ಜನಸ್ಪಂದನ ನ್ಯೂಸ್, ಬೆಂಗಳೂರು : ಬೆಂಗಳೂರು ನಗರದ ಹುಸಗೂರು ರೈಲ್ವೆ ಗೇಟ್ (Husaguru Railway Gate) ಬಳಿ ಹೆಂಡತಿ ಕಾಟಕ್ಕೆ ಬೇಸತ್ತು ಪೊಲೀಸ್ ಹೆಡ್ ಕಾನ್ಸಟೇಬಲ್ (Police Head Constable) ಆತ್ಮಹತ್ಯೆ ಮಾಡಿಕೊಂಡ ಘಟನೆ ನಿನ್ನೆ ರಾತ್ರಿ (ಶುಕ್ರವಾರ) 10: 45 ರ ಸುಮಾರಿಗೆ ನಡೆದಿದೆ.
ಹೆಡ್ ಕಾನ್ಸಟೇಬಲ್ ತಿಪ್ಪಣ್ಣ ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ತಿಳಿದು ಬಂದಿದೆ. ಇವರು ಹುಳಿಮಾವು ಪೊಲೀಸ್ ಠಾಣೆಯಲ್ಲಿ (Hulimavu Police Station) ಕಾನ್ಸಟೇಬಲ್ ತಿಪ್ಪಣ್ಣ ಕರ್ತವ್ಯ ನಿರ್ವಹಿಸುತ್ತಿದ್ದರು.
ಇದನ್ನು ಓದಿ : ಕಾಲ್ತುಳಿತ ಪ್ರಕರಣ : ನಟ ಅಲ್ಲು ಅರ್ಜುನ್ Arrest.!
ಹೆಡ್ ಕಾನ್ಸಟೇಬಲ್ ತಿಪ್ಪಣ್ಣ ಅವರು ರೈಲಿಗೆ ತಲೆಕೊಟ್ಟು (Heading for the train) ಆತ್ಮಹತ್ಯೆ ಮಾಡಿಕೊಂಡಿದ್ದು, ಡೆತ್ ನೋಟ್ ನಲ್ಲಿ ಹೆಂಡತಿ ಹಾಗೂ ಮಾವನ ವಿರುದ್ಧ ಕಿರುಕುಳ ಆರೋಪ (Harassment by wife and father- in -law) ಮಾಡಿದ್ದಾರೆ. ಮಾವ ಯಮನಪ್ಪ ಜೀವ ಬೆದರಿಕೆ ಹಾಕಿರುವುದಾಗಿ ಡೆತ್‌ನೋಟ್‌ನಲ್ಲಿ ಉಲ್ಲೇಖಿಸಿದ್ದಾರೆ.
ಸದ್ಯ ಬೈಯಪ್ಪನಹಳ್ಳಿ ರೈಲ್ವೆ ಪೊಲೀಸ್ ಠಾಣೆಯಲ್ಲಿ (Baiyappanahalli Railway Police Station) ತಿಪ್ಪಣ್ಣ ಅವರ ತಂದೆ ದೂರು ದಾಖಲಿಸಿದ್ದಾರೆ. ಇನ್ನು ಬೈಕ್ ನಲ್ಲಿ ಬಂದು ತಿಪ್ಪಣ್ಣ ಆತ್ಮಹತ್ಯೆ ಮಾಡಿಕೊಂಡಿದ್ದು, ಐಡಿಕಾರ್ಡ್ ಹಾಗೂ ಡೆತ್ ನೋಟ್ ಅನ್ನು ತಿಪ್ಪಣ್ಣ ತೆಗೆದುಕೊಂಡು ಹೋಗಿದ್ದರು.
ಇದನ್ನು ಓದಿ : Health : ಮಧುಮೇಹಿಗಳು ಬೆಲ್ಲವನ್ನು ತಿನ್ನುವುದು ಸರಿಯೇ.?
