Tuesday, September 16, 2025

Janaspandhan News

HomeJobRRB : ಭಾರತೀಯ ರೈಲ್ವೆ ಇಲಾಖೆಯಲ್ಲಿ ಸ್ಟೇಷನ್ ಮಾಸ್ಟರ್ ಸೇರಿ 30,307 ಹುದ್ದೆಗಳಿಗೆ ಅರ್ಜಿ ಆಹ್ವಾನ.!
spot_img
spot_img
spot_img

RRB : ಭಾರತೀಯ ರೈಲ್ವೆ ಇಲಾಖೆಯಲ್ಲಿ ಸ್ಟೇಷನ್ ಮಾಸ್ಟರ್ ಸೇರಿ 30,307 ಹುದ್ದೆಗಳಿಗೆ ಅರ್ಜಿ ಆಹ್ವಾನ.!

- Advertisement -

ಜನಸ್ಪಂದನ ನ್ಯೂಸ್, ನೌಕರಿ : ಭಾರತೀಯ ರೈಲ್ವೆ ಇಲಾಖೆ (RRB) ಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ಈ ಅರ್ಜಿ ಸಲ್ಲಿಸಬಹುದು.

ಈ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಹೇಗೆ ಆಯ್ಕೆ ಮಾಡಲಾಗುತ್ತದೆ, ವಯಸ್ಸಿನ ಅವಶ್ಯಕತೆಗಳು, ಶೈಕ್ಷಣಿಕ ಅರ್ಹತೆಗಳು, ಶುಲ್ಕಗಳು ಮತ್ತು ಇತರ ಪ್ರಮುಖ ವಿವರಗಳ ಕುರಿತು ಅಧಿಸೂಚನೆಯಲ್ಲಿ ನೀವು ಹೆಚ್ಚಿನ ಮಾಹಿತಿಯನ್ನು ಪಡೆಯಬಹುದು.

ರೈಲ್ವೆ (RRB) ನೇಮಕಾತಿ ಮಂಡಳಿ ನೇಮಕಾತಿ ಮಾಹಿತಿ :
  • ಒಟ್ಟು ಹುದ್ದೆಗಳು : 30,307.
  • ಹುದ್ದೆಗಳ ಹೆಸರುಗಳು : ಟೈಪಿಸ್ಟ್, ಸ್ಟೇಷನ್ ಮಾಸ್ಟರ್ (NTPC) ಮತ್ತು ಇತರೆ.
  • ಉದ್ಯೋಗ ಸ್ಥಳ : ಭಾರತದೆಲ್ಲೆಡೆ.
  • ಅಪ್ಲಿಕೇಶನ್ ವಿಧಾನ : ಆನ್‌ಲೈನ್.
ಇದನ್ನು ಓದಿ : Kidney : “ಬೆಳಿಗ್ಗೆಯ ಈ 4 ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ : ಅವು ಮೂತ್ರಪಿಂಡದ ಸಮಸ್ಯೆಯ ಆರಂಭಿಕ ಸೂಚನೆಗಳಾಗಿರಬಹುದು.!”
ಹುದ್ದೆಗಳ ವಿವರ :
  • ಮುಖ್ಯ ವಾಣಿಜ್ಯ ಮತ್ತು ಟಿಕೆಟ್ ಮೇಲ್ವಿಚಾರಕರು : 6,235.
  • ಸ್ಟೇಷನ್ ಮಾಸ್ಟರ್ : 5,623.
  • ಸರಕು ರೈಲು ವ್ಯವಸ್ಥಾಪಕ : 3,562.
  • ಜೂನಿಯರ್ ಅಕೌಂಟ್ ಅಸಿಸ್ಟೆಂಟ್ ಮತ್ತು ಟೈಪಿಸ್ಟ್ : 7,520.
  • ಹಿರಿಯ ಗುಮಾಸ್ತ ಮತ್ತು ಬೆರಳಚ್ಚುಗಾರ : 7,367.
ವೇತನ ಶ್ರೇಣಿ :

ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯೃಥಿಗಳಿಗೆ ರೂ.29,200 ರಿಂದ ರೂ.35,400/- ವರೆಗೆ ಪ್ರತಿ ತಿಂಗಳು ವೇತನ ನೀಡಲಾಗುತ್ತದೆ (ಅಧಿಸೂಚನೆ ಪ್ರಕಾರ).

ವಯೋಮಿತಿ :
  • ಅಭ್ಯರ್ಥಿಗಳು ಕನಿಷ್ಠ : 18 ವರ್ಷ ಮತ್ತು
  • ಅಭ್ಯರ್ಥಿಗಳು ಗರಿಷ್ಠ : 36 ವರ್ಷ ಹೊಂದಿರಬೇಕು
ಇದನ್ನು ಓದಿ : BOB ನೇಮಕಾತಿ : 2,500 ಲೋಕಲ್ ಬ್ಯಾಂಕ್ ಆಫೀಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನ.!
ಶೈಕ್ಷಣಿಕ ಅರ್ಹತೆ :

RRB ಯ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಯಾವುದಾದರೂ ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ ಪದವಿ (Degree) ಪೂರ್ಣಗೊಳಿಸಿರಬೇಕು.

ಆಯ್ಕೆ ವಿಧಾನ :
  1. ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT).
  2. ವೈದ್ಯಕೀಯ ಪರೀಕ್ಷೆ.
ಅರ್ಜಿ ಸಲ್ಲಿಸುವ ವಿಧಾನ :
  1. ಅಧಿಕೃತ (RRB) ವೆಬ್‌ಸೈಟ್‌ಗೆ ಭೇಟಿ ನೀಡಿ.
  2. ಅಧಿಸೂಚನೆಯನ್ನು Download ಮಾಡಿ ಮತ್ತು ಸಂಪೂರ್ಣವಾಗಿ ಓದಿ.
  3. ಆನ್‌ಲೈನ್ ಅಪ್ಲಿಕೇಶನ್ ಲಿಂಕ್ ಅನ್ನು ಕ್ಲಿಕ್ ಮಾಡಿ.
  4. ಅರ್ಜಿ Formನ್ನು ಸರಿಯಾಗಿ ಭರ್ತಿ ಮಾಡಿ.
  5. ಅಗತ್ಯವಿದ್ದರೆ ಅರ್ಜಿ ಶುಲ್ಕವನ್ನು ಪಾವತಿಸಿ.
  6. Passport ಗಾತ್ರದ ಫೋಟೋ ಹಾಗೂ ಸಹಿಯನ್ನು Download ಮಾಡಿ.
  7. ಎಲ್ಲಾ ವಿವರಗಳನ್ನು ಪರಿಶೀಲಿಸಿ ಹಾಗೂ ಅರ್ಜಿಯನ್ನು ಸಲ್ಲಿಸಿ.
  8. ಕೊನೆಗೆ ಅರ್ಜಿಯ ಪ್ರತಿಯನ್ನು ಮುದ್ರಿಸಿ (Print) ಇಟ್ಟುಕೊಳ್ಳಿ.
ಇದನ್ನು ಓದಿ : IB : 10th ಪಾಸಾದವರಿಗೆ ಗುಪ್ತಚರ ಇಲಾಖೆಯಲ್ಲಿ 4,987 ಹುದ್ದೆಗಳ ನೇಮಕಾತಿ.!
ಪ್ರಮುಖ ದಿನಾಂಕಗಳು :
  • ಅರ್ಜಿಯ ಆರಂಭ ದಿನಾಂಕ : 30 ಆಗಸ್ಟ್ 2025.
  • ಅರ್ಜಿಯ ಕೊನೆದಿನ : 29 ಸೆಪ್ಟೆಂಬರ್ 2025.
ಪ್ರಮುಖ ಲಿಂಕ್‌ಗಳು :

Disclaimer : This article is based on reports and information available on the internet. Janaspandhan News is not affiliated with it and is not responsible for it.


“ಈ ಲಕ್ಷಣಗಳು ಕಂಡುಬಂದರೆ ನಿಮ್ಮ Kidney ಅಪಾಯದಲ್ಲಿದೆ ಎಂದೇ ಅರ್ಥ.!”

