Saturday, January 18, 2025
HomeSpecial NewsHealth : ಮಧುಮೇಹಿಗಳು ಬೆಲ್ಲವನ್ನು ತಿನ್ನುವುದು ಸರಿಯೇ.?
spot_img
spot_img
spot_img
spot_img

Health : ಮಧುಮೇಹಿಗಳು ಬೆಲ್ಲವನ್ನು ತಿನ್ನುವುದು ಸರಿಯೇ.?

WhatsApp Channel Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ಡೆಸ್ಕ್ : ಮಧುಮೇಹಿಗಳು (Diabetics) ಅನೇಕ ರೀತಿಯ ಆಹಾರವನ್ನು ತಿನ್ನುವುದನ್ನು ನಿಲ್ಲಿಸುತ್ತಾರೆ. ಆದರೆ ಸಕ್ಕರೆಗೆ ವಿಷಯಕ್ಕೆ ಬಂದಾಗ, ಅನೇಕ ಜನರು ಬೆಲ್ಲವನ್ನು ಹೆಚ್ಚು ಪ್ರಯೋಜನಕಾರಿ ಎನ್ನುತ್ತಾರೆ. ಮಧುಮೇಹಿಗಳಲ್ಲಿ, ಕೆಲವು ರೋಗಿಗಳು ಬೆಲ್ಲವನ್ನು ತಿನ್ನುವುದು ಸರಿಯೇ ಅಥವಾ ತಪ್ಪಾ? (Is it right or wrong to eat jaggery?) ಎಂಬ ಬಗ್ಗೆ ಗೊಂದಲಕ್ಕೆ ಒಳಗಾಗುತ್ತಾರೆ.

ಹಾಗಾದರೆ ಮಧುಮೇಹಿಗಳು ಬೆಲ್ಲವನ್ನು ತಿನ್ನುವುದು ಸರಿಯೇ ಅಥವಾ ತಪ್ಪೇ ಎಂದು ತಿಳಿಯೋಣ.

ಇದನ್ನು ಓದಿ : KSFES : ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ.!

ಆರೋಗ್ಯ ತಜ್ಞರು, ಜನರು ಬಿಳಿ ಸಕ್ಕರೆ ತಿನ್ನುವುದು ಒಳ್ಳೆಯದಲ್ಲ ಎಂದು ಹೇಳುತ್ತಾರೆ. ಬದಲಿಗೆ, ಬೆಲ್ಲದಂತಹ ನೈಸರ್ಗಿಕ ಸಕ್ಕರೆಗಳನ್ನು (natural sugar) ತಿನ್ನಲು ಸಲಹೆ ನೀಡುತ್ತಾರೆ. ಆದರೆ ಇವೆರಡೂ ಮಧುಮೇಹಿಗಳಿಗೆ ಒಳ್ಳೆಯದಲ್ಲ.

ಹೀಗಾಗಿ ಮಧುಮೇಹಿಗಳು ವೈದ್ಯರನ್ನು ಸಂಪರ್ಕಿಸದೆ ಬೆಲ್ಲವನ್ನು ತಿನ್ನಬಾರದು. ಸಕ್ಕರೆಯ ಬದಲಿಗೆ ಜೇನುತುಪ್ಪ ಆರೋಗ್ಯಕರ ಆಯ್ಕೆಯಾಗಿದ್ದರೂ, ಅವುಗಳನ್ನು ಮಧುಮೇಹಿಗಳಿಗೆ ಒಳ್ಳೆಯದಲ್ಲ ಎಂದು ಪರಿಗಣಿಸಲಾಗಿದೆ. ಆರೋಗ್ಯ ತಜ್ಞರು ಕೂಡ ಮಧುಮೇಹಿಗಳಿಗೆ ಬೆಲ್ಲವನ್ನು ತಿನ್ನದಂತೆ ಸೂಚಿಸುತ್ತಾರೆ. ಏಕೆಂದರೆ ಬೆಲ್ಲ ಸಹ ಸಕ್ಕರೆಯಷ್ಟೇ ಹಾನಿಕಾರಕ ಪದಾರ್ಥ (Harmful substance).

ಇದನ್ನು ಓದಿ : ಅಳುವಾಗ ಮೂಗು ಸೋರುತ್ತದೆ ಏಕೆ ಗೊತ್ತಾ.? ಇಲ್ಲಿದೆ ಅಚ್ಚರಿಯ ಮಾಹಿತಿ.!

ಮಧುಮೇಹಿಗಳಿಗೆ ಬೆಲ್ಲ ಒಳ್ಳೆಯದಲ್ಲ. ಏಕೆಂದರೆ ಅದು ರಕ್ತದಲ್ಲಿನ ಸಕ್ಕರೆಯನ್ನು ಹೆಚ್ಚಿಸುತ್ತದೆ. ಇತರರು ಬೆಲ್ಲವನ್ನು ತಿನ್ನುವುದು ಪ್ರಯೋಜನಕಾರಿ. ಆದರೆ ಅದನ್ನು ಹೆಚ್ಚು ತಿನ್ನುವುದು ಒಳ್ಳೆಯದಲ್ಲ. ಬೊಜ್ಜು ಇರುವವರು ಬೆಲ್ಲ ತಿನ್ನುವುದನ್ನು ಆದಷ್ಟು ತಪ್ಪಿಸಬೇಕು. 100 ಗ್ರಾಂ ಬೆಲ್ಲದಲ್ಲಿ ಸುಮಾರು 385 ಕ್ಯಾಲೊರಿಗಳಿವೆ (385 calories in 100 grams of jaggery). ಅಲರ್ಜಿ ಮತ್ತು ಆಮ್ಲೀಯತೆಯಿಂದ ಬಳಲುತ್ತಿರುವ ಜನರಿಗೆ ಬೆಲ್ಲವನ್ನು ತಿನ್ನುವುದನ್ನು ನಿಲ್ಲಿಸಬೇಕು.

