ಜನಸ್ಪಂದನ ನ್ಯೂಸ್, ಆರೋಗ್ಯ : ಥೈರಾಯ್ಡ್ (Thyroid) ಸಮಸ್ಯೆ ನಿಯಂತ್ರಣಕ್ಕೆ ಔಷಧಿಗಳು ಅಗತ್ಯವಾದರೂ, ಕೇವಲ ಔಷಧಿ ಸೇವನೆಯೇ ಸಾಕಾಗುವುದಿಲ್ಲ, ತಿನ್ನುವ ಆಹಾರಕ್ಕೂ ಜಾಗ್ರತೆ ವಹಿಸುವುದು ಅತ್ಯಂತ ಮುಖ್ಯ.
ತಪ್ಪಾದ ಆಹಾರ ಪದ್ಧತಿಗಳು ಔಷಧಿಗಳ ಪರಿಣಾಮವನ್ನು ಕಡಿಮೆ ಮಾಡುವುದರ ಜೊತೆಗೆ ಆರೋಗ್ಯ ಸಮಸ್ಯೆಗಳನ್ನು ಉಲ್ಬಣಗೊಳಿಸಬಹುದು. ತಜ್ಞರ ಪ್ರಕಾರ, ಥೈರಾಯ್ಡ್ (Thyroid) ರೋಗಿಗಳು ತಪ್ಪಿಸಬೇಕಾದ ಕೆಲವು ಆಹಾರಗಳು ಇಲ್ಲಿವೆ.
Belagavi : ಭಾರೀ ಮಳೆಯಿಂದಾಗಿ 8 ತಾಲ್ಲೂಕುಗಳಲ್ಲಿ ನಾಳೆ ಶಾಲಾ-ಕಾಲೇಜುಗಳಿಗೆ ರಜೆ.!
ಥೈರಾಯ್ಡ್ (Thyroid) ರೋಗಿಗಳು ತಪ್ಪಿಸಬೇಕಾದ ಆಹಾರಗಳಿವು :
👉 ಸೋಯಾ ಉತ್ಪನ್ನಗಳು :
ಸೋಯಾಬೀನ್, ಸೋಯಾ ಹಾಲು, ಟೋಫು ಮುಂತಾದ ಉತ್ಪನ್ನಗಳು ಥೈರಾಯ್ಡ್ (Thyroid) ಔಷಧಿಗಳ ಪರಿಣಾಮವನ್ನು ಕಡಿಮೆ ಮಾಡುತ್ತವೆ. ಹಾಗಾಗಿ ಇವುಗಳನ್ನು ಸೇವನೆ ಮಾಡುವುದು ಬೇಡ.
👉 ಎಲೆಕೋಸು ಮತ್ತು ಹೂಕೋಸು :
ತರಕಾರಿಗಳು ಆರೋಗ್ಯಕರವಾದರೂ, ಎಲೆಕೋಸು ಮತ್ತು ಹೂಕೋಸು ಥೈರಾಯ್ಡ್ ರೋಗಿಗಳಿಗೆ ಸೂಕ್ತವಲ್ಲ. ಇವುಗಳು ಹಾರ್ಮೋನುಗಳ ಸಮತೋಲನಕ್ಕೆ ಅಡ್ಡಿಯಾಗಬಹುದು.
ಯೋಧನನ್ನು ಕಂಬಕ್ಕೆ ಕಟ್ಟಿ ಥಳಿಸಿದ toll-plaza ಸಿಬ್ಬಂದಿ ; 4 ಜನರ ಬಂಧನ.!
👉 ಸಂಸ್ಕರಿಸಿದ ಆಹಾರಗಳು :
ಪ್ಯಾಕ್ಡ್ ಮತ್ತು ಪ್ರೊಸೆಸ್ಡ್ ಫುಡ್‌ಗಳಲ್ಲಿ ಹೆಚ್ಚುವರಿ ಉಪ್ಪು ಹಾಗೂ ಸಕ್ಕರೆ ಇರುತ್ತದೆ. ಇವು ತೂಕವನ್ನು ಹೆಚ್ಚಿಸುವುದರೊಂದಿಗೆ ಥೈರಾಯ್ಡ್ (Thyroid) ಸಮಸ್ಯೆಯನ್ನು ಹದಗೆಡಿಸುತ್ತವೆ.
