Saturday, December 21, 2024
HomeSpecial Newsಕೋಚಿಂಗ್ ಇಲ್ಲದೇ UPSC ಪರೀಕ್ಷೆ ಬರೆದು ಉತ್ತೀರ್ಣರಾದ IAS ಅಧಿಕಾರಿ ಇವರು.!
spot_img

ಕೋಚಿಂಗ್ ಇಲ್ಲದೇ UPSC ಪರೀಕ್ಷೆ ಬರೆದು ಉತ್ತೀರ್ಣರಾದ IAS ಅಧಿಕಾರಿ ಇವರು.!

WhatsApp Channel Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ಡೆಸ್ಕ್ : ಭಾರತದ ಅತ್ಯಂತ ಕಠಿಣ ಪರೀಕ್ಷೆಗಳಲ್ಲಿ ಯುಪಿಎಸ್ಸಿ (Union Public Service Commission) ಒಂದಾಗಿದೆ. ಈ ಪರೀಕ್ಷೆಯನ್ನು ತೇರ್ಗಡೆಯಾಗುವುದು ಕಷ್ಟಸಾಧ್ಯ. ಕೆಲವರು‌ ಈ ಪರೀಕ್ಷೆಯನ್ನು ಒಂದೇ ಒಂದು ಪ್ರಯತ್ನದಲ್ಲಿ ಉತ್ತೀರ್ಣರಾಗುತ್ತಾರೆ. ಆದರೆ ಇನ್ನೂ ಕೆಲವರು ಹಲವಾರು ಬಾರಿ ಪರೀಕ್ಷೆ ಬರೆದ ಬಳಿಕ ಉತ್ತೀರ್ಣರಾಗುತ್ತಾರೆ.

ಹೀಗೆ UPSC ಪರೀಕ್ಷೆ ಬರೆದು ಉತ್ತೀರ್ಣರಾದ ಅರ್ಪಿತಾ ತುಬೆ (Arpita Tube) ಅವರ ಸ್ಪೂರ್ತಿದಾಯಕ ಕತೆಯನ್ನು (An inspiring story) ಓದಿರಿ.

ಇದನ್ನು ಓದಿ : ಜೈಲಿನಲ್ಲಿ ಗಾಂಜಾ, ಸಿಗರೇಟು ಸೇದುತ್ತ ಇಸ್ಪೀಟ್ ಆಡುತ್ತಿರುವ ಕೈದಿಗಳ ವಿಡಿಯೋ Viral.!

ಮಹಾರಾಷ್ಟ್ರದ ಥಾಣೆ ಮೂಲದ ಅರ್ಪಿತಾ ತುಬೆ ಅವರು, ಸರ್ದಾರ್ ಪಟೇಲ್ ಕಾಲೇಜ್ ಆಫ್ ಇಂಜಿನಿಯರಿಂಗ್‌ನಲ್ಲಿ ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ನಲ್ಲಿ (Electrical Engineering) ತಮ್ಮ ಅಧ್ಯಯನವನ್ನು ಪೂರ್ಣಗೊಳಿಸಿದರು. ದೇಶಕ್ಕೆ ಸೇವೆ ಸಲ್ಲಿಸುವ ಬಲವಾದ ಕನಸನ್ನು ಕಂಡಿದ್ದ (Had a strong dream) ಅವರು UPSC ಪರೀಕ್ಷೆಗೆ ತಯಾರಿ ನಡೆಸಿದರು.

2019 ರಲ್ಲಿ ಮೊದಲ ಬಾರಿಗೆ ಅರ್ಪಿತಾ ಅವರು UPSC ಪರೀಕ್ಷೆಗೆ ಹಾಜರಾಗಿದ್ದರು. ಅವರು ಪರೀಕ್ಷೆಯನ್ನು ಉತ್ತೀರ್ಣರಾಗಲು ಸಾಧ್ಯವಾಗಲಿಲ್ಲ. 2020 ರಲ್ಲಿ, ಅವರು ಸ್ಟ್ರಾಂಗ್ ಆಗಿ 383 ನೇ ಶ್ರೇಣಿಯನ್ನು ಪಡೆದುಕೊಂಡರು.

ಬಳಿಕ ಭಾರತೀಯ ಪೊಲೀಸ್ ಸೇವೆಗೆ (Indian Police Service) ಆಯ್ಕೆಯಾದಾಗ ಅವಳ ಕಠಿಣ ಪರಿಶ್ರಮವು ಫಲ ನೀಡಿತು ಎನ್ನಬಹುದು. ಆದರೆ ಆಕೆಯ ನಿಜವಾದ ಕನಸು ಭಾರತೀಯ ಆಡಳಿತ ಸೇವೆಗೆ (IAS) ಸೇರುವುದಾಗಿತ್ತು

ಇದನ್ನು ಓದಿ : KLC : ಕರ್ನಾಟಕ ವಿಧಾನ ಪರಿಷತ್ ಸಚಿವಾಲಯದಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ.!

ಅರ್ಪಿತಾ 2021 ರಲ್ಲಿ ಮತ್ತೆ UPSC ಪರೀಕ್ಷೆಗೆ ಹಾಜರಾದರು. ಇಲ್ಲಿಯೂ ಮೊದಲ ಪ್ರಯತ್ನದಲ್ಲಿ ಹಿನ್ನಡೆಯಾಯ್ತು. ಆದರೆ ಆಕೆಯ ಸಂಕಲ್ಪ ಅಚಲವಾಗಿತ್ತು. ತನ್ನ ನಾಲ್ಕನೇ ಮತ್ತು ಅಂತಿಮ ಪ್ರಯತ್ನದಲ್ಲಿ (Fourth and final attempt), ಅರ್ಪಿತಾ ತನ್ನ ಐಪಿಎಸ್ ಕರ್ತವ್ಯಗಳಿಂದ ವಿರಾಮವನ್ನು ತೆಗೆದುಕೊಂಡು ತನ್ನ ಕನಸಿನತ್ತ ಸಂಪೂರ್ಣವಾಗಿ ಗಮನಹರಿಸಿದಳು.

2022 ರಲ್ಲಿ, 214 ನೇ ಶ್ರೇಣಿಯನ್ನು ಪಡೆದು ಭಾರತೀಯ ಆಡಳಿತ ಸೇವೆಯಲ್ಲಿ (Indian Administrative Service) ಕನಸು ನನಸಾಗಿಸಿಕೊಂಡರು.

 

ಹಿಂದಿನ ಸುದ್ದಿ : Accident : ಭೀಕರ ರಸ್ತೆ ಅಪಘಾತದಲ್ಲಿ ಐವರು ಸ್ಥಳದಲ್ಲೇ ಸಾವು.!

ಜನಸ್ಪಂದನ ನ್ಯೂಸ್, ವಿಜಯಪುರ : ಕಾರು ಮತ್ತು ತೊಗರಿ ಕಟಾವು ಮಷಿನ್ (Car and Togari harvester) ನಡುವೆ ಭೀಕರ ಅಫಘಾತ ಸಂಭವಿಸಿ, ಕಾರಿನಲ್ಲಿದ್ದ ಐವರು ಸ್ಥಳದಲ್ಲೇ ಮೃತಪಟ್ಟ ಘಟನೆ ವಿಜಯಪುರ ಜಿಲ್ಲೆಯ ತಾಳಿಕೋಟೆಯ (Talikote in Vijayapura district) ಬಿಳೆಬಾವಿ ಕ್ರಾಸ್ ಬಳಿ ನಡೆದಿದೆ.

ಇದನ್ನು ಓದಿ : ಇಂಡಿಯಾ ಗೇಟ್ ಬಳಿ ಕೇವಲ ಟವೆಲ್‌ ಕಟ್ಟಿಕೊಂಡು Dance ಮಾಡಿ ಛೀಮಾರಿ ಹಾಕಿಸಿಕೊಂಡ Model.!

ನಿಂಗಪ್ಪಾ ಪಾಟೀಲ್ (55), ಭೀಮಶಿ ಸಂಕನಾಳ (65), ಶಶಿಕಲಾ ಜೈನಾಪೂರ (50), ಶಾಂತವ್ವ ಶಂಕರ ಪಾಟೀಲ್ (45) ಹಾಗೂ ದಿಲೀಪ್ ಪಾಟೀಲ್ (45) ಎಂಬುವವರು ಸಾವಿಗೀಡಾಗಿದ್ದಾರೆ.

ಈ ಐದು ಜನರು ವಿಜಯಪುರ ತಾಲೂಕಿನ ಅಲಿಯಾಬಾದ್ (Vijayapura Taluk Aliyabad) ನಿವಾಸಿಗಳೆಂದು ತಿಳಿದು ಬಂದಿದೆ.

ಕಾರಿಗೆ ತೊಗರಿ ಕಟಾವು ಮಷಿನ್​ ಡಿಕ್ಕಿಯಾಗಿ ಕಾರಿನಲ್ಲಿದ್ದ ಮೂವರು ಪುರುಷರು, ಇಬ್ಬರು ಮಹಿಳೆಯರು (Three men, two women) ಸಾವಿಗೀಡಾಗಿದ್ದಾರೆ ಎನ್ನಲಾಗಿದೆ.

ಮೃತರಾದ ಐವರು ಯಾದಗಿರಿ ಜಿಲ್ಲೆಯ ಅಗ್ನಿ ಗ್ರಾಮದಲ್ಲಿ ಹುಡುಗಿ (ಕನ್ಯಾ) ನೋಡಲು ಹೋಗಿದ್ದು, ವಾಪಸ್ ಬರುತ್ತಿದ್ದ ವೇಳೆ ಈ ಭೀಕರ ಅಪಘಾತ ಸಂಭವಿಸಿದೆ.

ಇದನ್ನು ಓದಿ : Health : ಬೆಳಿಗ್ಗೆ ಕರಿಬೇವಿನ ಎಲೆಗಳನ್ನು ಜಗಿದು ತಿನ್ನುವುದರಿಂದ ಆಗುವ ಪ್ರಯೋಜನಗಳೇನು ಗೊತ್ತಾ?

ಕಾರು, ಕ್ರೂಸರ್ ಓವರ್ ಟೇಕ್ (overtake) ಮಾಡುವ ವೇಳೆ ತೊಗರಿ ಕಟಾವು ಮಷಿನ್​​ಗೆ ಮುಖಾಮುಖಿ ಡಿಕ್ಕಿಯಾಗಿದೆ ಎಂದು ತಿಳಿದು ಬಂದಿದೆ.

ಘಟನೆ ನಡೆದ ಸ್ಥಳಕ್ಕೆ ಬಂದ ತಾಳಿಕೋಟೆ ಪೊಲೀಸರು, ಕಾರಿನಲ್ಲಿದ್ದ ಶವಗಳನ್ನು ಜೆಸಿಬಿ ಮೂಲಕ ಹೊರ ತೆಗೆದಿದ್ದು, ಮರಣೋತ್ತರ ಪರೀಕ್ಷೆಗಾಗಿ ಐವರ ಶವಗಳನ್ನು ಬಸವನ ಬಾಗೇವಾಡಿ ಸಮುದಾಯ ಆಸ್ಪತ್ರೆಗೆ ರವಾನಿಸಿದ್ದಾರೆ ಎಂದು ತಿಳಿದು ಬಂದಿದೆ.

ತಾಳಿಕೋಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಪ್ರಕರಣ ನಡೆದಿದೆ.

WhatsApp Channel Join Now
Telegram Group Join Now
Instagram Account Follow Now
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments