ಜನಸ್ಪಂದನ ನ್ಯೂಸ್, ಡೆಸ್ಕ್ : ಟೇಕ್‌ಆಫ್ ಆದ ಕೆಲವೇ ಕ್ಷಣಗಳಲ್ಲಿ ಹೈವೇಯಲ್ಲಿ ಲಘು ವಿಮಾನ (Plane) ಯೊಂದು ಬಿದ್ದ ಪರಿಣಾಮವಾಗಿ ರಸ್ತೆಯಲ್ಲಿದ್ದ ಸಂಚರಿಸುತ್ತಿದ್ದ 2 ಕಾರುಗಳು ಬೆಂಕಿಗೆ ಆಹುತಿಯಾಗಿದ್ದಲ್ಲದೇ ಇಬ್ಬರ ದುರ್ಮರಣ ಸಂಭವಿದ ಘಟನೆಯೊಂದು ನಡೆದಿದೆ.
ಹೌದು, ಮಧ್ಯ ಇಟಲಿಯಲ್ಲಿ ಜನನಿಬಿಡ ಹೈವೇ ಮೇಲೆಯೇ ಸಂಭವಿಸಿದ ಲಘು ವಿಮಾನ (Plane) ದುರಂತವು ಮತ್ತೊಮ್ಮೆ ವಿಮಾನಯಾನ ಸುರಕ್ಷತೆ ಕುರಿತು ಆತಂಕವನ್ನು ಮೂಡಿಸಿದೆ. ಟೇಕ್‌ಆಫ್ ಆದ ಕೆಲವೇ ಕ್ಷಣಗಳಲ್ಲಿ ತಾಂತ್ರಿಕ ದೋಷದಿಂದಾಗಿ ವಿಮಾನ (Plane) ವು ನಿಯಂತ್ರಣ ತಪ್ಪಿ ನೇರವಾಗಿ ರಸ್ತೆಯತ್ತ ಸಾಗಿ ಬಂದು ಪತನಗೊಂಡಿದೆ.
ವಿಮಾನ ಅಪಘಾತದ ವೇಳೆ ಬ್ರೆಸಿಯಾ ಬಳಿಯ A21 ಕಾರ್ಡಮೊಲ್ಲೆ-ಆಸ್ಪಿಟೇಲ್ ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ಎರಡು ಕಾರುಗಳು ಈ ದುರಂತದಲ್ಲಿ ಸುಟ್ಟು ಕರಗಲಾಗಿದ್ದು, ಸ್ಥಳದಲ್ಲಿ ಭಾರೀ ಬಿಕ್ಕಟ್ಟು ಉಂಟಾಯಿತು. ಸದ್ಯ ಅದರ ವಿಮಾನ (Plane) ಅಪಘಾತದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇದನ್ನು ಓದಿ : NIMHANS ಬೆಂಗಳೂರು : ಡಾಟಾ ಎಂಟ್ರಿ ಆಪರೇಟರ್ ಹುದ್ದೆಗೆ ಅರ್ಜಿ ಆಹ್ವಾನ.!
ವಿಷಯ ತಿಳಿದು ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ಮತ್ತು ರಕ್ಷಣಾ ಸಿಬ್ಬಂದಿ ಬೆಂಕಿ ನಂದಿಸಲು ಶ್ರಮಿಸಿದರು. ಈ ದುರಂತದಲ್ಲಿ ಗಾಯಗೊಂಡಿದ್ದ ಕಾರು ಚಾಲಕರನ್ನು ತಕ್ಷಣವೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಕಾರುಗಳಲ್ಲಿ ಇದ್ದ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಈ ಅಪಘಾತದ ಪರಿಣಾಮ ವಿಮಾನ (Plane) ದಲ್ಲಿದ್ದ ಇಬ್ಬರೂ ಸಾವನ್ನಪ್ಪಿದ್ದಾರೆ. ಮೃತಪಟ್ಟವರನ್ನು 75 ವರ್ಷದ ವಕೀಲ ಸೆರ್ಗಿಯೊ ರಾವಗ್ಲಿಯಾ ಮತ್ತು ಅವರ 55 ವರ್ಷದ ಪತ್ನಿ ಅನ್ನಾ ಮಾರಿಯಾ ಡಿ ಸ್ಟೆಫಾನೊ ಎನ್ನಲಾಗಿದೆ. ವಿಮಾನವು ನಿಯಂತ್ರಣ ತಪ್ಪಿ ಜನನಿಬಿಡ ಹೆದ್ದಾರಿಗೆ ಡಿಕ್ಕಿ ಹೊಡೆಯುವ ಮೊದಲು ಕೆಲವೇ ಕ್ಷಣಗಳ ಮೊದಲು ಟೇಕ್ ಆಫ್ ಆಗಿತ್ತು ಎಂದು ವರದಿಯಾಗಿದೆ.
