Friday, October 18, 2024
spot_img
spot_img
spot_img
spot_img
spot_img
spot_img
spot_img

POCSO ಕೇಸ್ : ಮುರುಘಾಶ್ರೀ ಜಾಮೀನಿನ ಮೇಲೆ ಬಿಡುಗಡೆ.!

spot_img
WhatsApp Group Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ಬೆಂಗಳೂರು : ಚಿತ್ರದುರ್ಗ 2ನೇ ಅಪರ ಜಿಲ್ಲಾ & ಸತ್ರ ನ್ಯಾಯಾಲಯವು ಪೋಕ್ಸೋ ಪ್ರಕರಣದಲ್ಲಿ ಜೈಲಿನಲ್ಲಿರುವ ಮುರುಘಾಶ್ರೀ ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡುವಂತೆ ಆದೇಶಿಸಿದೆ.

ಈ ಹಿನ್ನೆಲೆಯಲ್ಲಿ ಇಂದು 4 ಗಂಟೆಯ ಬಳಿಕ ಮುರುಘಾ ಶ್ರೀ ಜೈಲಿನಿಂದ ಬಿಡುಗಡೆಯಾಗಲಿದ್ದಾರೆ ಎಂದು ಚಿತ್ರದುರ್ಗದ ಮುರುಘಾ ಶ್ರೀಗಳ ಪರ ವಕೀಲ ವಿಶ್ವನಾಥಯ್ಯ ಪ್ರತಿಕ್ರಿಯೆ ನೀಡಿದ್ದಾರೆ.

ಚಿತ್ರದುರ್ಗ 2ನೇ ಅಪರ ಜಿಲ್ಲಾ & ಸತ್ರ ನ್ಯಾಯಾಲಯದಲ್ಲಿ ಮುರುಘಾ ಶ್ರೀ ಜಾಮೀನು ಅರ್ಜಿ ವಿಚಾರಣೆಯು ಇಂದು ನಡೆಯಿತು.

ಇದನ್ನು ಓದಿ : ಇನ್ಮುಂದೆ ಅಪ್ರಾಪ್ತರು e-scooter ಓಡಿಸಬಹುದು : ಕೇಂದ್ರ ಸರ್ಕಾರದ ನಿರ್ಧಾರ ; condition apply.!

ಮೊದಲ ಪೋಕ್ಸೋ ಪ್ರಕರಣದಲ್ಲಿ ಎ1 ಆರೋಪಿಯಾದ ಶಿವಮೂರ್ತಿ ಶರಣರಿಗೆ ಹೈಕೋರ್ಟ್ 2023ರ ನ. 8ರಂದು ಜಾಮೀನು ನೀಡಿತ್ತು. ಆರೋಪಿ ಪ್ರಬಲರಾಗಿದ್ದು, ಸಾಕ್ಷಿ ನಾಶಪಡಿಸುವ, ಪ್ರಾಬಲ್ಯ ಬೀರುವ ಸಾಧ್ಯತೆ ಇದೆ ಎಂದು ಜಾಮೀನು ಪ್ರಶ್ನಿಸಿ ಸಂತ್ರಸ್ತೆ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿದ್ದರು.

ಹೀಗಾಗಿ ಸುಪ್ರೀಂ ಕೋರ್ಟ್ ಮುಖ್ಯ ಸಾಕ್ಷಿ ವಿಚಾರಣೆ ಪೂರ್ಣಗೊಳ್ಳುವವರೆಗೂ ಬಂಧನದಲ್ಲಿರಲು ಸೂಚಿಸಿತ್ತು. ಅದರಂತೆ 2024ರ ಏಪ್ರಿಲ್ 29 ರಂದು ಪುನಃ ಬಂಧನಕ್ಕೆ ಒಳಗಾಗಿದ್ದರು.

ಇದನ್ನು ಓದಿ : ದೊಡ್ಡ ಕುರಿಯನ್ನೇ ಹೊತ್ತೊಯ್ದ ದೈತ್ಯಾಕಾರದ ಹದ್ದು; ವಿಡಿಯೋ Viral.!

ಇದೀಗ ಎಲ್ಲ ಸಾಕ್ಷಿಗಳ ವಿಚಾರಣೆ ಪೂರ್ಣವಾಗಿದ್ದು, ತಮ್ಮ ಕಕ್ಷಿದಾರರನ್ನು ಜಾಮೀನಿನ ಮೇಲೆ ಬಿಡುಗಡೆಗೊಳಿಸುವಂತೆ ಕೋರ್ಟ್​ಗೆ ಮುರುಘಾ ಶ್ರೀ ಪರ ಹಿರಿಯ ವಕೀಲ ಸಿ.ವಿ. ನಾಗೇಶ್ ಇಂದು ಮನವಿ ಮಾಡಿದರು.

WhatsApp Group Join Now
Telegram Group Join Now
Instagram Account Follow Now
spot_img
spot_img
- Advertisment -spot_img