ಜನಸ್ಪಂದನ ನ್ಯೂಸ್, ಆರೋಗ್ಯ : ಬಹಳಷ್ಟು ಜನರಿಗೆ ಮೊಟ್ಟೆಯೆಂದರೆ (Egg) ಪಂಚಪ್ರಾಣ. ನಮ್ಮ ದೇಹಕ್ಕೆ ಅಗತ್ಯವಾದ ಪ್ರಮುಖ ಪೋಷಕಾಂಶಗಳನ್ನು ಮೊಟ್ಟೆ ಸೇವನೆಯಿಂದ ಪಡೆಯಬಹುದು.
ಪ್ರತಿನಿತ್ಯ ಮೊಟ್ಟೆ ತಿನ್ನುವುದರಿಂದ ಹಲವಾರು ಆರೋಗ್ಯ ಪ್ರಯೋಜನಗಳಿವೆ ಎನ್ನಬಹುದು. ಕೆಲವರು ಮೊಟ್ಟೆಯನ್ನು ಬೇಯಿಸಿ ತಿಂದರೆ ಇನ್ನೂ ಕೆಲವರು ಆಮ್ಲೆಟ್ ಮಾಡಿ ತಿನ್ನಲು ಇಷ್ಟಪಡುತ್ತಾರೆ.
ಆದರೆ ಆಮ್ಲೆಟ್ ಅಥವಾ ಬೇಯಿಸಿದ ಮೊಟ್ಟೆ (Omelet or boiled eggs) ಇವೆರಡರಲ್ಲಿ ಆರೋಗ್ಯಕ್ಕೆ ಯಾವುದು ಒಳ್ಳೆಯದು ಎಂಬುದು ಗೊತ್ತಾ.?
ಇದನ್ನು ಓದಿ : ವಿವಾಹಿತ ಮಹಿಳೆಯರಿಂದ ಕ್ರೌರ್ಯ ಕಾನೂನು ದುರ್ಬಳಕೆ : Supreme Court
ಇವೆರಡರಲ್ಲಿ ನಿಮ್ಮ ಮೊದಲ ಆಯ್ಕೆ ಬೇಯಿಸಿದ ಮೊಟ್ಟೆಯಾಗಿರಲಿ. ಏಕೆಂದರೆ ಬೇಯಿಸಿದ ಮೊಟ್ಟೆಯಲ್ಲಿ ಕಡಿಮೆ ಕ್ಯಾಲೋರಿಗಳನ್ನು (Low calories) ಇರುತ್ತದೆ. ಮೊಟ್ಟೆಯನ್ನು ಕುದಿಸುವುದರಿಂದ ಅದರ ಎಲ್ಲಾ ಪೋಷಕಾಂಶಗಳು ಸಂರಕ್ಷಿಸಲ್ಪಡುತ್ತವೆ (Nutrients are preserved).
ಮೊಟ್ಟೆಯು ಕ್ಯಾಲ್ಸಿಯಂ, ಪ್ರೋಟೀನ್, ಕಬ್ಬಿಣ, ಮೆಗ್ನೀಸಿಯಮ್, ಸತು, ವಿಟಮಿನ್ ಎ, ವಿಟಮಿನ್ ಡಿ, ವಿಟಮಿನ್ ಬಿ 12 ಮತ್ತು ವಿಟಮಿನ್ ಇ, ಆರೋಗ್ಯಕರ ಕೊಬ್ಬುಗಳು ಮತ್ತು ಒಮೆಗಾ -3 ಕೊಬ್ಬಿನಾಮ್ಲಗಳಂತಹ ಪೋಷಕಾಂಶಗಳನ್ನು ಹೊಂದಿದೆ.
ಮೊಟ್ಟೆಗಳು ಸಂಪೂರ್ಣ ಪ್ರೋಟೀನ್ ಭರಿತವಾಗಿದ್ದು (Full of protein), ಎಲ್ಲ ಒಂಬತ್ತು ಅಮೈನೋ ಆಮ್ಲಗಳನ್ನು ಹೊಂದಿವೆ. ಇದು ಸ್ನಾಯುಗಳ ಆರೋಗ್ಯ, ಬೆಳವಣಿಗೆ ಮತ್ತು ದೇಹದ ತೂಕ ನಿರ್ವಹಣೆಗೆ (Growth and body weight maintenance) ಸಹಾಯಕ.
ಇದನ್ನು ಓದಿ : ಸ್ಮಾರ್ಟ್‌ಫೋನ್‌ಲ್ಲಿ ಇರುವ aeroplane ಮೋಡ್’ನಿಂದ ಎಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ.?
ಪೋಷಕಾಂಶಗಳ ವಿಚಾರಕ್ಕೆ ಬಂದರೆ ಬೇಯಿಸಿದ ಮೊಟ್ಟೆಗಳು ತಿನ್ನಲು ತುಂಬಾ ಯೋಗ್ಯವಾಗಿವೆ ಎನ್ನಲಾಗಿದೆ. ತರಕಾರಿಗಳೊಂದಿಗೆ ತಯಾರಿಸಿದ್ದಲ್ಲಿ ಬೇಯಿಸಿದ ಮೊಟ್ಟೆಗಳಿಗಿಂತ ಆಮ್ಲೆಟ್ ಆರೋಗ್ಯಕರ ಆಯ್ಕೆಯಾಗಿದೆ. ಆದರೆ, ಎಣ್ಣೆ ಮತ್ತು ಚೀಸ್ (oil and cheese) ಬಳಸಿ ಆಮ್ಲೆಟ್ ತಯಾರಿಸಿದರೆ ಅದು ಆರೋಗ್ಯಕ್ಕೆ ಉತ್ತಮವಲ್ಲ.
ಆಮ್ಲೆಟ್ ವಿಚಾರಕ್ಕೆ ಬರುವುದಾದರೆ, ಇದು ರುಚಿಕರವಾಗಿರುತ್ತದೆ. ಇನ್ನೂ ಆಮ್ಲೆಟ್ಗೆ ತರಕಾರಿಗಳನ್ನು ಸೇರಿಸಿದರೆ ಮಾತ್ರ ಅದು ಆರೋಗ್ಯಕರ ಆಹಾರವಾಗಿದೆ.
ತರಕಾರಿ ಬೇಡವೆಂದು ಬೆಣ್ಣೆ ಮತ್ತು ಅಡುಗೆ ಎಣ್ಣೆಗಳಂತಹ ಪದಾರ್ಥಗಳನ್ನು ಬಳಸಿದರೆ ಆಮ್ಲೆಟ್‌ಗಳಲ್ಲಿ ಕ್ಯಾಲೋರಿಗಳು ಮತ್ತು ಸ್ಯಾಚುರೇಟೆಡ್ ಕೊಬ್ಬು ಹೆಚ್ಚಾಗುತ್ತದೆ ಎಂದು ವರದಿಗಳು ತಿಳಿಸಿವೆ.
ಹಿಂದಿನ ಸುದ್ದಿ : ವಿವಾಹಿತ ಮಹಿಳೆಯರಿಂದ ಕಾನೂನು ದುರ್ಬಳಕೆ; ಸುಪ್ರೀಂ ಕೋರ್ಟ್
ಜನಸ್ಪಂದನ ನ್ಯೂಸ್, ಡೆಸ್ಕ್ : ತಮ್ಮ ಸ್ವಾರ್ಥಕ್ಕಾಗಿ (own selfishness) ಗಂಡ ಮತ್ತು ಅತ್ತೆ ಮಾವಂದಿರಿಗೆ ಕಿರುಕುಳ ನೀಡಲು ವಿವಾಹಿತ ಮಹಿಳೆಯರು (Married women) ಕ್ರೌರ್ಯ ಕಾನೂನನ್ನು ವ್ಯಾಪಕವಾಗಿ ಬಳಸುತ್ತಿದ್ದಾರೆ. ಈ ಮೂಲಕ ಕ್ರೌರ್ಯ ಕಾನೂನನ್ನು ದುರ್ಬಳಕೆ (Abuse of Cruelty Law) ಮಾಡಿಕೊಳ್ಳುತ್ತಿದ್ದಾರೆ ಎಂದು ಸುಪ್ರೀಂ ಕೋರ್ಟ್ ಕಳವಳ ವ್ಯಕ್ತಪಡಿಸಿದೆ.
ಇದನ್ನು ಓದಿ : ಮದುವೆಯಾಗಿ 7 ವರ್ಷ ಕಳೆದರೂ First Night ಗೆ ಒಪ್ಪದ ಮಹಿಳೆ; ಹೈಕೋರ್ಟ್ ಹೇಳಿದ್ದೇನು.?
ಕೆಲ ದಿನಗಳ ಹಿಂದೆ ಬೆಂಗಳೂರಿನ ಟೆಕ್ಕಿ ಅತುಲ್ ಸುಭಾಷ್ (34) ಅವರು ಹಣ ಸುಲಿಗೆ ಮಾಡಲು ಪತ್ನಿ ಮತ್ತು ಆಕೆಯ ಕುಟುಂಬ ತನ್ನ ವಿರುದ್ಧ ಸುಳ್ಳು ಪ್ರಕರಣಗಳನ್ನು (false case) ದಾಖಲಿಸುತ್ತಿದೆ ಎಂದು ಆರೋಪಿಸಿ ಆತ್ಮಹತ್ಯೆಗೆ ಶರಣಾಗಿದ್ದರು. ಅವರಿಗೆ ನ್ಯಾಯಕ್ಕಾಗಿ ಹೆಚ್ಚುತ್ತಿರುವ ಬೇಡಿಕೆಗಳ ಮಧ್ಯೆ ಸುಪ್ರೀಂ ಕೋರ್ಟ್ ಈ ಕಳವಳ ವ್ಯಕ್ತಪಡಿಸಿದೆ.