ಅಪಘಾತಕ್ಕೀಡಾದ ವಿಮಾನ (Plane) ದ ವಿಡಿಯೋ :
#BREAKING: Small Plane Crashes Onto Highway Near Brescia, 2 Dead in Fiery Wreck.
Witnesses described the plane spiraling out of control before it suddenly dropped into traffic and erupted into flames.
The pilot and one passenger both elderly were trapped in the wreckage and… pic.twitter.com/iEyJjXBa4L
— upuknews (@upuknews1) July 23, 2025
ಸಾರ್ವಜನಿಕರ ಆತಂಕ :
ಈ ಮಾದರಿಯ ಘಟನೆಗಳು ಪುನಃಪುನಃ ನಡೆಯುತ್ತಿರುವುದರಿಂದ, ಖಾಸಗಿ ವಿಮಾನ (Plane) ಸಂಸ್ಥೆಗಳ ತಾಂತ್ರಿಕ ಪರಿಶೀಲನೆ ಕುರಿತು ಸಾರ್ವಜನಿಕರಲ್ಲಿ ಆತಂಕ ಹೆಚ್ಚಾಗಿದೆ. “ವಿಮಾನ (Plane)ಗಳ ಶ್ರೇಣಿತ ಪರಿಶೀಲನೆ ಮತ್ತು ಸುರಕ್ಷಾ ಪ್ರಮಾಣೀಕರಣವನ್ನು ಕಟ್ಟುನಿಟ್ಟಾಗಿ ಪಾಲಿಸದಿದ್ದರೆ ಇಂಥ ದುರ್ಘಟನೆಗಳು ಮುಂದೆಯೂ ಸಂಭವಿಸಬಹುದೆಂಬ ಭೀತಿಯಿದೆ” ಎಂದು ನೆಟ್ಟಿಗರು ಸಾಮಾಜಿಕ ಜಾಲತಾಣಗಳಲ್ಲಿ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
Astrology : ಹೇಗಿದೆ ಗೊತ್ತಾ.? ಜುಲೈ 24 ರ ದ್ವಾದಶ ರಾಶಿಗಳ ಫಲಾಫಲ.!
ಜನಸ್ಪಂದನ ನ್ಯೂಸ್, ಜೋತಿಷ್ಯ (Astrology) : 2025 ಜುಲೈ 23, ಗುರುವಾರ ದಿನವಾದ ಇಂದು, ನಿಮ್ಮ ದಿನವು ಹೇಗಿರಲಿದೆ..? ಇಂದು ಯಾವ ರಾಶಿಯವರಿಗೆ ಶುಭ.? ಯಾವ ರಾಶಿಯವರು ಎಚ್ಚರಿಕೆ.? ಇಂದಿನ ದ್ವಾದಶ ರಾಶಿಗಳ ಫಲಾಫಲ (Astrology) ಹೇಗಿದೆ ನೋಡಿ.
ಇದನ್ನು ಓದಿ : NIMHANS ಬೆಂಗಳೂರು : ಡಾಟಾ ಎಂಟ್ರಿ ಆಪರೇಟರ್ ಹುದ್ದೆಗೆ ಅರ್ಜಿ ಆಹ್ವಾನ.!