Kidney

ಜನಸ್ಪಂದನ ನ್ಯೂಸ್, ಆರೋಗ್ಯ : ಮೂತ್ರಪಿಂಡ (Kidney) ಗಳು ನಮ್ಮ ದೇಹದಲ್ಲಿ ಉಂಟಾಗುವ ಕಶ್ಮಲಗಳನ್ನು ಶೋಧಿಸುವ ಪ್ರಮುಖ ಅಂಗಾಂಗಗಳಲ್ಲೊಂದು. ರಕ್ತದಲ್ಲಿರುವ ತ್ಯಾಜ್ಯಗಳನ್ನು ಮತ್ತು ಅಗತ್ಯವಿಲ್ಲದ ದ್ರವಗಳನ್ನು ಶುದ್ಧಗೊಳಿಸಿ, ಅವುಗಳನ್ನು ಮೂತ್ರದ ಮೂಲಕ ಹೊರಹಾಕುವ ಕಾರ್ಯ ಈ ಅಂಗಾಂಗ (Kidney) ಗಳು ನಿರ್ವಹಿಸುತ್ತವೆ.

ಒಂದು ವೇಳೆ ಮೂತ್ರಪಿಂಡ (Kidney) ಗಳು ಸರಿಯಾಗಿ ಕಾರ್ಯನಿರ್ವಹಿಸದಿದ್ದರೆ, ದೇಹದಲ್ಲಿ ಕಶ್ಮಲಗಳು ಸಂಗ್ರಹವಾಗಲು ಆರಂಭವಾಗುತ್ತವೆ. ಇದು ವಿವಿಧ ಆರೋಗ್ಯ ಸಮಸ್ಯೆಗಳಿಗೆ ದಾರಿ ಮಾಡಿಕೊಡಬಹುದು.

ಇದನ್ನು ಓದಿ : Girl : ಶಾಲೆಯಿಂದ ಮನೆಗೆ ಹೊರಟ 10 ವರ್ಷದ ಬಾಲಕಿ ಅಪಹರಿಸಿ ದೌರ್ಜನ್ಯಕ್ಕೆ ಯತ್ನ.!

ಈ ರೀತಿಯ ಸ್ಥಿತಿಯನ್ನು ದೀರ್ಘಕಾಲದ ಮೂತ್ರಪಿಂಡ (Kidney) ಕಾಯಿಲೆ ಅಥವಾ ಕ್ರೋನಿಕ್ ಕಿಡ್ನಿ ಡಿಸೀಸ್ (CKD) ಎಂದು ಕರೆಯಲಾಗುತ್ತದೆ.

ಇದು ನಿಧಾನವಾಗಿ ಬೆಳೆಯುವ ರೋಗವಾಗಿದ್ದು, ಆರಂಭಿಕ ಹಂತದಲ್ಲಿಯೇ ಗುರುತಿಸಿದರೆ ಪರಿಣಾಮಕಾರಿ ಚಿಕಿತ್ಸೆ ನೀಡಲು ಸಾದ್ಯವಾಗಬಹುದು.

ಇದನ್ನು ಓದಿ : DRDO ನೇಮಕಾತಿ 2025 : 148 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ.!
ಇವು ಮೂತ್ರಪಿಂಡ (Kidney) ವೈಫಲ್ಯವನ್ನು ಸೂಚಿಸಬಹುದಾದ ಕೆಲವು ಪ್ರಮುಖ ಸಂಕೇತಗಳು :
1. ಮೂತ್ರದಲ್ಲಿ ಬದಲಾವಣೆಗಳು :
  • ಸಾಮಾನ್ಯಕ್ಕಿಂತ ಹೆಚ್ಚು ಅಥವಾ ಕಡಿಮೆ ಪ್ರಮಾಣದಲ್ಲಿ ಮೂತ್ರ ವಿಸರ್ಜನೆ.
  • ರಾತ್ರಿಯ ವೇಳೆ ಮಿಕ್ಕಷ್ಟು ಬಾರಿ ಮೂತ್ರದ ಅವಶ್ಯಕತೆ.
  • ಮೂತ್ರದಲ್ಲಿ ನೊರೆ, ರಕ್ತ ಅಥವಾ ಬದಲಾಗಿದ ಬಣ್ಣ.
  • ಮೂತ್ರ ವಿಸರ್ಜನೆ ವೇಳೆ ಗಂಭೀರ ತೊಂದರೆ.
2. ದೇಹದ ಅವಯವಗಳಲ್ಲಿ ಊತ :
  • ಕಾಲುಗಳು, ಪಾದಗಳು, ಕೈಗಳು ಮತ್ತು ಕಣ್ಣುಗಳ ಸುತ್ತಲೂ ಉಂಟಾಗುವ ಊತ.
  • ದೇಹದಲ್ಲಿ ನೀರಿನ ಶೇಖರಣೆಯಿಂದ ಉಂಟಾಗುವ ಶ್ವಾಸದ ತೊಂದರೆ.
ಇದನ್ನು ಓದಿ : Astrology : ಹೇಗಿದೆ ಗೊತ್ತಾ.? ಜುಲೈ 20 ರ ದ್ವಾದಶ ರಾಶಿಗಳ ಫಲಾಫಲ.!
3. ದಣಿವು ಮತ್ತು ಅಶಕ್ತತತೆ :
  • ಮೂತ್ರಪಿಂಡಗಳ ಕಾರ್ಯ ಕ್ಷೀಣಗೊಂಡಾಗ, ರಕ್ತಹೀನತೆ ಉಂಟಾಗಬಹುದು.
  • ಕಡಿಮೆ ಶ್ರಮದಲ್ಲಿಯೇ ದಣಿವು ಅನುಭವಿಸುವುದು.
4. ತುರಿಕೆ ಮತ್ತು ಸ್ನಾಯು ಸೆಳೆತ :
  • ರಕ್ತದಲ್ಲಿ ತ್ಯಾಜ್ಯ ಪದಾರ್ಥಗಳು ಮತ್ತು ಖನಿಜಗಳ ಅಸಮತೋಲನದಿಂದ ತುರಿಕೆ.
  • ವಿಶೇಷವಾಗಿ ರಾತ್ರಿ ವೇಳೆ ಹೆಚ್ಚು ಕಿರಿಕಿರಿ.
  • ಕಾಲುಗಳಲ್ಲಿ ಸ್ನಾಯು ಸೆಳೆತ ಮತ್ತು ನೋವು.
5. ಇತರ ಲಕ್ಷಣಗಳು :
  • ಊಟದ ಮೇಲೆ ಆಸೆ ಕಡಿಮೆಯಾಗುವುದು.
  • ವಾಕರಿಕೆ ಅಥವಾ ಒಮ್ಮೆ ಎದೆಯಲ್ಲಿ ತೀವ್ರ ಒತ್ತಡ.
  • ಏಕಾಏಕಿ ತೂಕ ಇಳಿಕೆ ಅಥವಾ ಹೆಚ್ಚಳ.
ಇದನ್ನು ಓದಿ : ಕೋರ್ಟ್ ಆವರಣದಲ್ಲೇ ಪರಸ್ಪರ ಜುಟ್ಟು ಹಿಡಿದು ಎಳೆದಾಡಿಕೊಂಡ ಮಹಿಳಾ Lawyers ; ವಿಡಿಯೋ.!

ಆರೋಗ್ಯ ಸಲಹೆ : ಮೇಲ್ಕಂಡ ಲಕ್ಷಣಗಳಲ್ಲಿ ಯಾವುದಾದರೂ ಕಾಣಿಸಿದರೆ ವೈದ್ಯರ ಸಲಹೆ ಪಡೆಯುವುದು ಅತ್ಯಂತ ಅಗತ್ಯ. ಆರಂಭಿಕ ಹಂತದಲ್ಲಿಯೇ ಚಿಕಿತ್ಸೆ ಪ್ರಾರಂಭಿಸಿದರೆ, ಮೂತ್ರಪಿಂಡ (Kidney) ದ ಸಮಸ್ಯೆಗಳನ್ನು ನಿಯಂತ್ರಣದಲ್ಲಿರಿಸಬಹುದು.

Kidney : In humans, the kidneys are two reddish-brown bean-shaped blood-filtering organs that are a multilobar, multipapillary form of mammalian kidneys, usually without signs of external lobulation.

> Disclaimer : ಈ ಲೇಖನದ ಉದ್ದೇಶ ಅರಿವು ಮೂಡಿಸುವುದು ಮಾತ್ರ. ಯಾವುದೇ ಚಿಕಿತ್ಸೆಯನ್ನು ಆರಂಭಿಸುವ ಮೊದಲು ನುರಿತ ವೈದ್ಯರ ಸಲಹೆ ಅನಿವಾರ್ಯ. ಇಲ್ಲಿ ನೀಡಲಾದ ಮಾಹಿತಿ ಜನಸ್ಪಂದನ ನ್ಯೂಸ್‌ನ ದೃಷ್ಟಿಕೋಣವಲ್ಲ, ಇದು ವೈದ್ಯಕೀಯ ಸಲಹೆಯಾಗಿ ಪರಿಗಣಿಸಬಾರದು.

- Advertisement -
spot_img
spot_img
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments