್ಲಿಯೂ ಸಿಗುತ್ತದೆ.

ಪರಂಗಿ ಅಥವಾ ಪಪ್ಪಾಯಿ ಹಣ್ಣು ತನ್ನಲ್ಲಿ ಅತಿ ಹೆಚ್ಚು ನೈಸರ್ಗಿಕವಾದ ಸಿಹಿ (Natural sweetness) ಅಂಶವನ್ನು ಒಳಗೊಂಡ ಹಣ್ಣಾಗಿದ್ದು, ದೊಡ್ಡವರಿಂದ ಹಿಡಿದು ಚಿಕ್ಕವರವರೆಗೂ ಈ ಹಣ್ಣನ್ನು ಆರಾಮದಾಯಕವಾಗಿ ತಿನ್ನಬಹುದು.

ಇದನ್ನು ಓದಿ : ಐಟಿಐ, ಡಿಪ್ಲೊಮ, ಬಿಇ ಮತ್ತು ಯಾವುದೇ ಪದವಿ ಪಡೆದಿದ್ದೀರಾ.? HAL ನಲ್ಲಿದೆ ಉದ್ಯೋಗವಕಾಶ.!

ರಂಗು ರಂಗಾಗಿರುವ ಈ ಪರಂಗಿಯ ಸೇವನೆಯಿಂದ ಆರೋಗ್ಯಕ್ಕೆ ಬಹಳಷ್ಟು ಲಾಭಗಳಿವೆ. ಮಹಿಳೆಯರಿಗಂತೂ ಬಹಳ ಉಪಕಾರಿಯಾದುದು.

ಕಡಿಮೆ ಕ್ಯಾಲೋರಿ ಹಾಗೂ ಅಧಿಕವಾದ ಫೈಬರ್ (High fiber) ಅಂಶ ಹೊಂದಿರುವುದು ಪಪ್ಪಾಯ ಹಣ್ಣಿನ ವಿಶೇಷ.

ಇನ್ನೂ ಈ ಹಣ್ಣನ್ನು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ (Empty Stomach) ಸೇವಿಸುವುದರಿಂದ ಏನೆಲ್ಲಾ ಲಾಭಗಳಿವೆ ಗೊತ್ತೆ?

* ಪಪ್ಪಾಯಿಯಲ್ಲಿ ಫೈಬರ್, ಪೊಟ್ಯಾಸಿಯಮ್ ಮತ್ತು ವಿಟಮಿನ್ ಗಳು ಹೆಚ್ಚಾಗಿರುವುದರಿಂದ, ಹೃದ್ರೋಗಗಳ ಅಪಾಯವನ್ನು ಕಡಿಮೆ ಮಾಡುತ್ತದೆ. ಜೊತೆಗೆ, ಇದರಲ್ಲಿರುವ ವಿಟಮಿನ್ ಬಿ, ಸಿ, ಇ, ಬೀಟಾ-ಕ್ಯಾರೋಟಿನ್ ಮತ್ತು ಲೈಕೋಪೀನ್ ನಂತಹ ಪೋಷಕಾಂಶಗಳು (Nutrients), ಹೃದಯದಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ.

* ಇದು ಜೀರ್ಣಕಾರಿ ಕಿಣ್ವಗಳನ್ನು ಹೊಂದಿರುವುದರಿಂದ ಇದು ಕರುಳಿನ ಚಲನೆಗಳನ್ನು (Bowel movements) ಸುಗಮಗೊಳಿಸುತ್ತದೆ. ಜೊತೆಗೆ, ಹೊಟ್ಟೆ ಉಬ್ಬರ, ಮತ್ತು ಮಲಬದ್ಧತೆಯಂತಹ ಜೀರ್ಣಾಂಗಕ್ಕೆ ಸಂಬಂಧಿಸಿಂದ ಸಮಸ್ಯೆಗಳಿಗೆ ತುಂಬಾನೇ ಒಳ್ಳೆಯದು.

* ಇದರಲ್ಲಿ ಫೊಲೇಟ್ ಹಾಗೂ ವಿಟಮಿನ್ ಬಿ ಅಂಶ ಹೆಚ್ಚಾಗಿದೆ. ಇವು ಮೆದುಳು ಹಾಗೂ ಮನಸ್ಥಿತಿಯ ನಿಯಂತ್ರಣಕ್ಕೆ (Mood control) ಬಹಳ ಸಹಕಾರಿ. ಖಾಲಿ ಹೊಟ್ಟೆಯಲ್ಲಿ ಇದನ್ನು ಸೇವಿಸುವುದರಿಂದ ಬುದ್ಧಿಶಕ್ತಿ ಹೆಚ್ಚಾಗುವುದಲ್ಲದೆ ಮನಸ್ಥಿತಿ ಉತ್ತಮವಾಗಿರುತ್ತದೆ.

* ಇದು ದೇಹದಿಂದ ವಿಷಕಾರಿ ಅಂಶಗಳನ್ನು (Toxic elements) ತೆಗೆದುಹಾಕುವ ಮೂಲಕ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

* ಇದರಲ್ಲಿ ವಿಟಮಿನ್ ಗಳು ಹಾಗೂ ಮಿನಿರಲ್ ಅಂಶಗಳಿರುವುದರಿಂದ ದೇಹಕ್ಕೆ ತಕ್ಷಣ ಶಕ್ತಿ (Instant power) ದೊರೆಯುತ್ತದೆ ಹಾಗೂ ಹೆಚ್ಚು ಸಮಯದ ಕಾಲ ಹಸಿವಾಗುವುದಿಲ್ಲ.

