Friday, January 24, 2025
HomeState NewsLokayukta ದಾಳಿ ವೇಳೆ ಬಯಲಾಯ್ತು ಅಸಲಿ ಸತ್ಯ.!
spot_img
spot_img
spot_img
spot_img

Lokayukta ದಾಳಿ ವೇಳೆ ಬಯಲಾಯ್ತು ಅಸಲಿ ಸತ್ಯ.!

WhatsApp Channel Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ಬೆಂಗಳೂರು : ಅಧಿಕಾರಿಗಳ ಗೈರು, ಲಂಚಕ್ಕೆ ಬೇಡಿಕೆ ಹಾಗೂ ನಿಧಾನಗತಿಯ ಕೆಲಸದ (Absence of officers, demands for bribes and slow work) ಬಗ್ಗೆ ದೂರು ಬಂದ ಹಿನ್ನಲೆ ಬಿಬಿಎಂಪಿ (BBMP) ಕಚೇರಿಗಳ‌ ಮೇಲೆ ಉಪಲೋಕಾಯುಕ್ತ ವೀರಪ್ಪ ದಿಢೀರ್ (suddenly) ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ನಗರದ ಲಾಲ್​ಬಾಗ್​ ರಸ್ತೆ, ಸೌತೆಂಡ್ ಸರ್ಕಲ್ ಹಾಗೂ ಜಯನಗರ ಸೌತ್ ಜೋನ್ ಬಳಿಯ ಬಿಬಿಎಂಪಿ ಕಚೇರಿಗೆ ಭೇಟಿ ನೀಡಿ ಪರಿಶೀಲನೆ ಮಾಡಿದರು.

ಇದನ್ನು ಓದಿ : 7 ಮದುವೆ ಮುಚ್ಚಿಟ್ಟು ಮತ್ತೆ ಮದುವೆಯಾಗಿದ್ದ Lady ; ವಿಚಾರ ತಿಳಿದು ಪತಿ ಮಾಡಿದ್ದೇನು ಗೊತ್ತಾ.?

ಈ ವೇಳೆ ಸಿಬ್ಬಂದಿಗಳು ಗೈರಾಗಿದ್ದರು. ಅಮ್ಮನ ಬದಲು ಮಗನೋರ್ವ ಕೆಲಸಕ್ಕೆ ಹಾಜರಾಗಿದ್ದರು (Son attended work instead of mother). ಇದನ್ನು ಕಂಡು ಲೋಕಾಯುಕ್ತ ಅಧಿಕಾರಿಗಳ ತಂಡವೇ ಕ್ಷಣ ಮಾತ್ರ ಶಾಕ್ ಆದರು.

ಬಿಬಿಎಂಪಿ ಕಚೇರಿಯಲ್ಲಿ ಕೇಸ್ ವರ್ಕರ್ ಕವಿತಾ ಬದಲು ಅವರ ಮಗ ನವೀನ್ ಹಾಜರಾಗಿದ್ದರು ಎಂದು ತಿಳಿದು ಬಂದಿದೆ.

ಇದನ್ನು ಓದಿ : South Central Railway ಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ.!

ಅಲ್ಲದೇ ನಿಯಮ ಮೀರಿ (Breaking the rules) ಮಗನ ಜೊತೆ ಸಹಾಯಕ್ಕೆ ಗೀತಾ ಎಂಬುವವರನ್ನು ಸಹಾಯಕಿಯನ್ನಾಗಿ ಕವಿತಾ ನೇಮಿಸಿರುವ ವಿಷಯ ಬೆಳಕಿಗೆ ಬಂದಿದೆ.

ಇನ್ನೂ ಲೋಕಾಯುಕ್ತ ಅಧಿಕಾರಿಗಳು ಲಾಲ್​ಬಾಗ್ ರಸ್ತೆಯ ಕಚೇರಿ ಭೇಟಿ ನೀಡಿದ ವೇಳೆ ಅಧಿಕಾರಿಗಳು ಇರಲಿಲ್ಲ. ವಿಚಾರಿಸಿದರೆ, ವೈಕುಂಠ ಏಕಾದಶಿ ನಿಮಿತ್ತ ದೇವಸ್ಥಾನಕ್ಕೆ ಹೋಗಿದ್ದಾರೆಂದು ಕಚೇರಿಯ ಸಿಬ್ಬಂದಿ ಉತ್ತರಿಸಿದ್ದಾರೆ.

ಹಿಂದಿನ ಸುದ್ದಿ : 7 ಮದುವೆ ಮುಚ್ಚಿಟ್ಟು ಮತ್ತೆ ಮದುವೆಯಾಗಿದ್ದ ಲೇಡಿ ; ವಿಚಾರ ತಿಳಿದು ಪತಿ ಮಾಡಿದ್ದೇನು ಗೊತ್ತಾ.?

ಜನಸ್ಪಂದನ ನ್ಯೂಸ್, ಬೆಂಗಳೂರು : ಬೆಂಗಳೂರಿನ ಬಸವೇಶ್ವರನಗರ ಠಾಣೆಯಲ್ಲಿ, ಏಳು ಮದುವೆಯಾಗಿದ್ದ (A woman who had seven marriages) ವಿಚಾರ ಮುಚ್ಚಿಟ್ಟ ಕಿಲಾಡಿ ಲೇಡಿ, ಎಂಟನೇ ಮದುವೆಯಾಗಿ ಪತಿಯ ಮನೆಯಲ್ಲಿದ್ದ ನಗದು, ಚಿನ್ನಾಭರಣ ದೋಚಿ ಆತನ ವಿರುದ್ದವೇ ಸುಳ್ಳು ಪ್ರಕರಣ ದಾಖಲಿಸಿದ ಘಟನೆ ನಡೆದಿದೆ.

ಇದನ್ನು ಓದಿ : ಜಾತ್ರೆಯಲ್ಲಿ ರೊಚ್ಚಿಗೆದ್ದು ಜನರನ್ನು ಸೊಂಡಿಲಿನಿಂದ ಎತ್ತಿ ಬಿಸಾಕಿದ ಆನೆ ; Shocking ವಿಡಿಯೋ ಇಲ್ಲಿದೆ.!

ಸುಳ್ಳು ಪ್ರಕರಣ (false case) ದಾಖಲಿಸಿದ ಆರೋಪದಡಿ ಮಹಿಳೆ ಸೇರಿ ನಾಲ್ವರ ವಿರುದ್ದ ಪ್ರಕರಣ ದಾಖಲಾಗಿದೆ.

ಮೋಸ ಹೋದ ರಾಮ ಕೃಷ್ಣ (62) ಅವರು ನ್ಯಾಯಾಲಯಕ್ಕೆ ಖಾಸಗಿ ದೂರು ನೀಡಿದ್ದರು. ನ್ಯಾಯಾಲಯದ ಸೂಚನೆ ಮೇರೆಗೆ ಮಂಡ್ಯ ಜಿಲ್ಲೆ ಮದ್ದೂರು ಟೌನ್‌ನ (Maddur Town of Mandya District) ಎಚ್. ಎಂ. ವಿಜಯಲಕ್ಷ್ಮಿ (54), ಮಂಡ್ಯದ ರೇಖಾ (40), ವನಜಾ (45) ಮತ್ತು ನಂದೀಶ (30) ಎಂಬುವವರ ವಿರುದ್ಧ ಬಿಎನ್ 2 0 314, 316(2), 318(4), 351(2), 351(3), 61(2), 82(1), 82(2), 83, 3(5) ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.

ಇದನ್ನು ಓದಿ : ಚೆನ್ನೈಯನ್ನು ಹಿಂದಿಕ್ಕಿ ದೇಶದಲ್ಲಿಯೇ ಮೊದಲ ಸ್ಥಾನ ಪಡೆದ Bangalore ; ಯಾವುದರಲ್ಲಿ ಗೊತ್ತಾ.?

ಘಟನೆಯ ಹಿನ್ನೆಲೆ :
ದೂರುದಾರ ರಾಮಕೃಷ್ಣ ಅವರು ಪತ್ನಿ ಸಾವನ್ನಪ್ಪಿದ್ದಾರೆ. 2020ರ ನವೆಂಬರ್‌ನಲ್ಲಿ ಅವರಿಗೆ ಮ್ಯಾಟ್ರಿಮೋನಿ ವೆಬ್‌ಸೈಟ್‌ನಲ್ಲಿ ಎಚ್. ಎಂ. ವಿಜಯಲಕ್ಷ್ಮೀ ಪರಿಚಯವಾಗಿದೆ. ನಂತರ ರಾಮನಗರದ ದೇವಸ್ಥಾನವೊಂದರಲ್ಲಿ ಗುರು- ಹಿರಿಯರ ಸಮ್ಮುಖದಲ್ಲಿ ವಿಜಯಲಕ್ಷ್ಮೀ ಅವರನ್ನು ರಾಮಕೃಷ್ಣ ಎರಡನೇ ಮದುವೆಯಾಗಿದ್ದರಂತೆ (second marriage).

ಈ ಮದುವೆಗೂ ಮುಂಚೆ ಈ ಹಿಂದೆ ನನಗೆ ಮದುವೆಯಾಗಿದ್ದು, ಪತ್ನಿ ಅನಾರೋಗ್ಯದಿಂದ ಮೃತಪಟ್ಟಿದ್ದಾರೆ ಎಂದು ವಿಜಯಲಕ್ಷ್ಮೀ ರಾಮಕೃಷ್ಣಗೆ ತಿಳಿಸಿದ್ದರು.

ಇದನ್ನು ಓದಿ : Video : ಡಿಸಿಪಿ ಕಚೇರಿ ಮುಂದೆ ಗರ್ಲ್​ಫ್ರೆಂಡ್ ಬರ್ತ್​ಡೇ ಆಚರಿಸಿ ಸವಾಲೆಸೆದ ಗ್ಯಾಂಗ್​ಸ್ಟರ್.!

ಬಳಿಕ ರಾಮಕೃಷ್ಣ ಅವರನ್ನು ಮದುವೆಯಾದ ಕೆಲ ದಿನಗಳ ಬಳಿಕ ಅವರ ಪಿಎಫ್ ಹಣ ಕಬಳಿಸುವ ಉದ್ದೇಶದಿಂದ ಸಣ್ಣಪುಟ್ಟ ವಿಚಾರಕ್ಕೆ ಮನೆಯಲ್ಲಿ ಜಗಳ ಮಾಡುವುದು, ಮಾನಸಿಕ ಮತ್ತು ದೈಹಿಕ ಹಿಂಸೆ (Mental and physical violence) ನೀಡುವುದು, ಪಿಎಫ್ ಹಣ ನೀಡದಿದ್ದಲ್ಲಿ ನೇಣು ಹಾಕಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ರಾಮಕೃಷ್ಣ ಆರೋಪಿಸಿದ್ದಾರೆ.

ತಾನು ಏಳು ಮದುವೆಯಾಗಿರುವ ವಿಚಾರವನ್ನು ವಿಜಯಲಕ್ಷ್ಮಿ ಮುಚ್ಚಿಟ್ಟಿದ್ದಾರೆ. ಮದುವೆ ಆದ ಗಂಡಂದಿರಿಗೆ ಗೊತ್ತಾಗದಂತೆ ನಗದು ಹಣ ಹಾಗೂ ಚಿನ್ನಾಭರಣ ದೋಚಿದ್ದಾರೆ. ವಾಪಸ್ಸು ಕೊಡು ಎಂದು ಕೇಳಿದರೆ ನೇಣು ಹಾಕಿಕೊಳ್ಳುವುದಾಗಿ ಬೆದರಿಸಿದ್ದಾರಂತೆ. ಇದೇ ರೀತಿ ರಾಮಕೃಷ್ಣ ಅವರಿಗೆ ತಿಳಿಯದಂತೆ ಮನೆಯಲ್ಲಿದ್ದ ಚಿನ್ನ, ಬೆಳ್ಳಿ ಆಭರಣಗಳು ಮತ್ತು 25 ಲಕ್ಷ ನಗದು ಕದ್ದೊಯ್ದಿದ್ದಾರೆ.

ಇದನ್ನು ಓದಿ : ತೊಡೆ ಮೇಲೆ Girlfriend ಕೂರಿಸಿಕೊಂಡು ಲಿಪ್ ಲಾಕ್ ಮಾಡುತ್ತಾ ಕಾರು ಚಲಾಯಿಸಿದ ಯುವಕ.!

ಅಲ್ಲದೇ ರಾಮಕೃಷ್ಣ ವಿರುದ್ಧ ಮದ್ದೂರು ಹಾಗೂ ಮಂಡ್ಯ ನ್ಯಾಯಾಲಯಗಳಲ್ಲಿ ಚೆಕ್ ಬೌನ್ಸ್ ಎಂದು ಸುಳ್ಳು ಪ್ರಕರಣಗಳನ್ನು ದಾಖಲಿಸಿ ಕಿರುಕುಳ ನೀಡುತ್ತಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.

WhatsApp Channel Join Now
Telegram Group Join Now
Instagram Account Follow Now
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!