ಜನಸ್ಪಂದನ ನ್ಯೂಸ್, ಡೆಸ್ಕ್ : ಆಶೀರ್ವಾದದ ನೆಪದಲ್ಲಿ ಬಟ್ಟೆಯೊಳಗೆ ಅರ್ಚಕನೋರ್ವ ಕೈ ಹಾಕಿದ ಎಂದು ಮಾಡೆಲ್ (Model) ಓರ್ವರು ಗಂಭೀರ ಆರೋಪ ಮಾಡಿದ್ದಾರೆ.
ಕಠಿಣ ಕಾನೂನುಗಳಿದ್ದರೂ ಮಹಿಳೆಯರ ವಿರುದ್ಧದ ದೌರ್ಜನ್ಯ ಕಡಿಮೆಯಾಗದ ವಾಸ್ತವಕ್ಕೆ ಮತ್ತೊಂದು ಉದಾಹರಣೆ ಇದೀಗ ಬೆಳಕಿಗೆ ಬಂದಿದೆ. 2021ರಲ್ಲಿ ಮಿಸ್ ಗ್ರ‍್ಯಾಂಡ್ ಮಲೇಷ್ಯಾ ಕಿರೀಟ ಅಲಂಕರಿಸಿದ್ದ, ಮಾಡೆಲ್ (Model) ಮತ್ತು ನಟಿ ಲಿಶಲ್ಲಿನಿ ಕನರನ್ (Lishalliny Kanaran) ಅವರು, ದೇವಾಲಯದ ಅರ್ಚಕರೊಬ್ಬರು ತಮ್ಮ ಮೇಲೆ ಲೈಂಗಿಕ ಕಿರುಕುಳ ಎಸಗಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಇದನ್ನು ಓದಿ : Astrology : ಹೇಗಿದೆ ಗೊತ್ತಾ.? ಜುಲೈ 09 ರ ದ್ವಾದಶ ರಾಶಿಗಳ ಫಲಾಫಲ.!
ಘಟನೆ ಜೂನ್ 21 ರಂದು ಕೌಲಾಲಂಪುರ್‌ನಿಂದ ಸ್ವಲ್ಪ ದೂರದಲ್ಲಿರುವ ಸೆಪಾಂಗ್ ಜಿಲ್ಲೆಯ ಮಾರಿಯಮ್ಮನ್ ದೇವಾಲಯದಲ್ಲಿ ನಡೆದಿದೆ ಎಂದು South China Morning Post ವರದಿ ಮಾಡಿದೆ. ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಲು ಹೋದ ಮಾಡೆಲ್ (Model) ಲಿಶಲ್ಲಿನಿ, ಅರ್ಚಕರೊಬ್ಬರ “ಪವಿತ್ರ ನೀರು” ಮತ್ತು “ರಕ್ಷಣಾತ್ಮಕ ದಾರ”ದ ಹೆಸರಿನಲ್ಲಿ ಕಚೇರಿಗೆ ಕರೆದ ನಂತರ, ಲೈಂಗಿಕ ದೌರ್ಜನ್ಯಕ್ಕೆ ಗುರಿಯಾದೆ ಎಂದು ಮಾಡೆಲ್ ಆರೋಪಿಸಿದ್ದಾರೆ.
ಇನ್ಸ್ಟಾಗ್ರಾಮ್ ಪೋಸ್ಟ್ ಮೂಲಕ ಮನವಿ :
ಮಾಡೆಲ್ (Model) ಲಿಶಲ್ಲಿನಿ ತಮ್ಮ ಇನ್ಸ್ಟಾಗ್ರಾಮ್‌ನಲ್ಲಿ ಈ ಕಹಿ ಅನುಭವವನ್ನು ಹಂಚಿಕೊಂಡಿದ್ದಾರೆ. ಜೂನ್ 21 ರಂದು ತಾಯಿ ಭಾರತದಲ್ಲಿದ್ದ ಕಾರಣ ದೇವಾಲಯಕ್ಕೆ ಒಬ್ಬರೇ ತೆರಳಿದ್ದ ನಟಿ, ಹಿಂದಿನ ಅನಿಸಿಕೆಗಳಿಗಿಂತ ಭಿನ್ನವಾಗಿ ಆ ಅರ್ಚಕರು ತಮ್ಮನ್ನು ಹತ್ತಿರಕ್ಕೆ ಕರೆದು, ನಿಜಕ್ಕೂ ಲೈಂಗಿಕವಾಗಿ ಕಿರುಕುಳ ನೀಡಿದರೆಂದು ಮಾಡೆಲ್ (Model) ಆಕ್ಷೇಪಿಸಿದ್ದಾರೆ.
ಇದನ್ನು ಓದಿ : Savadatti-Belagavi ಯಲ್ಲಮ್ಮ ದೇಗುಲದಲ್ಲಿ ದಾಖಲೆ ಕಾಣಿಕೆ ಸಂಗ್ರಹ ; 3 ತಿಂಗಳಲ್ಲಿ ರೂ.3.81 ಕೋಟಿ.!
“ಪವಿತ್ರ ನೀರನ್ನು ಕಣ್ಣುಗಳಿಗೆ ಮುಟ್ಟಿಸಿದ ನಂತರ, ಅವರು ನನ್ನ ಎದೆಯನ್ನು ಮುಟ್ಟಿದರು. ಬಟ್ಟೆ ಬಿಚ್ಚಲು ಒತ್ತಾಯಿಸಿದರು. ನಾನು ನಿರಾಕರಿಸಿದಾಗ, ಬಿಗಿಯಾದ ಬಟ್ಟೆ ಧರಿಸಿದ್ದಕ್ಕೆ ಗದರಿಸಿದರು” ಎಂದು ಮಾಡೆಲ್ (Model) ಲಿಶಲ್ಲಿನಿ ತಮ್ಮ ಪೋಸ್ಟ್‌ನಲ್ಲಿ ಆರೋಪಿಸಿದ್ದಾರೆ. ಆಗ “ಅವಮಾನ, ಅಸಹ್ಯ ಮತ್ತು ಆಘಾತದಲ್ಲಿ ನಾನಿದ್ದೆ, ಧ್ವನಿ ಎತ್ತುವ ಧೈರ್ಯ ನನಗೆ ಇಲ್ಲದಂತಾಯಿತು” ಎಂದು ಅವರು ಭಾವೋದ್ರೇಕದಿಂದ ಹೇಳಿದ್ದಾರೆ.
ಪೊಲೀಸ್ ತನಿಖೆ ಆರಂಭ :
ಜುಲೈ 4 ರಂದು ಮಾಡೆಲ್ (Model) ಲಿಶಲ್ಲಿನಿ ಪೊಲೀಸ್ ದೂರು ದಾಖಲಿಸಿದ್ದು, ಆದರೆ ಆರೋಪಿ ಇದೀಗ ಪರಾರಿಯಾಗಿದ್ದಾನೆ. ಸೆಪಾಂಗ್ ಜಿಲ್ಲಾ ಪೊಲೀಸ್ ಮುಖ್ಯಸ್ಥ ನೋರ್ಹಿಜಮ್ ಬಹಮಾನ್ ಅವರ ಪ್ರಕಾರ, ಆರೋಪಿಯು ಭಾರತೀಯ ಪ್ರಜೆಯಾಗಿದ್ದು, ದೇವಾಲಯದ ಸ್ಥಳೀಯ ಅರ್ಚಕರ ಅನುಸ್ಥಿತಿಯಲ್ಲಿ ತಾತ್ಕಾಲಿಕ ಆ ವ್ಯಕ್ತಿ ಸೇವೆ ಸಲ್ಲಿಸುತ್ತಿದ್ದ ಎಂದು ತಿಳಿಸಿದ್ದಾರೆ. ಸಂತ್ರಸ್ತೆಯ ಮುಖ ಹಾಗೂ ದೇಹದ ಮೇಲೆ “ಪವಿತ್ರ ನೀರು” ಸಿಂಪಡಿಸಿ, ಲೈಂಗಿಕ ರೀತಿಯಲ್ಲಿ ಬಳಲಿಸುವ ಕೃತ್ಯದಲ್ಲಿ ತೊಡಗಿದ್ದಾನೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.
ಇದನ್ನು ಓದಿ : ಪತ್ನಿಯ ಕಿರಿಕಿರಿಗೆ ಬೇಸತ್ತ ಪತಿ 4ನೇ ಮಹಡಿಯಿಂದ ಹಾರಿ Suicide.!
ದೇವಾಲಯದ ನಿಲುವು ಪ್ರಶ್ನೆಗೆ ಗುರಿ :
ಲಿಶಲ್ಲಿನಿ ದೇವಾಲಯದ ಆಡಳಿತ ಮಂಡಳಿ ತನಗೆ ನ್ಯಾಯ ನೀಡುವ ಬದಲು, ದೇವಸ್ಥಾನದ ಹೆಸರು ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಆರೋಪಕ್ಕೆ ಸಂಬಂಧಪಟ್ಟಂತೆ ಇದೇ ಮೊದಲಲ್ಲ, ಇತ್ತೀಚೆಗೆ ಮತ್ತೊಬ್ಬರು ಕೂಡ ಇದೇ ಅರ್ಚಕರ ವಿರುದ್ಧ ದೂರು ನೀಡಿದ್ದರೂ ಯಾವುದೇ ಕ್ರಮ ತೆಗೆದುಕೊಳ್ಳಲಾಗಿರಲಿಲ್ಲ ಎಂದು ಅವರು ಹೇಳಿದ್ದಾರೆ.
ಸಧ್ಯ ಸ್ಥಿತಿ :
ಮಲೇಷ್ಯಾ ಪೊಲೀಸರು ಆರೋಪಿಯು ಭಾರತದ ಪ್ರಜೆ ಎನ್ನುವ ಹಿನ್ನೆಲೆಯಲ್ಲಿ ಹುಡುಕಾಟವನ್ನು ಪ್ರಾರಂಭಿಸಿದ್ದಾರೆ. ಘಟನೆ ಸಂಬಂಧಿಸಿದ ತನಿಖೆ ಮುಂದುವರೆದಿದೆ.
ಮಾಡೆಲ್ ಲಿಶಲ್ಲಿನಿ ಕನರನ್ ಇನ್ಸ್ಟಾಗ್ರಾಮ್ ಪೋಸ್ಟ್ ಇಲ್ಲಿದೆ :
View this post on Instagram
Humaira : ನಟಿ ಹುಮೈರಾ ಅಸ್ಗರ್ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆ.!
ಜನಸ್ಪಂದನ ನ್ಯೂಸ್, ಡೆಸ್ಕ್ : ಅಪಾರ್ಟ್‌ಮೆಂಟ್‌ವೊಂದರಲ್ಲಿ ನಟಿ ಹುಮೈರಾ (Humaira) ಅಸ್ಗರ್ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.