ಜನಸ್ಪಂದನ ನ್ಯೂಸ್, ನೌಕರಿ : ನೈಋತ್ಯ ರೈಲ್ವೆ (SWR) ಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅಧಿಸೂಚನೆಯನ್ನು ಅಧಿಕೃತ ವೆಬ್‌ಸೈಟ್ swr.indianrailways.gov.in ಮೂಲಕ ಬಿಡುಗಡೆ ಮಾಡಲಾಗಿದೆ. ನೈಋತ್ಯ ರೈಲ್ವೆ (SWR) ಯಲ್ಲಿ ಉದ್ಯೋಗ ಬಯಸುವವರು ಕೂಡಲೇ ಕೊನೆಯ ದಿನಾಂಕದ ಮೊದಲು ಅರ್ಜಿ ಸಲ್ಲಿಸಿ. ಅರ್ಜಿ ಸಲ್ಲಿಸಲು ಬಯಸುವ ಉದ್ಯೋಗಾಕಾಂಕ್ಷಿಗಳು, ಕೆಳಗಿನ ಮಾಹಿತಿಯನ್ನು ಪರಿಶೀಲಿಸಿ.
ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ (Online) ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಅವಶ್ಯವಿರುವ ಮಾಹಿತಿಯನ್ನು ಇಲ್ಲಿ ನೋಡಬಹುದಾಗಿದ್ದು, ಆದರೂ ಅಧಿಕೃತ ವೆಬ್‌ಸೈಟ್ (Official website) ನಲ್ಲಿ ಪರೀಕ್ಷಿಸಿ ಅರ್ಜಿ ಸಲ್ಲಿಸಿ. ಅರ್ಜಿ ಸಲ್ಲಿಸಲು ಬೇಕಾದ ವಿವರಗಳನ್ನು ಇಲ್ಲಿ ಕೊಡಲಾಗಿದೆ.
ಇದನ್ನು ಓದಿ :“ಹಳ್ಳಕ್ಕೆ ಬಿದ್ದ ಬೆಳಗಾವಿ–ಮಂಗಳೂರು Bus : ಓರ್ವ ಸಾವು, 18 ಪ್ರಯಾಣಿಕರಿಗೆ ಗಾಯ”
ನೈಋತ್ಯ ರೈಲ್ವೆ ನೇಮಕಾತಿ (SWR) 2025 ರ ಕುರಿತು ಮಾಹಿತಿ :
- ಒಟ್ಟು ಹುದ್ದೆಗಳು : 904.
- ಹುದ್ದೆಯ ಹೆಸರು : ಅಪ್ರೆಂಟಿಸ್ (Apprentice).
- ಉದ್ಯೋಗ ಸ್ಥಳ : ಬೆಂಗಳೂರು, ಮೈಸೂರು, ಹುಬ್ಬಳ್ಳಿ (ಕರ್ನಾಟಕ).
- ಅಪ್ಲಿಕೇಶನ್ ಮೋಡ್ : ಆನ್‌ಲೈನ್.
SWR ಹುದ್ದೆಗಳ ವಿವರ :
ಹುದ್ದೆ | ಹುದ್ದೆಗಳ ಸಂಖ್ಯೆ |
---|---|
ಫಿಟ್ಟರ್ | 286 |
ವೆಲ್ಡರ್ | 55 |
ಎಲೆಕ್ಟ್ರಿಷಿಯನ್ | 152 |
ರೆಫ್ರಿಜರೇಷನ್ & ಏರ್ ಕಂಡಿಷನರ್ ಮೆಕ್ಯಾನಿಕ್ | 16 |
ಪ್ರೋಗ್ರಾಮಿಂಗ್ ಮತ್ತು ಸಿಸ್ಟಮ್ ಆಡಳಿತ ಸಹಾಯಕ (PASAA) | 138 |
ಯಂತ್ರಶಿಲ್ಪಿ (Machinist) | 13 |
ಟರ್ನರ್ | 13 |
ಬಡಗಿ (Carpenter) | 11 |
ವರ್ಣಚಿತ್ರಕಾರ (Painter) | 18 |
ಫಿಟ್ಟರ್ (ಡೀಸೆಲ್ ಲೋಕೋ ಶೆಡ್) | 37 |
ಎಲೆಕ್ಟ್ರಿಷಿಯನ್ (ಡೀಸೆಲ್ ಲೋಕೋ ಶೆಡ್) | 17 |
ಎಲೆಕ್ಟ್ರಿಷಿಯನ್ ಜನರಲ್ | 79 |
ಫಿಟ್ಟರ್ (ಕ್ಯಾರೇಜ್ & ವ್ಯಾಗನ್) | 67 |
ಸ್ಟೆನೋಗ್ರಾಫರ್ | 02 |
ಇದನ್ನು ಓದಿ : IB ACIO II ನೇಮಕಾತಿ 2025 : 3,717 ಹುದ್ದೆಗಳಿಗೆ ಅರ್ಜಿ ಆಹ್ವಾನ.!
SWR ಶೈಕ್ಷಣಿಕ ಅರ್ಹತೆ :
- ಕನಿಷ್ಠ 10ನೇ ತರಗತಿ (SSLC) ಪಾಸ್ ಆಗಿರಬೇಕು.
- NCVT/SCVT ನಿಂದ ITI ಪದವಿಯನ್ನು ಹೊಂದಿರಬೇಕು. (ಹುದ್ದೆಗಳನುಸಾರ ವಿದ್ಯಾರ್ಹತೆ ಬೇಕು)
ವಯೋಮಿತಿ :
- ಕನಿಷ್ಠ: 15 ವರ್ಷ
- ಗರಿಷ್ಟ: 24 ವರ್ಷ
(ರಿಜರ್ವ್ ವರ್ಗಗಳಿಗೆ ಸರ್ಕಾರಿ ನಿಯಮಗಳಂತೆ ವಿನಾಯಿತಿ ಇರುತ್ತದೆ)
ಅರ್ಜಿ ಶುಲ್ಕ :
- ಸಾಮಾನ್ಯ / ಓಬಿಸಿ ಅಭ್ಯರ್ಥಿಗಳು : ರೂ.100/-
- SC/ST/ಮಹಿಳೆಯರು/PwBD : ಶುಲ್ಕ ಇಲ್ಲ.
ಆಯ್ಕೆ ವಿಧಾನ :
- ಮೆರಿಟ್ ಲಿಸ್ಟ್ ಆಧಾರಿತ ಆಯ್ಕೆ (ಅಭ್ಯರ್ಥಿಯ ಶೈಕ್ಷಣಿಕ ಪಠ್ಯಕ್ರಮದ ಅಂಕಗಳ ಆಧಾರದಲ್ಲಿ)
- ಸಂದರ್ಶನ ಅಥವಾ ಪರೀಕ್ಷೆ ಇರುವುದಿಲ್ಲ.
SWR ಅರ್ಜಿ ಸಲ್ಲಿಸುವ ವಿಧಾನ :
- ಅಧಿಕೃತ ವೆಬ್‌ಸೈಟ್, https://www.rrchubli.in ಗೆ ಭೇಟಿ ನೀಡಿ.
- ಅಧಿಸೂಚನೆ ಡೌನ್‌ಲೋಡ್ ಮಾಡಿ ಮತ್ತು ಓದಿ.
- ಆನ್‌ಲೈನ್ ಅರ್ಜಿ ಲಿಂಕ್ ಕ್ಲಿಕ್ ಮಾಡಿ.
- ಫಾರ್ಮ್ ಭರ್ತಿ ಮಾಡಿ, ಫೋಟೋ, ಸಹಿ ಅಪ್ಲೋಡ್ ಮಾಡಿ.
- ಅರ್ಜಿ ಶುಲ್ಕ ಪಾವತಿ ಮಾಡಿ (ಅಗತ್ಯವಿದ್ದರೆ).
- ಸಲ್ಲಿಸಿ ಮತ್ತು ಪ್ರಿಂಟ್ (Printout) ತೆಗೆದುಕೊಳ್ಳಿ.
ಇದನ್ನು ಓದಿ : NIMHANS ಬೆಂಗಳೂರು : ಡಾಟಾ ಎಂಟ್ರಿ ಆಪರೇಟರ್ ಹುದ್ದೆಗೆ ಅರ್ಜಿ ಆಹ್ವಾನ.!
ಮುಖ್ಯ ದಿನಾಂಕಗಳು :
- ಅರ್ಜಿ ಪ್ರಾರಂಭ ದಿನಾಂಕ : 14 ಜುಲೈ 2025.
- ಅಂತಿಮ ದಿನಾಂಕ : 13 ಆಗಸ್ಟ್ 2025.
ಪ್ರಮುಖ ಲಿಂಕ್‌ಗಳು :
- 👉 ಅಧಿಸೂಚನೆ PDF : ಇಲ್ಲಿ ಕ್ಲಿಕ್ ಮಾಡಿ
- 👉 ಅರ್ಜಿ ಸಲ್ಲಿಸಲು ಲಿಂಕ್ : ಇಲ್ಲಿ ಕ್ಲಿಕ್ ಮಾಡಿ
- 👉 ಅಧಿಕೃತ ವೆಬ್‌ಸೈಟ್ : https://www.rrchubli.in/
Disclaimer : The above given information is available On online, candidates should check it properly before applying. This is for information only.
Schoolgirl : ಚುಡಾಯಿಸಿದಾತನಿಗೆ ನಡು ರಸ್ತೆಯಲ್ಲಿ ಧರ್ಮದೇಟು ಕೊಟ್ಟ ಶಾಲಾ ವಿದ್ಯಾರ್ಥಿನಿ.!
ಜನಸ್ಪಂದನ ನ್ಯೂಸ್, ಡೆಸ್ಕ್ : ಚುಡಾಯಿಸಿದಾತನಿಗೆ ನಡು ರಸ್ತೆಯಲ್ಲಿಯೇ ಶಾಲಾ ವಿದ್ಯಾರ್ಥಿನಿ (Schoolgirl) ಯೋರ್ವಳು ಧರ್ಮದೇಟು ಕೊಟ್ಟ ಘಟನೆಯೊಂದು ನಡೆದಿರುವ ಬಗ್ಗೆ ವರದಿಯಾಗಿದ್ದು, ಸದ್ಯ ಅದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ರಸ್ತೆಗಳಲ್ಲಿ ಮಹಿಳೆಯರು ನಿರ್ಭೀತಿಯಿಂದ ಓಡಾಡುವಂತ ಪರಿಸ್ಥಿತಿ ಸದ್ಯಕಂತು ತುಂಬಾ ಕಷ್ಟಕರವಾಗಿದೆ. ಏಕೆಂದರೆ, ಕೆಲವರು ಚಿನ್ನದ ಸರಗಳ್ಳತನ, ಕಳ್ಳತನದಲ್ಲಿ ತೊಡಗಿದ್ದರೆ, ಇನ್ನೂ ಕಾಮುಕರು ರಸ್ತೆಯಲ್ಲಿ ಓಡಾಡುವ ವಿದ್ಯಾರ್ಥಿನಿ (Schoolgirl) ಯರನ್ನೋ ಅಥವಾ ಯುವತಿಯರನ್ನು ಗುರಿಯಾಗಿಸಿಕೊಂಡು ಕಿರುಕುಳ ನೀಡುತ್ತಿದ್ದಾರೆ.
ಇದನ್ನು ಓದಿ : IB ACIO II ನೇಮಕಾತಿ 2025 : 3,717 ಹುದ್ದೆಗಳಿಗೆ ಅರ್ಜಿ ಆಹ್ವಾನ.!
ಆದರೆ ಈ ನಡುವೆ ಒಂದು ಶಾಕಿಂಗ್ ಎಂಬಂತೆ ಹೈ ಸ್ಕೂಲ್ ವಿದ್ಯಾರ್ಥಿನಿ (Schoolgirl) ಯೋರ್ವಳು ಧೈರ್ಯವಂತೆ ನಿಂತು ತಮಗೆ ಕಿರುಕುಳ ನೀಡಿದನಿಗೆ ರಸ್ತೆಯಲ್ಲಿಯೇ ಚಪ್ಪಲಿ ಏಟು ಕೊಟ್ಟು ಬುದ್ಧಿ ಕಲಿಸಿದ್ದಾಳೆ. ಹೀಗೆ ಹೈ ಸ್ಕೂಲ್ ವಿದ್ಯಾರ್ಥಿನಿಯಿಂದ ಧರ್ಮದೇಟು ತಿನ್ನುತ್ತಿರುವ ಈ ದೃಶ್ಯ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ.
ವಿದ್ಯಾರ್ಥಿನಿ (Schoolgirl) ಯಿಂದ ಧರ್ಮದೇಟು ತಿನ್ನುತ್ತಿರುವ ಘಟನೆ ಉತ್ತರ ಪ್ರದೇಶದ ಉನ್ನಾವೋದಲ್ಲಿ ನಡೆದಿರುವ ಘಟನೆ ನಡೆದಿದೆ. ಶಾಲೆಗೆ ತೆರಳುತ್ತಿದ್ದ ಹೈ ಸ್ಕೂಲ್ ವಿದ್ಯಾರ್ಥಿನಿಯೊಬ್ಬಳಿಗೆ ಯುವಕನೋಬ್ಬ ಮಾರ್ಗಮಧ್ಯದಲ್ಲಿ ಕಿರುಕುಳ ನೀಡಿದ್ದಾನೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿನಿ ಆತನಿಗೆ ತಕ್ಕ ಶಿಕ್ಷೆ ನೀಡಿ ಹೆಣ್ಣುಮಕ್ಕಳೂ ಪ್ರತಿರೋಧ ತೋರಿದರೆ ಏನಾಗುತ್ತದೆ ಎಂಬ ಸಂದೇಶವನ್ನು ಕೊಟ್ಟಿದ್ದಾಳೆ.
ಇದನ್ನು ಓದಿ : ಕೋರ್ಟ್ ಆವರಣದಲ್ಲೇ ಪರಸ್ಪರ ಜುಟ್ಟು ಹಿಡಿದು ಎಳೆದಾಡಿಕೊಂಡ ಮಹಿಳಾ Lawyers ; ವಿಡಿಯೋ.!
ಕಾಲರ್ ಹಿಡಿದು ಚಪ್ಪಲಿ ಏಟು – ಧೈರ್ಯಶಾಲಿ ಪ್ರತಿಭಟನೆ :
ಮೂಲಗಳ ಪ್ರಕಾರ, ಶಾಲೆಗೆ ಹೋಗುತ್ತಿದ್ದ ವಿದ್ಯಾರ್ಥಿನಿ (Schoolgirl) ಗೆ ವ್ಯಕ್ತಿಯೊಬ್ಬ ಚುಡಾಯಿಸಲು ಪ್ರಯತ್ನ ಮಾಡಿದ್ದಾನೆ. ಈ ಸಂದರ್ಭದಲ್ಲಿ ಆತ್ಮರಕ್ಷಣೆಗೆ ಮುಂದಾದ ವಿದ್ಯಾರ್ಥಿನಿ, ಚುಡಾಯಿಸಿದಾತನಿಗೆ ನಡು ರಸ್ತೆಯಲ್ಲಿ ನಿಲ್ಲಿಸಿ ಕಾಲರ್ ಹಿಡಿದು ಪ್ರಶ್ನಿಸಿದ್ದಾಳೆ. ಅಷ್ಟೆ ಅಲ್ಲಾ, ಬಳಿಕ ಎಲ್ಲರ ಮುಂಭಾಗದಲ್ಲೇ Schoolgirl ತನ್ನ ಚಪ್ಪಲಿಯಿಂದ ಏಟು ಕೊಟ್ಟು ಆತನಿಗೆ ಎಚ್ಚರಿಕೆ ನೀಡಿದ್ದಾಳೆ.
ಈ ಘಟನೆಯ ವಿಡಿಯೋವನ್ನು ಜುಲೈ 20 ರಂದು Ghar Ke Kalesh ಎಂಬ “X” (ಹಳೆಯ ಟ್ವಿಟ್ಟರ್) ಖಾತೆಯಲ್ಲಿ ಹಂಚಲಾಗಿದ್ದು, “ಶಾಲೆಗೆ ಹೋಗುತ್ತಿದ್ದ ವೇಳೆ ಕಿರುಕುಳ ನೀಡಿದ ವ್ಯಕ್ತಿಗೆ ಚಪ್ಪಲಿಯಿಂದ ಪಾಠ ಕಲಿಸಿದ ವಿದ್ಯಾರ್ಥಿನಿ” ಎಂಬ ಶೀರ್ಷಿಕೆ ನೀಡಲಾಗಿದೆ. ವಿಡಿಯೋ ಇದೀಗ ವೈರಲ್ ಆಗಿದ್ದು, ಇಲ್ಲಿಯವರೆಗೆ 72K ಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದಿದೆ.
ಇದನ್ನು ಓದಿ : Astrology : ಹೇಗಿದೆ ಗೊತ್ತಾ.? ಜುಲೈ 20 ರ ದ್ವಾದಶ ರಾಶಿಗಳ ಫಲಾಫಲ.!
ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆಗಳ ಮಹಾಪೂರ :
ಈ ವಿಡಿಯೋ ನೋಡಿದ ನೆಟ್ಟಿಗರಿಂದ ಮೆಚ್ಚುಗೆ ಸಿಕ್ಕಿದ್ದು, ಅದರಲ್ಲಿ ಒಬ್ಬ ಬಳಕೆದಾರರು, “ಅಲ್ಲಿ ನಿಂತವರು ಯಾರಾದರೂ ಸಹಾಯಕ್ಕೆ ಬಂದರಾ? ನಾಚಿಕೆ ಆಗಬೇಕು.! ಆದರೆ ಹುಡುಗಿಯ ಧೈರ್ಯ ಅದ್ಭುತ.!” ಎಂದಿದ್ದಾರೆ. ಮತ್ತೋಬ್ಬ ನೆಟ್ಟಿಗ, “ಈ ವಿದ್ಯಾರ್ಥಿನಿಗೆ ಬಹುಮಾನ ನೀಡಬೇಕು.!” ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಅನೇಕರು ಈ ಧೈರ್ಯಶಾಲಿ ಹೆಣ್ಣಿಗೆ ಶಭಾಷ್ ಹೇಳಿದ್ದಾರೆ.
ಧರ್ಮದೇಟು ಕೊಡುತ್ತಿರುವ ಶಾಲಾ ಬಾಲಕಿ (Schoolgirl) ಯ ವಿಡಿಯೋ :
Unnao: Student beats molester with slippers, He allegedly molested her while she was going to school, Pony Road, Gangaghat Kotwali Unnao UP
pic.twitter.com/Q8tcUYiQjM— Ghar Ke Kalesh (@gharkekalesh) July 20, 2025
Note : ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಸಾಮಾಜಿಕ ಮಾಧ್ಯಮದಲ್ಲಿ ಪ್ರಸ್ತುತವಿರುವ ವಿಡಿಯೋ/ಪೋಸ್ಟ್‌ನ್ನು ಆಧರಿಸಿದೆ. ಈ ಬಗ್ಗೆ ಜನಸ್ಪಂದನ ನ್ಯೂಸ್ ಯಾವುದೇ ರೀತಿಯ ಹಕ್ಕು ಮತ್ತು ಸತ್ಯಾಸತ್ಯತೆಯನ್ನು ದೃಢೀಕರಿಸುವುದಿಲ್ಲ.