ಇಂದಿನ ದ್ವಾದಶ ರಾಶಿಗಳ ಫಲಾಫಲ (Astrology) ಹೇಗಿದೆ :

*ಮೇಷ ರಾಶಿ*
ಕುಟುಂಬದ ಸದಸ್ಯರ ಆರೋಗ್ಯದ ಬಗ್ಗೆ ವೈದ್ಯಕೀಯ ಸಮಾಲೋಚನೆ ಅಗತ್ಯವಿದೆ. ಕೈಗೊಂಡ ವ್ಯವಹಾರಗಳಲ್ಲಿ ತೊಂದರೆಗಳು ಉಂಟಾಗುತ್ತದೆ. ಹೊಸ ಸಾಲದ ಪ್ರಯತ್ನಗಳು ನಡೆಯುತ್ತವೆ. ದೂರ ಪ್ರಯಾಣದ ಸೂಚನೆಗಳಿವೆ. ಮನೆಯ ವಾತಾವರಣ ಅಸ್ತವ್ಯಸ್ತವಾಗಿರುತ್ತದೆ. ಖರ್ಚು ಹೆಚ್ಚಾಗಲಿದೆ. ವೃತ್ತಿಪರ ವ್ಯವಹಾರಗಳು ಸಾಮಾನ್ಯವಾಗಿ ಸಾಗುತ್ತವೆ.
*ವೃಷಭ ರಾಶಿ*
ಹಣಕಾಸಿನ ವ್ಯವಹಾರಗಳು ನಿರುತ್ಸಾಹಗೊಳಿಸುತ್ತವೆ. ಮಿತ್ರರೊಂದಿಗೆ ಅನಿರೀಕ್ಷಿತ ವಿವಾದಗಳು ಉಂಟಾಗುತ್ತವೆ. ಪ್ರಯಾಣ ಮಾಡುವಾಗ ಜಾಗರೂಕರಾಗಿರಿ. ಪ್ರಮುಖ ಕೆಲಸಗಳಲ್ಲಿ ನೀವು ಹೆಚ್ಚು ಶ್ರಮ ಪಟ್ಟರೂ ಕೆಲಸಗಳು ಮುಂದಕ್ಕೆ ಸಾಗುವುದಿಲ್ಲ. ದೈವಿಕ ಸೇವಾ ಕಾರ್ಯಗಳಲ್ಲಿ ಭಾಗವಹಿಸುತ್ತೀರಿ. ವ್ಯಾಪಾರಗಳು ಲಾಭದಾಯಕವಾಗರುತ್ತವೆ. ಉದ್ಯೋಗಗಳಲ್ಲಿ ನಿಮ್ಮ ಮೌಲ್ಯವು ಹೆಚ್ಚಾಗುತ್ತದೆ.
*ಮಿಥುನ ರಾಶಿ*
ಆತ್ಮೀಯರಿಂದ ಶುಭಕಾರ್ಯಕ್ಕೆ ಆಹ್ವಾನಗಳು ಬರುತ್ತವೆ. ಆಕಸ್ಮಿಕ ಧನ ಲಾಭ ಪಡೆಯುತ್ತೀರಿ.ಮನೆಯ ಹೊರಗೆ ನಿಮ್ಮ ಉತ್ತಮ ಮಾತಿನಿಂದ ಎಲ್ಲರನ್ನೂ ಮೆಚ್ಚಿಸುತ್ತೀರಿ. ಕೆಲಸಗಳು ಹೊಸ ಉತ್ಸಾಹದಿಂದ ಪೂರ್ಣಗೊಳ್ಳುತ್ತವೆ. ವ್ಯಾಪಾರ ಉದ್ಯೋಗಗಳಲ್ಲಿ ನಿಮ್ಮ ಶ್ರಮಕ್ಕೆ ತಕ್ಕ ಮನ್ನಣೆ ದೊರೆಯುತ್ತದೆ.
*ಕಟಕ ರಾಶಿ*
ಪ್ರಮುಕ ವ್ಯಕ್ತಿಗಳೊಂದಿಗಿನ ಸಂಪರ್ಕಗಳು ವಿಸ್ತಾರಗೊಳ್ಳುತ್ತವೆ. ಹೊಸ ವಾಹನ ಯೋಗವಿದೆ. ಕೆಲವು ವ್ಯವಹಾರಗಳಲ್ಲಿ ನಿರ್ಧಾರಗಳು ಇದ್ದಕ್ಕಿದ್ದಂತೆ ಬದಲಾಗುತ್ತವೆ. ಸೇವಾ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತೀರಿ.ಹೊಸ ಕಾರ್ಯಕ್ರಮಗಳನ್ನು ಆರಂಭಿಸುತ್ತೀರಿ.ಆರ್ಥಿಕವಾಗಿ ಅನುಕೂಲಕರ ವಾತಾವರಣವಿರುತ್ತದೆ. ವ್ಯಾಪಾರ ಮತ್ತು ಉದ್ಯೋಗಗಳಲ್ಲಿ ನಿಮ್ಮ ಭವಿಷ್ಯವಾಣಿಗಳು ನಿಜವಾಗುತ್ತವೆ.
ಇದನ್ನು ಓದಿ : NIMHANS ಬೆಂಗಳೂರು : ಡಾಟಾ ಎಂಟ್ರಿ ಆಪರೇಟರ್ ಹುದ್ದೆಗೆ ಅರ್ಜಿ ಆಹ್ವಾನ.!
*ಸಿಂಹ ರಾಶಿ*
ಖರ್ಚುವೆಚ್ಚಗಳ ವಿಷಯದಲ್ಲಿ ಮರುಪರಿಶೀಲನೆ ಮಾಡುವುದು ಒಳ್ಳೆಯದು. ಸಣ್ಣ ಆರೋಗ್ಯ ಸಮಸ್ಯೆಗಳು ನೋವುಂಟು ಮಾಡುತ್ತವೆ. ಮನೆಯ ವಾತಾವರಣ ಸಮಸ್ಯಾತ್ಮಕವಾಗಿರುತ್ತದೆ . ಆಧ್ಯಾತ್ಮಿಕ ಚಿಂತನೆ ಹೆಚ್ಚಾಗುತ್ತದೆ. ಮನೆಯ ಹೊರಗಿನ ಪರಿಸ್ಥಿತಿಗಳು ಅನುಕೂಲಕರವಾಗಿರುವುದಿಲ್ಲ. ಕೈಗೊಂಡ ಕಾರ್ಯಗಳಲ್ಲಿ ಅಡೆತಡೆಗಳು ಎದುರಾಗುತ್ತವೆ. ವೃತ್ತಿ ಮತ್ತು ಉದ್ಯೋಗಗಳಲ್ಲಿ ಕಿರಿಕಿರಿಗಳು ಹೆಚ್ಚಾಗುತ್ತವೆ.
*ಕನ್ಯಾ ರಾಶಿ*
ಆರ್ಥಿಕ ವಾತಾವರಣ ಅಸ್ತವ್ಯಸ್ತವಾಗಿರುತ್ತದೆ. ವೃತ್ತಿಪರ ವ್ಯವಹಾರದಲ್ಲಿ ಕಠಿಣ ಪರಿಶ್ರಮವು ಫಲ ನೀಡುವುದಿಲ್ಲ. ಮನೆಯಲ್ಲಿ ಕೆಲವು ಜನರ ವರ್ತನೆಯು ಮಾನಸಿಕ ಸಮಸ್ಯೆಗಳನ್ನು ಉಂಟುಮಾಡುತ್ತವೆ. ಬಂಧುಮಿತ್ರರೊಡನೆ ವಿವಾದ ಉಂಟಾಗುತ್ತದೆ. ದೂರ ಪ್ರಯಾಣಗಳು ಮುಂದೂಡಲ್ಪಡುತ್ತವೆ. ಉದ್ಯೋಗಗಳಲ್ಲಿ ನಿರುತ್ಸಾಹ ವಾತಾವರಣವಿರುತ್ತದೆ.
*ತುಲಾ ರಾಶಿ*
ಹಣಕಾಸಿನ ತೊಂದರೆಗಳು ನಿವಾರಣೆಯಾಗುತ್ತವೆ. ಒಂದು ವ್ಯವಹಾರದಲ್ಲಿ ಎಲ್ಲರನ್ನೂ ಒಂದು ಮಾತಿನಲ್ಲಿ ನಿಲ್ಲುವಂತೆ ಮಾಡುತ್ತೀರಿ. ಹೊಸ ವಾಹನ ಖರೀದಿ ಯೋಗವಿದೆ. ಹೊಸ ಕಾರ್ಯಕ್ರಮಗಳನ್ನು ಆರಂಭಿಸಲಾಗುತ್ತದೆ. ದೂರದ ಬಂಧುಗಳಿಂದ ಶುಭ ಸುದ್ದಿ ದೊರೆಯುತ್ತದೆ. ವ್ಯಾಪಾರಗಳು ಸ್ವಲ್ಪಮಟ್ಟಿಗೆ ಸಾಮಾನ್ಯವಾಗಿ ಸಾಗುತ್ತವೆ, ಉದ್ಯೋಗಗಳು ಅನುಕೂಲಕರ ವಾತಾವರಣವನ್ನು ಹೊಂದಿರುತ್ತವೆ.
*ವೃಶ್ಚಿಕ ರಾಶಿ*
ಕೈಗೆತ್ತಿಕೊಂಡ ವ್ಯವಹಾರಗಳಲ್ಲಿ ಗೊಂದಲ ಉಂಟಾಗುತ್ತದೆ. ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ವಹಿಸುವುದು ಒಳ್ಳೆಯದಲ್ಲ. ಇವರ ಪರವಾಗಿ ಕಷ್ಟಗಳು ಅನಿವಾರ್ಯ. ಆಧ್ಯಾತ್ಮಿಕ ವಿಷಯಗಳತ್ತ ಗಮನ ಹರಿಸುವುದು ಉತ್ತಮ. ವ್ಯಾಪಾರದಲ್ಲಿ ಅಲ್ಪ ಲಾಭವನ್ನು ಪಡೆಯುತ್ತೀರಿ. ಉದ್ಯೋಗದಲ್ಲಿ ಕೆಲಸದ ಒತ್ತಡ ಅಧಿಕವಾಗಿರುತ್ತದೆ.
ಇದನ್ನು ಓದಿ : IB ACIO II ನೇಮಕಾತಿ 2025 : 3,717 ಹುದ್ದೆಗಳಿಗೆ ಅರ್ಜಿ ಆಹ್ವಾನ.!
*ಧನುಸ್ಸು ರಾಶಿ*
ನಿರುದ್ಯೋಗಿಗಳ ಶ್ರಮಕ್ಕೆ ಫಲವಾಗಿ ಹೊಸ ಅವಕಾಶಗಳು ದೊರೆಯುತ್ತವೆ .ಸ್ಥಿರಾಸ್ತಿ ಮಾರಾಟ ಲಾಭದಾಯಕವಾಗಿರುತ್ತದೆ.ಹೊಸ ಸ್ನೇಹಿತರು ಪರಿಚಯಗಳು ಹೆಚ್ಚಾಗುತ್ತವೆ.ಮಕ್ಕಳಿಗೆ ಶೈಕ್ಷಣಿಕ ವಿಷಯಗಳಲ್ಲಿ ಶುಭ ಸುದ್ದಿ ದೊರೆಯುತ್ತದೆ. ವ್ಯವಹಾರಗಳಲ್ಲಿ ಪ್ರಮುಖ ನಿರ್ಧಾರಗಳನ್ನು ಕಾರ್ಯಗತಗೊಳಿಸಲಾಗುತ್ತದೆ. ಉದ್ಯೋಗದಲ್ಲಿ ಬಡ್ತಿ ಹೆಚ್ಚಾಗುತ್ತದೆ.
*ಮಕರ ರಾಶಿ*
ಹಣದ ವಿಚಾರದಲ್ಲಿ ಏರುಪೇರು ಹೆಚ್ಚಾಗಲಿದೆ. ಅನಿರೀಕ್ಷಿತ ಪ್ರಯಾಣಗಳನ್ನು ಮಾಡಬೇಕಾಗುತ್ತದೆ. ಕುಟುಂಬ ಸದಸ್ಯರಿಂದ ಒತ್ತಡ ಹೆಚ್ಚಾಗುತ್ತದೆ. ಪುಣ್ಯಕ್ಷೇತ್ರಗಳಿಗೆ ಭೇಟಿ ನೀಡಲಾಗುತ್ತದೆ.ಪ್ರಮುಖ ವ್ಯವಹಾರಗಳು ನಿಧಾನವಾಗಿ ಸಾಗುತ್ತವೆ. ವ್ಯಾಪಾರ ವಿಸ್ತರಣೆಯ ಪ್ರಯತ್ನಗಳು ಮುಂದೂಡಲ್ಪಡುತ್ತವೆ ಮತ್ತು ವೃತ್ತಿಪರ ಉದ್ಯೋಗಗಳು ಹೆಚ್ಚುವರಿ ಕೆಲಸದ ಹೊರೆಯನ್ನು ಹೊಂದಿರುತ್ತವೆ.
*ಕುಂಭ ರಾಶಿ*
ಸಮಾಜದಲ್ಲಿ ಕೀರ್ತಿ ಹೆಚ್ಚಾಗುತ್ತದೆ. ಹಣಕಾಸಿನ ವ್ಯವಹಾರಗಳು ಆಶಾದಾಯಕವಾಗಿರುತ್ತವೆ ಮತ್ತು ವ್ಯವಹಾರಗಳು ನಿರೀಕ್ಷಿತ ಲಾಭವನ್ನು ಪಡೆಯುತ್ತವೆ. ಉದ್ಯಮಿಗಳಿಗೆ ಹೊಸ ಹೂಡಿಕೆಗಳು ದೊರೆಯುತ್ತವೆ. ಸಮಯಕ್ಕೆ ಸರಿಯಾಗಿ ಕೆಲಸಗಳನ್ನು ಪೂರ್ಣಗೊಳಿಸಲಾಗುತ್ತದೆ. ಅಧಿಕಾರಿಗಳ ಸಹಾಯದಿಂದ ಉದ್ಯೋಗದಲ್ಲಿ ಹೊಸ ಅವಕಾಶಗಳನ್ನು ಪಡೆಯುತ್ತೀರಿ.
*ಮೀನ ರಾಶಿ*
ಭೂಮಿಗೆ ಸಂಬಂಧಿಸಿದ ವ್ಯವಹಾರಗಳಲ್ಲಿ ಹೊಸ ಲಾಭವನ್ನು ಪಡೆಯುತ್ತೀರಿ. ಬಾಲ್ಯದ ಗೆಳೆಯರ ಭೇಟಿ ಸಂತೋಷವನ್ನು ತರುತ್ತದೆ. ವ್ಯಾಪಾರದಲ್ಲಿ ಪಾಲುದಾರರೊಂದಿಗೆ ವಿವಾದಗಳು ಬಗೆಹರಿಯುತ್ತವೆ. ಕೈಗೆತ್ತಿಕೊಂಡ ಕೆಲಸ ವಿಳಂಬವಾದರೂ ನಿಧಾನಗತಿಯಲ್ಲಿ ಪೂರ್ಣಗೊಳಿಸುತ್ತೀರಿ. ಉದ್ಯೋಗಗಳು ಮೊದಲಿಗಿಂತ ಉತ್ತಮ ವಾತಾವರಣವನ್ನು ಹೊಂದಿರುತ್ತವೆ.

Disclaimer : ಅಂತರ್ಜಾಲದಲ್ಲಿ ಲಭ್ಯವಿರುವ ವರದಿಗಳು ಮತ್ತು ಮಾಹಿತಿಗಳನ್ನು ಆಧರಿಸಿ ಈ ಲೇಖನವನ್ನು ಬರೆಯಲಾಗಿದೆ. ಹೀಗಾಗಿ ಜನಸ್ಪಂದನ ನ್ಯೂಸ್‌ಗೂ, ಈ ಲೇಖನಕ್ಕೂ (Astrology) ಸಂಬಂಧವಿಲ್ಲ ಮತ್ತು ಇದಕ್ಕೆ ನಾವು ಜವಾಬ್ದಾರಿಯಲ್ಲ.






