Monday, October 27, 2025

Janaspandhan News

HomeHealth & FitnessSugar : 1 ತಿಂಗಳು ಸಕ್ಕರೆ ಸೇವಿಸುವದನ್ನು ಬಿಟ್ಟರೆ ಏನಾಗುವುದು.?
spot_img
spot_img
spot_img

Sugar : 1 ತಿಂಗಳು ಸಕ್ಕರೆ ಸೇವಿಸುವದನ್ನು ಬಿಟ್ಟರೆ ಏನಾಗುವುದು.?

- Advertisement -

ಜನಸ್ಪಂದನ ನ್ಯೂಸ್, ಡೆಸ್ಕ್ : ಒಂದೊಮ್ಮೆ ನೀವು 30 ದಿನಗಳ ಕಾಲ ಸಕ್ಕರೆ (Sugar) ತಿನ್ನುವುದನ್ನು ನಿಲ್ಲಿಸದರೆ ಏನಾಗುತ್ತದೆ, ಆರೋಗ್ಯದಲ್ಲಿ ಏನೇನು ಬದಲಾವಣೆಗಳಾಗಬಹುದು ಎನ್ನುವ ಮಾಹಿತಿ ಇಲ್ಲಿದೆ.

ಕಾಫಿ, ಚಹಾ, ಕುಕೀಸ್ ಅಥವಾ ಮಫಿನ್ ಇವೆಲ್ಲವೂ ಸಿಹಿ ರುಚಿಯನ್ನು ಹೊಂದಿದ್ದು, ನಾವು ಬೆಳಗ್ಗೆ ಸಕ್ಕರೆಯನ್ನು ಯಾವುದಾದರೂ ರೂಪದಲ್ಲಿ ತಿನ್ನುತ್ತೇವೆ.

ಇದನ್ನು ಓದಿ : Shocking : 1 ಸಿಗರೇಟ್ ಪುರುಷರ 17 ನಿಮಿಷ, ಮಹಿಳೆಯರ 22 ನಿಮಿಷ ಆಯುಷ್ಯ ಕಮ್ಮಿ ಮಾಡುತ್ತೆ.
ಸಕ್ಕರೆ (Sugar) :

ಹೆಚ್ಚು ಸಕ್ಕರೆ (Sugar) ತಿನ್ನುವುದು ಆರೋಗ್ಯಕ್ಕೆ ತುಂಬಾ ಹಾನಿಕಾರಕವಾಗಿದೆ. ಬಹಳಷ್ಟು ಜನರಿಗೆ ತಂಪು ಪಾನೀಯ, ಸಿಹಿತಿಂಡಿ, ಚಾಕೊಲೇಟ್‌, ಕ್ಯಾಂಡಿ ಮತ್ತು ಇತರ ಅನೇಕ ಸಿಹಿ ಪದಾರ್ಥಗಳನ್ನು ತಿನ್ನುವುದೆಂದರೆ ಬಹಳ ಇಷ್ಟ.

ಅಂದರೆ ಪರೋಕ್ಷವಾಗಿ ಸಕ್ಕರೆಯನ್ನು ಮಾತ್ರ ಸೇವಿಸೋದೆ ಇರೋದಲ್ಲ. ಬದಲಿಗೆ ಸಕ್ಕರೆಯಿಂದ ಮಾಡಿದಂತಹ ಎಲ್ಲಾ ಆಹಾರಗಳಿಂದ ದೂರವಿರುವುದು. ಹಾಗಾದರೆ ಒಂದು ತಿಂಗಳ ಸಕ್ಕರೆ (Sugar) ಸೇವಿಸುವುದನ್ನು ಬಿಟ್ಟರೆ ಆರೋಗ್ಯದಲ್ಲಾಗುವ ಬದಲಾವಣೆಗಳ ಬಗ್ಗೆ ತಿಳಿಯೋಣ ಬನ್ನಿ.

