Thursday, September 19, 2024
spot_img
spot_img
spot_img
spot_img
spot_img
spot_img
spot_img

ಕತ್ತೆಗಳನ್ನು ಸಿಂಗರಿಸಿ ಜಾಮೂನು ತಿನ್ನಿಸಿದ ಜನ ; ಯಾಕಂತೀರಾ Video ನೋಡಿ.

spot_img
WhatsApp Group Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ಡೆಸ್ಕ್ : ಅತಿಯಾದ ಮಳೆ ಮತ್ತು ಪ್ರವಾಹದಿಂದಾಗಿ ಕೆಲವು ಪ್ರದೇಶಗಳು ನಾನಾ ಸಮಸ್ಯೆಗಳನ್ನು ಎದುರಿಸುತ್ತಿವೆ. ಭಾರೀ ಮಳೆಯಿಂದಾಗಿ ನಗರಗಳು ಮತ್ತು ಪಟ್ಟಣಗಳು ​​ಜಲಾವೃತವಾಗುತ್ತಿವೆ. ದೊಡ್ಡ ದೊಡ್ಡ ಕಟ್ಟಡಗಳು, ಸೇತುವೆಗಳು ಕೂಡ ಪ್ರವಾಹಕ್ಕೆ ಕೊಚ್ಚಿ ಹೋಗುತ್ತಿವೆ.

ಇದನ್ನು ಓದಿ : Special news : ಕ್ಯಾನ್ಸರ್, ಹೃದ್ರೋಗ ಅಪಾಯ ಕಡಿಮೆಯಂತೆ ಈ ರಕ್ತದ ಗುಂಪು ಹೊಂದಿರುವವರಿಗೆ.!

ಆದರೆ ಮಧ್ಯಪ್ರದೇಶದಲ್ಲಿ ಮಳೆ ಉತ್ತಮವಾದ ಹಿನ್ನಲೆ ಜನರು ಕತ್ತೆಗಳಿಗೆ ಸಿಹಿತಿಂಡಿಗಳನ್ನು ತಿನಿಸುವ ಮೂಲಕ ಮೊದಲ ಮಳೆಯನ್ನು ಸಂಭ್ರಮಿಸಿದ್ದಾರೆ. ಈ ರೀತಿ ಮಾಡುವುದರಿಂದ ವರುಣ ದೇವನ ಕೃಪೆಗೆ ಪಾತ್ರವಾಗುತ್ತವೆ ಎಂಬುದು ಅಲ್ಲಿನ ಜನರ ನಂಬಿಕೆ.

ಮಧ್ಯಪ್ರದೇಶದ ಮಂಡ್​ಸೌರ್​ ಜಿಲ್ಲೆಯ ಹಲವು ಭಾಗಗಳಲ್ಲಿ ಇನ್ನೂ ಸರಿಯಾಗಿ ಮಳೆಯಾಗಿಲ್ಲ. ಈ ಕಾರಣದಿಂದಾಗಿ ಜನರು ಬರಗಾಲ ಬಾರದೇ ಇರಲು ಕತ್ತೆಗಳಿಗೆ ಮದುವೆ ಮಾಡಿಸಿದ್ದಾರೆ.

ಇದನ್ನು ಓದಿ : Lokayukta trap : ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದ ಉಪ ತಹಶೀಲ್ದಾರ..!

ಇದಾದ ಕೆಲ ದಿನಗಳಿಗೆ ಪ್ರದೇಶದ ಸುತ್ತಮುತ್ತ ಭಾರೀ ಮಳೆಯಾಗಿದ್ದು, ಕತ್ತೆಗಳಿಗೆ ಗುಲಾಬ್​​​ ಜಾಮೂನು ತಿನ್ನಿಸುವ ಮೂಲಕ ಸಂಭ್ರಮಿಸಿದ್ದಾರೆ. ಇದೊಂದು ವಿಶಿಷ್ಟ ಸಂಪ್ರದಾಯವಾಗಿದ್ದು, ಈ ರೀತಿ ಮಾಡುವುದರಿಂದ ವರುಣ ದೇವನ ಕೃಪೆಗೆ ಪಾತ್ರವಾಗುತ್ತೇವೆ ಎಂಬ ನಂಬಿಕೆ ಜನರಲ್ಲಿದೆ.

ವೈರಲ್ ವಿಡಿಯೋದಲ್ಲಿರುವ ದೃಶ್ಯ :
ಕತ್ತೆಗಳಿಗೆ ಸ್ನಾನ ಮಾಡಿಸುವ ಜನ ಬಳಿಕ ಅದಕ್ಕೆ ಹೂವಿನ ಹಾರಗಳನ್ನು ಹಾಕಿ ಪೂಜೆ ಮಾಡುತ್ತಾರೆ. ಇದಾದ ಬಳಿಕ ಅವುಗಳಿಗೆ ನೈವೇದ್ಯವಾಗಿ ಗುಲಾಬ್​ ಜಾಮೂನ್​ಗಳನ್ನು ತಿನ್ನಿಸುವುದನ್ನು ವೈರಲ್​ ಆಗಿರುವ ವಿಡಿಯೋದಲ್ಲಿ ನೋಡಬಹುದಾಗಿದೆ.

ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ಜನರು ಅಚ್ಚರಿಗೊಂಡಿದ್ದು, ಕಮೆಂಟ್​ ಮಾಡುತ್ತಿದ್ದಾರೆ.

ಇದನ್ನು ಓದಿ : 3 ತಿಂಗಳ ಫ್ರೀ ರಿಚಾರ್ಜ್ ಲಭ್ಯ.! ಈ ಮೆಸೇಜ್ ನಿಮ್ಗೂ ಬಂತಾ.? Click ಮಾಡೋದಕ್ಕಿಂತ ಮುಂಚೆ ಈ ಸುದ್ದಿ ಓದಿ.

ಇನ್ನೂ ಹಲವು ಪ್ರದೇಶಗಳಲ್ಲಿ ಮಳೆ ಬರೆಸಲು ಜನರು ನಡೆಸುವ ವಿವಿಧ ಆಚರಣೆಗಳಲ್ಲಿ ಕತ್ತೆಗಳಿಗೆ ಮದುವೆ ಮಾಡಿಸುವುದು ಕೂಡ ಸೇರಿದೆ. ಮಳೆಗಾಲ ಆರಂಭವಾಗಿ ಒಂದು ಹನಿ ನೀರು ಆಕಾಶದಿಂದ ಭೂಮಿಗೆ ಬೀಳದೆ ಇದ್ದಾಗ ಜನರು ಕತ್ತೆಗಳಿಗೆ ಮದುವೆ ಮಾಡಿಸುತ್ತಾರೆ. ಏಕೆಂದರೆ ಕತ್ತೆಗಳಿಗೆ ಮಾಡುವುದರಿಂದ ವರುಣ ದೇವನ ಕೃಪೆಗೆ ಪಾತ್ರವಾಗುತ್ತೇವೆ ಎಂಬುದು ಜನರ ನಂಬಿಕೆಯಾಗಿದೆ.

WhatsApp Group Join Now
Telegram Group Join Now
Instagram Account Follow Now
spot_img
spot_img
- Advertisment -spot_img