Sunday, December 22, 2024
HomeViral VideoVideo : ಚಂಡಮಾರುತದ ಹೊಡೆತಕ್ಕೆ ಉರುಳಿ ಬಿದ್ದ ಬೃಹದಾಕಾರದ ಮೊಬೈಲ್ ಟವರ್.!
spot_img

Video : ಚಂಡಮಾರುತದ ಹೊಡೆತಕ್ಕೆ ಉರುಳಿ ಬಿದ್ದ ಬೃಹದಾಕಾರದ ಮೊಬೈಲ್ ಟವರ್.!

WhatsApp Channel Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ಡೆಸ್ಕ್ : ರಾಜಸ್ಥಾನದ ನಗೌರ್ ಜಿಲ್ಲೆಯಲ್ಲಿ ರಣಭೀಕರ ಗಾಳಿಯ (Cyclone) ರಭಸಕ್ಕೆ ಬಾನೆತ್ತರಕ್ಕೆ ನಿರ್ಮಿಸಿದ್ದ ಬೃಹತ್‌ ಮೊಬೈಲ್ ಟವರ್ ವೊಂದು (Mobile Tower) ಉರುಳಿ ಬಿದ್ದ (fell down) ಘಟನೆ ನಡೆದಿದೆ.

ಇನ್ನು ಈ ಕುರಿತಾದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

48 ಗಂಟೆಗಳಲ್ಲಿ ತೀವ್ರ ಮಟ್ಟದಲ್ಲಿ (extreme level) ಚಂಡಮಾರುತ (Storm) ಗಾಳಿ ಬೀಸಲಿದೆ ಎಂದು ರಾಜಸ್ಥಾನದ ಹವಾಮಾನ ಇಲಾಖೆಯು (Rajasthan Meteorological Department) ಮುನ್ನೆಚ್ಚರಿಕೆ ನೀಡಿತ್ತು. ಇದರ ಬೆನ್ನಲ್ಲೇ ಚಂಡಮಾರುತ ಬೀಸಿದ್ದು, ಮೊಬೈಲ್ ಟವರ್ ನೆಲಸಮವಾಗಿದೆ.

ಇದನ್ನು ಓದಿ : ಎರಡಕ್ಕಿಂತ ಹೆಚ್ಚು ಮಕ್ಕಳಿದ್ದರೆ ಸರ್ಕಾರಿ ಕೆಲಸಕ್ಕೆ ಅನರ್ಹ : Supreme Court ಮಹತ್ವದ ತೀರ್ಪು

ಮೊಬೈಲ್ ಟವರ್ ಬೀಳುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ (social media) ವೈರಲ್ ಆಗಿದೆ. ಹಲವರು ಕಮೆಂಟ್ ಮಾಡಿದ್ದಾರೆ. ಸುಳಿಗಾಳಿಯಿಂದಾಗಿ (whirlwind) ಉಂಟಾದ ಕಂಪನಗಳಿಂದಾಗಿ (vibration) ಈ ರೀತಿಯಾಗಿದೆ. ಗಾಳಿಯ ವೇಗವು ಗೋಪುರವು ಅದರ ನೈಸರ್ಗಿಕ ಫ್ರೀಕ್ವೆನ್ಸಿಯಲ್ಲಿ (Natural frequency) ಕಂಪಿಸುವಂತೆ ಮಾಡಿದೆ. ಇದರಿಂದಾಗಿ ಟವರ್ ಅಲುಗಾಡಲು (shake) ಪ್ರಾರಂಭಿಸಿದ್ದು ಬೀಳುವವರೆಗೂ ಅದೇ ಫ್ರೀಕ್ವೆನ್ಸಿಯಲ್ಲಿ ಅದುರಿದೆ’ ಎಂದು ಕಮೆಂಟ್ ಮಾಡಿದ್ದಾರೆ.

ವೈರಲ್ ಆಗಿರುವ ವಿಡಿಯೋ ಇಲ್ಲಿದೆ :

 

View this post on Instagram

 

A post shared by Patiala Politics (@patialapolitics)

 

ಹಿಂದಿನ ಸುದ್ದಿ : ಮಾನವನ ಮೆದುಳಿನ ನರ ಸಿಡಿಯುವಂತೆ ಮಾಡುತ್ತದೆ ಈ ತರಕಾರಿಯಲ್ಲಿನ ಹುಳು.!