ಇದನ್ನು ಓದಿ : Video : ಕಾಲೇಜಿನಲ್ಲಿಯೇ ಜುಟ್ಟು ಹಿಡಿದು ಪ್ರಿನ್ಸಿಪಾಲ್ ಮತ್ತು ಲೈಬ್ರೇರಿಯನ್ ನಡುವೆ ಮಾರಾಮಾರಿ.

* ಸಕ್ಕರೆ (Sugar) ತಿನ್ನದಿರುವುದರಿಂದ ನೇರ ಲಾಭ ಹೃದಯಕ್ಕೆ ತಲುಪುತ್ತದೆ. ಸಕ್ಕರೆ ಕೊಬ್ಬಾಗಿ ಬದಲಾದಾಗ, ಕೆಟ್ಟ ಕೊಲೆಸ್ಟ್ರಾಲ್ ರಕ್ತದಲ್ಲಿ ಸಂಗ್ರಹವಾಗಲು ಪ್ರಾರಂಭಿಸುತ್ತದೆ. ಇದರಿಂದ ರಕ್ತದೊತ್ತಡವೂ ಅಧಿಕವಾಗುತ್ತದೆ. ಇದಕ್ಕಾಗಿ, ರಕ್ತವು ಹೃದಯವನ್ನು ತಲುಪಲು ಹೆಚ್ಚು ಶ್ರಮಿಸಬೇಕಾಗುತ್ತದೆ, ಇದರಿಂದಾಗಿ ಹೃದಯಾಘಾತದ ಅಪಾಯವು ಹೆಚ್ಚಾಗುತ್ತದೆ.

* 30 ದಿನಗಳವರೆಗೆ ಸಕ್ಕರೆಯನ್ನು ಸೇವಿಸದಿದ್ರೆ, ಅದರ ನಂತರ ನೀವು ಅನೇಕ ಪ್ರಯೋಜನಗಳನ್ನು ಕಂಡುಕೊಳ್ಳುತ್ತೀರಿ. ಇದರಿಂದ ನಿಮ್ಮ ರಕ್ತದಲ್ಲಿನ ಗ್ಲೂಕೋಸ್ ಮಟ್ಟವು ಸುಲಭವಾಗಿ ನಿಯಂತ್ರಣಕ್ಕೆ ಬರುತ್ತದೆ.

ಸಕ್ಕರೆಯನ್ನು ತಿನ್ನದಿರುವ ಮೂಲಕ, ಟೈಪ್-2 ಮಧುಮೇಹದ ಅಪಾಯವನ್ನು ಸಹ ಹೆಚ್ಚಿನ ಪ್ರಮಾಣದಲ್ಲಿ ನಿಯಂತ್ರಿಸಬಹುದು.

* ಯಕೃತ್ತು ನಮ್ಮ ದೇಹದ ಪ್ರಮುಖ ಅಂಗವಾಗಿದೆ. ಯಕೃತ್ತು ಆರೋಗ್ಯಕರವಾಗಿದ್ದರೆ ನಿಮ್ಮ ಇಡೀ ದೇಹವು ಆರೋಗ್ಯಕರವಾಗಿರುತ್ತದೆ. ಆದರೆ ನೀವು ಬಹಳಷ್ಟು ಸಕ್ಕರೆ (Sugar) ಯನ್ನು ಸೇವಿಸಿದರೆ ಪಿತ್ತಜನಕಾಂಗಕ್ಕೆ ಸಂಬಂಧಿಸಿದ NAFLD ಸಮಸ್ಯೆ ಉಂಟಾಗುವುದು.

ಇದನ್ನು ಓದಿ : ಆರೋಪಿ ಪರವಾಗಿ ವರದಿ ನೀಡಲು ಲಂಚಕ್ಕೆ ಬೇಡಿಕೆ ; “ಪಿಐ ಮತ್ತು PSI” ಲೋಕಾ ಬಲೆಗೆ.

* ಸಕ್ಕರೆಯ ತಿನ್ನುವುದನ್ನು ಕಡಿಮೆ ಮಾಡಿದರೆ ಮುಖದ ಮೇಲೆ ಉಂಟಾಗುವ ಮೊಡವೆಗಳನ್ನು ಕಡಿಮೆಯಾಗುವ ಸಾಧ್ಯತೆ ಇದೆ ಹಾಗೂ clear skin ಕೂಡ ನಿಮ್ಮದಾಗುತ್ತದೆ.

* ಕಡಿಮೆ ಸಕ್ಕರೆ (Sugar) ಇರುವ ಆಹಾರವನ್ನು ತಿನ್ನುವುದರಿಂದ ದೇಹವು ಸ್ವಯಂಚಾಲಿತವಾಗಿ ಕ್ಯಾಲೊರಿಗಳನ್ನು ಪಡೆಯುತ್ತದೆ. ಸಿಹಿ ಚೀಸ್‌ನಲ್ಲಿ ಪ್ರೋಟೀನ್, ಫೈಬರ್ ಮತ್ತು ಪೋಷಕಾಂಶಗಳು ಇರುವುದಿಲ್ಲ.

* ನಿಮಗೆ ಹೆಚ್ಚು ಸಿಹಿತಿಂಡಿಗಳನ್ನು ಸೇವಿಸುವ ಅಭ್ಯಾಸ ಇದ್ದರೆ ಹೊಟ್ಟೆ ಮತ್ತು ಸೊಂಟದ ಸುತ್ತಲೂ ಕೊಬ್ಬು ಹೆಚ್ಚಾಗಲು ಪ್ರಾರಂಭಿಸುತ್ತದೆ. ಹಾಗಾಗಿ ಸಕ್ಕರೆ (Sugar) ಯಿಂದ ಆಗುವ ದುಷ್ಪರಿಣಾಮಗಳನ್ನು ತಪ್ಪಿಸಬೇಕು ಎಂದಾದರೆ ಒಮ್ಮೆ ಬಿಟ್ಟುಬಿಡಿ ತೂಕ ಹೇಗೆ ಕಡಿಮೆಯಾಗುತ್ತದೆ ಎಂದು ನಿಮಗೇ ತಿಳಿಯುತ್ತದೆ. ಅಲ್ಲದೆ, ನಿಮ್ಮ ತೂಕವು ತ್ವರಿತವಾಗಿ ಕಡಿಮೆಯಾಗುತ್ತದೆ

ಸಕ್ಕರೆಯನ್ನು ಬಿಡುವುದು ನಿಜಕ್ಕೂ ಆರೋಗ್ಯ ವಿಚಾರವಾಗಿ ಉತ್ತಮವಾಗಿರುತ್ತದೆ. ಆದರೆ ಇನ್ನೂ ಹೆಚ್ಚಗಿನ ಪ್ರಯೋಜನ ಪಡೆಯಬೇಕು ಎಂದರೆ ಎರಡ್ಮೂರು ತಿಂಗಳು ಸಕ್ಕರೆ (Sugar) ಸೇವಿಸುವುದನ್ನು ಬಿಟ್ಟರೆ ಸಾಕಾಗುವುದಿಲ್ಲ ಎನ್ನುತ್ತಾರೆ ವೈದ್ಯರು.

Disclaimer : ಈ ಲೇಖನವು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿ, ವರದಿಯನ್ನು ಆಧರಿಸಿದೆ. ಜನಸ್ಪಂದನ ನ್ಯೂಸ್ ಗೂ (Janaspandhan News) ಇದಕ್ಕೂ ಸಂಬಂಧವಿಲ್ಲ ಮತ್ತು ಇದಕ್ಕೆ ಜವಾಬ್ದಾರಿಯಲ್ಲ.

ಹಿಂದಿನ ಸುದ್ದಿ : Health : ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಜಾಸ್ತಿ ನೀರು ಕುಡಿದರೆ ಏನಾಗುತ್ತದೆ.?

ಜನಸ್ಪಂದನ ನ್ಯೂಸ್, ಡೆಸ್ಕ್ : ನೀರು ಮಾನವನಿಗೆ ಪ್ರಕೃತಿ ನೀಡಿದ ಅತ್ಯಮೂಲ್ಯ ಕೊಡುಗೆಯಾಗಿದೆ. ಹಲವರು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ನೀರು ಕುಡಿಯುವ ಅಭ್ಯಾಸ ಇಟ್ಟುಕೊಂಡಿರುತ್ತಾರೆ. ಆದರೆ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಜಾಸ್ತಿ ನೀರು ಕುಡಿದರೆ ಏನಾಗುತ್ತದೆ ಅಂತ ಗೊತ್ತಾ.? ಮುಂದೆ ತಿಳಿಯೋಣ ಬನ್ನಿ.

ಬಹಳಷ್ಟು ಮಂದಿ ಬೆಳಗಿನ ಸಮಯದಲ್ಲಿ ಖಾಲಿ ಹೊಟ್ಟೆಯಲ್ಲಿ ಒಂದು ಲೋಟ ನೀರು ಕುಡಿಯುವ ಅಭ್ಯಾಸ ಮಾಡಿಕೊಂಡಿರುತ್ತಾರೆ. ಆರೋಗ್ಯದ ವಿಷಯಕ್ಕೆ ಬಂದರೆ ಇದು ಚಮತ್ಕಾರ ಮಾಡುತ್ತದೆ ಎಂದು ಹೇಳುತ್ತಾರೆ ತಜ್ಞರು.

ಹಾಗಾದರೆ ಬೆಳಗಿನ ಸಮಯದಲ್ಲಿ ಖಾಲಿ ಹೊಟ್ಟೆಯಲ್ಲಿ ನೀರು ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯ ಪ್ರಯೋಜನಗಳನ್ನು ನೀಡುತ್ತದೆಯೇ.?

ಖಾಲಿ ಹೊಟ್ಟೆಯಲ್ಲಿ ನೀರು ಕುಡಿಯುವುದರಿಂದ ಆಗುವ ಆರೋಗ್ಯ ಪ್ರಯೋಜನಗಳು :

* ಖಾಲಿ ಹೊಟ್ಟೆಯಲ್ಲಿ ನೀರು ಕುಡಿಯುವುದರಿಂದ ಚಯಾಪಚಯ ಕ್ರಿಯೆ ಉತ್ತಮವಾಗಿರುತ್ತದೆ.

* ಖಾಲಿ ಹೊಟ್ಟೆಯಲ್ಲಿ, ನೈಸರ್ಗಿಕವಾಗಿ ತಲೆನೋವು ಕಡಿಮೆಯಾಗಲು ಕಾರಣವಾಗಬಹುದು.

* ದೀರ್ಘಾವಧಿಯಲ್ಲಿ ತೂಕವನ್ನು ಕಳೆದುಕೊಳ್ಳಲು ಸಹಾಯ ಮಾಡುತ್ತದೆ.

* ಖಾಲಿ ಹೊಟ್ಟೆಯಲ್ಲಿ ನೀರು ಕುಡಿಯುವುದರಿಂದ ಸ್ವಚ್ಛ ಮತ್ತು ಹೊಳೆಯುವ ಚರ್ಮವನ್ನು ಪಡೆಯಬಹುದು.

ಇದನ್ನು ಓದಿ : ಕರ್ನಾಟಕ AYUSH ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನ.!

* ಖಾಲಿ ಹೊಟ್ಟೆಯಲ್ಲಿ ನೀರು ಕುಡಿಯುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ.

* ಪೋಷಕಾಂಶಗಳನ್ನು ವೇಗವಾಗಿ ಹೀರಿಕೊಳ್ಳಲು ಅನುವು ಮಾಡಿಕೊಡುತ್ತದೆ.

* ಖಾಲಿ ಹೊಟ್ಟೆಯಲ್ಲಿ ನಿಯಮಿತವಾಗಿ ನೀರು ಕುಡಿಯುವ ಅಭ್ಯಾಸವನ್ನು ಮಾಡುವುದರಿಂದ ನಮ್ಮ ಪ್ರತಿರಕ್ಷಣಾ ವ್ಯವಸ್ಥೆಗೆ ಪುನಃಸ್ಥಾಪನೆ ಹಾಗೂ ಹೆಚ್ಚಿದ ಶಕ್ತಿಯ ಮಟ್ಟಗಳೊಂದಿಗೆ ಪ್ರಯೋಜನಕಾರಿ ಎಂದು ಸಾಬೀತು ಪಡಿಸಬಹುದು.

* ಸೋಂಕುಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.

* ಸಾಕಷ್ಟು ನೀರು ಕುಡಿಯುವುದರಿಂದ ಬಾಯಿಯ ಅಥವಾ ಹಲ್ಲಿನ ಸಮಸ್ಯೆಗಳನ್ನು ದೂರವಿಡಲು ಸಹಾಯ ಮಾಡುತ್ತದೆ.

* ಸುಧಾರಿತ ಕರುಳಿನ ಚಲನೆ ಮತ್ತು ಉಬ್ಬುವುದು ಕಡಿಮೆಯಾಗುತ್ತದೆ.

* ದೇಹದಿಂದ ತ್ಯಾಜ್ಯವನ್ನು ತೊಡೆದು‌ ಹಾಕಲು ಸಹ ಉಪಯುಕ್ತವಾಗಿದೆ.

* ಕೆಟ್ಟ ಕ್ಯಾಲೊರಿಗಳನ್ನು ವೇಗವಾಗಿ ಸುಡುವಲ್ಲಿ ಸಹಾಯ ಮಾಡುತ್ತದೆ.

ಇದನ್ನು ಓದಿ : Belagavi : ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿ.!

* ನಿದ್ದೆ ಅಥವಾ ಆಲಸ್ಯ ತೊಂದರೆಗಳಿದ್ದರೆ ಖಾಲಿ ಹೊಟ್ಟೆಯಲ್ಲಿ ನೀರು ಕುಡಿಯುವುದರಿಂದ ನೀವು ತಕ್ಷಣವೇ ಸಕ್ರಿಯರಾಗಬಹುದು.

* ಇದು ಕೆಂಪು ರಕ್ತ ಕಣಗಳನ್ನು ವೇಗವಾಗಿ ಬೆಳೆಯಲು ಉತ್ತೇಜಿಸುತ್ತದೆ.

* ಇದು ಹೆಚ್ಚು ಆಮ್ಲಜನಕ ಮತ್ತು ಶಕ್ತಿಯನ್ನು ನೀಡುತ್ತದೆ.

* ಮೂತ್ರ ಪಿಂಡದ ಕಲ್ಲುಗಳನ್ನು ಹೊರ ಹಾಕುವುದು

* ಕೂದಲಿನ ಆರೋಗ್ಯವನ್ನು ಸುಧಾರಿಸುವುದು.

ಬೆಳಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಯಲ್ಲಿ ಒಂದು ಲೋಟ ನೀರು ಕುಡಿಯುವುದರಿಂದ ನಾವು ಇಷ್ಟೊಂದು ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದಾಗಿದೆ. ಆದರೆ ಆರಾಮವಾಗಿರ್ತಿವಿ ಎಂದು ಜಾಸ್ತಿ ನೀರು ಕುಡಿಯಬಾರದು.

ಅತಿಯಾಗಿ ನೀರು ಕುಡಿಯುವುದರಿಂದ ದೇಹದ ಮೇಲೆ ಕೆಲವು ಋಣಾತ್ಮಕ ಪರಿಣಾಮಗಳು ಉಂಟಾಗಬಹುದು.

* ಮೂತ್ರಪಿಂಡಗಳು ದೇಹದಿಂದ ಹೆಚ್ಚುವರಿ ನೀರನ್ನು ಫಿಲ್ಟರ್ ಮಾಡಬೇಕಾಗುತ್ತದೆ. ಆದರೆ ಏಕಾಏಕಿ ಹೆಚ್ಚು ನೀರು ಕುಡಿದರೆ ಮೂತ್ರಪಿಂಡಗಳಿಗೆ ಒತ್ತಡ ಹೆಚ್ಚಾಗಿ, ದೀರ್ಘಕಾಲದಲ್ಲಿ ಹಾನಿಯಾಗಬಹುದು.

ಇದನ್ನು ಓದಿ : Special news : ಪ್ರೀತಿಸಿದವರಿಗೆ ಮೋಸ ಮಾಡ್ತಾರಂತೆ ಈ 5 ರಾಶಿಯವರು.!

* ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ನೀರು ಹೆಚ್ಚು ಕುಡಿಯುವುದರಿಂದ ರಕ್ತದಲ್ಲಿ ಸೋಡಿಯಂ ಮಟ್ಟ ಕಡಿಮೆಯಾಗಿ, ಹೈಪೊನಾಟ್ರೇಮಿಯಾ ಎಂಬ ಸ್ಥಿತಿ ಉಂಟಾಗಲು ಕಾರಣವಾಗಬಹುದು. ಇದರಿಂದ ವಾಕರಿಕೆ, ಆಯಾಸ, ತಲೆನೋವು ಮತ್ತು ಗಂಭೀರ ಸಂದರ್ಭಗಳಲ್ಲಿ ಮೂರ್ಛೆಯಂತಹ ಲಕ್ಷಣಗಳು ಕಾಣಿಸಬಹುದು.

* ಖಾಲಿ ಹೊಟ್ಟೆಯಲ್ಲಿ ಒಮ್ಮೆಲೆ ಜಾಸ್ತಿ ನೀರು ಕುಡಿದರೆ ಹೊಟ್ಟೆ ಉಬ್ಬಿದಂತಾಗಬಹುದು. ಇದರಿಂದ ಅಸ್ವಸ್ಥತೆ ಉಂಟಾಗುವ ಸಾಧ್ಯತೆ ಇದೆ.

* ಅತಿಯಾದ ನೀರು ಜೀರ್ಣರಸಗಳನ್ನು ದುರ್ಬಲಗೊಳಿಸುತ್ತದೆ. ಇದರಿಂದ ಜೀರ್ಣಕ್ರಿಯೆಯ ಸಾಮರ್ಥ್ಯ ಕಡಿಮೆಯಾಗಿ, ಆಮ್ಲೀಯತೆ ಅಥವಾ ಗ್ಯಾಸ್ ಸಮಸ್ಯೆ ಉಂಟಾಗುತ್ತದೆ.

ಈ ರೀತಿ ಪಾಲಿಸುವುದು ಒಳ್ಳೆಯದು :
ಬೆಳಗ್ಗೆ 1-2 ಗ್ಲಾಸ್ (250-500 ಮಿಲಿ) ನೀರು ಕುಡಿಯುವುದು ಉತ್ತಮ.

ದಿನವಿಡೀ ಸಣ್ಣ ಸಣ್ಣ ಪ್ರಮಾಣದಲ್ಲಿ ನೀರು ಕುಡಿಯುವುದು ಒಳ್ಳೆಯದು.

ದೇಹದ ತೂಕ, ಚಟುವಟಿಕೆ ಮಟ್ಟ ಮತ್ತು ಹವಾಮಾನಕ್ಕೆ ತಕ್ಕಂತೆ 2.5-3.5 ಲೀಟರ್ ನೀರನ್ನು ದಿನವಿಡೀ ಸೇವಿಸಬಹುದು.

ನೀರಿನೊಂದಿಗೆ ನಿಂಬೆ, ಜೇನುತುಪ್ಪ ಅಥವಾ ಉಪ್ಪು ಸೇರಿಸಿದರೆ ಎಲೆಕ್ಟ್ರೋಲೈಟ್ ಸಮತೋಲನ ಕಾಯ್ದುಕೊಳ್ಳಲು ಸಹಾಯವಾಗುವುದು.

- Advertisement -
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments