Sunday, December 22, 2024
HomeNational NewsVitamin B Complex ಸೇರಿ ಈ 90 ಔಷಧಿಗಳು ಗುಣಮಟ್ಟದ ಪರೀಕ್ಷೆಗಳಲ್ಲಿ ಫೇಲ್.!
spot_img

Vitamin B Complex ಸೇರಿ ಈ 90 ಔಷಧಿಗಳು ಗುಣಮಟ್ಟದ ಪರೀಕ್ಷೆಗಳಲ್ಲಿ ಫೇಲ್.!

WhatsApp Channel Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ಬೆಂಗಳೂರು : ಕೇಂದ್ರದ ಆರೋಗ್ಯ ಸಚಿವಾಲಯವು (Ministry of Health) ಅಕ್ಟೋಬರ್ ತಿಂಗಳಲ್ಲಿ ದೇಶದ ವಿವಿಧೆಡೆ ಪರೀಕ್ಷೆಗೆ ಒಳಪಟ್ಟ 90 ಔಷಧಗಳು ಪ್ರಮಾಣಿತ ಗುಣಮಟ್ಟ ಹೊಂದಿಲ್ಲ (Does not have standard quality) ಎಂದು ತಿಳಿಸಿದೆ.

ಅಕ್ಟೋಬರ್‌ ತಿಂಗಳಿನಲ್ಲಿ ಕೇಂದ್ರದ ಔಷಧ ಪ್ರಯೋಗಾಲಯಗಳಲ್ಲಿ (laboratories) ಪರೀಕ್ಷಿಸಲಾದ 56 ಔಷಧ ಮಾದರಿಗಳು ಪ್ರಮಾಣಿತ ಗುಣಮಟ್ಟ (NSQ) ಹೊಂದಿಲ್ಲ ಎಂದು ಕೇಂದ್ರೀಯ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆಯು (Central Drug Quality Control Agency) ಪತ್ತೆ ಮಾಡಿದೆ ಎಂದು ವರದಿಯಾಗಿದೆ.

ಇದನ್ನು ಓದಿ : Health : ದೇಹದ ಮೇಲೆ ಕಂಡು ಬರುವ ಮುದ್ದೆಯಂತಹ ಈ ಗುಳ್ಳೆಗಳನ್ನು ಹೋಗಲಾಡಿಸುವುದು ಹೇಗೆ.?

ವಿಟಮಿನ್ ಬಿ ಕಾಂಪ್ಲೆಕ್ಸ್ ಮತ್ತು ವಿಟಮಿನ್ ಸಿ ಸಾಫ್ಟ್ಜೆಲ್ (Vitamin B Complex and Vitamin C Softgel), ವಿಟಮಿನ್ ಸಿ ಮತ್ತು ಡಿ 3 ಮಾತ್ರೆಗಳು ಶೆಲ್ಕಾಲ್ (D3 Tablets Shellcol), ಅಧಿಕ ರಕ್ತದೊತ್ತಡ ಔಷಧ ಟೆಲ್ಮಿಸಾರ್ಟನ್, ಆಂಟಾಸಿಡ್ ಪ್ಯಾನ್ -ಡಿ (Antacid Pan- D), ಪ್ಯಾರೆಸಿಟಮಾಲ್ ಐಪಿ 500 ಮಿಗ್ರಾಂ, ಮಧುಮೇಹ ಔಷಧ ಗ್ಲಿಮೆಪಿರೈಡ್ (diabetes drug glimepiride) ಮುಂತಾದ ಔಷಧಿಗಳ ಹೆಸರುಗಳು ಈ ಪಟ್ಟಿಯಲ್ಲಿ ಸೇರಿವೆ. ಈ ಔಷಧಿಗಳು ಗುಣಮಟ್ಟ ಪರೀಕ್ಷೆಯಲ್ಲಿ ವಿಫಲವಾಗಿವೆ (failed) ಎಂದು ಘೋಷಿಸಲಾಗಿದೆ.

ಕೇಂದ್ರದ ಆರೋಗ್ಯ ಸಚಿವಾಲಯವು, ರಾಜ್ಯ ಔಷಧ ನಿಯಂತ್ರಕರು (State drug regulators) ಪರೀಕ್ಷಿಸಿದ 34 ಔಷಧಿ ಮಾದರಿಗಳು ಸಹ ಪ್ರಮಾಣಿತ ಗುಣಮಟ್ಟ ಹೊಂದಿಲ್ಲ ಎಂದು ತಿಳಿಸಿದೆ.

ಇದನ್ನು ಓದಿ : Video : ಬೇರೊಬ್ಬನೊಂದಿಗೆ ಸಿಕ್ಕಿಬಿದ್ದ ಪ್ರೇಯಸಿ ; ಗಿಪ್ಟ್ ಕೊಟ್ಟ ಸ್ಕೂಟಿ ವಾಪಸ್ ಕಿತ್ತುಕೊಂಡ ಬಾಯ್‌ಫ್ರೆಂಡ್‌.!

ಬಿಹಾರ ಔಷಧ ನಿಯಂತ್ರಣ ಪ್ರಾಧಿಕಾರ (Bihar Drug Control Authority) ನಡೆಸಿದ ಪರೀಕ್ಷೆಯಲ್ಲಿ ಇನ್ನೂ ಮೂರು ಔಷಧ ನಕಲಿ ಎಂದು ಗುರುತಿಸಲಾಗಿದೆ. ಅನಧಿಕೃತ ಉತ್ಪಾದಕರು (Unauthorized producers) ಮತ್ತೊಂದು ಕಂಪನಿಯ ಬ್ರ್ಯಾಂಡ್ ಅನ್ನು ಬಳಸಿಕೊಂಡು ಈ ಔಷಧಗಳನ್ನು ತಯಾರಿಸಿದ್ದಾರೆ ಎಂದು ಸಚಿವಾಲಯ ಮಾಹಿತಿ ನೀಡಿದೆ. ಇನ್ನೂ ಈ ಬಗ್ಗೆ ತನಿಖೆ ಆರಂಭಗೊಂಡಿದೆ.

ನಕಲಿ ಔಷಧಗಳನ್ನು ಗುರುತಿಸಿ, ಮಾರುಕಟ್ಟೆಯಿಂದ ತೆಗೆದು ಹಾಕಲು ಕ್ರಮ ಕೈಗೊಳ್ಳಲಾಗಿದೆ. ರಾಜ್ಯಗಳ ಔಷಧ ನಿಯಂತ್ರಣ ಪ್ರಾಧಿಕಾರಗಳ ಜೊತೆ ನಕಲಿ ಮತ್ತು ಪ್ರಮಾಣಿತ ಗುಣಮಟ್ಟವಿಲ್ಲದ (Substandard) ಔಷಧಗಳ ಪತ್ತೆ ಮಾಡುವ ಕಾರ್ಯವನ್ನು ನಡೆಸಲಾಗಿದೆ ಎಂದು ಮಾಹಿತಿ ನೀಡಿದೆ.

ಇನ್ನೂ ಔಷಧೀಯ ಗುಣಮಟ್ಟವನ್ನು (Pharmaceutical quality) ಒಂದು ಅಥವಾ ಎರಡು ಗುಣಮಟ್ಟ ಮಾನದಂಡಗಳಲ್ಲಿ (criterion) ವಿಫಲವಾದ ಆಧಾರದ ಮೇಲೆ ಅಳೆಯಲಾಗಿದೆ ಎಂದು ವರದಿಯಿಂದ ತಿಳಿದು ಬಂದಿದೆ.

 

ಹಿಂದಿನ ಸುದ್ದಿ : ಹೆತ್ತಮ್ಮ, ಮಡದಿ, ಮಕ್ಕಳನ್ನು ಕೊಂದ ಅಪರಾಧಿಗೆ ಮರಣದಂಡನೆ ವಿಧಿಸಿದ ಕೋರ್ಟ್.!

ಜನಸ್ಪಂದನ ನ್ಯೂಸ್, ಮೈಸೂರು : ತನ್ನ ಹೆತ್ತ ತಾಯಿ, ಮಡದಿ ಮತ್ತು ಮಕ್ಕಳನ್ನು ಕೊಂದ ಅಪರಾಧಿಗೆ ಮರಣ ದಂಡನೆ (death penalty) ವಿಧಿಸಿ, ಮೈಸೂರಿನ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು (5th Additional District and Sessions Court, Mysore) ತೀರ್ಪು ನೀಡಿದೆ.

ಇದನ್ನು ಓದಿ : ಪ್ರೇಯಸಿಯೊಂದಿಗೆ ಕಾರಿನಲ್ಲಿ ಸುತ್ತಾಡುತ್ತಿದ್ದಾಗ ಪತ್ನಿ ಕೈಗೆ ಸಿಕ್ಕಿಬಿದ್ದ ಗ್ರಾ.ಪಂ. ಅಧ್ಯಕ್ಷ; ಮುಂದೆನಾಯ್ತು? Video ನೋಡಿ.!

ಸರಗೂರು ಪೊಲೀಸ್ ಠಾಣಾ (Saraguru Police Station) ವ್ಯಾಪ್ತಿಯಲ್ಲಿ 2021ರಲ್ಲಿ ನಡೆದಿದ್ದ ಪ್ರಕರಣದಲ್ಲಿ ಪೊಲೀಸರು, ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ (Charge List) ಸಲ್ಲಿಸಿದ್ದರು.

ಪ್ರಕರಣದ ವಿವರ :
ಶಿಕ್ಷೆಗೊಳಗಾದ ಅಪರಾಧಿ (A convicted felon) ಮಣಿಕಂಠಸ್ವಾಮಿ ಎಂದು ತಿಳಿದು ಬಂದಿದೆ. ಸರಗೂರು ತಾಲೂಕು ಚಾಮೇಗೌಡನಹುಂಡಿ ಗ್ರಾಮದ ನಿವಾಸಿಯಾದ ಮಣಿಕಂಠಸ್ವಾಮಿ ಅಲಿಯಾಸ್ ಕುಂಟ ವಿಶಿಷ್ಟ ಚೇತನನಾಗಿದ್ದು, ಈತ 2014ರಲ್ಲಿ ಮದುವೆಯಾಗಿದ್ದ (marriage). ದಂಪತಿಗೆ 4 ವರ್ಷದ ಮತ್ತು ಒಂದೂವರೆ ವರ್ಷದ ಇಬ್ಬರು ಗಂಡು ಮಕ್ಕಳಿದ್ದು, ಈತನ ಹೆಂಡತಿ 9 ತಿಂಗಳ ಗರ್ಭಿಣಿಯಾಗಿದ್ದಳು (pregnant).

ಇದನ್ನು ಓದಿ : Belagavi : ಘಟಪ್ರಭಾ ನದಿ ಹಿನ್ನಿರಲ್ಲಿ ಮೀನು ಹಿಡಿಯಲು ತೆರಳಿದ್ದ ತಂದೆ ಮತ್ತು ಇಬ್ಬರು ಮಕ್ಕಳು ನೀರು ಪಾಲು.!

ಆರೋಪಿ ಮಣಿಕಂಠಸ್ವಾಮಿ ಪತ್ನಿ ಮೇಲೆ ಸಂಶಯಗೊಂಡು (Suspicious) ಆಗಾಗ ಜಗಳ ಮಾಡುತ್ತಿದ್ದ. ಆತನಿಗೆ ಸಮಾಧಾನ ಹೇಳುತ್ತಿದ್ದ ತಾಯಿ ಜೊತೆಗೂ ಜಗಳ ಮಾಡುತ್ತಿದ್ದ.

2021ರ ಏ. 28ರಂದು ಸಂಜೆ ಮಣಿಕಂಠಸ್ವಾಮಿಯು ತನ್ನ ಹೆಂಡತಿಯ ಶೀಲವನ್ನು ಶಂಕಿಸಿ ಆಕೆ ಮತ್ತು ತಾಯಿಯೊಂದಿಗೆ ಗಲಾಟೆ ಮಾಡಿದ್ದ. ಬೆಳಿಗ್ಗೆ ಜಾವ 4ಗಂಟೆ ವೇಳೆ ಎಲ್ಲರೂ ಮಲಗಿದ್ದ ಸಮಯದಲ್ಲಿ ತಾನು ನಡೆದಾಡಲು ಉಪಯೋಗಿಸುತ್ತಿದ್ದ ಅಂಗವಿಕಲರ ಸಾಧನವಾದ ಕಬ್ಬಿಣದ ಊರುಗೋಲಿನಿಂದ (iron crutch) ತಾಯಿ, ಹೆಂಡತಿ, ಓರ್ವ ಮಗನನ್ನು ಹೊಡೆದು ಕೊಂದಿದ್ದ. ಬಳಿಕ ಇನ್ನೋರ್ವ ಮಗನನ್ನು ಕತ್ತು ಹಿಸುಕಿ ಕೊಲೆ ಮಾಡಿದ್ದ. ಅಲ್ಲದೇ ಪತ್ನಿಯ ಗರ್ಭದಲ್ಲಿದ್ದ ಮಗುವಿನ ಸಾವಿಗೂ ಕಾರಣನಾಗಿದ್ದ ಈ ಪಾಪಿ.

ಇದನ್ನು ಓದಿ : ಕಪಾಳಮೋಕ್ಷ ಮಾಡಿದ ಮಹಿಳಾ ಪೊಲೀಸ್ ಅಧಿಕಾರಿಗೆ ತಿರುಗಿಸಿ ಹೊಡೆದ ಯುವಕ ; ವಿಡಿಯೋ Viral.!

ಇನ್ನೂ ಘಟನೆಯ ಬಗ್ಗೆ ಸರಗೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು, ವಿಚಾರಣೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಮೈಸೂರಿನ ಐದನೆಯ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ಪ್ರಕರಣದ ವಿಚಾರಣೆ ನಡೆಸಿ, ಆರೋಪಿಯ ವಿರುದ್ಧ ಆಪಾದಿಸಲಾದ ಆರೋಪವು ಸಾಬೀತಾದ ಹಿನ್ನೆಲೆ ಮರಣದಂಡನೆ ವಿಧಿಸಿ ಆದೇಶ ನೀಡಿದ್ದಾರೆ ಎಂದು ತಿಳಿದು ಬಂದಿದೆ.

WhatsApp Channel Join Now
Telegram Group Join Now
Instagram Account Follow Now
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments