Monday, September 16, 2024
spot_img
spot_img
spot_img
spot_img
spot_img
spot_img
spot_img

Health : ಹೊಕ್ಕಳಿಗೆ ಕೊಬ್ಬರಿ ಎಣ್ಣೆ ಹಾಕುವುದರಿಂದ ಆಗುವ ಪ್ರಯೋಜನಗಳೇನು ಗೊತ್ತಾ.?

spot_img
WhatsApp Group Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ಡೆಸ್ಕ್ : ತಾಯಿ ಗರ್ಭವತಿಯಾದಾಗ ಮಗುವಿನ ಎಲ್ಲಾ ಕಾರ್ಯಗಳೂ ಹೊಕ್ಕಳು ಬಳ್ಳಿಯ ಮೂಲಕವೇ ನಡೆಯುತ್ತದೆ. ಜನನದ ಬಳಿಕ ಇದು ಮುಚ್ಚಿಹೋಗುತ್ತದೆ.

ಹೊಕ್ಕುಳ ಬಳ್ಳಿಯು ಗರ್ಭದಲ್ಲಿರುವ ಮಗುವಿನ ಜೀವಸೆಲೆಯಾಗಿದೆ. ಹೊಕ್ಕುಳಬಳ್ಳಿಯ ಮೂಲಕವೇ ಮಗು ಆಹಾರ ಮತ್ತು ಆಮ್ಲಜನಕವನ್ನು ಪಡೆಯುತ್ತದೆ. ಹಾಗೆಯೇ ಜನನದ ನಂತರವೂ, ಹೊಕ್ಕಳು ಸಂಪರ್ಕ ಕೇಂದ್ರವಾಗಿದೆ. ಇದು ರಕ್ತನಾಳಗಳ ಮೂಲಕ ಅಂಗಗಳು ಮತ್ತು ಮುಖ್ಯ ರಕ್ತನಾಳಗಳಿಗೆ ಸಂಪರ್ಕಿಸುತ್ತದೆ. ಆದ್ದರಿಂದ ನೀವು ಹೊಕ್ಕಳಿಗೆ ಎಣ್ಣೆಯನ್ನು ಹಾಕಿದಾಗ, ಅದು ನಿಮ್ಮ ಇಡೀ ದೇಹವನ್ನು ತಲುಪುತ್ತದೆ.

ಇದನ್ನು ಓದಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ಖಾಲಿ ಇರುವ 215 ಹುದ್ದೆಗಳಿಗೆ ಅರ್ಜಿ ಆಹ್ವಾನ.!

ನಮ್ಮ ಹಿರಿಯರು ಅನುಸರಿಸಿಕೊಂಡು ಬರುತ್ತಿರುವ ಕೆಲವು ವಿಧಾನಗಳು ನಮಗೆ ವಿಚಿತ್ರ, ಕೆಲಸಕ್ಕೆ ಬಾರದವು ಎಂದೆನ್ನಿಸಿದರೂ ವಾಸ್ತವವಾಗಿ ಇವು ನಿಜಕ್ಕೂ ಪರಿಣಾಮಕಾರಿಯಾಗಿವೆ

ಉಪಯೋಗಗಳು :
ಹೊಕ್ಕುಳಿಗೆ ಸರಿಯಾಗಿ ಎಣ್ಣೆ ಹಾಕಿಕೊಂಡು ಮಸಾಜ್ ಮಾಡಿದರೆ, ಆಗ ಒತ್ತಡ ಮತ್ತು ಆತಂಕವು ಕಡಿಮೆ ಆಗುವುದು. ಹೀಗೆ ಮಾಡುವುದರಿಂದ ಪ್ಯಾರಾಸಿಂಪಥೆಟಿಕ್ ನರಮಂಡಲದ ವ್ಯವಸ್ಥೆಗೆ ಸಂಪರ್ಕ ಹೊಂದಿರುವ ವೇಗಸ್ ನರವನ್ನು ಉತ್ತೇಜಿಸುವುದು. ಇದರಿಂದ ದೇಹಕ್ಕೆ ಆರಾಮ ಮತ್ತು ಶಾಂತಿ ಸಿಗುವುದು.

ತೆಂಗಿನೆಣ್ಣೆಯು ಆಂಟಿಫಂಗಲ್ ಮತ್ತು ಆಂಟಿಬ್ಯಾಕ್ಟೀರಿಯಲ್ ಗುಣಲಕ್ಷಣಗಳನ್ನು ಹೊಂದಿದೆ. ಆದ್ದರಿಂದ ಅದು ಹೊಟ್ಟೆ ನೋವನ್ನು ಉಂಟುಮಾಡುವ ಹಾನಿಕಾರಕ ದೋಷಗಳನ್ನು ತೊಡೆದುಹಾಕಲು ಸಹಕಾರಿಯಾಗಿದೆ. ಇದಕ್ಕಾಗಿ ಹೊಕ್ಕಳಿಗೆ ಹಾಕುವುದಕ್ಕಿಂತ ಮೌಖಿಕವಾಗಿ ತೆಗೆದುಕೊಳ್ಳುವುದು ಹೆಚ್ಚು ಪ್ರಯೋಜನಕಾರಿಯಾಗಿದೆ.

ಹೊಕ್ಕಳಿನಲ್ಲಿ ತೆಂಗಿನೆಣ್ಣೆ ಹಾಕುವುದು ಈಸ್ಟ್ರೊಜೆನ್ ಮತ್ತು ಪ್ರೊಜೆಸ್ಟರಾನ್‌ನಂತಹ ಮಕ್ಕಳನ್ನು ಹೊಂದಲು ಸಂಬಂಧಿಸಿರುವ ಹಾರ್ಮೋನುಗಳನ್ನು ಸಮತೋಲನಗೊಳಿಸಲು ಸಹಾಯ ಮಾಡಬಹುದು. ಆದಾಗ್ಯೂ ಸದ್ಯಕ್ಕೆ ಇದನ್ನು ಬೆಂಬಲಿಸುವ ಯಾವುದೇ ಅಧ್ಯಯನವಿಲ್ಲ.

ಇದನ್ನು ಓದಿ : ಇಂದಿನಿಂದ FASTag ನಿಯಮದಲ್ಲಿ ಬದಲಾವಣೆ ; ಹಳೆ ಫಾಸ್ಟ್ ಟ್ಯಾಗ್ ಹೊಂದಿದವರು ಹೀಗೆ ಮಾಡಿ.!

ಹೊಕ್ಕುಳಿನ ಭಾಗಕ್ಕೆ ಎಣ್ಣೆ ಹಚ್ಚಿಕೊಂಡರೆ ಆಗ ಕೂದಲಿನ ಆರೋಗ್ಯಕಾರಿ ಬೆಳವಣಿಗೆಗೆ ಬೇಕಾಗುವಂತಹ ಪೋಷಕಾಂಶಗಳು ಕೂಡ ಸಿಗುವುದು. ಕೂದಲು ಬಿಳಿಯಾಗಲು ಕಾರಣವಾಗಿರುವಂತಹ ರಕ್ತನಾಳಗಳಿಗೆ ಬೇಕಾಗಿರುವ ಪೋಷಕಾಂಶಗಳನ್ನು ಇದು ಒದಗಿಸುವುದು ಮತ್ತು ಕೂದಲಿನ ಬಿಳಿಯಾಗುವುದನ್ನು ತಡೆಯುವುದು. ಇದರಿಂದ ಕೂದಲಿನ ಬುಡವು ಬಲಿಷ್ಠವಾಗುವುದು.

ತೆಂಗಿನ ಎಣ್ಣೆಯಲ್ಲಿರುವ ಅಂಶಗಳು ಚರ್ಮವನ್ನು ಹೈಡ್ರೇಟ್ ಮಾಡುತ್ತದೆ. ಇದರಿಂದ ಮೃದುವಾದ, ಹೊಳಪಿನ ತ್ವಚೆ ಪಡೆಯಬಹುದು. ಜೊತೆಗೆ ತೆಂಗಿನ ಎಣ್ಣೆಯು ಪಿಗ್ಮೆಂಟೇಶನ್ ಕಲೆಗಳನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ. ಮೊಡವೆ ಉಂಟುಮಾಡುವ ಹಾನಿಕಾರಕ ಬ್ಯಾಕ್ಟೀರಿಯಾದ ವಿರುದ್ಧ ಹೋರಾಡುತ್ತದೆ.

ತೆಂಗಿನೆಣ್ಣೆಯು ಉರಿಯೂತದ ವಿರುದ್ಧ ಹೋರಾಡಲು ಸಹಾಯ ಮಾಡುವ ಪ್ರಮುಖ ಪೋಷಕಾಂಶಗಳನ್ನು ನೀಡುತ್ತದೆ ಎಂದು ನಂಬಲಾಗಿದೆ. ಇದು ನಿಮ್ಮ ದೃಷ್ಟಿಯನ್ನು ಸುಧಾರಿಸಲು ಸಹಕಾರಿಯಾಗಿದೆ. ಇದು ನಿಮ್ಮ ಕಣ್ಣುಗಳ ಆರೋಗ್ಯಕರಕ್ಕೆ ಒಳ್ಳೆಯದು.

ಹೊಕ್ಕಳಿನಲ್ಲಿ ತೆಂಗಿನೆಣ್ಣೆ ಹಾಕುವುದು ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಚಯಾಪಚಯ ವರ್ಧಕ ತೆಂಗಿನ ಎಣ್ಣೆಯಲ್ಲಿರುವ ಅಂಶಗಳು ಚಯಾಪಚಯವನ್ನು ಉತ್ತೇಜಿಸುತ್ತವೆ. ಇದರಿಂದ ನೀವು ವೇಗವಾಗಿ ತೂಕ ಕಳೆದುಕೊಳ್ಳಲು ಸಹಕಾರಿಯಾಗುತ್ತದೆ.

ತೆಂಗಿನ ಎಣ್ಣೆಯಲ್ಲಿರುವ ಎಂಸಿಎಫ್‌ಎ ಅಂಶಗಳು ಸ್ನಾಯು-ವಿಶ್ರಾಂತಿ ಮತ್ತು ಉರಿಯೂತದ ಪರಿಣಾಮಗಳನ್ನು ಹೊಂದಿವೆ. ಹೀಗಾಗಿ, ಮುಟ್ಟಿನ ನೋವನ್ನು ನಿವಾರಿಸಲು ಇದು ಸಹಕಾರಿಯಾಗಿದೆ. ಆದರೆ ಈ ನಿಟ್ಟಿನಲ್ಲಿ ಹೆಚ್ಚಿನ ಸಂಶೋಧನೆ ಅಗತ್ಯವಿದೆ.

ಇದನ್ನು ಓದಿ : Health : ಬೆಳಿಗ್ಗೆ ತುಟಿ ಬಣ್ಣ ಬದಲಾಗಿ ಮುಖ ಊದಿಕೊಳ್ಳುತ್ತಿದೆಯೇ.? ಇದು ಈ ಗಂಭೀರ ರೋಗದ ಲಕ್ಷಣ.!

ಹೊಕ್ಕುಳಿನ ಭಾಗಕ್ಕೆ ಎಣ್ಣೆಯಿಂದ ಮಸಾಜ್ ಮಾಡಿಕೊಂಡರೆ ಆಗ ಹಾರ್ಮೋನ್ ಗಳು ಉತ್ತೇಜಿಸಲ್ಪಡುವುದು ಮತ್ತು ಇದರಿಂದ ವಿಶ್ರಾಂತಿ ಸಿಗುವುದು ಮತ್ತು ನಿದ್ರಾಹೀನತೆ ಸಮಸ್ಯೆಯನ್ನು ನಿವಾರಿಸುವುದು.

Disclaimer : ಈ ಲೇಖನವು ಅಂತರ್ಜಾಲದಲ್ಲಿ ಲಭ್ಯವಿರುವ ವರದಿಗಳು, ಮಾಹಿತಿಯನ್ನು ಆಧರಿಸಿದೆ. ಜನಸ್ಪಂದನ ನ್ಯೂಸ್ ಗೂ ಇದಕ್ಕೂ ಸಂಬಂಧವಿಲ್ಲ ಮತ್ತು ಇದಕ್ಕೆ ಜವಾಬ್ದಾರಿಯಲ್ಲ.

WhatsApp Group Join Now
Telegram Group Join Now
Instagram Account Follow Now
spot_img
spot_img
- Advertisment -spot_img