ಜನಸ್ಪಂದನ ನ್ಯೂಸ್, ಧಾರವಾಡ : ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮ (NWKRTC) ನಲ್ಲಿ ಸಹಾಯಕ ಸಂಚಾರ ನಿರೀಕ್ಷಕರ ಹುದ್ದೆಗಳಿಗೆ ಹೊಸ ನೇಮಕಾತಿ ಪ್ರಕಟಣೆ ಬಿಡುಗಡೆಯಾಗಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಈ ನೇಮಕಾತಿ ಪ್ರಕ್ರಿಯೆಯನ್ನು ನಡೆಸುತ್ತಿದೆ.
ಆಸಕ್ತಿ ಮತ್ತು ಅರ್ಹತೆ ಹೊಂದಿರುವ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ ಮೂಲಕ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಅಭ್ಯರ್ಥಿಗಳು ನಿಗದಿತ ದಿನಾಂಕಕ್ಕೊಳಗಾಗಿ ಅರ್ಜಿ ಸಲ್ಲಿಸುವುದು ಮುಖ್ಯವಾಗಿದೆ.
ಈ ನೇಮಕಾತಿಯು ಸರ್ಕಾರಿ ಉದ್ಯೋಗಕ್ಕಾಗಿ ಕಾಯುತ್ತಿರುವ ಅಭ್ಯರ್ಥಿಗಳಿಗೆ ಉತ್ತಮ ಅವಕಾಶ ನೀಡುತ್ತದೆ. ಹುದ್ದೆಗಳ ಸಂಖ್ಯೆ, ವಯೋಮಿತಿ, ಶೈಕ್ಷಣಿಕ ಅರ್ಹತೆ, ವೇತನ ಮತ್ತು ಅರ್ಜಿ ಸಲ್ಲಿಸುವ ವಿಧಾನಗಳ ಕುರಿತು ಸಂಪೂರ್ಣ ವಿವರ ಇಲ್ಲಿದೆ.
AI ಬಳಸಿ 36 ಮಹಿಳಾ ಸಹಪಾಠಿಗಳ ಅಶ್ಲೀಲ ಫೋಟೋ ತಯಾರಿಸಿದ ಆರೋಪ ; IT ವಿದ್ಯಾರ್ಥಿ ಅಮಾನತು.!
NWKRTC ಹುದ್ದೆಗಳ ಮಾಹಿತಿ :
- ಇಲಾಖೆಯ ಹೆಸರು : ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮ (NWKRTC).
- ಹುದ್ದೆಯ ಹೆಸರು : ಸಹಾಯಕ ಸಂಚಾರ ನಿರೀಕ್ಷಕರು (Assistant Traffic Inspector).
- ಒಟ್ಟು ಹುದ್ದೆಗಳ ಸಂಖ್ಯೆ : 19 ಹುದ್ದೆಗಳು.
- ಉದ್ಯೋಗ ಸ್ಥಳ : ಕರ್ನಾಟಕದ ವಿವಿಧ ಡಿಪೋಗಳು ಮತ್ತು ಕಚೇರಿಗಳು.
- ಅರ್ಜಿ ಸಲ್ಲಿಸುವ ವಿಧಾನ : ಆನ್‌ಲೈನ್ (Online Mode Only).
ಸಂಬಳದ ವಿವರ :
- ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಪ್ರಕಟಿಸಿದ ಅಧಿಸೂಚನೆಯ ಪ್ರಕಾರ, ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ ರೂ.22,390 ರಿಂದ ರೂ.33,320/- ವರೆಗೆ ವೇತನ ನೀಡಲಾಗುತ್ತದೆ.
KKRTC : ಕರ್ನಾಟಕ ರಸ್ತೆ ಸಾರಿಗೆ ನಿಗಮದಲ್ಲಿ 316 ಹುದ್ದೆಗಳ ನೇಮಕಾತಿ ; ಇಂದೇ ಅರ್ಜಿ ಸಲ್ಲಿಸಿ.!
NWKRTC ಶೈಕ್ಷಣಿಕ ಅರ್ಹತೆ :
- ಅರ್ಹ ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ ಕೆಳಗಿನ ವಿದ್ಯಾರ್ಹತೆಗಳಲ್ಲಿ ಒಂದನ್ನು ಪೂರ್ಣಗೊಳಿಸಿರಬೇಕು,
- SSLC (10ನೇ ತರಗತಿ).
- PUC (12ನೇ ತರಗತಿ).
- ಅಥವಾ ತತ್ಸಮಾನ.
ವಯೋಮಿತಿ :
- ಕನಿಷ್ಠ ವಯಸ್ಸು : 18 ವರ್ಷ.
- ಗರಿಷ್ಠ ವಯಸ್ಸು : 35 ವರ್ಷ.
ವಯೋಮಿತಿ ಸಡಿಲಿಕೆ :
- 2A, 2B, 3A, 3B ಅಭ್ಯರ್ಥಿಗಳಿಗೆ : 3 ವರ್ಷಗಳ ಸಡಿಲಿಕೆ.
- SC/ST ಅಭ್ಯರ್ಥಿಗಳಿಗೆ : 5 ವರ್ಷಗಳ ಸಡಿಲಿಕೆ.
School : ಶಾಲೆಯೊಳಗೆ ಶಿಕ್ಷಕನ ಅನಾಚಾರ ವರ್ತನೆ ; ವಿದ್ಯಾರ್ಥಿಗಳಿಂದ ವಿಡಿಯೋ ವೈರಲ್.!
ಅರ್ಜಿ ಶುಲ್ಕ :
- 2A, 2B, 3A, 3B ವರ್ಗದ ಅಭ್ಯರ್ಥಿಗಳು : ರೂ.750/-
- SC/ST ಹಾಗೂ ಮಾಜಿ ಸೈನಿಕರು : ರೂ.500/-
- ಪಿಡಬ್ಲ್ಯೂಡಿ (PWD) ಅಭ್ಯರ್ಥಿಗಳು : ರೂ.250/-
NWKRTC ಆಯ್ಕೆ ವಿಧಾನ :
ಅಭ್ಯರ್ಥಿಗಳನ್ನು ಹಂತ ಹಂತವಾಗಿ ಕೆಳಗಿನ ಕ್ರಮದ ಮೂಲಕ ಆಯ್ಕೆ ಮಾಡಲಾಗುತ್ತದೆ:
- ಲಿಖಿತ ಪರೀಕ್ಷೆ (Written Test).
- ದಾಖಲೆಗಳ ಪರಿಶೀಲನೆ (Document Verification).
- ಸಂದರ್ಶನ (Interview).
ಪ್ರಮುಖ ದಿನಾಂಕಗಳು :
- ಅರ್ಜಿ ಸಲ್ಲಿಕೆಯ ಪ್ರಾರಂಭ ದಿನಾಂಕ : 09 ಅಕ್ಟೋಬರ್ 2025.
- ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕ : 31 ಅಕ್ಟೋಬರ್ 2025.
Khanapur : ಪ್ರೀತಿಯ ಹೆಸರಿನಲ್ಲಿ ಕಿರುಕುಳ ನೀಡಿದ ಆರೋಪ ; ಖಾನಾಪುರದಲ್ಲಿ ಬಾಲಕಿಯ ಆತ್ಮಹತ್ಯೆ.!
NWKRTC ಅರ್ಜಿ ಸಲ್ಲಿಸುವ ವಿಧಾನ :
- ಅಧಿಕೃತ ವೆಬ್‌ಸೈಟ್ ಅಥವಾ ಕೆಳಗಿನ ಲಿಂಕ್‌ಗೆ ಭೇಟಿ ನೀಡಿ.
- ನೇಮಕಾತಿ ಅಧಿಸೂಚನೆಯನ್ನು ಡೌನ್‌ಲೋಡ್ ಮಾಡಿ ಮತ್ತು ಎಚ್ಚರಿಕೆಯಿಂದ ಓದಿ.
- ಆನ್‌ಲೈನ್ ಅಪ್ಲಿಕೇಶನ್ ಫಾರ್ಮ್‌ನ್ನು ಸರಿಯಾಗಿ ಭರ್ತಿ ಮಾಡಿ.
- ಅಗತ್ಯವಿದ್ದಲ್ಲಿ ಶುಲ್ಕ ಪಾವತಿಸಿ.
- ಪಾಸ್‌ಪೋರ್ಟ್ ಸೈಜ್ ಫೋಟೋ ಮತ್ತು ಸಹಿಯನ್ನು ಅಪ್‌ಲೋಡ್ ಮಾಡಿ.
- ವಿವರಗಳನ್ನು ಪರಿಶೀಲಿಸಿ “Submit” ಕ್ಲಿಕ್ ಮಾಡಿ.
- ಅರ್ಜಿ ಸಲ್ಲಿಸಿದ ನಂತರ ಅದರ ಪ್ರಿಂಟ್‌ಔಟ್ ತೆಗೆದುಕೊಳ್ಳಿ.