👉 ಸಿಹಿತಿಂಡಿಗಳು ಮತ್ತು ಸಕ್ಕರೆ :
ಹೆಚ್ಚಿನ ಸಕ್ಕರೆ ಹಾಗೂ ಸಿಹಿತಿಂಡಿಗಳ ಸೇವನೆಯಿಂದ ತೂಕ ನಿಯಂತ್ರಣ ಕಷ್ಟವಾಗುತ್ತದೆ. ಜೊತೆಗೆ ದೈಹಿಕ ಅಸಮತೋಲನ ಹೆಚ್ಚಾಗುವ ಸಾಧ್ಯತೆಯೂ ಇದೆ.
👉 ಕಾಫಿ :
ಖಾಲಿ ಹೊಟ್ಟೆಯಲ್ಲಿ ಅಥವಾ ಔಷಧಿ ಸೇವನೆಯ ತಕ್ಷಣ ಕಾಫಿ ಕುಡಿಯುವುದು ತಪ್ಪು. ಇದು ಔಷಧಿಯ ಪರಿಣಾಮವನ್ನು ಕಡಿಮೆ ಮಾಡುತ್ತದೆ.
ಈ ಲಕ್ಷಣಗಳು ಕಾಣಿಸಿಕೊಂಡರೆ ಅದು ರಕ್ತನಾಳಗಳು Blocked ಆಗಿರುವ ಎಚ್ಚರಿಕೆ.!
ಸಂಪಾದಕೀಯ : ಆರೋಗ್ಯ ತಜ್ಞರ ಸಲಹೆಯಂತೆ, ಥೈರಾಯ್ಡ್ (Thyroid) ರೋಗಿಗಳು ಈ ಆಹಾರಗಳನ್ನು ತಪ್ಪಿಸಿ, ಸಮತೋಲನಯುತ ಆಹಾರ ಪದ್ಧತಿಯನ್ನು ಅನುಸರಿಸಿದರೆ ಔಷಧಿಗಳ ಫಲಿತಾಂಶ ಉತ್ತಮವಾಗಿರುತ್ತದೆ.
ಯೋಧನನ್ನು ಕಂಬಕ್ಕೆ ಕಟ್ಟಿ ಥಳಿಸಿದ toll-plaza ಸಿಬ್ಬಂದಿ ; 4 ಜನರ ಬಂಧನ.!

ಜನಸ್ಪಂದನ ನ್ಯೂಸ್, ಡೆಸ್ಕ್ : ಓರ್ವ ಯೋಧನನ್ನು ಕಂಬಕ್ಕೆ ಕಟ್ಟಿ ಹಾಕಿ ಟೋಲ್ ಪ್ಲಾಜಾ (toll-plaza) ಸಿಬ್ಬಂದಿ ಥಳಿಸಿದ ಅಮಾನವೀಯ ಘಟನೆಯೊಂದು ಉತ್ತರಪ್ರದೆಶದಲ್ಲಿ ನಡೆದಿದ್ದು, ಘಟನೆಯ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ದೇಶದಲ್ಲಿ ಅಪರಾಧ ಪ್ರಕರಣಗಳು ಹೆಚ್ಚುತ್ತಿರುವ ನಡುವೆ, ಉತ್ತರ ಪ್ರದೇಶದ ಮೀರತ್‌ನಲ್ಲಿ ಸೇನಾ ಯೋಧನ ಮೇಲೆ ನಡೆದ ಹಲ್ಲೆಯ ಘಟನೆ ಆತಂಕ ಮೂಡಿಸಿದೆ. ಟೋಲ್ ಪ್ಲಾಜಾ (toll-plaza) ಬಳಿ ಉಂಟಾದ ವಾಗ್ವಾದದ ವೇಳೆ ಯೋಧನನ್ನು ಕಂಬಕ್ಕೆ ಕಟ್ಟಿ ಥಳಿಸಿರುವ ಘಟನೆ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
POCSO : ರಾಜ್ಯದಲ್ಲಿ 3 ವರ್ಷಗಳಲ್ಲಿ 10 ಸಾವಿರಕ್ಕೂ ಹೆಚ್ಚು ಅಪ್ರಾಪ್ತರ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ.!
ಮೀರತ್‌ನ ಟೋಲ್ ಪ್ಲಾಜಾ (toll-plaza) ದಲ್ಲಿ ನಡೆದ ಈ ಘಟನೆಗೆ ಸಂಬಂಧಿಸಿ ನಾಲ್ವರು ಸಿಬ್ಬಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಹಲ್ಲೆಗೊಳಗಾದ ಯೋಧನನ್ನು ಕಪಿಲ್ ಕವಾಡ್ (Kapil, an Indian Army Soldier) ಎಂದು ಗುರುತಿಸಲಾಗಿದ್ದು, ಅವರು ಭಾರತೀಯ ಸೇನೆಯ ರಾಜಪೂತ ರೆಜಿಮೆಂಟ್‌ನ ಸದಸ್ಯರಾಗಿದ್ದಾರೆ.
ಮಾಹಿತಿ ಪ್ರಕಾರ, ಕಪಿಲ್ ರಜೆ ಮುಗಿಸಿಕೊಂಡು ಶ್ರೀನಗರದಲ್ಲಿರುವ ಕರ್ತವ್ಯದ ಸ್ಥಳಕ್ಕೆ ಮರಳಲು ದೆಹಲಿ ವಿಮಾನ ನಿಲ್ದಾಣಕ್ಕೆ ತೆರಳುತ್ತಿದ್ದರು. ಈ ವೇಳೆ ಟೋಲ್ ಪ್ಲಾಜಾ (toll-plaza) ದಲ್ಲಿ ವಾಹನ ಸಿಲುಕಿಕೊಂಡ ಕಾರಣ, ವಿಮಾನಕ್ಕೆ ತಡವಾಗುವ ಆತಂಕದಿಂದ ಸಿಬ್ಬಂದಿಯೊಂದಿಗೆ ಮಾತುಕತೆ ನಡೆಸಿದಾಗ ವಾಗ್ವಾದ ಉಂಟಾಯಿತು.
Exclusive photo reveal : ಅರೆಸ್ಟ್ ಆದ್ಮೇಲೆ ದರ್ಶನ್-ಪವಿತ್ರಾಗೌಡ ಹೇಗಿದ್ದಾರೆ ನೋಡಿ.!
ವಾಗ್ವಾದ ತೀವ್ರಗೊಂಡು, ಟೋಲ್ ಪ್ಲಾಜಾ (toll-plaza) ದ ಐವರು ಸಿಬ್ಬಂದಿ ಕಪಿಲ್ ಹಾಗೂ ಅವರ ಸಂಬಂಧಿಯ ಮೇಲೆ ದಾಳಿ ನಡೆಸಿದ್ದಾರೆ. ದೊಣ್ಣೆಯಿಂದ ಹೊಡೆದಿರುವುದು ಮಾತ್ರವಲ್ಲದೆ, ಯೋಧನನ್ನು ಕಂಬಕ್ಕೆ ಕಟ್ಟಿ ಹಲ್ಲೆ ನಡೆಸಿದ ದೃಶ್ಯಗಳು ಕ್ಯಾಮೆರಾದಲ್ಲಿ ಸೆರೆಯಾಗಿ ವೈರಲ್ ಆಗಿವೆ.
ಈ ಘಟನೆ ದೇಶಾದ್ಯಂತ ಆಕ್ರೋಶ ಮೂಡಿಸಿದ್ದು, ಪೊಲೀಸರ ತಕ್ಷಣದ ಕ್ರಮ ಕೈಗೊಂಡ ಹಿನ್ನಲೆಯಲ್ಲಿ ಹಲ್ಲೆ ಮಾಡಿದ 4 ಜನ ಆರೋಪಿಗಳನ್ನು ಬಂಧಿಸಲಾಗಿದೆ.
ಯೋಧನನ್ನು ಕಂಬಕ್ಕೆ ಕಟ್ಟಿ ಥಳಿಸಿದ toll-plaza ಸಿಬ್ಬಂದಿ ವಿಡಿಯೋ :
https://twitter.com/i/status/1957280075033780705






