ಜನಸ್ಪಂದನ ನ್ಯೂಸ್, ಡೆಸ್ಕ್ : ಪಾಕಿಸ್ತಾನದ ಲಾಹೋರ್ ಅಂತರಾಷ್ಟ್ರೀಯ ವಿಮಾನ (Lahore International Airport) ನಿಲ್ದಾಣದಲ್ಲಿ ಶನಿವಾರ ಬೆಂಕಿ ಕಾಣಿಸಿಕೊಂಡಿದ್ದು, ಎಲ್ಲಾ ವಿಮಾನಗಳ ಹಾರಾಟ ರದ್ದುಗೊಂಡಿದೆ.
ಪಾಕಿಸ್ತಾನದ ಲಾಹೋರ್‌ನಲ್ಲಿರುವ ಅಲ್ಲಾಮಾ ಇಕ್ಬಾಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ (Allama Iqbal International Airport) ದಲ್ಲಿ ಶನಿವಾರ ದೊಡ್ಡ ಬೆಂಕಿ ಕಾಣಿಸಿಕೊಂಡಿದ್ದು, ಎಲ್ಲಾ ವಿಮಾನಗಳ ಹಾರಾಟ ರದ್ದುಗೊಂಡಿದೆ.
ಇದನ್ನು ಓದಿ : Video : ಪಾಕ್ ಸೇನಾ ಟ್ರಕ್‌ಗಳ ಮೇಲೆ ದಾಳಿ ; 10 ಸೈನಿಕರ ಸಾವು.!
ಮೂಲಗಳ ಪ್ರಕಾರ, ಪಾಕಿಸ್ತಾನ ಸೇನಾ ವಿಮಾನವು ಲಾಹೋರ್ ವಿಮಾನ ನಿಲ್ದಾಣದಲ್ಲಿ ಇಳಿಯುವಾಗ ಅದರ ಒಂದು ಟೈರ್‌ಗೆ ಬೆಂಕಿ (Tire fire) ತಗುಲಿ ಬೆಂಕಿ ಹೊತ್ತಿಕೊಂಡಿತು.
ಬೆಂಕಿಯನ್ನು ನಿಯಂತ್ರಿಸಲು ಸ್ಥಳಕ್ಕೆ ಅಗ್ನಿಶಾಮಕ ದಳ (Fire brigade) ದವರನ್ನು ಕರೆಸಲಾಯಿತು. ಘಟನೆಯಿಂದಾಗಿ ರನ್‌ವೇ (Run way) ಯನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ.
ವಿಡಿಯೋ :
https://twitter.com/i/status/1916002970597986685
Courtesy : ABP Live News
ಹಿಂದಿನ ಸುದ್ದಿ : Video : ಪಾಕ್ ಸೇನಾ ಟ್ರಕ್‌ಗಳ ಮೇಲೆ ದಾಳಿ ; 10 ಸೈನಿಕರ ಸಾವು.!
ಜನಸ್ಪಂದನ ನ್ಯೂಸ್, ಡೆಸ್ಕ್ : ಪಾಕ್ ಸೇನಾ ಟ್ರಕ್‌ಗಳು ಕ್ವೆಟ್ಟಾಗೆ (Quetta)ಬರುತ್ತಿದ್ದಂತೆಯೇ ಸ್ನೈಪರ್ ರೈಫಲ್ ಮತ್ತು ಐಇಡಿ (IED) ದಾಳಿ ಮಾಡಿದ್ದು, ಕನಿಷ್ಠ 10 ಸೈನಿಕರು ಮೃತರಾಗಿದ್ದಾರೆಂದು ತಿಳಿದು ಬಂದಿದೆ.
ಕಳೆದ ಮಂಗಳವಾರ ಜಮ್ಮು ಕಾಶ್ಮೀರದ ಪಹಲ್ಲಾಮ್‌ನಲ್ಲಿ 26 ಸಾಮಾನ್ಯ ನಾಗರೀಕರ (Ordinary citizen) ನ್ನು ಹತ್ಯೆ ಮಾಡಿದ ಘಟನೆಯಲ್ಲಿ ಪಾಕಿಸ್ತಾನದ ಕೈವಾಡ (hand) ಇರುವುದು ಗೊತ್ತಾದ ಬೆನ್ನಲ್ಲಿಯೇ ಪಾಕಿಸ್ತಾನಕ್ಕೆ ಯುದ್ಧಾಂತಕ ಶುರುವಾಗಿದೆ.
ಇದನ್ನು ಓದಿ : ತಂದೆಯ Pistolನಿಂದ ಗುಂಡು ಹಾರಿಸಿಕೊಂಡು ಸಾವಿಗೆ ಶರಣಾದ ಯುವಕ.!
ಈ ಮಧ್ಯೆ ಪಾಕಿಸ್ತಾನಕ್ಕೆ ಬಲೂಚಿಸ್ತಾನ ಲಿಬರೇಷನ್ ಆರ್ಮಿ (Balochistan Liberation Army) ಯಿಂದಲೂ ಏಟಿನ ಮೇಲೆ ಏಟು ಬೀಳುತ್ತಿದೆ. ಬಲೂಚಿಸ್ತಾನದ ಟರ್ಬತ್ ಜಿಲ್ಲೆಯ ಸ್ಯಾಟಲೈಟ್ ಪಟ್ಟಣ (satellite town) ದ ವಿಮಾನ ನಿಲ್ದಾಣ ರಸ್ತೆಯಲ್ಲಿ ಪಾಕಿಸ್ತಾನಿ ಸೇನಾ ಬೆಂಗಾವಲು ವಾಹನ (Escort vehicle) ಗಳ ವೇಳೆ ಶುಕ್ರವಾರ ದಾಳಿ ನಡೆದಿದೆ.
ಪಹಲ್ಲಾಮ್‌ನಲ್ಲಿ 26 ನಾಗರಿಕರ ಹತ್ಯೆಗೆ ಭಾರತ ಈವರೆಗೂ ಪಾಕಿಸ್ತಾನದ ಮೇಲೆ ಯಾವ ರೀತಿಯ ಕ್ರಮ ಕೈಗೊಳ್ಳುತ್ತದೆ ಎಂದು ತಿಳಿಸಿಲ್ಲವಾದರೂ ಪಾಕಿಸ್ತಾನಕ್ಕೆ ಮಾತ್ರ ಭಾರತದ ಮುಂದಿನ ಕ್ರಮದ ಕುರಿತಾಗಿ ಭಯ (fear) ಶುರುವಾಗಿದೆ.
ಇದನ್ನು ಓದಿ : ಬೇಡ, ಬೇಡ ಅಂದ್ರು ಮಧ್ಯರಾತ್ರಿ ಮಹಿಳೆ ಮನೆಯೊಳಗೆ ನುಗ್ಗಿದ Teacher ; ಮುಂದೆನಾಯ್ತು.!
ಬಲೂಚ್ ಲಿಬರೇಷನ್ ಆರ್ಮಿ ಪ್ರಕಟಣೆಯಲ್ಲಿ ʼನಮ್ಮ ಸ್ವಾತಂತ್ರ್ಯ ಹೋರಾಟಗಾರರು ಆಕ್ರಮಿತ ಪಾಕಿಸ್ತಾನಿ ಸೇನೆ (occupying Pakistani army) ಯ ಬೆಂಗಾವಲು ಪಡೆಯ ಮೇಲೆ ದಾಳಿ ನಡೆಸಿದ್ದು, ನಮ್ಮ ಪ್ರತಿರೋಧದ ಚಳವಳಿಯ ಭಾಗವಾಗಿ ಈ ದಾಳಿ ನಡೆಸಲಾಗಿದೆ’ ಎಂದು ತಿಳಿಸಿದೆ.
ಪಾಕ್ ಸೇನಾ ಟ್ರಕ್‌ಗಳ ಮೇಲೆ ದಾಳಿ ಮಾಡಿದ್ದಾಗ ಅದರಲ್ಲಿದ್ದ ಎಲ್ಲ 10 ಮಂದಿ ಸೈನಿಕರೂ ಸ್ಥಳದಲ್ಲೇ ಅಸುನೀಗಿದ್ದಾರೆ ಎಂದು ಹೇಳಲಾಗಿದೆ. ಬಲೂಚ್ ಲಿಬರೇಷನ್ ಆರ್ಮಿ ಇದರ ವಿಡಿಯೋವನ್ನು ಕೂಡ ರಿಲೀಸ್ (Release) ಮಾಡಿದ್ದು, ಮಿಲಿಟರಿ ಟ್ರಕ್‌ನ ಮೇಲೆ ನೇರವಾಗಿ ದಾಳಿ ನಡೆಸಲಾಗಿದೆ.
ಇದನ್ನು ಓದಿ : ಕರ್ನಾಟಕ AYUSH ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನ.!
ಭಾರತದಿಂದ ದಾಳಿಗೂ ಮುನ್ನವೇ ಪಾಕಿಸ್ತಾನದ ಸೈನಿಕರಿಗೆ ಬಲೂಚ್ ಲಿಬರೇಷನ್ ಆರ್ಮಿಯ ಆತಂಕ ಶುರುವಾಗಿದೆ.
ವಿಡಿಯೋ :
https://twitter.com/i/status/1915823412666372222