ಪ್ರಮುಖ ಲಿಂಕ್‌ಗಳು :
- ಅಧಿಸೂಚನೆ : [ಇಲ್ಲಿ ಕ್ಲಿಕ್ ಮಾಡಿ]
- ಆನ್ ಲೈನ್ ಅಪ್ಲಿಕೇಷನ್ : [ಇಲ್ಲಿ ಕ್ಲಿಕ್ ಮಾಡಿ]
- Officially Website : nwkrtc.karnataka.gov.in
ಪೊಲೀಸ್ Training Centre ಮೇಲೆ ಉಗ್ರರ ದಾಳಿ ; 7 ಪೊಲೀಸ್ ಸಿಬ್ಬಂದಿ ಸೇರಿ 13 ಮಂದಿ ಬಲಿ.!
ಹೆಚ್ಚಿನ ಮಾಹಿತಿ :
ಈ ಹುದ್ದೆಗಳಿಗೆ ಸಂಬಂಧಿಸಿದ ಎಲ್ಲಾ ಹೊಸ ಅಪ್‌ಡೇಟ್‌ಗಳು, ಪರೀಕ್ಷಾ ಹಾಲ್ ಟಿಕೆಟ್, ಫಲಿತಾಂಶ ಹಾಗೂ ಮುಂದಿನ ಹಂತಗಳ ಮಾಹಿತಿ ಅಧಿಕೃತ ವೆಬ್‌ಸೈಟ್‌ನಲ್ಲಿ ಮಾತ್ರ ಲಭ್ಯವಿರುತ್ತದೆ. ಅಭ್ಯರ್ಥಿಗಳು ಯಾವುದೇ ಖಾಸಗಿ ಲಿಂಕ್‌ಗಳು ಅಥವಾ ಮೋಸಾತ್ಮಕ ವೆಬ್‌ಸೈಟ್‌ಗಳಿಗೆ ಒಳಗಾಗಬಾರದು.
Disclaimer: ಈ ಲೇಖನವು ಅಧಿಕೃತ KEA ಅಧಿಸೂಚನೆಯ ಆಧಾರದ ಮೇಲೆ ಸಿದ್ಧಪಡಿಸಲ್ಪಟ್ಟ ಮಾಹಿತಿಯಾಗಿದೆ. ಪಾಠಕರಿಗೆ ನಿಖರವಾದ ಮತ್ತು ವಿಶ್ವಾಸಾರ್ಹ ಮಾಹಿತಿಯನ್ನು ನೀಡುವುದು ಉದ್ದೇಶ.
Snake : ಹಾವಿಗೆ ಮುತ್ತಿಡಲು ಹೋದ ಯುವಕ ; ಮುಂದೆನಾಯ್ತು ವಿಡಿಯೋ ನೋಡಿ.!
ಜನಸ್ಪಂದನ ನ್ಯೂಸ್, ಡೆಸ್ಕ್ : ಸಾಮಾಜಿಕ ಮಾಧ್ಯಮಗಳಲ್ಲಿ ಈಗ ಭಾರೀ ಚರ್ಚೆಗೆ ಗ್ರಾಸವಾಗಿರುವ ವಿಡಿಯೋವೊಂದು ಅನೇಕರನ್ನು ಬೆಚ್ಚಿಬೀಳಿಸಿದೆ. ಈ ವಿಡಿಯೋದಲ್ಲಿ ಒಬ್ಬ ಯುವಕ ತನ್ನ ಕೈಯಲ್ಲಿ ಹಾವನ್ನು (Snake) ಹಿಡಿದು ಅದಕ್ಕೆ ಮುತ್ತಿಡಲು ಯತ್ನಿಸಿದ ಕ್ಷಣದಲ್ಲಿ, ಹಾವು ತಿರುಗಿ ಅವನ ತುಟಿಗೆ ಕಚ್ಚಿದ ಘಟನೆ ನಡೆದಿದೆ.
ಮೊದಲಿಗೆ ವಿಡಿಯೋದ ದೃಶ್ಯ ಸಾಮಾನ್ಯವಾಗಿದ್ದರೂ, ಕೆಲವೇ ಕ್ಷಣಗಳಲ್ಲಿ ಪರಿಸ್ಥಿತಿ ಭಯಾನಕವಾಗಿ ತಿರುಗಿದೆ. ಯುವಕನು ಕ್ಯಾಮೆರಾ ಮುಂದೆ ಧೈರ್ಯ ತೋರಿಸಲು ಪ್ರಯತ್ನಿಸಿದ ವೇಳೆ, ತನ್ನ ಸ್ನೇಹಿತರ ಮುಂದೆ ಹಾವಿ (Snake) ನೊಂದಿಗೆ ಆಟವಾಡುತ್ತಿದ್ದಾನೆ.
Lioness : ನವರಾತ್ರಿಯಲ್ಲಿ ದೇವಾಲಯದ ಬಾಗಿಲಿಗೆ ಕಾವಲು ನಿಂತ ಸಿಂಹಿಣಿ.!
