Thursday, September 19, 2024
spot_img
spot_img
spot_img
spot_img
spot_img
spot_img
spot_img

ಅಕ್ರಮ ಸಂಬಂಧ ಶಂಕೆ : ಪತ್ನಿಯ ರುಂಡ ಕತ್ತರಿಸಿ ಊರೆಲ್ಲ ಸುತ್ತಾಡಿದ ಸೈಕೋ ಗಂಡ ; Video Viral.!

spot_img
WhatsApp Group Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ಡೆಸ್ಕ್ : ವ್ಯಕ್ತಿಯೋರ್ವ ತನ್ನ ಪತ್ನಿ ಅಕ್ರಮ ಸಂಬಂಧ ಹೊಂದಿದ್ದಾಳೆಂದು ಶಂಕಿಸಿ ಆಕೆಯ ಶಿರಚ್ಛೇದ ಮಾಡಿರುವ ಆಘಾತಕಾರಿ (shocking) ಘಟನೆ ಉತ್ತರಪ್ರದೇಶದ ಬಾರಾಬಂಕಿಯ ಫತೇಪುರ್ ಕೊಟ್ವಾಲಿ ಪ್ರದೇಶದ ಬಸಾರಾ ಗ್ರಾಮದಲ್ಲಿ ನಡೆದಿದೆ ಎಂದು ವರದಿಯಾಗಿದೆ.

ಆರೋಪಿ ಅನಿಲ್ ಕನೌಜಿಯ ರಾಜಗೀರ್ ಜೀವನೋಪಾಯಕ್ಕಾಗಿ (Livelihood) ಕೂಲಿ ಕೆಲಸ ಮಾಡುತ್ತಿದ್ದು, ಎಂಟು ವರ್ಷಗಳ ಹಿಂದೆ ವಂದನಾಳನ್ನು (27) ವಿವಾಹವಾಗಿದ್ದನು.

ಇದನ್ನು ಓದಿ : ಗೋಮಾತೆಗೆಯೇ ಹಾಲುಣಿಸಿದ ಶ್ವಾನ ; photo ವೈರಲ್.!

ಇತ್ತೀಚಿಗೆ ವಂದನಾ ತಮ್ಮ ಸಂಬಂಧಿಕರ (relation’s) ಮದುವೆಗೆ ಹೋಗಿದ್ದಳು. ಅಲ್ಲಿ ಆಕೆ ಮತ್ತೊಬ್ಬ ವ್ಯಕ್ತಿಯ ಜೊತೆ ಮಾತನಾಡಿರುವುದನ್ನು ಪತಿ ಗಮನಿಸಿದ್ದಾನೆ.

ಇದರಿಂದ ಸಿಟ್ಟಿಗೆದ್ದ ಆರೋಪಿ ಶುಕ್ರವಾರ ಬೆಳಗ್ಗೆ 9:30ರ ಸುಮಾರಿಗೆ ಪತ್ನಿಯೊಂದಿಗೆ ಗಲಾಟೆ ಮಾಡಿದ್ದು, ಪತ್ನಿಯ ಮೇಲೆ ಹಲ್ಲೆ ಸಹ ನಡೆಸಿದ್ದಾನೆ. ಈ ವೇಳೆ ಗಂಭೀರವಾಗಿ ಗಾಯಗೊಂಡಿದ್ದ (serious injuries) ಆಕೆಯ ತಲೆ ಕಡಿದ ಆರೋಪಿ ಬಳಿಕ ಅದನ್ನು ಹಿಡಿದುಕೊಂಡು ಗ್ರಾಮದ ರಸ್ತೆಯ ತುಂಬೆಲ್ಲಾ ಓಡಾಡಿದ್ದಾನೆ.

ಆತ ತನ್ನ ಹೆಂಡತಿಯ ತಲೆ ಹಿಡಿದು ರಸ್ತೆಯಲ್ಲಿ ಸುತ್ತಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ (social media) ವೈರಲ್​ ಆಗಿದೆ.

ಇದನ್ನು ಓದಿ : Lokayukta trap : ಲೋಕಾಯುಕ್ತ ಬಲೆಗೆ ಬಿದ್ದ ಇನ್ಸ್‌ಪೆಕ್ಟರ್.!

ಇದನ್ನು ಗಮನಿಸಿದ ಗ್ರಾಮಸ್ಥರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ (postmortem examination) ರವಾನಿಸಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ ಎಂದು ವರದಿಯಾಗಿದೆ.

WhatsApp Group Join Now
Telegram Group Join Now
Instagram Account Follow Now
spot_img
spot_img
- Advertisment -spot_img