ಘಟನೆ ಸಂಬಂಧ ಬೈಯಪ್ಪನಹಳ್ಳಿ ರೈಲ್ವೆ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇನ್ನು ಡೆತ್ ನೋಟ್ ಆಧರಿಸಿ ಹೆಂಡತಿ ಹಾಗೂ ಮಾವನ ಮೇಲೆ ರೈಲ್ವೆ ಪೊಲೀಸರು ಪ್ರಕರಣ (Case) ದಾಖಲಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ
ಡೆತ್ ನೋಟ್‌ನಲ್ಲೆನಿದೆ :
“ನಾನು ನನ್ನ ಹೆಂಡತಿಯ ಕಾಟಕ್ಕೆ (harassment) ಬೇಸತ್ತು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ನನ್ನ ಹೆಂಡತಿಯ ತಂದೆಯಾದ ಯಮುನಪ್ಪ ಇವನು ನನಗೆ ಜೀವ ಬೆದರಿಕೆ (threatened my life) ಹಾಕಿರುತ್ತಾನೆ. ಡಿ.12 ರಂದು ದೂರವಾಣಿ ಕರೆ (Call) ಮಾಡಿ ಮಾತನಾಡಿ ಬೆದರಿಕೆ ಹಾಕಿರುತ್ತಾನೆ. ಬೆಳಗ್ಗೆ ನಾನು ಕಾಲ್ ಮಾಡಿದಾಗಲೂ ಕೂಡ, ‘ನೀನು ಸತ್ತು ಹೋಗು ನನ್ನ ಮಗಳು ಚೆನ್ನಾಗಿರುತ್ತಾಳೆ (my daughter will be fine)’ ಎಂದು ಹೇಳಿ ಅವಾಚ್ಯ ಪದಗಳಿಂದ ಬೈದಿದ್ದಾರೆ” ಎಂದು ಡೆತ್‌ನೋಟ್‌ನಲ್ಲಿ ಬರೆದಿದ್ದಾರೆ.
ಹಿಂದಿನ ಸುದ್ದಿ : ಟ್ಯಾಂಕ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಇಂಜಿನಿಯರ್.!
ಜನಸ್ಪಂದನ ನ್ಯೂಸ್, ಮಂಡ್ಯ : ಇಂಜಿನಿಯರ್ (engineer) ಒಬ್ಬರು ನೀರಿನ ಟ್ಯಾಂಕ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ (suicide) ಮಾಡಿಕೊಂಡಿರುವ ಘಟನೆ ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಕುರುಬರದೊಡ್ಡಿ (Kurubaradoddi) ಗ್ರಾಮದಲ್ಲಿ ನಡೆದಿದೆ.
ಮೃತರನ್ನು ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲೂಕಿನ ಹೆಮ್ಮತಿ (Hemmati) ಗ್ರಾಮದ ನಿವಾಸಿ ಜ್ಞಾನೇಶ್ (30) ಎಂದು ಗುರುತಿಸಲಾಗಿದೆ.
ಇದನ್ನು ಓದಿ : Health : ಮಧುಮೇಹಿಗಳು ಬೆಲ್ಲವನ್ನು ತಿನ್ನುವುದು ಸರಿಯೇ.?
ಮೃತ ಜ್ಞಾನೇಶ್ ಕಳೆದ 5 ವರ್ಷಗಳಿಂದ ಶಿಂಷಾ ಏತ ನೀರಾವರಿ (Shimsha Lift Irrigation) ಯೋಜನೆಯಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದರು. ಆತ್ಮಹತ್ಯೆಗೂ ಮುನ್ನ ಜ್ಞಾನೇಶ್ ವಾಟ್ಸಾಪ್ (WhatsApp) ನಲ್ಲಿ ಕೆಲಸದ ಒತ್ತಡದ (due to work stress) ಸ್ಟೇಟಸ್ ಹಾಕಿದ್ದರು.
ಈ ಹಿನ್ನೆಲೆಯಲ್ಲಿ ಕೆಲಸದ ಒತ್ತಡದಿಂದ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಘಟನೆ ಸಂಬಂಧ ಕೆಸ್ತೂರು ಪೊಲೀಸ್ ಠಾಣೆಯಲ್ಲಿ (Kesturu PS) ಪ್ರಕರಣ ದಾಖಲಾಗಿದೆ.