Saturday, July 13, 2024
spot_img
spot_img
spot_img
spot_img
spot_img
spot_img

Suspend : ಬಿಜೆಪಿಯ ಆರು ಶಾಸಕರು ಅಮಾನತು.!

spot_img

ಜನಸ್ಪಂದನ ನ್ಯೂಸ್, ಡೆಸ್ಕ್ : ವಿರೋಧ ಪಕ್ಷದ (opposition party) ನಾಯಕ ಸುವೇಂದು ಅಧಿಕಾರಿ ಮತ್ತು ಅಗ್ನಿಮಿತ್ರ ಪೌಲ್ ಸೇರಿದಂತೆ 6 ಬಿಜೆಪಿ ನಾಯಕರನ್ನು ಅಮಾನತುಗೊಳಿಸಿದ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ.

ಸುವೆಂದು ಅಧಿಕಾರಿ, ಅಗ್ನಿಮಿತ್ರ ಪಾಲ್, ಶಂಕರ್ ಘೋಷ್, ತಾಪ್ಸಿ ಮಂಡಲ್, ಬಂಕಿಮ್ ಘೋಷ್ ಮತ್ತು ಮಿಹಿರ್ ಗೋಸ್ವಾಮಿ ಅವರನ್ನು ಸಸ್ಪೆಂಡ್ (Suspended) ಮಾಡಲಾಗಿದೆ.

ವಿಧಾನಸಭೆಯೊಳಗೆ ಅಶಿಸ್ತು (indiscipline) ಹಾಗೂ ಗದ್ದಲದ ವರ್ತನೆ ತೋರಿದಕ್ಕಾಗಿ ರಾಜ್ಯ ವಿಧಾನಸಭೆಯ ನಿಯಮ 348ರ ಅಡಿಯಲ್ಲಿ ಅಮಾನತು ಮಾಡಲಾಗಿದೆ.

ಈ ಪ್ರಸ್ತಾವನೆಯನ್ನು ಪಶ್ಚಿಮ ಬಂಗಾಳದ ಸಂಸದೀಯ ವ್ಯವಹಾರಗಳ ಸಚಿವ ಸೋವಂದೇಬ್ ಚಟ್ಟೋಪಾಧ್ಯಾಯ ಮಂಡಿಸಿದರು. ಆ ಬಳಿಕ ಅಮಾನತು ಪ್ರಸ್ತಾವನೆಯನ್ನು ಅಂಗೀಕಾರ (Acknowledgment) ಮಾಡಲಾಯಿತು.

ವಿಧಾನಸಭೆಯ ಉಳಿದ ಅವಧಿಯವರೆಗೆ ಈ ಆರು ಜನ ಬಿಜೆಪಿ ನಾಯಕರನ್ನು ಅಮಾನತುಗೊಳಿಸಲಾಗುತ್ತಿದೆ ಎಂದು ಟಿಎಂಸಿ ಶಾಸಕ, ಸಚಿವ ಸೋವಂದೇಬ್ ಚಟ್ಟೋಪಾಧ್ಯಾಯ ಹೇಳಿದ್ದಾರೆ.

spot_img
spot_img
- Advertisment -spot_img