ಗಂಡ ಮತ್ತು ಆತನ ಸಂಬಂಧಿಕರಿಂದ ಕ್ರೌರ್ಯವನ್ನು ದಂಡಿಸುವ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 498 ಎ ಅನ್ನು ವಿವಾಹಿತ ಮಹಿಳೆಯರು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ (misuse) ಎಂದು ನ್ಯಾಯಾಲಯ ಮಂಗಳವಾರ ಪ್ರಕರಣದ (ದಾರಾ ಲಕ್ಷ್ಮಿ ನಾರಾಯಣ ಮತ್ತು ಇತರರು ವಿರುದ್ಧ ತೆಲಂಗಾಣ ರಾಜ್ಯ ಮತ್ತು ಇನ್ನೊಂದು) ವಿಚಾರಣೆ ವೇಳೆ ಹೇಳಿದೆ ಎಂದು ಬಾರ್ ಅಂಡ್ ಬೆಂಚ್ ವರದಿ ಮಾಡಿದೆ.
ಈ ನಿಬಂಧನೆಯು (Provision) ಮಹಿಳೆಯರನ್ನು ಕೌಟುಂಬಿಕ ಹಿಂಸಾಚಾರ ಮತ್ತು ಕಿರುಕುಳದಿಂದ ರಕ್ಷಿಸುವ ಉದ್ದೇಶವನ್ನು (Intended to protect against domestic violence and harassment) ಹೊಂದಿದ್ದು, ವೈಯಕ್ತಿಕ ದ್ವೇಷವನ್ನು ಬಿಚ್ಚಿಡಲು ಮಹಿಳೆಯರು ಈ ನಿಬಂಧನೆಯನ್ನು ಸಾಧನವಾಗಿ ಬಳಸುವ ಪ್ರವೃತ್ತಿ ಹೆಚ್ಚುತ್ತಿದೆ.
ಕೆಲವು ಮಹಿಳೆಯರು ಪತಿ ಮತ್ತು ಅವರ ಕುಟುಂಬಸ್ಥರನ್ನು ತಮ್ಮ ಅಸಮಂಜಸ ಬೇಡಿಕೆಗಳನ್ನು (unreasonable demands) ಅನುಸರಿಸುವಂತೆ ಒತ್ತಾಯಿಸಲು ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ನ್ಯಾಯಮೂರ್ತಿಗಳಾದ ಬಿ. ವಿ. ನಾಗರತ್ನ ಮತ್ತು ಎನ್. ಕೋಟಿಶ್ವರ್ ಸಿಂಗ್ ಅವರ ನ್ಯಾಯಪೀಠವು ತಿಳಿಸಿದೆ.
ಇದನ್ನು ಓದಿ : KLC : ಕರ್ನಾಟಕ ವಿಧಾನ ಪರಿಷತ್ ಸಚಿವಾಲಯದಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ.!
ಮಹಿಳೆಯೊಬ್ಬರು ಪತಿ ಮತ್ತು ಅತ್ತೆ ಮಾವನ ವಿರುದ್ಧ ದಾಖಲಿಸಿದ್ದ ಕ್ರೌರ್ಯ ಮತ್ತು ವರದಕ್ಷಿಣೆ ಪ್ರಕರಣಗಳನ್ನು (Dowry cases) ವಜಾಗೊಳಿಸುವಾಗ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
ತೆಲಂಗಾಣ ಹೈಕೋರ್ಟ್ (Telangana High Court) ಪ್ರಕರಣವನ್ನು ವಜಾಗೊಳಿಸಲು ನಿರಾಕರಿಸಿತ್ತು. ಇದನ್ನು ಪ್ರಶ್ನಿಸಿ ಪತಿ ಮತ್ತು ಅವರ ಕುಟುಂಬ ಸದಸ್ಯರು ಮೇಲ್ಮನವಿ ಸಲ್ಲಿಸಿದ್ದರು. ಪತಿ ಡಿವೋರ್ಸ್ ಕೋರಿದ ಬಳಿಕ ಮಹಿಳೆ ಕೇಸ್ ದಾಖಲಿಸಿದ್ದರು. ವಾದಗಳನ್ನು ಪರಿಶೀಲಿಸಿದ (Arguments checked) ನಂತರ, ಆಕೆ ತನ್ನ ವೈಯಕ್ತಿಕ ಕುಂದು ಕೊರತೆಗಳನ್ನು ಪರಿಹರಿಸಿಕೊಳ್ಳಲು ಪ್ರಕರಣ ದಾಖಲಿಸಿದ್ದಾಳೆ. ಮಹಿಳೆಯರನ್ನು ರಕ್ಷಿಸುವ ಉದ್ದೇಶದ ಕಾನೂನು ನಿಬಂಧನೆಗಳನ್ನು ಈಕೆ ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂದು ಸುಪ್ರೀಂ ಕೋರ್ಟ್ (Supreme Court) ತೀರ್ಮಾನಿಸಿದೆ ಎಂದು ವರದಿಯಿಂದ ತಿಳಿದು ಬಂದಿದೆ.