ಬಳಿಕ ಹಾವ (Snake) ನ್ನು ನಿಧಾನವಾಗಿ ಮುಖದ ಹತ್ತಿರ ತರಲು ಹೋಗುತ್ತಿದ್ದಾಗ, ಹಾವು (Snake) ತಿರುಗಿ ಅವನ ತುಟಿಗೆ ಕಚ್ಚಿದೆ. ಕಚ್ಚಿದ ತಕ್ಷಣವೇ ಯುವಕನ ಮುಖದಲ್ಲಿ ನೋವಿನ ಅಳಿವು ಸ್ಪಷ್ಟವಾಗಿ ಕಾಣುತ್ತದೆ.
ಈ ದೃಶ್ಯ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೇಗವಾಗಿ ಹರಡುತ್ತಿದೆ. ಬಳಕೆದಾರರು ಈ ಘಟನೆ ಕುರಿತು ತೀವ್ರವಾಗಿ ಪ್ರತಿಕ್ರಿಯಿಸುತ್ತಿದ್ದಾರೆ. ಕೆಲವರು “ಇಂತಹ ಅಪಾಯಕಾರಿ ಸಾಹಸಗಳು ಪ್ರಾಣಾಪಾಯಕ್ಕೆ ಕಾರಣವಾಗಬಹುದು” ಎಂದು ಎಚ್ಚರಿಸುತ್ತಿದ್ದಾರೆ. ಮತ್ತೊಬ್ಬರು “ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಿದ್ಧಿ ಪಡೆಯಲು ಯುವಕರು ಪ್ರಾಣವನ್ನೇ ಪಣಕ್ಕಿಡುತ್ತಿದ್ದಾರೆ” ಎಂದು ಅಭಿಪ್ರಾಯಪಟ್ಟಿದ್ದಾರೆ.
Taliban ಚೆಕ್‌ಪಾಯಿಂಟ್‌ನಲ್ಲಿ ಭಾರತೀಯ ಪ್ರವಾಸಿಗನ ಅಚ್ಚರಿಯ ವಿಡಿಯೋ ವೈರಲ್.!
ಘಟನೆ ನಿಖರವಾಗಿ ಯಾವ ರಾಜ್ಯದಲ್ಲಿ ಅಥವಾ ದೇಶದಲ್ಲಿ ನಡೆದಿದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಆದರೆ ವಿಡಿಯೋ ಈಗ ಭಾರತ ಸೇರಿದಂತೆ ಅನೇಕ ರಾಷ್ಟ್ರಗಳಲ್ಲಿ ವೈರಲ್ ಆಗಿದೆ. ಇಲ್ಲಿ ಯುವಕ ಹಾವಿನಿಂದ ಕಚ್ಚಿಕೊಂಡ ನಂತರ ಏನಾಯಿತು ಎನ್ನುವ ಬಗ್ಗೆ ಯಾವುದೆ ಸ್ಪಷ್ಟಿಕರ ಇಲ್ಲ.
ಈ ಹಿನ್ನೆಲೆಯಲ್ಲಿ ಕೆಲವು ವನ್ಯಜೀವಿ ಪ್ರೇಮಿಗಳು ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಇಂತಹ ಪ್ರಾಣಿಗಳೊಂದಿಗೆ ಆಟವಾಡುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
Suspect : ಮೈಸೂರಿನ ಅಪ್ರಾಪ್ತ ಬಾಲಕಿಯ ಶಂಕಾಸ್ಪದ ಸಾವಿನ ಪ್ರಕರಣ ; ಶಂಕಿತ ಓಡಾಡಿರೋ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ.!
ಇಂತಹ ಘಟನೆಗಳು ಜನರಿಗೆ ಎಚ್ಚರಿಕೆಯಾದಂತಾಗಬೇಕು ಎಂದು ತಜ್ಞರು ಸಲಹೆ ನೀಡಿದ್ದಾರೆ. ಹಾವು (Snake) ಗಳು ಕಾಡಿನ ಪ್ರಾಣಿಗಳಾಗಿರುವುದರಿಂದ ಅವುಗಳನ್ನು ಹತ್ತಿರ ಹೋಗಿ ಮುಟ್ಟುವುದು ಅಥವಾ ಆಟವಾಡುವುದು ಜೀವಕ್ಕೆ ಅಪಾಯಕಾರಿಯಾಗಿದೆ ಎಂದು ಅವರು ಎಚ್ಚರಿಸಿದ್ದಾರೆ.
ವಿಡಿಯೋ :
चूमने के लिए सांप ही मिला था इस मानव को !!
ऐसी हरकतें करते हैं खुद को चार लोगों के बीच नायक बनाने के लिए !
आपको लगता ठीक करते हैं ये लोग ?? pic.twitter.com/q88y62EyXT— पूजा (@poojaofficial5) October 5, 2025