Tuesday, October 14, 2025

Janaspandhan News

HomeJobSSC : 509 ಹೆಡ್ ಕಾನ್ಸ್‌ಟೇಬಲ್ ಹುದ್ದೆಗಳ ಭರ್ತಿ ; ಈಗಲೇ ಅರ್ಜಿ ಸಲ್ಲಿಸಿ.!
spot_img
spot_img
spot_img

SSC : 509 ಹೆಡ್ ಕಾನ್ಸ್‌ಟೇಬಲ್ ಹುದ್ದೆಗಳ ಭರ್ತಿ ; ಈಗಲೇ ಅರ್ಜಿ ಸಲ್ಲಿಸಿ.!

- Advertisement -

ಜನಸ್ಪಂದನ ನ್ಯೂಸ್‌, ನೌಕರಿ : Staff Selection Commission (SSC) 2025 ನೇಮಕಾತಿ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಅಖಿಲ ಭಾರತ ಮಟ್ಟದಲ್ಲಿ ಒಟ್ಟು 509 ಹೆಡ್ ಕಾನ್ಸ್‌ಟೇಬಲ್ ಹುದ್ದೆಗಳು ಖಾಲಿ ಇದ್ದು, ಅರ್ಹ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.

ಈ ನೇಮಕಾತಿ ಕುರಿತು ಹುದ್ದೆಗಳ ವಿವರ, ಅರ್ಹತೆ, ವಯಸ್ಸಿನ ಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಹಾಗೂ ಪ್ರಮುಖ ದಿನಾಂಕಗಳ ಮಾಹಿತಿ ಇಲ್ಲಿದೆ.