* ಪಪ್ಪಾಯ ಹಣ್ಣಿನಲ್ಲಿ ವಿಟಮಿನ್ ಎ ಹೆಚ್ಚಾಗಿರುವುದರಿಂದ ಆರೋಗ್ಯಕರವಾದ ತ್ವಚೆಯನ್ನು ಹೊಂದಬಹುದು. ಖಾಲಿ ಹೊಟ್ಟೆಯಲ್ಲಿ ಪರಂಗಿ ಹಣ್ಣನ್ನು ತಿನ್ನುವುದರಿಂದ ಮೊಡವೆಗಳು (pimples), ಸಣ್ಣ ಸಣ್ಣ ಗುಳ್ಳೆಗಳು, ಚರ್ಮದ ವಯಸ್ಸಾಗವಿಕೆ ಪ್ರಕ್ರಿಯೆ ಹೀಗೆ ಅನೇಕ ಸಮಸ್ಯೆಗಳು ಇಲ್ಲವಾಗುತ್ತವೆ.

* ವಯಸ್ಸಾದಂತೆ ದೃಷ್ಟಿ ಕಡಿಮೆಯಾಗುವ (Low vision) ಅಪಾಯವನ್ನು ಕಡಿಮೆ ಮಾಡುತ್ತದೆ. ಜೊತೆಗೆ, ಕಣ್ಣಿನ ದೃಷ್ಟಿ ಸಾಮರ್ಥ್ಯವನ್ನು ಸಹ ಹೆಚ್ಚಿಸುತ್ತದೆ.

* ಇದು ದೇಹದ ಉರಿಯೂತವನ್ನು ಕಡಿಮೆ ಮಾಡುತ್ತದೆ. ಈ ಸಮಸ್ಯೆಯಿಂದ ಬಳಲುವವರಿಗೆ ಇದೊಂದು ಬಗೆಯ ಸಿದ್ಧೌಷಧವೆಂದರೆ ತಪ್ಪಾಗಲಾರದು.

* ಮಲಬದ್ಧತೆಯ ಸಮಸ್ಯೆಗೆ ಇದರ ಸೇವನೆ ಬಹಳ ಪರಿಣಾಮಕಾರಿ. ಪಪ್ಪಾಯಿ ಹೆಚ್ಚಿನ ನೀರಿನ ಅಂಶವನ್ನು ಹೊಂದಿರುವುದರಿಂದ ಇದು ಮಲಬದ್ಧತೆಯ ಅಪಾಯವನ್ನು ತಡೆಯುತ್ತದೆ.

ಜೀರ್ಣಕ್ರಿಯೆಯು ಸರಾಗವಾಗುವುದಲ್ಲದೆ (Ease of digestion), ಮಲಬದ್ಧತೆಗೆ ಉತ್ತಮ ಔಷಧಿಯಾಗಿ ಕಾರ್ಯ ನಿರ್ವಹಿಸುತ್ತದೆ.

ಇದನ್ನು ಓದಿ : ಮದುವೆ ಮಂಟಪದಲ್ಲೇ WWE ; ಯುವಕನಿಗೋಸ್ಕರ ಇಬ್ಬರು ಯುವತಿಯರ ನಡುವೆ ಮಾರಾಮಾರಿ ; ವಿಡಿಯೋ ವೈರಲ್.!

* ಪಪ್ಪಾಯದಲ್ಲಿ ನಾರಿನ ಅಂಶ ಹೆಚ್ಚಿಗೆ ಇದ್ದು, ಕ್ಯಾಲೋರಿ ಕಡಿಮೆ (Low in calories) ಇರುವುದರಿಂದ ತೂಕ ಇಳಿಸಿಕೊಳ್ಳಬೇಕು ಎನ್ನುವವರಿಗೆ ಇದು ವರದಾನವೇ ಸರಿ. ಇದನ್ನು ಸೇವಿಸುವದರಿಂದ ಇತರೆ ಅನಾರೋಗ್ಯಕರ ಆಹಾರವನ್ನು ತೆಗೆದುಕೊಳ್ಳಬೇಕೆನ್ನುವ ಬಯಕೆ ಕಡಿಮೆಯಾಗುತ್ತದೆ.

Disclaimer : ಈ ಲೇಖನವು ಅಂತರ್ಜಾಲದಲ್ಲಿ ಲಭ್ಯವಿರುವ ವರದಿಗಳು, ಮಾಹಿತಿಯನ್ನು ಆಧರಿಸಿದೆ. ಜನಸ್ಪಂದನ ನ್ಯೂಸ್ ಗೂ ಇದಕ್ಕೂ ಸಂಬಂಧವಿಲ್ಲ ಮತ್ತು ಇದಕ್ಕೆ ಜವಾಬ್ದಾರಿಯಲ್ಲ.

spot_img
spot_img
- Advertisment -spot_img