Sunday, December 22, 2024
HomeState NewsHubli : ಇನ್ಸ್‌ಪೆಕ್ಟರ್‌ನಿಂದ ಮಹಿಳಾ ಸಿಬ್ಬಂದಿಗಳಿಗೆ ಲೈಂಗಿಕ ಕಿರುಕುಳ.?
spot_img

Hubli : ಇನ್ಸ್‌ಪೆಕ್ಟರ್‌ನಿಂದ ಮಹಿಳಾ ಸಿಬ್ಬಂದಿಗಳಿಗೆ ಲೈಂಗಿಕ ಕಿರುಕುಳ.?

WhatsApp Channel Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ಹುಬ್ಬಳ್ಳಿ : ಎಸ್ಐ ಓರ್ವ ಮಹಿಳಾ ಕಾನ್ಸ್‌ಟೇಬಲ್‌ಗಳಿಗೆ ಲೈಂಗಿಕ ಕಿರುಕುಳ (sexual harassment) ನೀಡಿರುವ ಆರೋಪ ಕೇಳಿ ಬಂದಿದೆ.

ಹಳೆ ಹುಬ್ಬಳ್ಳಿ ಠಾಣೆಯ (Old Hubli Police Station) ಎಸ್‌ಐ ಸುರೇಶ್ ಎನ್ನುವವರ ವಿರುದ್ಧ ಇಂತದ್ದೊಂದು ಆರೋಪ ಕೇಳಿಬಂದಿದ್ದು, ರಾತ್ರಿಯಾದರೆ ಸಾಕು ಮಹಿಳಾ ಸಿಬ್ಬಂದಿಗೆ ವಿಡಿಯೋ ಕಾಲ್ ಮಾಡಿ ಕಿರುಕುಳ ನೀಡುತ್ತಿದ್ದಾನೆ ಎನ್ನಲಾಗಿದೆ.

ಇದನ್ನು ಓದಿ : Health : ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಬೆಳ್ಳುಳ್ಳಿ ತಿನ್ನುತ್ತೀರಾ? ಹಾಗಿದ್ರೆ ಈ ಸುದ್ದಿ ಓದಿ.!

ಮಹಿಳಾ ಸಿಬ್ಬಂದಿಗಳು ಮುಖ್ಯಮಂತ್ರಿ (Chief Minister) ಸಿದ್ದರಾಮಯ್ಯ, ಗೃಹ ಖಾತೆ ಸಚಿವ (home minister) ಡಾ. ಜಿ ಪರಮೇಶ್ವರ್ ಮಹಿಳಾ ಆಯೋಗ ಮತ್ತು ಮಾನವ ಹಕ್ಕುಗಳ ಆಯೋಗಕ್ಕೆ (Women’s Commission and Human Rights Commission) ಪತ್ರ ಬರೆದಿದ್ದಾರೆ ಎಂದು ತಿಳಿದು ಬಂದಿದೆ.

ಇನ್ಸ್‌ಪೆಕ್ಟರ್ ಸುರೇಶ್ ಕಿರುಕುಳಕ್ಕೆ ಬೇಸತ್ತು ಮಹಿಳಾ ಸಿಬ್ಬಂದಿಗಳು ಆತನ ವಿರುದ್ಧ 3 ಪುಟಗಳ ದೂರು ಬರೆದು (Write a 3 page complaint) ಇನ್ಸ್‌ಪೆಕ್ಟರ್ ಕಿರುಕುಳದಿಂದ ಮುಕ್ತಿ ನೀಡಿ ಎಂದು ಮನವಿ ಮಾಡಿದ್ದಾರೆ.

ಇದನ್ನು ಓದಿ : ತಾಕತ್ತಿದ್ದರೆ ನಮ್ಮ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಕಾಂಗ್ರೆಸ್ ಶಾಸಕರು, ಸಚಿವರನ್ನು ವಜಾ ಮಾಡಿ ; ಸ್ವಾಮೀಜಿ.!

ಇನ್ಸ್‌ಪೆಕ್ಟರ್ ವಿಡಿಯೋ ಕಾಲ್ ಮಾಡಿ ನಮ್ಮ ಜೊತೆಗೆ ಕೆಟ್ಟದಾಗಿ ಮಾತನಾಡುತ್ತಾ, ಅಸಹ್ಯವಾಗಿ ಮಾತನಾಡುತ್ತಾರೆ (They speak badly). ಒಂದು ವೇಳೆ ಮಾತನಾಡದಿದ್ದರೆ ನಿರಂತರವಾಗಿ ಕಿರುಕುಳ ನೀಡುತ್ತಾರೆ. ರಜೆ ಕೇಳಲು ಹೋದ್ರೆ ನಮ್ಮ ಸೌಂದರ್ಯದ ಬಗ್ಗೆ ಮಾತನಾಡ್ತಾರೆ. ಈ ಇನ್ಸ್‌ಪೆಕ್ಟರ್ ಸುರೇಶ್‌ನಿಂದ ನಮ್ಮ ಕುಟುಂಬದಲ್ಲಿ ಬಿರುಕು ಮೂಡಿದೆ ಎಂದು ಅಳಲು ತೋಡಿಕೊಂಡಿದ್ದಾರೆ.

ಹಿಂದಿನ ಸುದ್ದಿ : Health : ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಬೆಳ್ಳುಳ್ಳಿ ತಿನ್ನುತ್ತೀರಾ? ಹಾಗಿದ್ರೆ ಈ ಸುದ್ದಿ ಓದಿ.!

ಜನಸ್ಪಂದನ ನ್ಯೂಸ್, ಡೆಸ್ಕ್ : ಅಡಿಗೆ ಮಾಡುವಾಗ ಒಗ್ಗರಣೆ ಹಾಕುವಾಗ ಬೆಳ್ಳುಳ್ಳಿ ತುಂಬಾ ಮುಖ್ಯ. ಇದನ್ನು ತರಕಾರಿಗಳು ಮತ್ತು ದಾಲ್‌ಗಳಿಗೆ ಸೇರಿಸಲಾಗುತ್ತದೆ.

ಕೆಲವರು ಬೆಳ್ಳುಳ್ಳಿ ವಾಸನೆಯನ್ನು ತಡೆದುಕೊಳ್ಳುವುದಿಲ್ಲ. ಆದರೆ ಬೆಳ್ಳುಳ್ಳಿ ಸೇವನೆಯಿಂದ ಅನೇಕ ಅಪಾಯಕಾರಿ ಕಾಯಿಲೆಗಳನ್ನು (Dangerous diseases) ಗುಣಪಡಿಸಬಹುದು ಎಂದು ವೈಜ್ಞಾನಿಕ ಅಧ್ಯಯನಗಳು ತೋರಿಸಿವೆ.

ಇದನ್ನು ಓದಿ : KSFES : ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ.!

ಇದು ದೇಹದಲ್ಲಿ ಸಂಗ್ರಹವಾಗುವ ವಿಷವನ್ನು ತೆಗೆದುಹಾಕುವುದಲ್ಲದೆ ರಕ್ತವನ್ನು ಶುದ್ಧೀಕರಿಸಲು ಮತ್ತು ಖಿನ್ನತೆಯ ವಿರುದ್ಧ ಹೋರಾಡಲು (To purify the blood and fight depression) ಸಹಾಯ ಮಾಡುತ್ತದೆ.

ಹಾಗಾದರೆ ಬೆಳಗ್ಗೆದ್ದು ಬೆಳ್ಳುಳ್ಳಿ ತಿನ್ನೋದ್ರಿಂದ ಆರೋಗ್ಯಕ್ಕೆಷ್ಟು ಪ್ರಯೋಜನವಿದೆ ಗೊತ್ತಾ.?

ಬೆಳ್ಳುಳ್ಳಿ ಕೂದಲು ಉದುರುವುದನ್ನು (hair fall) ತಡೆಯುತ್ತದೆ ಮತ್ತು ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ.

ತೂಕ ನಷ್ಟಕ್ಕೆ (weight loss) ಸಹಾಯ ಮಾಡುತ್ತದೆ. ಅಲ್ಲದೇ ಬೆಳ್ಳುಳ್ಳಿ ದೇಹದ ಕೊಬ್ಬನ್ನು ಕರಗಿಸುತ್ತದೆ.

ಇದನ್ನು ಓದಿ : ಹಾಸ್ಟೆಲ್‌ನಲ್ಲಿ ಹುಟ್ಟುಹಬ್ಬಕ್ಕೆ ಸ್ನೇಹಿತನಿಗೆ ಚಿತ್ರಹಿಂಸೆ ; ಎಂದೂ ನೋಡಿರದ Video ವೈರಲ್.!

ಬೆಳ್ಳುಳ್ಳಿ ಜೀರ್ಣಕಾರಿ ರಸದ ಸ್ರವಿಸುವಿಕೆಯನ್ನು (Secretion of digestive juices) ಹೆಚ್ಚಿಸುತ್ತದೆ. ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಅಲ್ಲದೇ ಅಜೀರ್ಣ ಮತ್ತು ಮಲಬದ್ಧತೆಯಂತಹ ಸಮಸ್ಯೆಗಳನ್ನು ಪರಿಹರಿಸಲು ಸಹಾಯ ಮಾಡುತ್ತದೆ.

ಬೆಳ್ಳುಳ್ಳಿ ಕೆಟ್ಟ ಕೊಲೆಸ್ಟ್ರಾಲ್ (bad cholesterol) ಮಟ್ಟವನ್ನು ಕಡಿಮೆ ಮಾಡುತ್ತದೆ. ಒಳ್ಳೆಯ ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸುತ್ತದೆ. ಇದು ಹೃದ್ರೋಗದ ಅಪಾಯವನ್ನು (Risk of heart disease) ಕಡಿಮೆ ಮಾಡುತ್ತದೆ.

ಬೆಳ್ಳುಳ್ಳಿಯಲ್ಲಿ ಆ್ಯಂಟಿ ಬ್ಯಾಕ್ಟೀರಿಯಾ, ಆ್ಯಂಟಿ ಫಂಗಲ್ ಮತ್ತು ಆ್ಯಂಟಿ ವೈರಲ್ (Anti- bacterial, anti- fungal and anti -viral) ಗುಣಗಳು ಹೇರಳವಾಗಿವೆ. ಶೀತ, ಕೆಮ್ಮು ಮತ್ತು ಜ್ವರದಂತಹ ರೋಗಗಳನ್ನು ತಡೆಯುವುದು.

ಬೆಳ್ಳುಳ್ಳಿಯಲ್ಲಿರುವ ಆಂಟಿಆಕ್ಸಿಡೆಂಟ್‌ಗಳು ಕ್ಯಾನ್ಸರ್ ಕೋಶಗಳ ಬೆಳವಣಿಗೆಯನ್ನು ತಡೆಯುತ್ತದೆ (Prevents the growth of cancer cells).

ಇದನ್ನು ಓದಿ : Health : ಆಮ್ಲೆಟ್ ಅಥವಾ ಬೇಯಿಸಿದ ಮೊಟ್ಟೆ : ಇವೆರಡರಲ್ಲಿ ಆರೋಗ್ಯಕ್ಕೆ ಯಾವುದು ಉತ್ತಮ.?

ಉಸಿರಾಟ ಸಂಬಂಧಿ ಸಮಸ್ಯೆಗಳನ್ನು ತಡೆಯಲು ಬೆಳ್ಳುಳ್ಳಿ ಸಹಾಯ ಮಾಡುತ್ತದೆ.

ಬೆಳ್ಳುಳ್ಳಿಯಲ್ಲಿರುವ ಅಲಿಸಿನ್ ಎಂಬ ಸಂಯುಕ್ತವು (A compound called allicin) ರಕ್ತನಾಳಗಳನ್ನು ಹಿಗ್ಗಿಸುತ್ತದೆ. ಇದರಿಂದ ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ.

ಬೆಳ್ಳುಳ್ಳಿಯಲ್ಲಿರುವ ಉತ್ಕರ್ಷಣ ನಿರೋಧಕಗಳು ಚರ್ಮವನ್ನು ಸುಕ್ಕುಗಳು (Wrinkles the skin) ಮತ್ತು ಕಲೆಗಳಂತಹ ಸಮಸ್ಯೆಗಳಿಂದ ರಕ್ಷಿಸುತ್ತದೆ.

ಬೆಳ್ಳುಳ್ಳಿ ಮಧುಮೇಹಿಗಳಲ್ಲಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು (To control sugar level) ಸಹಾಯ ಮಾಡುತ್ತದೆ

WhatsApp Channel Join Now
Telegram Group Join Now
Instagram Account Follow Now
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments