ಜನಸ್ಪಂದನ ನ್ಯೂಸ್, ಬೆಳಗಾವಿ : ಹಾಸ್ಯ ನಟ ಸಂಜು ಬಸಯ್ಯ ಪತ್ನಿಗೆ ಓರ್ವ ವಿದ್ಯಾರ್ಥಿ ಅಶ್ಲೀಲ ಮೆಸೇಜ್ (obscene-message) ಕಳುಹಿಸಿದ ಘಟನೆಯೊಂದು ನಡೆದಿದ್ದು, ಈ ವೇಳೆ ಹಾಸ್ಯ ನಟ ಸಂಜು ಬಸಯ್ಯ ಅವರ ನಡೆ ಸಮಾಜಕ್ಕೆ ಮಾದರಿಯಾಗಿದೆ.
ಕನ್ನಡ ಕಿರುತೆರೆಯಲ್ಲಿ ಹಾಸ್ಯ ಕಾರ್ಯಕ್ರಮಗಳ ಮೂಲಕ ಜನಪ್ರಿಯರಾಗಿರುವ ಬೆಳಗಾವಿಯ ಕಲಾವಿದ ಸಂಜು ಬಸಯ್ಯ ಅವರ ಪತ್ನಿಗೆ ಇನ್‌ಸ್ಟಾಗ್ರಾಮ್‌ನಲ್ಲಿ ಅಶ್ಲೀಲ ಸಂದೇಶ (obscene-message) ಕಳುಹಿಸಿದ ಪ್ರಕರಣ ಬೆಳಕಿಗೆ ಬಂದಿದೆ. ವಿಜಯನಗರ ಜಿಲ್ಲೆಯ ಪಿಯುಸಿ ವಿದ್ಯಾರ್ಥಿಯೊಬ್ಬ ಈ ಕೃತ್ಯ (obscene-message) ಎಸಗಿದ್ದು, ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಸಂಜು ಬಸಯ್ಯ ಅವರು ಮೊದಲು ಪೊಲೀಸರಿಗೆ ಮಾಹಿತಿ ನೀಡಿದ್ದರು.
ಇದನ್ನು ಓದಿ : Vulture : ಜಿಂಕೆಯನ್ನೇ ಹೊತ್ತೊಯ್ದ ರಣಹದ್ದು ; ಅಚ್ಚರಿಯ ವಿಡಿಯೋ ವೈರಲ್.!
ಜಿಲ್ಲೆಯ ಬೈಲಹೊಂಗಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾದ ನಂತರ, ಪೊಲೀಸರು ಅಶ್ಲೀಲ ಮೆಸೇಜ್ (obscene-message) ವಿದ್ಯಾರ್ಥಿಯನ್ನು ವಶಕ್ಕೆ ತೆಗೆದು ವಿಚಾರಣೆ ನಡೆಸಿದರು. ಈ ವೇಳೆ ಸ್ಥಳಕ್ಕೆ ಆಗಮಿಸಿದ್ದ ಸಂಜು ಬಸಯ್ಯ ಅವರು , “ಇಂತಹ ವರ್ತನೆಗಳು ನಿನ್ನ ಕುಟುಂಬದ ಗೌರವಕ್ಕೆ ತೊಂದರೆಯುಂಟು ಮಾಡಬಹುದು. ಸಾಮಾಜಿಕ ಜಾಲತಾಣವನ್ನ ಸಮರ್ಪಕವಾಗಿ ಬಳಸಬೇಕು,” ಎಂದು ವಿದ್ಯಾರ್ಥಿಗೆ ಬೈಯ್ದು ಬುದ್ಧಿವಾದ ಹೇಳಿದ್ದಾರೆ.
ಮಾಗದರ್ಶಿಯಾಗಿ ನಡೆದು ಮೆಚ್ಚುಗೆ ಗಳಿಸಿದ ಕಲಾವಿದ :
ಅಶ್ಲೀಲ ಮೆಸೇಜ್ (obscene-message) ವಿದ್ಯಾರ್ಥಿಯು ಇನ್ನೂ ಓದುತ್ತಿರುವವನಾಗಿದ್ದು, ಅವನ ಭವಿಷ್ಯ ಹಾಳಾಗಬಾರದೆಂಬ ಕಾರಣದಿಂದ ಕೇಸ್ ಹಿಂಪಡೆಯಲು ಸಂಜು ಬಸಯ್ಯ ನಿರ್ಧರಿಸಿದ್ದಾರೆ. ಅವರು ಪೊಲೀಸರು ಹಾಗೂ ಮಾಧ್ಯಮಗಳ ಎದುರಿನಲ್ಲಿ, “ಅವನನ್ನು ಶಿಕ್ಷಿಸುವ ಬದಲು ಬುದ್ಧಿ ಹೇಳುವದು ಹೆಚ್ಚು ಪರಿಣಾಮಕಾರಿ. ಮುಂದಿನ ಜೀವನದಲ್ಲಿ ಇಂತಹ ತಪ್ಪು ಪುನರಾವೃತ್ತಿಯಾಗಬಾರದು ಎಂಬ ಬುದ್ಧಿವಾದ ನೀಡಿದ್ದೇನೆ” ಎಂದು ತಿಳಿಸಿದರು.
ಇದನ್ನು ಓದಿ : Humaira : ನಟಿ ಹುಮೈರಾ ಅಸ್ಗರ್ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆ.!
ಘಟನೆ ಸಾಮಾಜಿಕ ಜಾಲತಾಣ ಬಳಕೆಯ ಗಂಭೀರತೆಯನ್ನ ಎತ್ತಿ ತೋರಿಸಿದೆ :
ಪತ್ನಿಗೆ ಅಶ್ಲೀಲ ಸಂದೇಶಗಳು (obscene-message) ಹಾಗೂ ಚಿತ್ರಗಳನ್ನು ಕಳುಹಿಸಿದ್ದ ವಿದ್ಯಾರ್ಥಿಗೆ ಬುದ್ಧಿವಾದ ನೀಡಿ ಬಿಟ್ಟಿರುವ ಈ ಘಟನೆ ಸಾಮಾಜಿಕ ಜಾಲತಾಣಗಳ ಜವಾಬ್ದಾರಿಯುತ ಬಳಕೆಯ ಅಗತ್ಯತೆಯನ್ನು ಮತ್ತೆ ಒತ್ತಿ ಹೇಳಿದೆ.
ಹಿರಿಯರಿಂದ ಬುದ್ಧಿವಾದ ಸಿಕ್ಕಿರುವ ಈ ಯುವಕನು, ಮುಂದಿನ ದಿನಗಳಲ್ಲಿ ಉತ್ತಮ ನಡೆ ತಾಳಲಿ ಎಂಬ ನಂಬಿಕೆಯನ್ನು ಸಂಜು ಬಸಯ್ಯ ವ್ಯಕ್ತಪಡಿಸಿದ್ದಾರೆ. ಈ ಘಟನೆಯು, ಶಾಂತ ದೃಷ್ಠಿಕೋನದಿಂದ ಸಮಸ್ಯೆಗಳನ್ನು ಹೇಗೆ ನಿಭಾಯಿಸಬಹುದೆಂಬುದಕ್ಕೆ ಉತ್ತಮ ಮಾದರಿಯಾಗಿದೆ.
ಅಶ್ಲಿಲ್ ಮೆಸೇಜ್ (obscene message) ಕಳುಹಿಸಿದ ವಿದ್ಯಾರ್ಥಿ ಜೊತೆ ಸಂಜು ಬಸಯ್ಯಾ ವಿಡಿಯೋ :
View this post on Instagram
“Dandelion ಹೂವು, ಹಾನಿಗೊಳಗಾದ ಲಿವರ್ ಮತ್ತು ಕಿಡ್ನಿಯನ್ನು ಪುನಃ ಮೊದಲಿನಂತೆ ಮಾಡುತ್ತದೆ.!
ಜನಸ್ಪಂದನ ನ್ಯೂಸ್, ಆರೋಗ್ಯ : ನಿಮಗಿದು ಗೊತ್ತೇ.? ಈ Dandelion ಹೂವು, ಹಾನಿಗೊಳಗಾದ ಲಿವರ್ ಮತ್ತು ಕಿಡ್ನಿಯನ್ನು ಪುನಃ ಮೊದಲಿನಂತೆ ಮಾಡುತ್ತದೆ.!, ಹೌದು, ಈ ಹೂವು ಡ್ಯಾಮೇಜ್ ಆದ ಕಿಡ್ನಿ ಮತ್ತು ಲಿವರ್ ಮತ್ತೆ ಮೊದಲಿನಂತೆ ಮಾಡುತ್ತದೆ. ಹಾಗಾದ್ರೆ ಬನ್ನಿ, ಆ ಹೂವಿನ ಬಗ್ಗೆ ತಿಳಿಯೋಣ.