ಹಿಂದಿನ ಸುದ್ದಿ : Health : ಊಟ ಮಾಡುವಾಗ ಈ ತಪ್ಪುಗಳನ್ನು ಮಾಡ್ಬೇಡಿ.!

ಜನಸ್ಪಂದನ ನ್ಯೂಸ್, ಡೆಸ್ಕ್ : ಮಾನವ ತಾನೂ ಉತ್ತಮ ಆರೋಗ್ಯ (good health) ಪಡೆಯಲು ದಿನಕ್ಕೆ ಮೂರು ಹೊತ್ತು ಊಟ ಮಾಡಬೇಕು. ಆದರೆ ಅನೇಕ ಜನರು ಆಹಾರವನ್ನು ತಿನ್ನುವಾಗ ಕೆಲವು ತಪ್ಪುಗಳನ್ನು ಮಾಡುತ್ತಾರೆ. ಅಂತಹ ತಪ್ಪುಗಳು ಅವರ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ (negative effect) ಬೀರುತ್ತವೆ.

ಇದನ್ನು ಓದಿ : ಹಾಸ್ಟೆಲ್‌ನಲ್ಲಿ ಹುಟ್ಟುಹಬ್ಬಕ್ಕೆ ಸ್ನೇಹಿತನಿಗೆ ಚಿತ್ರಹಿಂಸೆ ; ಎಂದೂ ನೋಡಿರದ Video ವೈರಲ್.!

ಹೀಗಾಗಿ ನೀವು ಊಟದ ಸಮಯದಲ್ಲಿ ಈ ಅಂಶಗಳನ್ನು ನೆನಪಿಟ್ಟುಕೊಳ್ಳಿ.

* ಊಟದ ಬಳಿಕ ಹೆಚ್ಚು ಹೊತ್ತು ಕುಳಿತುಕೊಳ್ಳುವುದು (sitting) ಒಳ್ಳೆಯದಲ್ಲ. ಇದರಿಂದ ಆರೋಗ್ಯ ಹಾಳಾಗುತ್ತದೆ.

* ಹಿತಕರವಾದ ಆಹಾರಗಳನ್ನು (Delicious foods) ಸಹ ಮಿತವಾಗಿ ಸೇವಿಸಬೇಕು.

* ಹೆಚ್ಚು ಉಪ್ಪು ಇರುವ ಆಹಾರವನ್ನು (Foods that are high in salt) ಸೇವಿಸುವುದನ್ನು ಕಡಿಮೆ ಮಾಡಿ.

* ಆದಷ್ಟು ಹಸಿರು ತರಕಾರಿಗಳನ್ನು (Green vegetables) ತಿನ್ನಲು ರೂಢಿ ಮಾಡಿಕೊಳ್ಳಿ.

ಇದನ್ನು ಓದಿ : KLC : ಕರ್ನಾಟಕ ವಿಧಾನ ಪರಿಷತ್ ಸಚಿವಾಲಯದಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ.!

* ಪ್ಲಾಸ್ಟಿಕ್ ವಸ್ತುಗಳಲ್ಲಿ (Plastic items) ಆಹಾರ ಹಾಕಿ ಓವನ್​ನಲ್ಲಿ ಇಟ್ಟು ಬಿಸಿ ಮಾಡಿ ತಿನ್ನುವ ತಪ್ಪು ಮಾಡಬೇಡಿ.

* ಸಂಸ್ಕರಿಸಿದ ಆಹಾರಗಳನ್ನು (Processed foods) ಸೇವಿಸುವುದು ಕೂಡ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ.

* ಯಾವುದೇ ಕಾರಣಕ್ಕೂ ಊಟವನ್ನು ಬಿಡಬಾರದು.

* ಅನೇಕ ಜನರು ಕೆಲಸ ಮಾಡುವಾಗ ಊಟ ಮಾಡುತ್ತಾರೆ. ಆದರೆ, ಈ ರೀತಿ ಮಾಡುವುದು ಸರಿಯಲ್ಲ.

ಇದನ್ನು ಓದಿ : ಸ್ಮಾರ್ಟ್‌ಫೋನ್‌ಲ್ಲಿ ಇರುವ aeroplane ಮೋಡ್’ನಿಂದ ಎಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ.?

* ಕೈಯಲ್ಲಿ ಫೋನ್​ ಸ್ಕ್ರೋಲಿಂಗ್​ ಮಾಡುತ್ತಾ ಇನ್ನೊಂದು ಕೈಯಲ್ಲಿ ಊಟ ಮಾಡುವುದನ್ನು ಮೊದಲು ನಿಲ್ಲಿಸಿ.

* ಊಟದೊಂದಿಗೆ ಯಾವುದೇ ಕಾರಣಕ್ಕೂ ಸೋಡಾ ಸೇವಿಸಬಾರದು (Do not drink soda for any reason).

* ಸಮಯಕ್ಕೆ ಸರಿಯಾಗಿ ಊಟ ಮಾಡದಿರುವುದು ಕೂಡ ಆರೋಗ್ಯಕ್ಕೆ ಒಳ್ಳೆಯದಲ್ಲ.

* ಆಹಾರವನ್ನು ತಿನ್ನುವಾಗ ಅದರ ಮೇಲೆ ಮಸಾಲೆ ಹಾಕಬೇಡಿ.

WhatsApp Channel Join Now
Telegram Group Join Now
Instagram Account Follow Now
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!