ಜನಸ್ಪಂದನ ನ್ಯೂಸ, ಬೆಂಗಳೂರು : ಕರ್ನಾಟಕದ ಸಹಕಾರ ಸಚಿವ ಕೆ.ಎನ್. ರಾಜಣ್ಣ (KN Rajanna) ಅವರು ವಿವಾದಾತ್ಮಕ ಹೇಳಿಕೆಯ ಪರಿಣಾಮವಾಗಿ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಲು ತೀರ್ಮಾನಿಸಿದ್ದಾರೆ. ಅವರು ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ರಾಜೀನಾಮೆ ಪತ್ರವನ್ನು ಹಸ್ತಾಂತರಿಸುವ ನಿರೀಕ್ಷೆಯಿದೆ.
ವೋಟರ್ ಐಡಿ ಮತ್ತು ಮತದಾನ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿದೆ ಎಂಬ ರಾಹುಲ್ ಗಾಂಧಿಯವರ ಆರೋಪಕ್ಕೆ ವಿರೋಧವಾಗಿ ಮಾತನಾಡಿದ್ದೇ KN ರಾಜಣ್ಣ (KN Rajanna) ಅವರ ವಿರುದ್ಧ ಪಕ್ಷದೊಳಗೆ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
VTU ನೇಮಕಾತಿ 2025 : ಗ್ರಂಥಪಾಲಕ ಮತ್ತು ಲ್ಯಾಬ್ ಬೋಧಕ ಹುದ್ದೆಗಳಿಗೆ ಅರ್ಜಿ ಆಹ್ವಾನ
KN ರಾಜಣ್ಣ ಅವರು, ಲೋಕಸಭಾ ಚುನಾವಣೆಯ ವೇಳೆ ವೋಟರ್ ಪಟ್ಟಿಯಲ್ಲಿ ತೊಂದರೆಗಳು ನಡೆದಿದ್ದು ಸತ್ಯ, ಆದರೆ ಅದಕ್ಕೆ ನಮ್ಮ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ಹೇಳಿದ್ದರು.
ಅವರ ಪ್ರಕಾರ, ಕೆಲವರು ಒಂದೇ ಸಮಯದಲ್ಲಿ ಹಲವೆಡೆ ವೋಟರ್ ಪಟ್ಟಿಯಲ್ಲಿ ಸೇರಿರುವುದು, ವಿಳಾಸ ಹಾಗೂ ತಂದೆಯ ಹೆಸರು ಗೈರು ಇರುವಂತಹ ತೊಂದರೆಗಳು ಕಂಡುಬಂದಿದ್ದವು. “ನಮ್ಮ ಕಣ್ಮುಂದೆನೇ ನಡೆದಿವೆ, ನಾವು ನೋಡಿಕೊಳ್ಳಲಿಲ್ಲ, ಅದೇ ತಪ್ಪು” ಎಂದು ಅವರು ಒಪ್ಪಿಕೊಂಡಿದ್ದರು. ಮುಂದಿನ ಚುನಾವಣೆಗಳಲ್ಲಿ ಹೆಚ್ಚಿನ ಎಚ್ಚರಿಕೆ ವಹಿಸುವುದಾಗಿ ಅವರು ಭರವಸೆ ನೀಡಿದ್ದರು.
Saliva : ಮೊಡವೆ ಸಮಸ್ಯೆಗೆ ನೈಸರ್ಗಿಕ ಪರಿಹಾರ ; ಬೆಳಗಿನ ಎಂಜಲಿನಿಂದ ನಿಜವಾಗಿಯೂ ಪರಿಹಾರ ಸಿಗುತ್ತಾ.?
ರಾಜೀನಾಮೆ ಕೇವಲ ಸಚಿವ ಸ್ಥಾನಕ್ಕೆ ಮಾತ್ರ ಸಲ್ಲಿಸಲಾಗುತ್ತಿದೆ. ಶಾಸಕರಾಗಿ ಅವರು ಮುಂದುವರೆಯಲಿದ್ದಾರೆ. ತುಮಕೂರು ಮೂಲದ KN ರಾಜಣ್ಣ ಅವರು ಹಾಸನ ಜಿಲ್ಲಾ ಉಸ್ತುವಾರಿಯಾಗಿದ್ದರು ಮತ್ತು ಹಿಂದೆ ಹಲವು ರಾಜಕೀಯ ವಿವಾದಗಳಲ್ಲೂ ಸುದ್ದಿಯಾಗಿದ್ದರು.
Courtesy : Suvarna News
VTU ನೇಮಕಾತಿ 2025 : ಗ್ರಂಥಪಾಲಕ ಮತ್ತು ಲ್ಯಾಬ್ ಬೋಧಕ ಹುದ್ದೆಗಳಿಗೆ ಅರ್ಜಿ ಆಹ್ವಾನ

ಜನಸ್ಪಂದನ ನ್ಯೂಸ್, ನೌಕರಿ : ಬೆಳಗಾವಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (VTU)ವು ಅಧಿಕೃತ ಅಧಿಸೂಚನೆಯ ಮೂಲಕ ಗ್ರಂಥಪಾಲಕ, ಪ್ರಯೋಗಾಲಯ ಬೋಧಕ ಸೇರಿದಂತೆ ಹಲವು ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ.
ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ (Online) ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಅವಶ್ಯವಿರುವ ಮಾಹಿತಿಯನ್ನು ಇಲ್ಲಿ ನೋಡಬಹುದಾಗಿದ್ದು, ಆದರೂ ಅಧಿಕೃತ VTU ವೆಬ್‌ಸೈಟ್ (Official website) ನಲ್ಲಿ ಪರೀಕ್ಷಿಸಿ ಅರ್ಜಿ ಸಲ್ಲಿಸಿ.
ಇದನ್ನು ಓದಿ : ISRO (LPSC) ದಲ್ಲಿ 10ನೇ ತರಗತಿಯಿಂದ ಡಿಪ್ಲೊಮಾ/ಬಿ.ಎಸ್ಸಿ ಅರ್ಹತೆ ಹೊಂದಿರುವ ಅಭ್ಯರ್ಥಿಗಳಿಗೆ ಉದ್ಯೋಗವಕಾಶ.!
ಅರ್ಜಿ ಸಲ್ಲಿಸಲು ಬೇಕಾದ ವಿವರಗಳನ್ನು ಇಲ್ಲಿ ಕೊಡಲಾಗಿದೆ. ಅಭ್ಯರ್ಥಿಗಳು ನಿಗದಿತ ದಿನಾಂಕಕ್ಕೊಳಗಾಗಿ ಅರ್ಜಿ ಸಲ್ಲಿಸುವುದು ಮುಖ್ಯವಾಗಿದೆ. ಕರ್ನಾಟಕದ ಕೊಪ್ಪಳ, ಬೆಳಗಾವಿ, ಮೈಸೂರು ಮತ್ತು ಚಿಕ್ಕಬಳ್ಳಾಪುರದಲ್ಲಿ ವೃತ್ತಿ ಅವಕಾಶವನ್ನು ಹುಡುಕುತ್ತಿರುವವರಿಗೆ ಇದು ಉತ್ತಮ ಅವಕಾಶವಾಗಿದೆ.
ಹುದ್ದೆಗಳ ಕುರಿತು ಮಾಹಿತಿ :
- ಒಟ್ಟು ಹುದ್ದೆಗಳು : 71
ಇದನ್ನು ಓದಿ : NIACL ನಲ್ಲಿ 550 ಹುದ್ದೆಗಳ ನೇಮಕಾತಿ ; ಇಂದೇ ಅರ್ಜಿ ಸಲ್ಲಿಸಿ.!
VTU ಹುದ್ದೆಯ ವಿವರಗಳು :
| ಪೋಸ್ಟ್ ಹೆಸರು | ಪೋಸ್ಟ್‌ಗಳ ಸಂಖ್ಯೆ |
| ತಾತ್ಕಾಲಿಕ ಪ್ರಯೋಗಾಲಯ ಬೋಧಕ | 66 |
| ತಾತ್ಕಾಲಿಕ ಗ್ರಂಥಪಾಲಕ | 2 |
| ತಾತ್ಕಾಲಿಕ ಪ್ರೋಗ್ರಾಮರ್ | 3 |
ವಿದ್ಯಾರ್ಹತೆ :
- ತಾತ್ಕಾಲಿಕ ಪ್ರಯೋಗಾಲಯ ಬೋಧಕರು : ಡಿಪ್ಲೊಮಾ, ಬಿಬಿಎಂ, ಬಿ.ಎಸ್ಸಿ, ಬಿಸಿಎ, ಬಿಇ, ಎಂಸಿಎ, ಎಂ.ಎಸ್ಸಿ, ಎಂಬಿಎ, ಎಂ.ಕಾಂ.
- ತಾತ್ಕಾಲಿಕ ಗ್ರಂಥಪಾಲಕ : ಸ್ನಾತಕೋತ್ತರ ಪದವಿ, ಪಿಎಚ್‌ಡಿ.
- ಪ್ರೋಗ್ರಾಮರ್ : ಡಿಪ್ಲೊಮಾ, ಬಿಇ, ಸ್ನಾತಕೋತ್ತರ ಪದವಿ, ಎಂಸಿಎ, ಎಂ.ಎಸ್ಸಿ.
ಅರ್ಜಿ ಶುಲ್ಕ :
- ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕವಿಲ್ಲ.
ಇದನ್ನು ಓದಿ : Astrology : ಹೇಗಿದೆ ಗೊತ್ತಾ.? ಅಗಷ್ಟ 09 ರ ದ್ವಾದಶ ರಾಶಿಗಳ ಫಲಾಫಲ.!
ಅರ್ಜಿ ಸಲ್ಲಿಸುವ ವಿಧಾನ :
- ಅಧಿಕೃತ ಅಧಿಸೂಚನೆಯಲ್ಲಿ ನೀಡಿರುವ ಅರ್ಜಿ ನಮೂನೆಯನ್ನು ಡೌನ್‌ಲೋಡ್ ಮಾಡಿ ಭರ್ತಿ ಮಾಡಬೇಕು.
- ಅನ್ವಯಿಸಿದರೆ, ನಿಮ್ಮ ವರ್ಗದ ಪ್ರಕಾರ ಅರ್ಜಿ ಶುಲ್ಕವನ್ನು ಪಾವತಿಸಬೇಕು.
- ಎಲ್ಲಾ ಮಾಹಿತಿಯನ್ನು ಸರಿಯಾಗಿ ತುಂಬಿ ಪರಿಶೀಲಿಸಿದ ನಂತರ, ಅರ್ಜಿಯನ್ನು ನಿಗದಿತ ವಿಳಾಸಕ್ಕೆ ಕಳುಹಿಸಬೇಕು. ಅರ್ಜಿಯನ್ನು ಈ ಕೆಳಗಿನ ವಿಳಾಸಕ್ಕೆ ಕಳುಹಿಸಿರಿ.
ರಿಜಿಸ್ಟ್ರಾರ್, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, ಜ್ಞಾನ ಸಂಗಮ, ಬೆಳಗಾವಿ – 590018, ಕರ್ನಾಟಕ. - ಅರ್ಜಿಯನ್ನು ರಿಜಿಸ್ಟರ್ ಪೋಸ್ಟ್, ಸ್ಪೀಡ್ ಪೋಸ್ಟ್ ಅಥವಾ ಮಾನ್ಯ ಮಾರ್ಗದ ಮೂಲಕ ಕಳುಹಿಸಬೇಕು.
ಹೆಚ್ಚಿನ ಮಾಹಿತಿಗಾಗಿ ಮತ್ತು ಅರ್ಜಿ ನಮೂನೆಗಾಗಿ VTU ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸಿರುವ ಅಧಿಸೂಚನೆಯನ್ನು ಪರಿಶೀಲಿಸಲು ಸಲಹೆ ನೀಡಲಾಗಿದೆ.
ಪ್ರಮುಖ ದಿನಾಂಕ :
- ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ : 11 ಆಗಸ್ಟ್ 2025.
ಇದನ್ನು ಓದಿ : Celery : ಕೊಬ್ಬು ಕರಗಿಸಲು 30 ದಿನ ಈ ಜ್ಯೂಸ್ ಕುಡಿಯಿರಿ.!
ಪ್ರಮುಖ ಲಿಂಕ್‌ಗಳು :
- ಅಧಿಕೃತ ಅಧಿಸೂಚನೆ ಪಿಡಿಎಫ್ : ಇಲ್ಲಿ ಕ್ಲಿಕ್ ಮಾಡಿ.
- ಅರ್ಜಿ ನಮೂನೆ : ಇಲ್ಲಿ ಕ್ಲಿಕ್ ಮಾಡಿ.
- ಅಧಿಕೃತ ವೆಬ್‌ಸೈಟ್ : vtu.ac.in
Disclaimer : The above given information is available On online, candidates should check it properly before applying. This is for information only.






