Thursday, June 20, 2024
spot_img
spot_img
spot_img
spot_img
spot_img
spot_img

ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಬಲೆಗೆ ಬಿದ್ದ PSI ಮತ್ತು ಕಾನ್‌ಸ್ಟೆಬಲ್.!

spot_img

ಜನಸ್ಪಂದನ ನ್ಯೂಸ್, ಹಾವೇರಿ : ಹಾವೇರಿ ಜಿಲ್ಲೆಯ ಶಿಗ್ಗಾವಿ (Shiggavi) ತಾಲ್ಲೂಕಿನ ತಡಸ ಪೊಲೀಸ್ ಠಾಣೆಯ ಪಿಎಸ್‌ಐ ಮತ್ತು ಕಾನ್‌ಸ್ಟೆಬಲ್, ಇಸ್ಪೀಟ್ ಆಡಿಸಲು ₹2 ಲಕ್ಷ ಲಂಚ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದ ಘಟನೆ ನಡೆದಿದೆ.

ಇದನ್ನು ಓದಿ : Recruitment : ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ನೇಮಕಾತಿ ; ಇಲ್ಲಿದೆ ಹೆಚ್ಚಿನ ಮಾಹಿತಿ.!

ಲೋಕಾಯುಕ್ತ ಬಲೆಗೆ ಬಿದ್ದವರು ತಡಸ ಠಾಣೆ ಪಿಎಸ್‌ಐ ಶರಣಬಸಪ್ಪ ಕಾಂದೆ ಹಾಗೂ ಕಾನ್ ಸ್ಟೇಬಲ್ ಸುರೇಶ ಮಾನೋಜಿ ಎಂದು ತಿಳಿದು ಬಂದಿದೆ.

ಇವರು ಇಸ್ಪೀಟ್ ಆಡಿಸಲು ಐದು ಲಕ್ಷ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು (demanded a bribe) ಎನ್ನಲಾಗಿದೆ.

ಮಧ್ಯವರ್ತಿ (the mediator) ಕಿರಣ‌ ವನಹಳ್ಳಿ ಎಂಬಾತನ ಮುಖಾಂತರ ಮುಂಗಡವಾಗಿ ಎರಡು ಲಕ್ಷ ರೂ. ಲಂಚ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.

ತಡಸ ಗ್ರಾಮದ ಪ್ರಭಾಕರ ಬೆಟದೂರ ಎಂಬುವರ ದೂರಿನ ಮೇರೆಗೆ ದಾಳಿ ನಡೆಸಲಾಗಿದೆ.

ಇದನ್ನು ಓದಿ : ಮದುವೆ ಮಂಟಪದಲ್ಲೇ WWE ; ಯುವಕನಿಗೋಸ್ಕರ ಇಬ್ಬರು ಯುವತಿಯರ ನಡುವೆ ಮಾರಾಮಾರಿ ; ವಿಡಿಯೋ ವೈರಲ್.!

ಇನ್ನೂ ಲೋಕಾಯುಕ್ತ ಡಿವೈಎಸ್ಪಿ ಬಿ.ಪಿ.ಚಂದ್ರಶೇಖರ ನೇತೃತ್ವದಲ್ಲಿ ದಾಳಿ ನಡೆದಿದೆ.

ತನಿಖಾಧಿಕಾರಿಗಳಾದ ಮಂಜುನಾಥ ಪಂಡಿತ ಹಾಗೂ ದಾವಣಗೆರೆ ಲೋಕಾಯುಕ್ತ ಅಧಿಕಾರಿಗಳು, ಸಿಬ್ಬಂದಿ ತಂಡದಲ್ಲಿದ್ದರು. ಸದಯ ಆರೋಪಿತರನ್ನು ಬಂಧಿಸಲಾಗಿದ್ದು (arrested), ತನಿಖೆ ಮುಂದುವರಿದಿದೆ ಎಂದು ತಿಳಿದು ಬಂದಿದೆ.

 

spot_img
spot_img
- Advertisment -spot_img