ದುಂಡೇಲಿಯನ್ (Dandelion) ಅಥವಾ ಹಾಲದಂಡೆ/ಕಹಿಗಿಡ ಎಂಬ ಹೆಸರಿನಿಂದ ಪರಿಚಿತವಾದ ಈ ಸಸ್ಯವನ್ನು ಶತಮಾನಗಳಿಂದ ವಿವಿಧ ಆರೋಗ್ಯ ಸಮಸ್ಯೆಗಳಿಗೆ ಉಪಯೋಗಿಸಲಾಗುತ್ತಿದೆ.
ಇದನ್ನು ಓದಿ : Savadatti-Belagavi ಯಲ್ಲಮ್ಮ ದೇಗುಲದಲ್ಲಿ ದಾಖಲೆ ಕಾಣಿಕೆ ಸಂಗ್ರಹ ; 3 ತಿಂಗಳಲ್ಲಿ ರೂ.3.81 ಕೋಟಿ.!
ಮೂಲತಃ ಯುರೇಷಿಯಾದಲ್ಲಿ ಬೆಳೆಯುವ ಈ ಸಸ್ಯ, ಇಂದು ಮಾನವ ಚಟುವಟಿಕೆಯ ಪರಿಣಾಮವಾಗಿ ಪ್ರಪಂಚದಾದ್ಯಂತ ಹರಡಿದೆ. ಭಾರತದಲ್ಲಿ ಇದನ್ನು ಮುಖ್ಯವಾಗಿ ಹಿಮಾಲಯನ್ ಪ್ರದೇಶದಲ್ಲಿ ನೋಡಬಹುದು. ಪ್ರಪಂಚದಾದ್ಯಂತ 30ಕ್ಕೂ ಹೆಚ್ಚು ಪ್ರಬೇಧಗಳಲ್ಲಿ ದುಂಡೇಲಿಯನ್ ಲಭ್ಯವಿದೆ.
ಆಯುರ್ವೇದದ ಬೆಳಕು – ದುಂಡೇಲಿಯನ್ (Dandelion) :
ಸುಶ್ರುತ ಸಂಹಿತೆಯ ಪ್ರಕಾರ, ದುಂಡೇಲಿಯನ್ (Dandelion) ಉತ್ತಮ ಫೈಬರ್ ಮೂಲವಾಗಿದೆ. ಇದು ಜೀರ್ಣಕ್ರಿಯೆ ಬಲಪಡಿಸುವ ಜೊತೆಗೆ ಮಲಬದ್ಧತೆಯ ಸಮಸ್ಯೆ ನಿವಾರಣೆಯಲ್ಲಿ ಸಹಕಾರಿಯಾಗುತ್ತದೆ. ಇದರಲ್ಲಿರುವ ನೈಸರ್ಗಿಕ ಉರಿಯೂತ ನಾಶಕ ಗುಣಗಳು ದೇಹದಲ್ಲಿ ಉರಿಯೂತ ಕಡಿಮೆ ಮಾಡುತ್ತವೆ.
ಇದನ್ನು ಓದಿ : Vulture : ಜಿಂಕೆಯನ್ನೇ ಹೊತ್ತೊಯ್ದ ರಣಹದ್ದು ; ಅಚ್ಚರಿಯ ವಿಡಿಯೋ ವೈರಲ್.!
ದಂಡೇಲಿಯನ್ (Dandelion) ನ ಮುಖ್ಯ ಆರೋಗ್ಯ ಪ್ರಯೋಜನಗಳು :
- ಯಕೃತ್ತಿಗೆ ಶುದ್ಧಿ: ಆಯುರ್ವೇದದ ಪ್ರಕಾರ, ದುಂಡೇಲಿಯನ್ ಯಕೃತ್ತಿನ ಶುದ್ಧಿಗೆ ನೈಸರ್ಗಿಕ ಪರಿಹಾರವಾಗಿದೆ.
- ಜೀರ್ಣಕ್ರಿಯೆ ಬೆಂಬಲ: ಇದರ ಬೇರು ಮತ್ತು ಎಲೆಗಳು ಜೀರ್ಣಕ್ರಿಯೆ ವ್ಯವಸ್ಥೆಗೆ ಸಹಕಾರ ನೀಡುತ್ತವೆ.
- ಪೋಷಕಾಂಶಗಳ ಖಜಾನೆ: ವಿಟಮಿನ್ A, C, D ಮತ್ತು ಖನಿಜಗಳು – ಪೊಟ್ಯಾಸಿಯಮ್, ಕ್ಯಾಲ್ಸಿಯಮ್ ಮೊದಲಾದವುಗಳಲ್ಲಿ ದುಂಡೇಲಿಯನ್ ಎಲೆಗಳು ಶ್ರೀಮಂತವಾಗಿವೆ.
- ಮಧುಮೇಹ ನಿರ್ವಹಣೆ: ಆಹಾರದಲ್ಲಿ ಇದರ ಬಳಕೆಯಿಂದ ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಣಕ್ಕೆ ಬರುತ್ತದೆ.
- ರೋಗನಿರೋಧಕ ಶಕ್ತಿ: ಇದರ ನಿಯಮಿತ ಸೇವನೆಯಿಂದ ದೇಹದ ರೋಗಪ್ರತಿರೋಧ ಶಕ್ತಿ ವೃದ್ಧಿಯಾಗುತ್ತದೆ.
ಇದನ್ನು ಓದಿ : Model : ಆಶೀರ್ವಾದದ ನೆಪದಲ್ಲಿ ಬಟ್ಟೆಯೊಳಗೆ ಕೈ ಹಾಕಿದ ಅರ್ಚಕ : ಮಾಡೆಲ್‌ನ ಗಂಭೀರ ಆರೋಪ.!
ಎಲೆಗಳ ವಿಶೇಷತೆಗಳು :
ಯುಎಸ್ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಹೆಲ್ತ್ (US National Institutes of Health) ನ ಅಧ್ಯಯನಗಳ ಪ್ರಕಾರ, ದುಂಡೇಲಿಯನ್ (Dandelion) ಎಲೆಗಳಲ್ಲಿರುವ ಸಂಯುಕ್ತಗಳು ಮೂತ್ರಪಿಂಡಗಳ ಸುರಕ್ಷತೆಗೆ ಸಹಾಯಕವಾಗುತ್ತವೆ. ದೇಹದಿಂದ ವಿಷದ ಅಂಶಗಳನ್ನು ಹೊರಹಾಕುವ ಮೂಲಕ ಈ ಎಲೆಗಳು ಮೂತ್ರಪಿಂಡಗಳ ಮೇಲಿನ ಒತ್ತಡವನ್ನು ಕಡಿಮೆ ಮಾಡುತ್ತವೆ.
ದುಂಡೇಲಿಯನ್ ಚಹಾ – ಮಧುಮೇಹಕ್ಕೆ ನೈಸರ್ಗಿಕ ಪಥ್ಯ :
ದುಂಡೇಲಿಯನ್ (Dandelion) ಚಹಾ ಮಧುಮೇಹ ರೋಗಿಗಳಿಗೆ ಬಹುಪಾಲು ಉಪಯುಕ್ತವಾಗಬಹುದು. ಇದು ಇನ್ಸುಲಿನ್ ಉತ್ಪಾದನೆಗೆ ಸಹಕಾರ ನೀಡುವ ಜೊತೆಗೆ ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಣದಲ್ಲಿಡುತ್ತದೆ.
ಇದನ್ನು ಓದಿ : Astrology : ಹೇಗಿದೆ ಗೊತ್ತಾ.? ಜುಲೈ 11 ರ ದ್ವಾದಶ ರಾಶಿಗಳ ಫಲಾಫಲ.!
ಇದರಲ್ಲಿರುವ ವಿಟಮಿನ್ ಕೆ ಮತ್ತು ಕ್ಯಾಲ್ಸಿಯಂ, ಮೂಳೆ ಆರೋಗ್ಯವನ್ನು ಗಟ್ಟಿ ಮಾಡುತ್ತವೆ ಮತ್ತು ಸಂಬಂಧಿತ ಸೋಂಕುಗಳಿಂದ ರಕ್ಷಣೆ ನೀಡುತ್ತವೆ.
Note : ಈ ಲೇಖನವು ಸಾಮಾನ್ಯ ಮಾಹಿತಿಗಾಗಿ ಒದಗಿಸಲಾಗಿದೆ. ಯಾವುದೇ ಆರೋಗ್ಯ ಸಮಸ್ಯೆಗೆ, ವೃತ್ತಿಪರ ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ಜನಸ್ಪಂದನ ನ್ಯೂಸ್ ಇದನ್ನು ಧೃಡಿಕರಿಸುವುದಿಲ್ಲ.