RRB – NTPC ಹುದ್ದೆಗಳಿಗೆ ಭಾರಿ ನೇಮಕಾತಿ : 30,307 ಹುದ್ದೆಗಳ ಖಾಲಿ ಹುದ್ದೆಗಳಿಗೆ ಭರ್ತಿ.!
ಇಲಾಖೆ ಹೆಸರು :
  • ಸಿಬ್ಬಂದಿ ಆಯ್ಕೆ ಆಯೋಗ (SSC).
ಒಟ್ಟು ಹುದ್ದೆಗಳ ಸಂಖ್ಯೆ :
  • 509 ಹುದ್ದೆಗಳು.
ಹುದ್ದೆಗಳ ಹೆಸರು :
  • ಹೆಡ್ ಕಾನ್ಸ್‌ಟೇಬಲ್ (ಪುರುಷ) : 341 ಹುದ್ದೆಗಳು.
  • ಹೆಡ್ ಕಾನ್ಸ್‌ಟೇಬಲ್ (ಮಹಿಳೆ) : 168 ಹುದ್ದೆಗಳು.
Scam Alert : ಭಾರತದಲ್ಲಿ ಹಗರಣಕ್ಕೆ ಹೆಚ್ಚು ಬಳಸಲಾಗುತ್ತಿರುವ ಟಾಪ್ 10 ಫೋನ್ ನಂಬರುಗಳು.!
ಉದ್ಯೋಗ ಸ್ಥಳ :
  • ಅಖಿಲ ಭಾರತ.
ಅಪ್ಲಿಕೇಶನ್ ಮೋಡ್ :
  • ಆನ್‌ಲೈನ್.
SSC ವಯಸ್ಸಿನ ಮಿತಿ :
  • ಕನಿಷ್ಠ : 18 ವರ್ಷ.
  • ಗರಿಷ್ಠ : 25 ವರ್ಷ.
ವಯೋಮಿತಿ ಸಡಿಲಿಕೆ :
  • OBC ಅಭ್ಯರ್ಥಿಗಳಿಗೆ : 3 ವರ್ಷಗಳು.
  • SC/ST ಅಭ್ಯರ್ಥಿಗಳಿಗೆ : 5 ವರ್ಷಗಳು.
  • PWD (UR/EWS) ಅಭ್ಯರ್ಥಿಗಳಿಗೆ : 10 ವರ್ಷಗಳು.
  • PWD (OBC) ಅಭ್ಯರ್ಥಿಗಳಿಗೆ : 13 ವರ್ಷಗಳು.
  • PWD (SC/ST) ಅಭ್ಯರ್ಥಿಗಳಿಗೆ : 15 ವರ್ಷಗಳು
Minor ಬಾಲಕಿಯರ ಶೋಷಣೆ ಪ್ರಕರಣ ಬಯಲು ; ಇಬ್ಬರು ಬಂಧನ, ಬಾಲಕಿ ರಕ್ಷಣೆ.!
SSC ಶೈಕ್ಷಣಿಕ ಅರ್ಹತೆ :
  • ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ 12ನೇ ತರಗತಿ ಪಾಸ್ ಆಗಿರಬೇಕು.
ವೇತನ ಶ್ರೇಣಿ:
  • ರೂ.25,500 – ರೂ.81,100 (ಪ್ರತಿ ತಿಂಗಳು)
ಅರ್ಜಿ ಶುಲ್ಕ :
  • SC/ST/ಮಹಿಳಾ ಅಭ್ಯರ್ಥಿಗಳು ಮತ್ತು ಮಾಜಿ ಸೈನಿಕರು : ಶುಲ್ಕ ವಿನಾಯಿತಿ
  • ಇತರ ಅಭ್ಯರ್ಥಿಗಳು : ರೂ.100/-
ಆಯ್ಕೆ ಪ್ರಕ್ರಿಯೆ :
  1. ಕಂಪ್ಯೂಟರ್ ಆಧಾರಿತ ಪರೀಕ್ಷೆ.
  2. ದೈಹಿಕ ಸಹಿಷ್ಣುತೆ ಹಾಗೂ ಅಳತೆ ಪರೀಕ್ಷೆ.
  3. ಕಂಪ್ಯೂಟರ್‌ನಲ್ಲಿ ಟೈಪಿಂಗ್ ಟೆಸ್ಟ್.
  4. ಕಂಪ್ಯೂಟರ್ ಫಾರ್ಮ್ಯಾಟಿಂಗ್ ಟೆಸ್ಟ್.
SSC : 3073 ಸಬ್-ಇನ್‌ಸ್ಪೆಕ್ಟರ್ (GD and Executive) ಹುದ್ದೆಗಳಿಗೆ ಅರ್ಜಿ ಆಹ್ವಾನ.!
ಅರ್ಜಿ ಸಲ್ಲಿಸುವ ವಿಧಾನ :
  1. ಅಧಿಕೃತ (SSC) ವೆಬ್‌ಸೈಟ್‌ಗೆ ಭೇಟಿ ನೀಡಿ ಮತ್ತು ಅಧಿಸೂಚನೆಯನ್ನು ಡೌನ್‌ಲೋಡ್ ಮಾಡಿ.
  2. ಸೂಚನೆಯನ್ನು ಸಂಪೂರ್ಣವಾಗಿ ಓದಿ.
  3. ಆನ್‌ಲೈನ್ ಅರ್ಜಿಯ ಲಿಂಕ್ ಕ್ಲಿಕ್ ಮಾಡಿ.
  4. ಫಾರ್ಮ್‌ನಲ್ಲಿ ಸರಿಯಾದ ಮಾಹಿತಿಯನ್ನು ನಮೂದಿಸಿ.
  5. ಅಗತ್ಯವಿದ್ದರೆ ಅರ್ಜಿ ಶುಲ್ಕ ಪಾವತಿಸಿ.
  6. ಫೋಟೋ ಮತ್ತು ಸಹಿ ಅಪ್ಲೋಡ್ ಮಾಡಿ.
  7. ಅರ್ಜಿ ಸಲ್ಲಿಸುವ ಮೊದಲು ಮತ್ತೊಮ್ಮೆ ಪರಿಶೀಲಿಸಿ.
  8. ಸಲ್ಲಿಸಿದ ನಂತರ ಪ್ರಿಂಟ್‌ ಔಟ್ ತೆಗೆದುಕೊಳ್ಳಿ.
ಪ್ರಮುಖ ದಿನಾಂಕಗಳು :
  • ಅರ್ಜಿ ಸಲ್ಲಿಕೆಯ ಪ್ರಾರಂಭ ದಿನಾಂಕ : 29 ಸೆಪ್ಟೆಂಬರ್ 2025.
  • ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕ : 20 ಅಕ್ಟೋಬರ್ 2025.
ಪ್ರಮುಖ ಲಿಂಕ್‌ಗಳು :

Relationships : “ಭಾರತದಲ್ಲಿ ಅತೀ ಹೆಚ್ಚು ಅಕ್ರಮ ಸಂಬಂಧವಿರುವ ನಗರಗಳ ಪಟ್ಟಿ ಪ್ರಕಟ: ಬೆಂಗಳೂರಿನ ಸ್ಥಾನವೇನು?”

Relationships

ಜನಸ್ಪಂದನ ನ್ಯೂಸ್‌, ಬೆಂಗಳೂರು : ಭಾರತದಲ್ಲಿ ಸಂಬಂಧ (Relationships) ಗಳನ್ನು ಪವಿತ್ರವೆಂದು ಪರಿಗಣಿಸಲಾಗುತ್ತದೆ. ತಂದೆ-ತಾಯಿ, ಪತಿ-ಪತ್ನಿ, ಅಣ್ಣ-ತಂಗಿ ಮುಂತಾದ ಸಂಬಂಧಗಳ ಸುತ್ತಲೇ ಭಾರತೀಯ ಸಂಸ್ಕೃತಿ, ಹಬ್ಬ ಹಾಗೂ ಸಂಪ್ರದಾಯಗಳು ಕಟ್ಟಿಕೊಂಡಿವೆ.

ಆದರೆ ಆಧುನಿಕ ಜೀವನಶೈಲಿಯ ಪ್ರವಾಹದಲ್ಲಿ ಈ ಸಂಬಂಧಗಳ ಮೌಲ್ಯ ಭಾರತದಲ್ಲಿ ಕುಗ್ಗುತ್ತಿದೆ ಎಂಬ ಚರ್ಚೆಗಳು ಕೆಲಕಾಲದಿಂದ ನಡೆಯುತ್ತಿವೆ. ಇದೀಗ ಗ್ಲೀಡನ್ (Gleeden) ಆಪ್ ನಡೆಸಿದ ಸಮೀಕ್ಷೆಯ ಫಲಿತಾಂಶವು ಈ ಚರ್ಚೆಗೆ ಮತ್ತಷ್ಟು ಬಲ ನೀಡಿದೆ.

ವರದಿ ಪ್ರಕಾರ, ಭಾರತದಲ್ಲಿ ಅಕ್ರಮ ಸಂಬಂಧ (Illicit Relationships) ಗಳು ಗಣನೀಯವಾಗಿ ಹೆಚ್ಚುತ್ತಿದ್ದು, ಅತೀ ಹೆಚ್ಚು ಅಕ್ರಮ ಸಂಬಂಧಗಳಿರುವ ನಗರ “ನಮ್ಮ ಬೆಂಗಳೂರು” ಎಂದು ಪಟ್ಟಿ ಮಾಡಲಾಗಿದೆ.

ಸಾಮಾಜಿಕ ಮಾಧ್ಯಮದಲ್ಲಿ ಹಾಸ್ಯ ವಿಚಿತ್ರ Video ವೈರಲ್.!
ಟ್ರಾಫಿಕ್ ನಂತರ ಇನ್ನೊಂದು ಕಳಂಕವೇ?

ಬೆಂಗಳೂರು ಈಗಾಗಲೇ ಟ್ರಾಫಿಕ್ ಸಮಸ್ಯೆಯಿಂದ ಬಳಲುತ್ತಿರುವ ನಗರ ಎಂಬ ಟೀಕೆಗಳನ್ನು ಎದುರಿಸುತ್ತಿದೆ. ಇದಕ್ಕೆ ಜೊತೆಗೆ “ಅಕ್ರಮ ಸಂಬಂಧಗಳಲ್ಲಿ ಅಗ್ರಸ್ಥಾನ” ಎಂಬ ಹೊಸ ಕಳಂಕ ಅಂಟಿಕೊಂಡಿದೆ. ಗ್ಲೀಡನ್ ವರದಿ ಹೊರಬಂದ ನಂತರ, ಇದರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಸಾರ್ವಜನಿಕ ವಲಯದಲ್ಲಿ ಭಾರಿ ಚರ್ಚೆಗಳು ನಡೆಯುತ್ತಿವೆ.

ಗ್ಲೀಡನ್ ಸಮೀಕ್ಷೆಯಲ್ಲಿ ಅಗ್ರ 5 ನಗರಗಳು :

ವರದಿ ಪ್ರಕಾರ ಭಾರತದಲ್ಲಿ ಅತೀ ಹೆಚ್ಚು ಅಕ್ರಮ ಸಂಬಂಧ (Illicit Relationships) ಗಳು ದಾಖಲಾಗಿರುವ ಟಾಪ್ 5 ನಗರಗಳು ಇವು:

  1. ಬೆಂಗಳೂರು.
  2. ಮುಂಬೈ.
  3. ಕೋಲ್ಕತಾ.
  4. ದೆಹಲಿ.
  5. ಪುಣೆ.
ಸಣ್ಣ ನಗರಗಳಲ್ಲಿಯೂ ಆಘಾತಕಾರಿ ಬೆಳವಣಿಗೆ :

ಹೆಚ್ಚಿನವರು ಮಹಾನಗರಗಳಲ್ಲಿ ಇಂತಹ ಪ್ರವೃತ್ತಿ ಹೆಚ್ಚು ಎಂದೇ ಭಾವಿಸುತ್ತಾರೆ. ಆದರೆ ಗ್ಲೀಡನ್ ವರದಿ ಪ್ರಕಾರ ಟೈರ್-2 ಮತ್ತು ಟೈರ್-3 ನಗರಗಳು ಅಕ್ರಮ ಸಂಬಂಧಗಳ ಹಾಟ್‌ಸ್ಪಾಟ್ ಆಗುತ್ತಿವೆ. ಡೇಟಿಂಗ್ ಮತ್ತು ರಿಲೇಶನ್‌ಶಿಪ್ ಆ್ಯಪ್‌ಗಳ ಬಳಕೆ ಈ ಸಣ್ಣ ನಗರಗಳಲ್ಲಿ ಮಹಾನಗರಗಳಿಗಿಂತಲೂ ವೇಗವಾಗಿ ಬೆಳೆಯುತ್ತಿದೆ.

Scam Alert : ಭಾರತದಲ್ಲಿ ಹಗರಣಕ್ಕೆ ಹೆಚ್ಚು ಬಳಸಲಾಗುತ್ತಿರುವ ಟಾಪ್ 10 ಫೋನ್ ನಂಬರುಗಳು.!
ಡೇಟಿಂಗ್ ಹಾಗೂ ರಿಲೇಶನ್‌ಶಿಪ್ (Relationships) ಆ್ಯಪ್ ಹೆಚ್ಚು ಬಳಸುವ ಸಣ್ಣ ನಗರಗಳು :
  • ಜೈಪುರ.
  • ಚಂಡೀಗಢ.
  • ಲಖನೌ.
  • ಪಾಟ್ನಾ.

ಈ ಬದಲಾವಣೆಗೆ ಪ್ರಮುಖ ಕಾರಣ ಎಂದರೆ, ಸಣ್ಣ ನಗರಗಳಲ್ಲಿ ಜನರು ಕುಟುಂಬ ಮತ್ತು ಸಂಪ್ರದಾಯಗಳ ನಡುವೆ ಬದುಕುತ್ತಿದ್ದರೂ, ಆನ್‌ಲೈನ್ ಆ್ಯಪ್‌ಗಳ ಮೂಲಕ ಗುಪ್ತವಾಗಿ ಸಂಬಂಧ (Relationships) ಗಳನ್ನು ಬೆಳೆಸುತ್ತಿರುವುದು ಎಂದು ವರದಿ ತಿಳಿಸಿದೆ.

ಸಂಪಾದಕೀಯ :

ಗ್ಲೀಡನ್ ವರದಿ ತೋರಿಸುತ್ತಿರುವ ಅಂಕಿಅಂಶಗಳು ಭಾರತೀಯ ಸಮಾಜದಲ್ಲಿ ನಡೆಯುತ್ತಿರುವ ಬದಲಾವಣೆಗಳ ಪ್ರತಿಫಲವೆಂದೇ ತಜ್ಞರು ವಿಶ್ಲೇಷಿಸುತ್ತಿದ್ದಾರೆ.

ಸಂಬಂಧಗಳ ಪಾವಿತ್ರ್ಯಕ್ಕೆ ಹೆಸರಾಗಿದ್ದ ಭಾರತದಲ್ಲಿ, ತಂತ್ರಜ್ಞಾನ ಮತ್ತು ಆಧುನಿಕ ಜೀವನಶೈಲಿಯ ಪ್ರಭಾವದಿಂದ ಅಕ್ರಮ ಸಂಬಂಧ (Illicit Relationships) ಗಳ ಪ್ರಮಾಣ ಹೆಚ್ಚುತ್ತಿದೆ ಎಂಬುದು ಆತಂಕಕಾರಿ ವಿಚಾರವಾಗಿದೆ.

Courtesy : Asianet Suvarna News

- Advertisement -
spot_img
spot_img
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments