Thursday, September 19, 2024
spot_img
spot_img
spot_img
spot_img
spot_img
spot_img
spot_img

ಶಾಲೆಯನ್ನೇ ಬ್ಯೂಟಿ ಪಾರ್ಲರ್‌ ಮಾಡ್ಕೊಂಡ ಶಿಕ್ಷಕಿ ; ಫೇಶಿಯಲ್‌, ಮೇಕಪ್‌ ಎಲ್ಲವೂ ಅಲ್ಲಿಯೇ, Video Viral.!

spot_img
WhatsApp Group Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ಡೆಸ್ಕ್ : ರೀಲ್ಸ್ ಅನ್ನೋದು ಒಂಥರಾ ಹುಚ್ಚುತನದ ಕಾಯಿಲೆಯಾಗಿದೆ. ಈ ಹುಚ್ಚರ ಸಂತೆಗೆ ಮುಖ್ಯೋಪಾಧ್ಯಾಯಿನಿಯೊಬ್ಬಳು (head madam) ಸೇರ್ಪಡೆಯಾಗಿದ್ದಾಳೆ.

ತನಗೆ ರೀಲ್ಸ್‌ ಮಾಡಬೇಕು ಎನಿಸಿದಾಗಲೆಲ್ಲಾ ಶಾಲೆಯಲ್ಲೇ ಫೇಶಿಯಲ್‌, ಮೇಕಪ್‌ ಮಾಡಿಸಿಕೊಳ್ಳುತ್ತಾರೆ. ಈ ರೀತಿ ಮಾಡಿಕೊಳ್ಳುವಾಗ ಸಿಕ್ಕಿಬಿದ್ದಿದ್ದಾರೆ.

ಇದನ್ನು ಓದಿ : ಮಹಾರಾಷ್ಟ್ರಕ್ಕೆ ಮದುವೆಗೆ ತೆರಳಿದ ಕ್ರೂಸರ್ Accident ; ಬಾಗಲಕೋಟೆ ಮೂಲದ ಐವರ ಸಾವು.!

ಸರ್ಕಾರಿ ಶಾಲೆಯ ಮುಖ್ಯೋಪಾಧ್ಯಾಯಿನಿ ಒಬ್ಬರು ಶಾಲೆಯನ್ನೇ ಬ್ಯೂಟಿ ಪಾರ್ಲರ್‌ (beauty parlour) ಮಾಡಿಕೊಂಡಿದ್ದಾರೆ. ಸದ್ಯ ಘಟನೆಯ ಕುರಿತಾದ ವಿಡಿಯೋ ಈಗ ಎಲ್ಲೆಡೆ ವೈರಲ್‌ ಆಗುತ್ತಿದೆ.

ಉತ್ತರ ಪ್ರದೇಶದ (Uttar Pradesh) ಉನ್ನಾವೋದ ಸರ್ಕಾರಿ ಶಾಲೆಯೊಂದರ ಮುಖ್ಯೋಪಾಧ್ಯಾಯಿನಿ ಸಂಗೀತಾ ಸಿಂಗ್‌ ಅವರು ಪಾಠ ಮಾಡೋದನ್ನು ಬಿಟ್ಟು ಬರೀ ಮೇಕಪ್‌ ಮಾಡಿಸಿಕೊಳ್ಳುವುದರಲ್ಲೇ ಮುಳುಗಿರುತ್ತಾರೆ ಎಂದು ವರದಿ ತಿಳಿಸಿದೆ.

ಮುಖ್ಯೋಪಾಧ್ಯಾಯಿನಿ ಸಂಗೀತಾ ಅವರು ಶಾಲೆಯ ಅಡುಗೆ ಕೊಠಡಿಯಲ್ಲಿ ಮಹಿಳೆಯೊಬ್ಬರಿಂದ ಮೇಕಪ್‌ ಮಾಡಿಸಿಕೊಳ್ಳುತ್ತಿದ್ದರು. ದಿನಾ ಇದೇ ರೀತಿ ಮಾಡುತ್ತಾರೆ ಎಂದು ತಿಳಿದಿದ್ದ ಮತ್ತೋರ್ವ ಶಿಕ್ಷಕಿ ಆಕೆಯನ್ನು ರೆಡ್ ಹ್ಯಾಂಡ್ ಆಗಿ ಹಿಡಿಯಬೇಕೆಂದು ವಿಡಿಯೋ ಮಾಡುತ್ತಲೇ ಎಂಟ್ರಿ ಕೊಟ್ಟಿದ್ದಾರೆ.

ಇದನ್ನು ನೋಡುತ್ತಲೇ ಮುಖ್ಯೋಪಾಧ್ಯಾಯಿನಿ ಶಿಕ್ಷಕಿಯ ಮೇಲೆ ಹಲ್ಲೆಗೆ ಮುಂದಾಗಿದ್ದಾಳೆ. ಜೊತೆಗೆ ಆತನ ಕೈಕಚ್ಚಿದ್ದಾಳೆ ಎಂದು ವರದಿಯಾಗಿದೆ. ಇದರಿಂದ ರಕ್ತಸ್ರಾವವಾಗುತ್ತಿದ್ದರೂ ಶಿಕ್ಷಕಿ ಹಾಗೆಯೇ ವಿಡಿಯೋ ಮಾಡಿದ್ದಾರೆ.

ಮುಖ್ಯೋಪಾಧ್ಯಾಯಿನಿ ಸಂಗೀತಾ ವಿರುದ್ಧ ಪೊಲೀಸ್‌ ಠಾಣೆಯಲ್ಲಿ ಕೇಸ್‌ ದಾಖಲು ಮಾಡಲಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ವರದಿಯಾಗಿದೆ.

ಇದನ್ನು ಓದಿ : Job alert : 10ನೇ ತರಗತಿ ಪಾಸಾದವರಿಂದ ಆರ್‌ಪಿಎಫ್ ಕಾನ್ಸ್‌ಟೇಬಲ್ ಹುದ್ದೆಗಳಿಗೆ ಅರ್ಜಿ ಆಹ್ವಾನ.!

ಇನ್ನೂ ವಿದ್ಯಾರ್ಥಿಗಳೇ ಮುಖ್ಯೋಪಾಧ್ಯಾಯಿನಿ ಪಾಠ ಮಾಡೋದನ್ನು ಬಿಟ್ಟು ಮೇಕಪ್‌ ಮಾಡಿಸಿಕೊಳ್ಳುತ್ತಿರುತ್ತಾರೆ ಎಂದು ಆರೋಪಿಸಿದ್ದಾರೆ ಎನ್ನಲಾಗಿದೆ.

WhatsApp Group Join Now
Telegram Group Join Now
Instagram Account Follow Now
spot_img
spot_img
- Advertisment -spot_img