Wednesday, September 17, 2025

Janaspandhan News

HomeInternational NewsShooting attack : ಪೊಲೀಸ್ ಅಧಿಕಾರಿ ಸೇರಿದಂತೆ 4 ಸಾವು ; ದಾಳಿಕೋರ ಆತ್ಮಹತ್ಯೆಗೆ ಶರಣು.!
spot_img
spot_img
spot_img

Shooting attack : ಪೊಲೀಸ್ ಅಧಿಕಾರಿ ಸೇರಿದಂತೆ 4 ಸಾವು ; ದಾಳಿಕೋರ ಆತ್ಮಹತ್ಯೆಗೆ ಶರಣು.!

- Advertisement -

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ದಾಳಿಕೋರ ನಡೆದ ಭೀಕರ ಗುಂಡಿನ ದಾಳಿ (Shooting attack) ಯಲ್ಲಿ ಕನಿಷ್ಠ ನಾಲ್ವರು ಮೃತಪಟ್ಟಿರುವ ಘಟನೆಯೊಂದು ನ್ಯೂಯಾರ್ಕ್ ನಗರ ಕೇಂದ್ರದ ಮ್ಯಾನ್‌ಹ್ಯಾಟನ್‌ನಲ್ಲಿ ಜುಲೈ 28 (ಸ್ಥಳೀಯ ಸಮಯ) ರಂದು ನಡೆದಿದೆ. ಮೃತರಲ್ಲಿ ನ್ಯೂಯಾರ್ಕ್ ಪೊಲೀಸ್ ಇಲಾಖೆ(NSPD)ಯ ಅಧಿಕಾರಿಯೊಬ್ಬರೂ ಸೇರಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪೋಲಿಸ್ ಇಲಾಖೆಯ ಉನ್ನತ ಅಧಿಕಾರಿಗಳ ಪ್ರಕಾರ, ಗುಂಡಿನ ದಾಳಿ (Shooting attack) ಯಲ್ಲಿ ಮೃತ ಪೊಲೀಸ್ ಅಧಿಕಾರಿಯನ್ನು ದಿದರುಲ್ ಇಸ್ಲಾಂ (36) ಎಂದು ಗುರುತಿಸಲಾಗಿದೆ. ಬಾಂಗ್ಲಾದೇಶ ಮೂಲದ ಇಸ್ಲಾಂ, ಕಳೆದ ಮೂರುೂವರೆ ವರ್ಷಗಳಿಂದ NYPDಯಲ್ಲಿ ಸೇವೆ ಸಲ್ಲಿಸುತ್ತಿದ್ದರು ಎಂದು ಪೊಲೀಸ್ ಆಯುಕ್ತ ಜೆಸ್ಸಿಕಾ ಟಿಶ್ ಅವರು ಮಾಹಿತಿ ನೀಡಿದ್ದಾರೆ.

ಇದನ್ನು ಓದಿ : Plane AA3023 : ಟೇಕ್ ಆಫ್ ಆದ ಕೆಲವೇ ಕ್ಷಣಗಳಲ್ಲಿ ವಿಮಾನದಲ್ಲಿ ಬೆಂಕಿ : ವಿಡಿಯೋ.!

ಈ ಘಟನೆಗೆ ಕಾರಣಕಾರಿಯಾದ ಶಂಕಿತ (Shooting attack man) ದಾಳಿಕೋರನನ್ನು ಶೇನ್ ಟಮುರಾ (27) ಎಂದು ಗುರುತಿಸಲಾಗಿದೆ. ಲಾಸ್ ವೇಗಾಸ್ ಮೂಲದ ಟಮುರಾ, ದಾಳಿಯ ನಂತರ ತನಗೆ ತಾನೇ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ದಾಳಿ ನಡೆದಿದ್ದಾದರೂ ಹೇಗೆ.?

ನೈಟ್‌ಕ್ಲಬ್‌ನ ಹೊರಗೆ ಗುಂಡಿನ ದಾಳಿ (Shooting attack) ಯಿಂದ 10 ಮಂದಿಗೆ ಗಾಯ ಶಂಕಿತ ಶೂಟರ್ ಮೊದಲು ಸಂಜೆ 6:40 ರ ಸುಮಾರಿಗೆ 345 ಪಾರ್ಕ್ ಅವೆನ್ಯೂದ ಲಾಬಿಯಲ್ಲಿ NYPD ಅಧಿಕಾರಿಯೊಂದಿಗೆ ಗುಂಡಿನ ಚಕಮಕಿ ನಡೆಸಿದ. ನಂತರ ಅವನು 33 ನೇ ಮಹಡಿಗೆ ಹೋಗಿ, ಕಚೇರಿ ಗೋಪುರದೊಳಗೆ ಕಟ್ಟಡದ 32 ನೇ ಮಹಡಿಯಲ್ಲಿ, ಲಾಕ್‌ ಮಾಡಿಕೊಂಡ. ಬಳಿಕ ಆತ ತನಗೆ ತಾನೇ ಗುಂಡು ಹಾರಿಸಿಕೊಂಡಿದ್ದು, ಇದರಿಂದ ಸ್ಥಳದಲ್ಲೇ ಸಾವನ್ನಪ್ಪಿದ ಎಂದು ತಿಳಿದುಬಂದಿದೆ.

ಇದನ್ನು ಓದಿ : Married-woman : ಇನ್‌ಸ್ಟಾಗ್ರಾಂ ಪರಿಚಯದಿಂದ ಪ್ರೀತಿ, ಬಳಿಕ ದೈಹಿಕ ಸಂಬಂಧ ; ಮದುವೆಗೆ ನಿರಾಕರಣೆ, ನದಿಗೆ ಹಾರಿದ ವಿವಾಹಿತೆ.!

ಶಂಕಿತನು ಸಂಜೆ 6:40ರ ಸುಮಾರಿಗೆ ನೈಟ್‌ಕ್ಲಬ್‌ನ ಹೊರಗೆ ಗುಂಡಿನ ದಾಳಿ (Shooting attack) ನಡೆಸಿ, ಮ್ಯಾನ್‌ಹ್ಯಾಟನ್‌ನ 345 ಪಾರ್ಕ್ ಅವೆನ್ಯೂದ ಲಾಬಿಯಲ್ಲಿ NYPD ಅಧಿಕಾರಿಯೊಂದಿಗಿನ ಗುಂಡಿನ ಚಕಮಕಿ (Shooting attack) ಯಲ್ಲಿ ತೊಡಗಿದ್ದ. ಬಳಿಕ ಆತ ಕಟ್ಟಡದ 33ನೇ ಮಹಡಿಗೆ ನುಗ್ಗಿ, 32ನೇ ಮಹಡಿಯಲ್ಲಿ ಲಾಕ್‌ ಮಾಡಿಕೊಂಡು ಕೊನೆಗೆ ತನ್ನಷ್ಟಕ್ಕೆ ತಾನೇ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.

ಈ ದಾಳಿಯಲ್ಲಿ ಒಬ್ಬ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿದ್ದು, ಪ್ರಸ್ತುತ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಲ್ಲದೆ, ಸ್ಥಳದಿಂದ ಪರಾರಿಯಾಗಲು ಯತ್ನಿಸಿದ ನಾಲ್ಕು ಮಂದಿ ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ನ್ಯೂಯಾರ್ಕ್ ಮೇಯರ್ ಎರಿಕ್ ಆಡಮ್ಸ್ ಮಾಹಿತಿ ನೀಡಿದ್ದಾರೆ.

Shooting attack ಎಫ್‌ಬಿಐ ಸ್ಥಳಕ್ಕೆ :

ಈ ಅಪರಾಧದ ತೀವ್ರತೆಯನ್ನು ಗಮನಿಸಿದ ಎಫ್‌ಬಿಐ ತಂಡ ಕೂಡ ಸ್ಥಳಕ್ಕೆ ಭೇಟಿ ನೀಡಿದ್ದು, ಎಫ್‌ಬಿಐ ಉಪನಿರ್ದೇಶಕ ಡ್ಯಾನ್ ಬೊಂಜಿನೊ ಅವರ ಪ್ರಕಾರ, ತಮ್ಮ ತಂಡವು ಸಕ್ರಿಯವಾಗಿ NYPDಗೆ ಬೆಂಬಲ ನೀಡುತ್ತಿದೆ.

ಇದನ್ನು ಓದಿ : Astrology : ಹೇಗಿದೆ ಗೊತ್ತಾ.? ಜುಲೈ 28 ರ ದ್ವಾದಶ ರಾಶಿಗಳ ಫಲಾಫಲ.!

ಹೆಚ್ಚುವರಿ ಮಾಹಿತಿ ಪ್ರಕಾರ, ಶಂಕಿತ ಟಮುರಾ ಈ ದಾಳಿಯನ್ನು ಏಕೆ ನಡೆಸಿದ? ಅವನು ಒಬ್ಬನೇ ಕಾರ್ಯನಿರ್ವಹಿಸಿದ್ದನೋ? ಅಥವಾ ಈ ಹಿಂದೆ ಯಾವುದೇ ಸಂಘಟನೆ ಅಥವಾ ನೆಟ್‌ವರ್ಕ್‌ನೊಂದಿಗೆ ಸಂಪರ್ಕ ಹೊಂದಿದ್ದನಾ ಎಂಬುದರ ಬಗ್ಗೆ NYPD ಮತ್ತು ಎಫ್‌ಬಿಐ ಜಂಟಿಯಾಗಿ ತನಿಖೆ ಮುಂದುವರಿಸುತ್ತಿವೆ.


Minor-girl : ಆಟವಾಡುತ್ತಿದ್ದ ಅಪ್ರಾಪ್ತೆಗೆ ‘ಕಿಸ್’ ಕೊಟ್ಟ ಕಾಮುಕ : ಆಘಾತಕಾರಿ ವಿಡಿಯೋ.!

Minor-girl

ಜನಸ್ಪಂದನ ನ್ಯೂಸ್, ಡೆಸ್ಕ್ : ಮನೆಯ ಬಳಿ ತನ್ನ ಬಾಲಕನ ಜೊತೆ ಆಟವಾಡುತ್ತಿದ್ದ ಅಪ್ರಾಪ್ತ ಬಾಲಕಿ (Minor-girl) ಯ ಮೇಲೆ ಅಪರಿಚಿತ ವ್ಯಕ್ತಿಯೊಬ್ಬ ಲೈಂಗಿಕ ದೌರ್ಜನ್ಯ ಎಸಗಿರುವ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ.

ಈ ಆಘಾತಕಾರಿ ಘಟನೆ ಪಾಕಿಸ್ತಾನದ ಕಸೂರ್ ಜಿಲ್ಲೆಯ ಖಾರಾ ರಸ್ತೆ ಸಮೀಪದ ಶಾ ಇನಾಯತ್ ಕಾಲೊನಿಯಲ್ಲಿ ಜುಲೈ 25 ರಂದು ನಡೆದಿದ್ದು, ಇಂದು (ಜು.28) ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

ಇದನ್ನು ಓದಿ : Schoolನ 4ನೇ ಮಹಡಿಯಿಂದ ಹಾರಿ 10ನೇ ತರಗತಿ ವಿದ್ಯಾರ್ಥಿನಿ ಆತ್ಮಹತ್ಯೆ.!

ಮನೆಯ ಬಳಿಯ ಗಲ್ಲಿಯಲ್ಲಿ ಅಪ್ರಾಪ್ತ ಬಾಲಕಿ (Minor-girl) ಯೋರ್ವಳು ಆಟಮಾಡುತ್ತಿತ್ತು. ಈ ಸಮಯದಲ್ಲಿ ಆಗಮಿಸಿದ ಕಾಮುಕ ವ್ಯಕ್ತಿ ಮಗುವನ್ನು ಗಟ್ಟಿಯಾಗಿ ಹಿಡಿದು ಕಿಸ್ (KISS) ಕೊಟ್ಟು ಸ್ಥಳದಿಂದ ಪರಾರಿಯಾಗಿದ್ದಾನೆ.

ಈ ಘಟನೆಯ ಸಂಪೂರ್ಣ ದೃಶ್ಯ ಮನೆಯೊಂದರ CCTV ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸದ್ಯ ಈ ಆತಂಕಕಾರಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಇದನ್ನು ಓದಿ : Plane AA3023 : ಟೇಕ್ ಆಫ್ ಆದ ಕೆಲವೇ ಕ್ಷಣಗಳಲ್ಲಿ ವಿಮಾನದಲ್ಲಿ ಬೆಂಕಿ : ವಿಡಿಯೋ.!

ಸಿಸಿಟಿವಿಯಲ್ಲಿ ಸೆರೆಯಾಗಿರುವಂತೆ ಆ ವಿಡಿಯೋದಲ್ಲಿ, ಬಾಲಕಿ (Minor-girl) ಮತ್ತೊಬ್ಬ ಬಾಲಕನೊಂದಿಗೆ ಪ್ರತ್ಯೇಕ ಟ್ರೈಸಿಕಲ್‌ನಲ್ಲಿ ಆಟವಾಡುತ್ತಿದಂತೆ ಕಾಣುತ್ತದೆ. ಈ ವೇಳೆ ಬಾಲಕ ಯಾವುದೋ ಕಾರಣಕ್ಕೆ ಟ್ರೈಸಿಕಲ್‌ ಅಲ್ಲಿಯೇ ಬಿಟ್ಟು ಮುಂದೆ ಓಡಿ ಹೊಗುತ್ತಾನೆ.

ಈ ವೇಳೆ ಒಂಟಿಯಾಗಿದ್ದ ಬಾಲಕಿ (Minor-girl) ಯನ್ನು ಗಮನಿಸಿದ ಕಾಮುಕ ವ್ಯಕ್ತಿ ಬಾಲಕಿ (Minor-girl) ಯ ಬಳಿ ಬಂದು ಬಲವಂತವಾಗಿ ಬಾಲಕಿಗೆ ಕಿಸ್ ಕೊಟ್ಟು ತಕ್ಷಣವೇ ಅಲ್ಲಿದ ಹೋಗಿದ್ದಾನೆ.

ಇದನ್ನು ಓದಿ : LDL : ಕೆಟ್ಟ ಕೊಲೆಸ್ಟ್ರಾಲ್‌ ಸಮಸ್ಯೆಯೇ.? ಇಲ್ಲಿವೆ 4 ನೈಸರ್ಗಿಕ ಮತ್ತು ಪರಿಣಾಮಕಾರಿ ಪರಿಹಾರ ಮಾರ್ಗಗಳು.!

ಅಚಾನಕ್ ಆಗಿ ನಡೆದ ಈ ಘಟನೆಯಿಂದ ತೀವ್ರವಾಗಿ ಹೆದರಿದ ಬಾಲಕಿ (Minor-girl) ತಕ್ಷಣವೇ ಕಿರುಚುತ್ತಾ ತನ್ನ ಮನೆಯ ಕಡೆಗೆ ಓಡಿರುವುದು ವಿಡಿಯೋದಲ್ಲಿ ಕಾಣಬಹುದು.

ಈ ವಿಡಿಯೋ ವೈರಲ್ ಆದ ನಂತರ ಸಾರ್ವಜನಿಕ ಆಕ್ರೋಶ ಹೆಚ್ಚಾಗಿದ್ದು, ಸ್ಥಳೀಯರು ಮತ್ತು ಸಾಮಾಜಿಕ ಮಾಧ್ಯಮ ಬಳಕೆದಾರರು ಆರೋಪಿಗೆ ತಕ್ಷಣ ಬಂಧಿಸಿ ಕಠಿಣ ಶಿಕ್ಷೆಗೆ ಒತ್ತಾಯಿಸುತ್ತಿದ್ದಾರೆ. 

Man gives ‘kiss’ to minor girl Video :

Disclaimer : ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಸಾಮಾಜಿಕ ಮಾಧ್ಯಮದಲ್ಲಿ ಪ್ರಸ್ತುತವಿರುವ ವಿಡಿಯೋ/ಪೋಸ್ಟ್‌ನ್ನು ಆಧರಿಸಿದೆ. ಈ ಬಗ್ಗೆ ಜನಸ್ಪಂದನ ನ್ಯೂಸ್‌ ಯಾವುದೇ ರೀತಿಯ ಹಕ್ಕು ಮತ್ತು ಸತ್ಯಾಸತ್ಯತೆಯನ್ನು ದೃಢೀಕರಿಸುವುದಿಲ್ಲ.

- Advertisement -
spot_img
spot_img
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments