ಜನಸ್ಪಂದನ ನ್ಯೂಸ್, ನೌಕರಿ : ಉದ್ಯೋಗಾಕಾಂಕ್ಷಿಗಳಿಗೆ ಕೇಂದ್ರ ಸರ್ಕಾರದಿಂದ ಸಿಹಿಸುದ್ದಿ ಬಂದಿದೆ. ಭಾರತೀಯ ರೈಲ್ವೆ ಇಲಾಖೆಯು (RRB) ಟೈಪಿಸ್ಟ್ ಹಾಗೂ ಸ್ಟೇಷನ್ ಮಾಸ್ಟರ್ (NTPC) ಹುದ್ದೆಗಳನ್ನು ಭರ್ತಿ ಮಾಡಲು ಬರೋಬ್ಬರಿ 30,307 ಹುದ್ದೆಗಳಿಗೆ ಅರ್ಜಿ ಆಹ್ವಾನ ನೀಡಿದೆ.
ಈ ಸಂಬಂಧ ರೈಲ್ವೆ ನೇಮಕಾತಿ ಮಂಡಳಿ (RRB) ಅಧಿಕೃತ ಅಧಿಸೂಚನೆ ಪ್ರಕಟಿಸಿದ್ದು, ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಆನ್ಲೈನ್ ಮೂಲಕ 2025ರ ಸೆಪ್ಟೆಂಬರ್ 29ರೊಳಗೆ ಅರ್ಜಿ ಸಲ್ಲಿಸಬಹುದು.
ಗರ್ಭಪಾತ Pill ಸೇವಿಸಿದ ನಂತರ ಅಪ್ರಾಪ್ತೆಯ ಸಾವು ; ಟ್ಯೂಷನ್ ಶಿಕ್ಷಕನ ಬಂಧನ.!
ಹುದ್ದೆಗಳ ವಿವರ :
- ಸಂಸ್ಥೆಯ ಹೆಸರು : ರೈಲ್ವೆ ನೇಮಕಾತಿ ಮಂಡಳಿ (RRB).
- ಪೋಸ್ಟ್ ಹೆಸರು : ಟೈಪಿಸ್ಟ್, ಸ್ಟೇಷನ್ ಮಾಸ್ಟರ್ (NTPC).
- ಒಟ್ಟು ಹುದ್ದೆಗಳು : 30,307.
- ಸಂಬಳ ಶ್ರೇಣಿ : ತಿಂಗಳಿಗೆ ರೂ.29,200 ರಿಂದ ರೂ.35,400/-
- ಉದ್ಯೋಗ ಸ್ಥಳ : ಅಖಿಲ ಭಾರತ.
ಪ್ರಮುಖ ದಿನಾಂಕಗಳು :
- ಅರ್ಜಿ ಸಲ್ಲಿಸಲು ಪ್ರಾರಂಭ : 30 ಆಗಸ್ಟ್ 2025.
- ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 29 ಸೆಪ್ಟೆಂಬರ್ 2025.
“Post Officeನ ಈ ಸ್ಕೀಮ್‌ನಿಂದ ತಿಂಗಳಿಗೆ 9,250 ರೂ.ವರೆಗೂ ನಿಯಮಿತ ಆದಾಯ”.!
ಅರ್ಹತಾ ಮಾನದಂಡ :
- ಶೈಕ್ಷಣಿಕ ಅರ್ಹತೆ : ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಮಂಡಳಿಯಿಂದ ಪದವಿ ಪೂರೈಸಿರಬೇಕು.
- ವಯೋಮಿತಿ : 01 ಜನವರಿ 2025ರಂತೆ ಕನಿಷ್ಠ 18 ವರ್ಷದಿಂದ ಗರಿಷ್ಠ 36 ವರ್ಷ.
- ವಯಸ್ಸಿನ ಸಡಿಲಿಕೆ : RRB ನಿಯಮಾವಳಿಗಳ ಪ್ರಕಾರ.
ಆಯ್ಕೆ ವಿಧಾನ :
- ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT).
- ಸಂದರ್ಶನ.
ಅರ್ಜಿ ಸಲ್ಲಿಸುವ ವಿಧಾನ :
- ಮೊದಲು ಅಧಿಕೃತ ವೆಬ್‌ಸೈಟ್ indianrailways.gov.in ಗೆ ಭೇಟಿ ನೀಡಿ.
- ಪ್ರಕಟಣೆಯನ್ನು ಸಂಪೂರ್ಣ ಓದಿ, ಅರ್ಹತಾ ಮಾನದಂಡ ಪೂರೈಸಿದೆಯೇ ಎಂದು ಪರಿಶೀಲಿಸಿ.
- ಆನ್ಲೈನ್ ಫಾರ್ಮ್ ಭರ್ತಿಗೆ ಮೊದಲು ಸರಿಯಾದ ಇಮೇಲ್ ಐಡಿ, ಮೊಬೈಲ್ ಸಂಖ್ಯೆ ಹಾಗೂ ಅಗತ್ಯ ದಾಖಲೆಗಳು (ID Proof, ವಿದ್ಯಾರ್ಹತೆ, ರೆಸ್ಯೂಮ್ ಇತ್ಯಾದಿ) ಸಿದ್ಧವಾಗಿರಲಿ.
- ಅರ್ಜಿ ನಮೂನೆಯನ್ನು ಭರ್ತಿ ಮಾಡಿ, ಅಗತ್ಯ ದಾಖಲೆಗಳು ಹಾಗೂ ಫೋಟೋ ಅಪ್ಲೋಡ್ ಮಾಡಿ.
- ಅನ್ವಯಿಸಿದರೆ, ವರ್ಗದ ಪ್ರಕಾರ ಅರ್ಜಿ ಶುಲ್ಕ ಪಾವತಿಸಿ.
- ಕೊನೆಯಲ್ಲಿ ಸಲ್ಲಿಸು ಬಟನ್ ಒತ್ತಿ. ಅರ್ಜಿ ಸಂಖ್ಯೆ ಅಥವಾ ರಿಜಿಸ್ಟ್ರೇಷನ್ ಐಡಿಯನ್ನು ಭದ್ರಪಡಿಸಿಕೊಳ್ಳುವುದು ಮುಖ್ಯ.
Brain Stroke : ಈ ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ ; ಸಮಯಕ್ಕೆ ಚಿಕಿತ್ಸೆಯಿಂದ ಜೀವ ಉಳಿಸಬಹುದು.!
ಗಮನಿಸಿ : ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮೊದಲು ಅಧಿಕೃತ (RRB) ಅಧಿಸೂಚನೆಯನ್ನು ಓದುವುದು ಅಗತ್ಯ. ಅರ್ಜಿ ಪ್ರಕ್ರಿಯೆ ಸಂಪೂರ್ಣವಾಗಿ ಆನ್ಲೈನ್ ಮೂಲಕವೇ ನಡೆಯಲಿದೆ.
Accident : KSRTC ಬಸ್ ಪಲ್ಟಿ ; 15 ಪ್ರಯಾಣಿಕರಿಗೆ ಗಾಯ ; ಪಂಢರಾಪುರ ಪಾದಯಾತ್ರೆ ವೇಳೆ ಕಾರು ಹರಿದು 6 ಭಕ್ತರಿಗೆ ಗಾಯ.!
ಜನಸ್ಪಂದನ ನ್ಯೂಸ್, ರಾಯಚೂರು/ಬೆಳಗಾವಿ : ರಾಯಚೂರು ನಗರ ಹೊರವಲಯದ ಸಾತ್ ಮೈಲ್ ಕ್ರಾಸ್ ಬಳಿ ಶುಕ್ರವಾರ (ಸೆಪ್ಟೆಂಬರ್ 26) ಬೆಳಗ್ಗೆ 7 ಗಂಟೆಯ ಸುಮಾರಿಗೆ KSRTC ಸ್ಲೀಪರ್ ಕೋಚ್ ಬಸ್ ಪಲ್ಟಿಯಾದ (Accident) ಘಟನೆ ಸಂಭವಿಸಿದೆ.
ಈ ಅಪಘಾತ (Accident) ದಲ್ಲಿ ಕನಿಷ್ಠ 15 ಪ್ರಯಾಣಿಕರು ಗಾಯಗೊಂಡಿದ್ದು, ಅವರಲ್ಲಿ ಓರ್ವನ ಕಾಲಿಗೆ ಗಂಭೀರ ಗಾಯವಾಗಿದೆ.
“ಮಧುಮೇಹವನ್ನು ಬುಡದಿಂದಲೇ ಗುಣಪಡಿಸುವ ಶಕ್ತಿ ಹೊಂದಿದ ಈ ಹಣ್ಣು ; ವರ್ಷಕ್ಕೊಮ್ಮೆ ತಿಂದರೂ Blood Sugar ನಿಯಂತ್ರಣದಲ್ಲಿರುತ್ತದೆ.!”
ಬಸ್ ಪಲ್ಟಿಯಾದ ಘಟನೆ :
ದಾವಣಗೆರೆಯಿಂದ ರಾಯಚೂರು ಕಡೆಗೆ ಬರುತ್ತಿದ್ದ ಬಸ್, ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಜಮೀನಿಗೆ ಉರುಳಿ ಬಿದ್ದಿದೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ಚಾಲಕನ ನಿದ್ದೆ ಮಂಪರು ಹಾಗೂ ರಸ್ತೆಗೆ ಅಡ್ಡ ಬಂದ ನಾಯಿಯನ್ನು ತಪ್ಪಿಸಲು ಪ್ರಯತ್ನ ಮಾಡಿದಾಗ ಬಸ್ ಪಲ್ಟಿಯಾಗಿದೆ ಎನ್ನಲಾಗಿದೆ.
ಅಪಘಾತ (Accident) ದ ವೇಳೆ ಬಸ್‌ನಲ್ಲಿ 10-15 ಮಂದಿ ಪ್ರಯಾಣಿಕರಿದ್ದು, ಬಹುತೇಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಓರ್ವ ಪ್ರಯಾಣಿಕನ ಕಾಲು ಬಸ್‌ನಲ್ಲಿ ಸಿಲುಕಿಕೊಂಡಿದ್ದು, ಅಗ್ನಿಶಾಮಕ ಸಿಬ್ಬಂದಿ ಜಿಟಿ ಜಿಟಿ ಮಳೆಯ ನಡುವೆಯೇ ರಕ್ಷಣಾ ಕಾರ್ಯಾಚರಣೆ ನಡೆಸಿ ಅವರನ್ನು ಸುರಕ್ಷಿತವಾಗಿ ಹೊರತೆಗೆದಿದ್ದಾರೆ.
“Post Officeನ ಈ ಸ್ಕೀಮ್‌ನಿಂದ ತಿಂಗಳಿಗೆ 9,250 ರೂ.ವರೆಗೂ ನಿಯಮಿತ ಆದಾಯ”.!
ಗಾಯಾಳುಗಳನ್ನು ಅಂಬುಲೆನ್ಸ್ ಮೂಲಕ ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ನಂತರ ಕ್ರೇನ್ ಮೂಲಕ ಬಸ್ ಎತ್ತಲಾಗಿದೆ. ಈ ಘಟನೆ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಪಂಢರಾಪುರ ಪಾದಯಾತ್ರೆಯಲ್ಲಿ ಅಪಘಾತ :
ಇನ್ನೊಂದು ಘಟನೆಯಲ್ಲಿ, ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಹಿಡಕಲ್ ಮೂಲದ ಭಕ್ತರು ಪಂಢರಾಪುರಕ್ಕೆ ಪಾದಯಾತ್ರೆ ಹೊರಟಿದ್ದ ವೇಳೆ ಹಾರುಗೇರಿ ಕ್ರಾಸ್ ಬಳಿ ಈ ದುರ್ಘಟನೆ (Accident) ಸಂಭವಿಸಿದೆ.

ಅಥಣಿ ಮಾರ್ಗವಾಗಿ ಹೋಗುತ್ತಿದ್ದ ಯಾತ್ರಿಕರ ಮೇಲೆ ಒಂದು ಕಾರು ಹರಿದ ಪರಿಣಾಮ ಏಳು ಭಕ್ತರು ಗಾಯಗೊಂಡಿದ್ದಾರೆ.
ಕತ್ತೆಕಿರುಬವ ತಪ್ಪಿಸಲು ಹೋಗಿ ಪಲ್ಟಿಯಾದ ಪೊಲೀಸ್ ಜೀಪ್ ; ASI ಸಾವು.!
ಕಾರಿನ ಚಾಲಕನ ಬೇಜವಾಬ್ದಾರಿಯೇ ಅಪಘಾತ (Accident) ಕ್ಕೆ ಕಾರಣ ಎನ್ನಲಾಗಿದ್ದು, ಗಾಯಾಳುಗಳನ್ನು ಹಾರೂಗೇರಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ. ಅದರಲ್ಲಿ ಇಬ್ಬರಿಗೆ ಗಂಭೀರವಾದ ಗಾಯಗಳಾದ ಹಿನ್ನಲೆಯಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ಬೆಳಗಾವಿಗೆ ರವಾನಿಸಲಾಗಿದೆ.
ಒಂದೇ ದಿನ ಎರಡು ಅಪಘಾತಗಳು ಸಂಭವಿಸಿದ ಪರಿಣಾಮ ಸ್ಥಳೀಯರು ಆತಂಕಗೊಂಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.