ಜನಸ್ಪಂದನ ನ್ಯೂಸ್, ಆರೋಗ್ಯ : ಈ ಚಳಿಗಾಲದಲ್ಲಿ ಎಲೆಕೋಸು, ಹೂಕೋಸು (cabbage, Cauliflower) ಮುಂತಾದ ತರಕಾರಿಗಳು ಹೆಚ್ಚು ಸಿಗುತ್ತವೆ. ಏಕೆಂದರೆ ಈ ತರಕಾರಿಗಳು ಚಳಿಗಾಲದಲ್ಲಿ ನಿಮ್ಮ ದೇಹವನ್ನು ಪೋಷಿಸುವುದಲ್ಲದೆ ಶೀತದಿಂದ ರಕ್ಷಿಸುತ್ತವೆ (Protects from cold).

ಇದನ್ನು ಓದಿ : Health : ಮಾನವನ ಮೆದುಳಿನ ನರ ಸಿಡಿಯುವಂತೆ ಮಾಡುತ್ತದೆ ಈ ತರಕಾರಿಯಲ್ಲಿನ ಹುಳು.!

ಆದರೆ ಇಂತಹ ತರಕಾರಿಗಳನ್ನು ತಿನ್ನುವಾಗ ಜಾಗರೂಕತೆ (Vigilance) ಅವಶ್ಯಕ. ಅಜಾಗರೂಕರಾಗಿದ್ದರೆ ನಿಮ್ಮ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ (negative effect) ಬೀರಬಹುದು. ಅದರಲ್ಲೂ ಎಲೆಕೋಸು ಸೇವನೆಯು ನಿಮ್ಮ ಮೆದುಳಿಗೆ ತೀವ್ರ ಹಾನಿಯನ್ನುಂಟು (Severe brain damage) ಮಾಡುತ್ತದೆ.

ಆರೋಗ್ಯ ತಜ್ಞರು ಮತ್ತು ಅನೇಕ ವೈದ್ಯಕೀಯ ವರದಿಗಳು ಎಲೆಕೋಸಿನಲ್ಲಿ ಕಂಡುಬರುವ ಹುಳುಗಳ ಬಗ್ಗೆ ಜನರಿಗೆ ಎಚ್ಚರಿಕೆ ವಹಿಸಲು ತಿಳಿಸಿದ್ದಾರೆ. ಈ ಹುಳು (worm) ಎಲೆಕೋಸು ಸೇವಿಸುವ ವ್ಯಕ್ತಿಯ ದೇಹಕ್ಕೆ ಸೇರಿ ಮೆದುಳಿಗೆ ಹಾನಿಯನ್ನುಂಟು ಮಾಡುತ್ತದೆ ಎನ್ನಲಾಗಿದೆ.

ಇದನ್ನು ಓದಿ : ಮಹಿಳೆಯರ ಒಳ ಉಡುಪು ಧರಿಸಿ ಮಾರ್ಕೆಟ್ ನಲ್ಲಿ ರೀಲ್ಸ್; ಮುಂದೆನಾಯ್ತು? Video ನೋಡಿ.!

ನಿಮಗೆ ಗೊತ್ತಿರುವ ಹಾಗೆ ಎಲೆಕೋಸು ನೆಲದ ಮೇಲೆ ಬೆಳೆಯುವ ತರಕಾರಿ. ಮಣ್ಣಿನಲ್ಲಿ ಇರುವ ಟೇನಿಯಾ ಸೋಲಿಯಮ್ (Taenia solium) ಎಂಬ ಕೀಟಗಳು ಈ ತರಕಾರಿಯ ಸಂಪರ್ಕಕ್ಕೆ ಬರುತ್ತವೆ.

ಈ ಕೀಟಗಳ ಮೊಟ್ಟೆಗಳು ಎಲೆಕೋಸಿಗೆ ಅಂಟಿಕೊಳ್ಳುತ್ತವೆ. ನೀವು ಹಲವಾರು ಬಾರಿ ನೀರಿನಿಂದ ಸ್ವಚ್ಛಗೊಳಿಸಿದ ಬಳಿಕವೂ ತರಕಾರಿಗೆ ಅಂಟಿಕೊಂಡಿರುತ್ತವೆ (Stick to it). ಈ ಕೀಟಗಳನ್ನು ಟೇಪ್ ವರ್ಮ್ ಎಂದೂ ಸಹ ಕರೆಯಲಾಗುತ್ತದೆ.

ಇದನ್ನು ಓದಿ : Special news : ಮುಖಕ್ಕೆ ಬ್ಲಾಂಕೆಟ್ ಹೊದ್ದಿಕೊಂಡು ಮಲಗುತ್ತೀರಾ.? ಹಾಗಿದ್ರೆ ಈ ಸುದ್ದಿ ಓದಿ.!

