Friday, October 18, 2024
spot_img
spot_img
spot_img
spot_img
spot_img
spot_img
spot_img

Belagavi : ಪತ್ನಿಯೊಂದಿಗೆ ಪೊಲೀಸ್ ಕಾನ್ಸ್‌ಟೇಬಲ್ ಅನುಚಿತ ವರ್ತನೆ ; ಪತಿಯಿಂದ ದೂರು ದಾಖಲು.!

spot_img
WhatsApp Group Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ಬೆಳಗಾವಿ : ಬೆಳಗಾವಿ ಕಮೀಷನರೇಟ್ ವ್ಯಾಪ್ತಿಯಲ್ಲಿರುವ ಠಾಣೆಯಲ್ಲಿ ಪತ್ನಿ ಹಿಂದೆ ಬಿದ್ದ ಪೊಲೀಸ್ ಕಾನ್ಸ್‌ಟೇಬಲ್ (Police constable) ವಿರುದ್ಧ ಆಕೆಯ ಪತಿ ದೂರು ನೀಡಿದ ಘಟನೆ ನಡೆದಿದೆ.

ಹಿರೇಬಾಗೇವಾಡಿ (Hirebagewadi) ಪೊಲೀಸ್‌ ಠಾಣೆಯ ಪೇದೆ ಮಡ್ಡೆಪ್ಪ ಮಂಟೂರ ಎಂಬಾತನ ವಿರುದ್ಧ ಈ ಆರೋಪ ಕೇಳಿಬಂದಿದೆ.

ಇದನ್ನು ಓದಿ : Police : ಕರ್ತವ್ಯನಿರತ ಹೆಡ್ ಕಾನ್ಸ್‌ಟೇಬಲ್ ಮೇಲೆ ಶಾಸಕಿ ಪುತ್ರನಿಂದ ಹಲ್ಲೆ.!

ಹಿಂದೆ ಹಲಗಾ ಗ್ರಾಮದ ಬೀಟ್‌ ಪೇದೆಯಾಗಿ ಕರ್ತವ್ಯ (duty) ನಿರ್ವಹಿಸುತ್ತಿದ್ದನು. ಈ ವೇಳೆ ಅಲ್ಲಿಯೇ ಇದ್ದ ದಾಬಾ ಮಾಲೀಕನ ಜೊತೆ ಪರಿಚಯವಾಗಿದೆ.

ಬೀಟ್ ಪೊಲೀಸ್ ಆಗಿದ್ದರಿಂದ ದಾಬಾದಲ್ಲಿ ಊಟ ಮಾಡಿ ವಿಶ್ರಾಂತಿ ಪಡೆಯುತ್ತಿದ್ದನು ಎನ್ನಲಾಗಿದೆ. ಬಳಿಕ ದಾಬಾ ಮಾಲೀಕನ ಪತ್ನಿಯೊಂದಿಗೆ ಸ್ನೇಹ ಬೆಳೆಸಿ ಅನುಚಿತವಾಗಿ ವರ್ತಿಸಿದ್ದಾನೆ.

ಈ ವಿಚಾರವಾಗಿ ನೊಂದ ವ್ಯಕ್ತಿ ಠಾಣೆಗೆ ತೆರಳಿ ಅಧಿಕಾರಿಗಳ ಗಮನಕ್ಕೆ ತಂದಿದ್ದಾನೆ. ಈ ವೇಳೆ ಅಧಿಕಾರಿಗಳು ಆತನನ್ನು ತೀವ್ರ ತರಾಟೆಗೆ ತೆಗೆದುಕೊಂಡು ಬುದ್ದಿಮಾತು ಹೇಳಿದ್ದಾರೆ. ಆದರೂ ಕಾನ್ಸ್‌ಟೇಬಲ್ ತನ್ನ ಹಳೆಯ ಚಾಳಿ ಬಿಟ್ಟಿರಲಿಲ್ಲ. ಈ ಹಿನ್ನೆಲೆ ಮಹಿಳೆಯ ಪತಿ ನಗರ ಪೊಲೀಸ್‌ ಆಯುಕ್ತರಿಗೆ ದೂರು (complaint) ನೀಡಿದ್ದಾನೆ.

ಇದನ್ನು ಓದಿ : Accusation : ವಿಚಾರಣೆ ನೆಪದಲ್ಲಿ ಮಹಿಳೆಗೆ ಹಿಗ್ಗಾಮುಗ್ಗಾ ಥಳಿಸಿದ ಪೊಲೀಸರು.?

ಈ ದೂರಿನನ್ವಯ ಪೊಲೀಸ್‌ ಆಯುಕ್ತರು ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಬೆಳಗಾವಿ ಗ್ರಾಮೀಣ ಎಸಿಪಿಗೆ ಸೂಚನೆ ನೀಡಿದ್ದಾರೆ.

WhatsApp Group Join Now
Telegram Group Join Now
Instagram Account Follow Now
spot_img
spot_img
- Advertisment -spot_img