ಜನಸ್ಪಂದನ ನ್ಯೂಸ್, ಬೆಳಗಾವಿ : ಧಾರವಾಡದ ಶ್ರೀನಗರದ ಬಾಡಿಗೆ ಮನೆಯಲ್ಲಿ, ಸ್ನೇಹಿತನ ಪ್ರೀತಿಗೆ (For the love of a friend) ಮರುಳಾಗಿ ತನ್ನ ಪತಿ ಬಿಟ್ಟು ಬಂದ ಗೃಹಿಣಿಯೋರ್ವಳು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ನಡೆದಿದೆ.
ರಾಮದುರ್ಗ ಮೂಲದ ಶ್ವೇತಾ ಗುದಗಾಪುರ (24) ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಇದನ್ನು ಓದಿ : Finance ಸಿಬ್ಬಂದಿಯಿಂದ ಅಮಾನವೀಯ ಕೃತ್ಯ ; ಬಾಣಂತಿ ಇದ್ದ ಮನೆ ಸೀಜ್.!
ರಾಮದುರ್ಗದ ವಿಶ್ವನಾಥ ಜೊತೆಗೆ ಐದು ವರ್ಷದ ಹಿಂದೆ ಶ್ವೇತಾಗೆ ಮದುವೆಯಾಗಿತ್ತು. ಆದರೆ ಕಳೆದ ಒಂದೂವರೆ ವರ್ಷದಿಂದ ಈಕೆ ಪತಿಯಿಂದ ದೂರವಾಗಿ ಪ್ರತ್ಯೇಕವಾಗಿ ಜೀವನ ನಡೆಸುತ್ತಿದ್ದಳು (Live separately) ಎಂದು ತಿಳಿದು ಬಂದಿದೆ.
ಇನ್ನೂ ಶ್ವೇತಾ, ಇನ್‌ಸ್ಟಾಗ್ರಾಂನಲ್ಲಿ ಪರಿಚಯವಾದ ವ್ಯಕ್ತಿ ಜತೆಗೆ ಪ್ರೀತಿಯಲ್ಲಿ ಬಿದ್ದಿದ್ದರು. ಬಳಿಕ ಈ ಪ್ರಿಯಕರನನ್ನು ನಂಬಿ ಗಂಡನಿಗೂ ಗೊತ್ತಾಗದಂತೆ ಮನೆ ಬಿಟ್ಟು ಧಾರವಾಡಕ್ಕೆ ಬಂದಿದ್ದರು.
ಇದನ್ನು ಓದಿ : ಬೆಳಗಾವಿ : ವೇಶ್ಯಾವಾಟಿಕೆ ನಡೆಸುತ್ತಿದ್ದ Spa and Beauty parlour ಮೇಲೆ ಪೊಲೀಸರ ದಾಳಿ.!
ಕಳೆದ ಒಂದೂವರೆ ವರ್ಷದಿಂದ ಗಂಡನನ್ನು ಬಿಟ್ಟು ಪ್ರಿಯಕರನ ಜೊತೆ ಧಾರವಾಡದಲ್ಲೇ ವಾಸವಾಗಿದ್ದಳು. ಅಲ್ಲಿಂದಲೇ ತನ್ನ ಗಂಡನಿಗೆ ಡೀವೋರ್ಸ್ ನೋಟಿಸ್ ಕೂಡ ಕಳುಹಿಸಿದ್ದಳು ಎಂದು ತಿಳಿದು ಬಂದಿದೆ.
ಶ್ವೇತಾಳ ಪ್ರಿಯಕರ ಆಕೆಯನ್ನು ಕರೆದುಕೊಂಡು ಬಂದು ಶ್ರೀನಗರ ಬಡಾವಣೆಯ ಬಾಡಿಗೆ ಮನೆಯೊಂದರಲ್ಲಿ ಇಟ್ಟಿದ್ದ. ಆಕೆಯನ್ನು ಮದುವೆಯಾಗುವುದಾಗಿ ಹೇಳಿ (Say you will get married) ಮದುವೆಯನ್ನೂ ಮಾಡಿಕೊಂಡಿರಲಿಲ್ಲವಂತೆ. ಅಲ್ಲದೇ ತನ್ನ ಪತ್ನಿಯನ್ನು ಕರೆದುಕೊಂಡು ಹೋಗಲು ಪತಿ ವಿಶ್ವನಾಥ ಹಾಗೂ ಆಕೆಯ ತವರು ಮನೆಯವರು ಬಂದ ವೇಳೆ ಅವರಿಗೆ ಬೆದರಿಕೆ ಹಾಕಿ ವಾಪಸ್ ಕಳುಹಿಸಿದ್ದ ಎಂದು ಆರೋಪಿಸಲಾಗಿದೆ. ಈ ಬೆಳವಣಿಗೆಯ ಬಳಿಕ ಶ್ವೇತಾ ತಾನಿದ್ದ ಬಾಡಿಗೆ ಮನೆಯಲ್ಲೇ ನೇಣಿಗೆ ಶರಣಾಗಿದ್ದಾಳೆ.
ಇದನ್ನು ಓದಿ : ಅಪಾರ್ಟ್‌ಮೆಂಟ್‌ನ ಮಹಡಿ ಮೇಲೆ Car ಪಾರ್ಕ್ ಮಾಡತ್ತಿರಾ.? ಹಾಗಾದ್ರೆ ಈ ವಿಡಿಯೋ ನೋಡಿ.!
ಶ್ವೇತಾಳ ಪ್ರಿಯಕರ ಆಕೆಯನ್ನು ಬಾಡಿಗೆ ಮನೆಯಲ್ಲಿಟ್ಟು ಖರ್ಚು, ವೆಚ್ಚ ನೋಡಿಕೊಳುತ್ತಿದ್ದ. ಆದರೆ, ಇವರಿಬ್ಬರ ಮಧ್ಯೆ ಅದೇನು ಮನಸ್ತಾಪ ಉಂಟಾಯಿತೋ? ಗೊತ್ತಿಲ್ಲ. ಶ್ವೇತಾ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಇನ್ನು ಶ್ವೇತಾಳ ಪಾಲಕರು ಧಾರವಾಡ ಉಪನಗರ ಠಾಣೆಯಲ್ಲಿ ಶ್ವೇತಾಳ ಪ್ರಿಯಕರನ ವಿರುದ್ಧ ದೂರು ದಾಖಲಿಸಿದ್ದಾರೆ ಎಂದು ತಿಳಿದು ಬಂದಿದೆ.
ಹಿಂದಿನ ಸುದ್ದಿ : ವಿಚ್ಛೇದನದ ಕೇಸ್ ನಲ್ಲಿ ಪುರುಷರು ಸಹ ಸಂತ್ರಸ್ತರು : ಹೈಕೋರ್ಟ್.
ಜನಸ್ಪಂದನ ನ್ಯೂಸ್, ಬೆಂಗಳೂರು : ಇತ್ತೀಚೆಗೆ ವೈವಾಹಿಕ ವಿವಾದಗಳ ಪ್ರಕರಣಗಳಲ್ಲಿ (A case of matrimonial disputes) ಮಹಿಳೆಯರು ಹೆಚ್ಚಾಗಿ ಬಲಿಪಶುಗಳಾಗಿದ್ದರೂ, ಅಂತಹ ಪ್ರಕರಣಗಳಲ್ಲಿ ಪುರುಷರು ಸಹ ಸಂತ್ರಸ್ತರು. ಹೀಗಾಗಿ ಲಿಂಗ ಸಮಾನತೆಯ ಸಮಾಜ ಈಗಿನ ಅಗತ್ಯವಾಗಿದೆ (A gender egalitarian society is the need of the hour) ಎಂದು ಕರ್ನಾಟಕ High court ಅಭಿಪ್ರಾಯಪಟ್ಟಿದೆ.
ಇದನ್ನು ಓದಿ : ಅಪಾರ್ಟ್‌ಮೆಂಟ್‌ನ ಮಹಡಿ ಮೇಲೆ Car ಪಾರ್ಕ್ ಮಾಡತ್ತಿರಾ.? ಹಾಗಾದ್ರೆ ಈ ವಿಡಿಯೋ ನೋಡಿ.!
ನ್ಯಾಯಮೂರ್ತಿ ಡಾ. ಚಿಲ್ಲಕೂರ್ ಸುಮಲತಾ ಅವರು ಹೊರಡಿಸಿದ ಆದೇಶದಲ್ಲಿ ಈ ಬಗ್ಗೆ ತಿಳಿಸಲಾಗಿದೆ.
ಮಹಿಳೆಯೊಬ್ಬರು ತಮ್ಮ Divorce ಕುರಿತು ತಾವು ಹಾಜರಾಗಬೇಕಿರುವ ಕೋರ್ಟ್ ತಮ್ಮ ಮನೆಯಿಂದ 130 ಕಿಲೋಮೀಟರ್ ದೂರದಲ್ಲಿದೆ.
ಇದನ್ನು ಓದಿ : ಟ್ರೈನ್‌ನಲ್ಲಿ ಬೆಂಕಿ ವದಂತಿ : ಕರ್ನಾಟಕ ಎಕ್ಸ್‌ಪ್ರೆಸ್ ರೈಲು ಹರಿದು 10 ಜನರ ಸಾ*ವು ; ವಿಡಿಯೋ.!
ಹೀಗಾಗಿ ಪ್ರತಿ ಸಲವೂ ವಿಚಾರಣೆಗೆ ಹಾಜರಾಗಲು ಕಷ್ಟವಾಗುತ್ತಿದೆ ಎಂದು ವರ್ಗಾವಣೆ ಅರ್ಜಿಯನ್ನು (Transfer application) ಸಲ್ಲಿಸಿದ್ದರು. ಆದರೆ ಕೋರ್ಟ್ ಈ ಅರ್ಜಿಯನ್ನು ವಜಾಗೊಳಿಸಿದೆ (Dismissed).
ಮಹಿಳೆ ಸಮಸ್ಯೆಯನ್ನು ಎದುರಿಸುತ್ತಿದ್ದರೂ, ಈ ಪ್ರಕರಣದಲ್ಲಿ ಪ್ರತಿವಾದಿ ಆಕೆಯ ಪತಿ ಇಬ್ಬರು ಮಕ್ಕಳನ್ನು ನೋಡಿಕೊಳ್ಳುತ್ತಿದ್ದಾರೆ. ಇನ್ನೂ ಈ ಪ್ರಕರಣವನ್ನು ಬೇರೆ ನ್ಯಾಯಾಲಯಕ್ಕೆ ವರ್ಗಾಯಿಸಿದರೆ, ಪತಿಗೆ ಇನ್ನಷ್ಟು ತೊಂದರೆಯಾಗುತ್ತೆ ಎಂದು ವಾದಿಸಿದ್ದು, ಇದನ್ನು ನ್ಯಾಯಾಲಯ ಪರಿಗಣನೆಗೆ ತೆಗೆದುಕೊಂಡಿದೆ.
ಇದನ್ನು ಓದಿ : ರಸ್ತೆಯಲ್ಲಿ ಮಲಗಿದ್ದ ನಾಯಿಮರಿಯ ಮೇಲೆ ಕಾರು ಹತ್ತಿಸಿದ ಕ್ರೂರ ನಿವೃತ್ತ Police ಸಿಬ್ಬಂದಿ.!
ಮಹಿಳೆಗೆ ಪುರುಷನಂತೆಯೇ ಸಮಾನ ಹಕ್ಕುಗಳಿವೆ. ವಾಸ್ತವವಾಗಿ, ಹೆಚ್ಚಿನ ಸಂದರ್ಭಗಳಲ್ಲಿ ಮಹಿಳೆಯರು ಪ್ರಾಥಮಿಕ ಬಲಿಪಶುಗಳು. ಆದರೆ ಪುರುಷರು ಸ್ತ್ರೀಯರ ಕ್ರೌರ್ಯದಿಂದ ಪ್ರಭಾವಿತರಾಗುವುದಿಲ್ಲ ಎಂದು ಹೇಳಲು ಸಾಧ್ಯವಿಲ್ಲ ಎಂದು ಕೋರ್ಟ್ ತಿಳಿಸಿದೆ.
ಆದ್ದರಿಂದ, ಲಿಂಗ ಸಮಾನ ಸಮಾಜದ ಅವಶ್ಯಕತೆ ಇದೆ. ಆ ರೀತಿಯ ಸಮಾಜ ಲಿಂಗ ಅಥವಾ ಲಿಂಗದ ಆಧಾರದ ಮೇಲೆ ಕರ್ತವ್ಯಗಳನ್ನು ಬೇರ್ಪಡಿಸುವುದನ್ನು ತಡೆಯುವ ಗುರಿಯನ್ನು ಹೊಂದಿದೆ ಎಂದು ಹೈಕೋರ್ಟ್ ತಿಳಿಸಿದೆ.