ಈ ಹುಳು ತೆಳ್ಳಗಿನ ದಾರದ ರೀತಿಯ ಆಕಾರದಲ್ಲಿರುತ್ತದೆ (Thin threadlike shape), ಎಲೆಕೋಸಿನ ಪದರಗಳ ನಡುವೆ ಈ ಹುಳು ಅಡಗಿರುತ್ತದೆ. ತರಕಾರಿ ಚೆನ್ನಾಗಿ ಬೇಯಿಸಿದ ನಂತರವೂ ಈ ಹುಳು ಜೀವಂತವಾಗಿರುತ್ತದೆ ಎನ್ನಲಾಗಿದೆ. ಇಂತಹ ತರಕಾರಿಯನ್ನು ತಿನ್ನುವುದರಿಂದ ನಮ್ಮ ದೇಹದೊಳಗೆ ಈ ಹುಳು ಸೇರಿಕೊಂಡು ಮೆದುಳಿನಲ್ಲಿ ಊತವನ್ನು ಹೆಚ್ಚಿಸಬಹುದು (Increase in swelling in the brain). ಇದರಿಂದ ವ್ಯಕ್ತಿಯ ಮೆದುಳಿನಲ್ಲಿನ ನರಗಳು ಸಿಡಿಯಬಹುದು (Nerves can explode). ಈ ಸ್ಥಿತಿಯನ್ನು ನ್ಯೂರೋಸಿಸ್ಟಿಸರ್ಕೋಸಿಸ್ ಎಂದು ಕರೆಯುತ್ತಾರೆ.

ಎಲೆಕೋಸು ಸರಿಯಾಗಿ ಸ್ವಚ್ಛಗೊಳಿಸುವುದು ಹೇಗೆ.?
ಎಲೆಕೋಸನ್ನು ಸ್ವಚ್ಛಗೊಳಿಸುವಾಗ ಅದರ ಮೇಲಿನ ಮಣ್ಣು ಹಾಗೂ ಒಣಗಿದ ಪದರಗಳನ್ನು (dried flakes) ತೆಗೆದು ಹಾಕಬೇಕು. ಅಲ್ಲದೇ ಎಲೆಕೋಸಿನ ಪ್ರತಿ ಪದರವನ್ನು ಪ್ರತ್ಯೇಕಿಸಬೇಕು (Separate each layer). ಒಂದು ಪಾತ್ರೆಯಲ್ಲಿ ಉಗುರು ಬೆಚ್ಚಗಿನ ನೀರನ್ನು (lukewarm water) ತೆಗೆದುಕೊಂಡು ಅದರಲ್ಲಿ 3-4 ಚಮಚ ಉಪ್ಪನ್ನು ಸೇರಿಸಬೇಕು. ಎಲೆಕೋಸಿನ ಎಲ್ಲಾ ಪದರಗಳನ್ನು ನೀರಿನಲ್ಲಿ ಇಪ್ಪತ್ತು ನಿಮಿಷಗಳ ಕಾಲ ನೆನೆಸಿಡಬೇಕಾಗುತ್ತದೆ (Soaked). ಬಳಿಕ ತರಕಾರಿಯನ್ನು ತಣ್ಣನೆಯ ನೀರಿನಲ್ಲಿ (cold water) 2-3 ಸಲ ಚೆನ್ನಾಗಿ ತೊಳೆಯಿರಿ. ನಂತರ ಚೆನ್ನಾಗಿ ಉಜ್ಜುವ ಮೂಲಕ ಎಲೆಕೋಸನ್ನು ಸ್ವಚ್ಛಗೊಳಿಸಿರಿ. ಈಗ ಜಾಲರಿಯ ಪಾತ್ರೆಯಲ್ಲಿ ಈ ತರಕಾರಿಯನ್ನು ಸ್ವಲ್ಪ ಸಮಯದವರೆಗೆ ಇರಿಸಬೇಕು. ಎಲ್ಲಾ ನೀರು ಖಾಲಿಯಾದ (empty) ನಂತರ, ನೀವು ತರಕಾರಿಯನ್ನು ಕತ್ತರಿಸಿ ಅಡುಗೆ ಮಾಡಬಹುದು.

Disclaimer : ಅಂತರ್ಜಾಲದಲ್ಲಿ (Internet) ಲಭ್ಯವಿರುವ ಮಾಹಿತಿಗಳು ಮತ್ತು ವರದಿಗಳನ್ನು ಆಧರಿಸಿ ಈ ಲೇಖನವನ್ನು ಬರೆಯಲಾಗಿದೆ. ಹೀಗಾಗಿ ಜನಸ್ಪಂದನ ನ್ಯೂಸ್‌ಗೂ, ಈ ಲೇಖನಕ್ಕೂ ಸಂಬಂಧವಿಲ್ಲ ಮತ್ತು ನಾವು ಇದಕ್ಕೆ ಜವಾಬ್ದಾರರಲ್ಲ.

WhatsApp Channel Join Now
Telegram Group Join Now
Instagram Account Follow Now
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments