Thursday, April 25, 2024
spot_img
spot_img
spot_img
spot_img
spot_img
spot_img

ಶಾಲೆಗೆ ಕುಡಿದು ಬರುತ್ತಿದ್ದ ಶಿಕ್ಷಕ ; ಚಪ್ಪಲಿ – ಶೂ ಎಸೆದು ಓಡಿಸಿದ ವಿದ್ಯಾರ್ಥಿಗಳು ; ವಿಡಿಯೋ Virul.!

spot_img

ಜನಸ್ಪಂದನ ನ್ಯೂಸ್, ಡೆಸ್ಕ್ : ದಿನನಿತ್ಯ ಶಾಲೆಗೆ ಕುಡಿದು ಬರುತ್ತಿದ್ದ ಶಿಕ್ಷಕನಿಗೆ ಪ್ರಾಥಮಿಕ ತರಗತಿಯ ವಿದ್ಯಾರ್ಥಿಗಳು ಚಪ್ಪಲಿ ಎಸೆದು ಶಾಲೆಯಿಂದ ಓಡಿಸಿದ ಘಟನೆ ಛತ್ತೀಸ್ ಗಡದ ಬಸ್ತರ್ ಜಿಲ್ಲೆಯಲ್ಲಿ  ನಡೆದಿದ್ದು, ಸದ್ಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ವರದಿಗಳ ಪ್ರಕಾರ, ಈ ದೃಶ್ಯಾವಳಿ ಛತ್ತೀಸ್‌ಗಢದ ಬಸ್ತಾರ್‌ನಲ್ಲಿರುವ ಪಿಲಿಭಟ್ಟ ಸರ್ಕಾರಿ ಶಾಲೆಯದಾಗಿದ್ದು, ಸ್ನೇಹಾ ಮೊರ್ದಾನಿ ಎಂಬವವರು X ನಲ್ಲಿ ವೀಡಿಯೊ ಹಂಚಿಕೊಂಡಿದ್ದಾರೆ.

ಹೋಳಿ ಹಬ್ಬದಂದು ಸ್ಕೂಟರ್‌ನಲ್ಲಿ ಯುವತಿಯರಿಂದ ಅಶ್ಲೀಲ-ಅಸಭ್ಯ ಕೃತ್ಯ ; ವಿಡಿಯೋ Virul.!

ಈ ಶಿಕ್ಷಕ ಪ್ರತಿದಿನ ಕಂಠಪೂರ್ತಿ ಕುಡಿದು ಶಾಲೆಗೆ ಬರುತ್ತಾನೆ. ತರಗತಿಗೆ ಬಂದು ಪಾಠ ಮಾಡಲು ತಲೆಕೆಡಿಸಿಕೊಳ್ಳದೆ ನೆಲದ ಮೇಲೆ ಮಲಗುತ್ತಿದ್ದರು.

ಕಲಿಸಲು ಕೇಳಿದ ವಿದ್ಯಾರ್ಥಿಗಳನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ದುರ್ವರ್ತನೆ ತೋರುತ್ತಿದ್ದ. ಶಾಲಾ ಆಡಳಿತ ಮಂಡಳಿ ಈತನ ವಿರುದ್ಧ ಕ್ರಮಕೈಗೊಳ್ಳಲು ವಿಫಲವಾಗಿತ್ತು ಎಂದು ವರದಿಯಾಗಿದೆ.

ಹೊಸ ರೇಷನ್ ಕಾರ್ಡ್ ವಿತರಣೆಗೆ DATE ಫಿಕ್ಸ್‌ ; ಈಗಲೇ ಅರ್ಜಿ ಸಲ್ಲಿಸಿ.!

ಶಿಕ್ಷಕರ ವರ್ತನೆಗೆ ವಿದ್ಯಾರ್ಥಿಗಳು ಅಸಮಾಧಾನ ವ್ಯಕ್ತಪಡಿಸಿದರು. ಇದೇ ವೇಳೆ ಶಿಕ್ಷಕ ಕಳೆದ ದಿನ ಕುಡಿದು ಶಾಲೆಗೆ ಬಂದಿದ್ದರು. ಇದರೊಂದಿಗೆ ವಿದ್ಯಾರ್ಥಿಗಳು ಶೂ ಹಾಗೂ ಚಪ್ಪಲಿಯನ್ನು ತೆಗೆದುಕೊಂಡು ಆತನ ಮೇಲೆ ಎಸೆಯಲಾರಂಭಿಸಿದರು.

ಯಾವಾಗ ವಿದ್ಯಾರ್ಥಿಗಳು ಶೂ ಹಾಗೂ ಚಪ್ಪಲಿಯನ್ನು ತೆಗೆದುಕೊಂಡು ಆತನ ಮೇಲೆ ಎಸೆಯಲಾರಂಭಿಸಿದರೋ, ಆ ಶಿಕ್ಷಕ ಶಾಲೆ ಬಿಟ್ಟು ಬೈಕ್ ಸ್ಟಾರ್ಟ್ ಮಾಡಿ ಪರಾರಿಯಾಗಿದ್ದಾನೆ. ಆತ ಬೈಕ್ ಸ್ಟಾರ್ಟ್ ಮಾಡಿ ಪರಾರಿಯಾಗುತ್ತಿದ್ದರೂ ಸಹ ವಿದ್ಯಾರ್ಥಿಗಳು ಬೈಕ್ ಹಿಂಬಾಲಿಸಿ ಬೂಟುಗಳನ್ನುಎಸೆಯುತ್ತಿರುವ ವಿಡಿಯೋದಿಂದ ಹೊರ ಬಿದ್ದಿದೆ.

spot_img
spot_img
spot_img
- Advertisment -spot_img