Thursday, June 20, 2024
spot_img
spot_img
spot_img
spot_img
spot_img
spot_img

ರಥದ ಚಕ್ರದಡಿಯಲ್ಲಿ ಸಿಲುಕಿ ಇಬ್ಬರು ಭಕ್ತರ ದುರ್ಮರಣ.!

spot_img

ಜನಸ್ಪಂದನ ನ್ಯೂಸ್, ಗದಗ : ಜಿಲ್ಲೆಯ ರೋಣದ ವೀರಭದ್ರೇಶ್ವರ ಜಾತ್ರಾ ಮಹೋತ್ಸವದಲ್ಲಿ ಭಾರೀ ಅವಘಡ ಸಂಭವಿಸಿದೆ.

ವೀರಭದ್ರೇಶ್ವರ ಜಾತ್ರಾ ನಿಮಿತ್ತಾ ನಡೆದ ರಥೋತ್ಸವದ ವೇಳೆ ರಥದ ಚಕ್ರಕ್ಕೆ ಸಿಲುಕಿ ಇಬ್ಬರು ಮೃತಪಟ್ಟ ಘಟನೆ ನಡೆದಿದೆ. ಪಟ್ಟಣದ ರಾಜ ಬೀದಿಯಲ್ಲಿ ರಥೋತ್ಸವ ಸಾಗುತ್ತಿದ್ದ ವೇಳೆ ನೂಕು ನುಗ್ಗಲು ಉಂಟಾಗಿ ಏಕಾ ಏಕಿ ಚಕ್ರದಡಿ ಸಿಲುಕಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಐಟಿಐ, ಡಿಪ್ಲೊಮ, ಬಿಇ ಮತ್ತು ಯಾವುದೇ ಪದವಿ ಪಡೆದಿದ್ದೀರಾ.? HAL ನಲ್ಲಿದೆ ಉದ್ಯೋಗವಕಾಶ.!

ಮೃತ ವ್ಯಕ್ತಿಗಳಲ್ಲಿ ಒಬ್ಬನನ್ನ ಮಲ್ಲಪ್ಪ ಲಿಂಗನಗೌಡರ್ (55) ಎಂದು ಗುರುತಿಸಲಾಗಿದ್ದು, ಈತನ ಬೆನ್ನಿನ ಮೇಲೆ ರಥ ಹರಿದಿದೆ. ಮತ್ತೊಬ್ಬನ ಗುರುತು ಪತ್ತೆಯಾಗಿಲ್ಲ.

ಆ ವ್ಯಕ್ತಿಯ ಮೇಲೆ ರಥದ ಚಕ್ರ ಹರಿದಿರುವುದರಿಂದ ಆತನ ಗುರುತು ಪತ್ತೆಯಾಗಿಲ್ಲ, ಪೊಲೀಸರು ಆತನ ಮತ್ತೆಗೆ ಮುಂದಾಗಿದ್ದಾರೆ.

ಜಾತ್ರೆಯ ಸಂಭ್ರಮದಲ್ಲಿ ಮುಳುಗಿದ್ದ ಭಕ್ತರಿಗೆ ಈ ದುರ್ಘಟನೆ ಆಘಾತವನ್ನುಂಟು ಮಾಡಿದೆ.

ಜಲಪಾತದಲ್ಲಿ ಹಠಾತ್‌ ಪ್ರವಾಹ : ದಿಕ್ಕುಪಾಲಾಗಿ ಓಡಿದ ಜನ ; Video Viral.!

ಸ್ಥಳದಲ್ಲಿ ಸಾವಿರಾರು ಜನರು ಸೇರಿದ್ದರಿಂದ, ಜನಸಂದಣಿಯನ್ನ ಚದುರಿಸಲು ಪೊಲೀಸರು ಹರಸಾಹಸ ಪಟ್ಟಿದ್ದಾರೆ.

ಈ ಕುರಿತು ರೋಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

spot_img
spot_img
- Advertisment -spot_img