ಜನಸ್ಪಂದನ ನ್ಯೂಸ್, ಡೆಸ್ಕ್ : ಟರ್ಕಿಯಲ್ಲಿ ಸುಮಾರು 1 ಮಿಲಿಯನ್ ಡಾಲರ್ (ಸುಮಾರು 8 ಕೋಟಿ ರೂ.) ಮೌಲ್ಯದ ಐಷಾರಾಮಿ ವಿಹಾರಿ ಹಡಗು (Luxury cruise ship) ಚೊಚ್ಚಲ ಪ್ರಯಾಣ ಆರಂಭಿಸಿದ ಕೆಲವೇ ಕ್ಷಣಗಳಲ್ಲಿ ಮುಳುಗಿದ ಘಟನೆ ನಡೆದಿದೆ.
ಡೋಲ್ಸ್ ವೆಂಟೊ ಎಂಬ ಹೆಸರಿನ ಈ ನೌಕೆಯ ಉದ್ದವು 85 ಅಡಿಗಳಾಗಿತ್ತು. ಮಂಗಳವಾರ, ಉತ್ತರ ಟರ್ಕಿಯ ಜೊಂಗುಲ್ಡಕ್ ಕರಾವಳಿಯ ಎರೆಗ್ಲಿ ಜಿಲ್ಲೆಯಲ್ಲಿ ಇದು ತನ್ನ ಮೊದಲ ಪ್ರಯಾಣ ಆರಂಭಿಸಿತ್ತು. ಆದರೆ ಕೇವಲ 15 ನಿಮಿಷಗಳಲ್ಲಿ ಹಡಗು (Ship) ನೀರಿನಲ್ಲಿ ಮುಳುಗಲು ಪ್ರಾರಂಭಿಸಿತು.
ಪ್ರಯಾಣಿಕರು ಮತ್ತು ಸಿಬ್ಬಂದಿ ಆತಂಕಗೊಂಡು ಕೂಡಲೇ ನೀರಿಗೆ ಜಿಗಿದರು. ಹಡಗಿನ ಮಾಲೀಕರು ಸಹ ಅವರ ಜೊತೆಗೆ ದಡಕ್ಕೆ ಈಜಿದರು. ಅದೃಷ್ಟವಶಾತ್, ಯಾರಿಗೂ ಯಾವುದೇ ರೀತಿಯ ಗಾಯವಾಗಲಿಲ್ಲ.
$940,000 ಮೌಲ್ಯದ ಹಡಗು :
ಸೂಪರ್‌ಯಾಚ್ಟ್ ಟೈಮ್ಸ್ ವರದಿಯ ಪ್ರಕಾರ, ಈ ಹಡಗು (ship) ಮೆಡ್ ಯಿಲ್ಮಾಜ್ ಶಿಪ್‌ಯಾರ್ಡ್‌ನಲ್ಲಿ ನಿರ್ಮಾಣಗೊಂಡಿತ್ತು. ಆದರೆ ತಾಂತ್ರಿಕ ಸಮಸ್ಯೆಯಿಂದಾಗಿ ಮುಳುಗಿದೆ ಎಂಬ ಶಂಕೆ ವ್ಯಕ್ತವಾಗಿದೆ. ಅಧಿಕಾರಿಗಳು ಕಾರಣವನ್ನು ಪತ್ತೆಹಚ್ಚಲು ತಾಂತ್ರಿಕ ಪರಿಶೀಲನೆ ನಡೆಸುತ್ತಿದ್ದಾರೆ.
ವಿಡಿಯೋ ವೈರಲ್ :
ಈ ಹಡಗು (ship) ಮುಳುಗುತ್ತಿರುವ ದೃಶ್ಯ ಅಂತರ್ಜಾಲದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಹಲವಾರು ಪ್ರತಿಕ್ರಿಯೆ ನೀಡಿದ್ದಾರೆ. ಕೆಲವರು ಹಡಗು ಸಮತೋಲನ ಕಳೆದುಕೊಂಡಿತ್ತು ಎಂದು ಹೇಳಿದರೆ, ಇನ್ನು ಕೆಲವರು ಕಡಿಮೆ ಗುಣಮಟ್ಟದ ವಸ್ತುಗಳಿಂದ ನಿರ್ಮಿಸಿದ್ದರಿಂದಲೇ ಇದು ಮುಳುಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಒಟ್ಟಿನಲ್ಲಿ, ಹಡಗಿನ ಮಾಲೀಕರ 8 ಕೋಟಿ ರೂಪಾಯಿ ಮೌಲ್ಯದ ಹೂಡಿಕೆ ನೀರಿನಲ್ಲಿ ಹೋಮವಾದಂತಾಗಿದೆ.
ಮುಳಗುತ್ತಿರುವ ಐಷಾರಾಮಿ ವಿಹಾರಿ ಹಡಗಿನ (Luxury cruise ship) ವಿಡಿಯೋ :
https://twitter.com/i/status/1963305693714276597
ಒಂದೇ ಮನೆಯ ಇಬ್ಬರು sisters-in-law ನೆರೆಮನೆಯ ವಿವಾಹಿತನೊಂದಿಗೆ ಪರಾರಿ.!
ಜನಸ್ಪಂದನ ನ್ಯೂಸ್, ಡೆಸ್ಕ್ : ಪಶ್ಚಿಮ ಬಂಗಾಳದ ಉತ್ತರ 24 ಪರಗಣಾ ಜಿಲ್ಲೆಯಲ್ಲಿ ಅಚ್ಚರಿ ಹುಟ್ಟಿಸುವಂತಹ ಘಟನೆ ಬೆಳಕಿಗೆ ಬಂದಿದೆ. ಒಬ್ಬ ವ್ಯಕ್ತಿ, ಒಂದೇ ಕುಟುಂಬದ ಇಬ್ಬರು ಸೊಸೆಯಂದಿರೊಂದಿಗೆ (sisters-in-law) ಸಂಬಂಧ ಬೆಳೆಸಿ, ಇಬ್ಬರನ್ನೂ ಒಂದೇ ಬಾರಿ ಮನೆ ಬಿಡಿಸಿ ಓಡಿಸಿಕೊಂಡು ಹೋಗಿರುವ ಘಟನೆ ನಡೆದಿದೆ. ಈ ಘಟನೆ ಗ್ರಾಮದ ಜನರಲ್ಲೇ ಚರ್ಚೆಯ ವಿಷಯವಾಗಿದೆ.
ಹೇಗೆ ನಡೆದಿತು ಘಟನೆ?
ಮಂಗಳವಾರ ಬೆಳಿಗ್ಗೆ, ಮನೆಗೆ ಬಂದ ಕುಟುಂಬ ಸದಸ್ಯರು ಬೆಚ್ಚಿಬಿದ್ದರು. ಮನೆಯೊಳಗೆ ತಾಯಿ, ತಂದೆ ಮತ್ತು ಮಗಳುಗಳು ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವುದು ಕಂಡುಬಂದಿತು. ಇಬ್ಬರು ಸೊಸೆಯಂದಿರು (sisters-in-law/ ಸಹೋದರಿಯರು) ಮನೆಯಲ್ಲಿರಲಿಲ್ಲ. ತಕ್ಷಣವೇ ಅಸ್ವಸ್ಥರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು.
Wheat : 21 ದಿನ ಗೋಧಿ ಚಪಾತಿ ತಿನ್ನೋದು ಬಿಟ್ಟರೆ ಏನಾಗುತ್ತೇ ಗೊತ್ತಾ.?
ಚಿಕಿತ್ಸೆ ಬಳಿಕ ಅವರು ಚೇತರಿಸಿಕೊಂಡ ನಂತರ, ಏನಾಯಿತು ಎಂಬುದರ ನಿಗೂಢತೆ ಬಯಲಾಗಿತು. ಮನೆಯವರ ಪ್ರಕಾರ, ಆರಿಫ್ ಎಂಬ ಗ್ರಾಮದ ಯುವಕ ಸೋಮವಾರ ಸಂಜೆ ಮನೆಗೆ ಬಂದು ಇಬ್ಬರು ಸೊಸೆಯಂದಿರೊಂದಿಗೆ (sisters-in-law) ಮಾತನಾಡಿ ಏನೋ ನೀಡಿ ಹೊರಟಿದ್ದ.
ನಂತರ ಇಬ್ಬರು ಸೊಸೆಯಂದಿರು (sisters-in-law) ಚಹಾ ಮಾಡಿದರು. ಕುಟುಂಬ ಸದಸ್ಯರು ಆ ಚಹಾ ಕುಡಿಯುತ್ತಿದ್ದಂತೆ ಅಸ್ವಸ್ಥರಾದರು. ಇದೇ ಸಮಯದಲ್ಲಿ ಇಬ್ಬರು ಮಹಿಳೆಯರು ಮನೆ ಬಿಟ್ಟು ಆರಿಫ್ ಜೊತೆ ಪರಾರಿಯಾದರು.
ಶಾಲಾ-ಕಾಲೇಜು ವಿದ್ಯಾರ್ಥಿನಿಯರಿಗೆ ಕಿರುಕುಳ ನೀಡುತ್ತಿದ್ದ ಇಬ್ಬರಿಗೆ Gunshot.!
ಕುಟುಂಬದ ಆರೋಪ :
ಬಾಧಿತರಾದ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದಾರೆ. ಇವರ ಪ್ರಕಾರ, ಯಾಸೀನ್ ಮತ್ತು ಅನಿಸುರ್ ಎಂಬುವವರ ಹೆಂಡತಿಗಳಾದ ನಜ್ಮಾ ಮಂಡಲ್ ಮತ್ತು ಕುಲ್ಚನ್ ಮಲ್ಲಿಕ್ ಇಬ್ಬರೂ ಆರಿಫ್ ಜೊತೆ ಓಡಿ ಹೋಗಿದ್ದಾರೆ. ಇಬ್ಬರು ಸಹೋದರರು ಪೊಲೀಸರಿಗೆ ಕಠಿಣ ಕ್ರಮ ಕೈಗೊಳ್ಳುವಂತೆ ವಿನಂತಿಸಿದ್ದಾರೆ.
ಇದೇ ಮೊದಲ ಬಾರಿಗೆ ಅಲ್ಲ, ಹಿಂದೆಯೂ ಆರಿಫ್ ಇಬ್ಬರನ್ನೂ (sisters-in-law) ಕರೆದುಕೊಂಡು ಹೋಗಿದ್ದನು. ಆದರೆ, ಮಕ್ಕಳ ಭವಿಷ್ಯವನ್ನು ಗಮನದಲ್ಲಿಟ್ಟು ಕುಟುಂಬವು ಒಮ್ಮೆ ಹೊಂದಾಣಿಕೆ ಮಾಡಿಕೊಂಡಿತ್ತು ಎಂದು ಯಾಸೀನ್ ಹೇಳಿದ್ದಾರೆ.
Dowry ಕಿರುಕುಳಕ್ಕೆ ಬೇಸತ್ತು ಮನೆಯ ಮೇಲಿಂದ ಜಿಗಿದ ಮಹಿಳೆ : ಆಘಾತಕಾರಿ ವಿಡಿಯೋ ವೈರಲ್.
ಆರಿಫ್ ಪತ್ನಿಯ ಆಕ್ರೋಶ :
ಆರಿಫ್ ಕೂಡ ವಿವಾಹಿತನಾಗಿದ್ದು, ಅವನ ಪತ್ನಿ ಸೋನಿಯಾ ಕೂಡ ಗಂಭೀರ ಆರೋಪ ಹೊರಿಸಿದ್ದಾರೆ. “ಆರಿಫ್ ನನ್ನ ಕುಟುಂಬವನ್ನಷ್ಟೇ ಅಲ್ಲ, ಯಾಸೀನ್ ಮತ್ತು ಅನಿಸುರ್ ಅವರ ಕುಟುಂಬವನ್ನೂ ಹಾಳುಮಾಡಲು ಯತ್ನಿಸುತ್ತಿದ್ದಾನೆ” ಎಂದು ಅವಳು ತಿಳಿಸಿದ್ದಾರೆ.
ಸೋನಿಯಾ ಕೂಡ ಪೊಲೀಸರು ಆರಿಫ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಈ ಪ್ರಕರಣದಲ್ಲಿ ಪೊಲೀಸರು ನಾಪತ್ತೆಯಾಗಿರುವ ಮೂವರ ಹುಡುಕಾಟ ಆರಂಭಿಸಿದ್ದು, ತನಿಖೆ ಮುಂದುವರಿದಿದೆ.






