Friday, October 18, 2024
spot_img
spot_img
spot_img
spot_img
spot_img
spot_img
spot_img

Health : ಎಂಥಾ ಪರಿಸ್ಥಿತಿ ಬಂದ್ರು ಪೇಪರ ಕಪ್‌ಗಳಲ್ಲಿ ಚಹಾ ಕುಡಿಯಲೇಬೇಡಿ ; ಏಕೆ ಗೊತ್ತಾ.?

spot_img
WhatsApp Group Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ಡೆಸ್ಕ್ : ಪ್ಲಾಸ್ಟಿಕ್ ವಸ್ತುಗಳ ಬಳಕೆ ಮತ್ತು ಅದರಲ್ಲಿ ಆಹಾರ ಸೇವನೆ ಮಾಡುವುದರಿಂದ ಕ್ಯಾನ್ಸರ್‌ನಂತಹ ಅಪಾಯಕಾರಿ ರೋಗವನ್ನು ಆಹ್ವಾನಿಸಿದಂತೆ. ಇದೇ ಕಾರಣಕ್ಕೆ ಪ್ಲಾಸ್ಟಿಕ್ ವಸ್ತುಗಳ ಬಳಕೆಯನ್ನು ಆದಷ್ಟು ಕಡಿಮೆ ಮಾಡುವ ಪ್ರಯತ್ನಗಳು ನಡೆಯುತ್ತಿದೆ.

ಇನ್ನೂ ಮನೆಯಲ್ಲಿ ಟೀ ಕುಡಿದರೆ ಪಿಂಗಾಣಿ ಲೋಟ ಅಥವಾ ಸ್ಟೀಲ್ ಗ್ಲಾಸ್’ನಲ್ಲಿ ಕುಡಿಯುತ್ತೇವೆ. ಹೊರಗೆ ಹೋಗುವಾಗ ಅನೇಕ ಜನರು ಪೇಪರ್ ಕಪ್‌ಗಳನ್ನು ಆಯ್ಕೆ ಮಾಡುತ್ತಾರೆ. ಗಾಜಿನ ಲೋಟಗಳು ಸ್ವಚ್ಛವಾಗಿರುವುದಿಲ್ಲ, ಬೇರೆಯವರು ಬಳಸಿದ ವಸ್ತುವನ್ನು ನಾವೇಕೆ ಬಳಸಬೇಕು? ಅದಕ್ಕೇ ಪೇಪರ್ ಕಪ್‌ನಲ್ಲಿ ಟೀ, ಕಾಫಿ ಕುಡಿಯೋದು ಎನ್ನುತ್ತಾರೆ.

ಇದನ್ನು ಓದಿ : ಮಳೆಗಾಲದಲ್ಲಿ ಪುಂಡಿ ಪಲ್ಲೆ ತಿನ್ನುತ್ತೀರಾ.? ಹಾಗಿದ್ರೆ ಈ ಸುದ್ದಿ ಓದಿ.

ಆದರೆ ನೀವು ಪ್ಲಾಸ್ಟಿಕ್ ಪಾತ್ರೆ, ಕವರ್ ಬಳಕೆ ಮಾಡದೆ ಇದ್ದರೂ ನಿಮ್ಮ ಆರೋಗ್ಯ ಹಾಳಾಗ್ತಿದೆ ಎಂಬುದು ನಿಮಗೆ ಗೊತ್ತಾ.? ಹೌದು, ನಿಮಗೆ ಗೊತ್ತಿಲ್ಲದೇ ನೀವು ಮೈಕ್ರೋಪ್ಲಾಸ್ಟಿಕ್ ಸೇವನೆ ಮಾಡುತ್ತಿರಬಹುದು.

ಮನೆಯಲ್ಲಿ ಅಥವಾ ಹೊರಗಡೆ ಹೋದಾಗ ಟೀ, ಕಾಫಿ ಕುಡಿಯಲು ಪ್ಲಾಸ್ಟಿಕ್ ಕಪ್ ಬದಲು ಪೇಪರ್ ಕಪ್‌ಗಳು ಬಳಕೆ ಮಾಡುತ್ತೀರಾ.? ಸಾಯುವಂತ ಪರಿಸ್ಥಿತಿ ಬಂದರೂ ಇಂತ ಪೇಪರ್ ಕಪ್‌ನಲ್ಲಿ ಟೀ ಕುಡಿಯಬಾರದಂತೆ.

ಇದನ್ನು ಓದಿ : ನಿರುದ್ಯೋಗಿಗಳಿಗೆ ಸುವರ್ಣಾವಕಾಶ ; ಜುಲೈ 09 ರಂದು ಹುಬ್ಬಳ್ಳಿಯಲ್ಲಿ ಬೃಹತ್‌ ಉದ್ಯೋಗ ಮೇಳ.!

ಯಾಕಂತೀರಾ.? ಹೆಸರಿಗೆ ಮಾತ್ರ ಪೇಪರ್ ಆದರೆ ಇದನ್ನು ಕೆಮಿಕಲ್’ನಲ್ಲಿ ಅದ್ದಿ ನೋಡಿದರೆ ನಿಮಗೆ ಪ್ಲಾಸ್ಟಿಕ್‌ನ ಪದರ ಕಾಣಿಸುತ್ತದೆ. ಈ ರೀತಿಯ ಕಪ್‌ಗಳಲ್ಲಿ ಟೀ ಕುಡಿಯುವುದರಿಂದ 25,000 ಮೈಕ್ರೋಪ್ಲಾಸ್ಟಿಕ್ ನಮ್ಮ ದೇಹದೊಳಗೆ ಹೋಗುತ್ತದೆ.

ಮೈಕ್ರೋಪ್ಲಾಸ್ಟಿಕ್ ನರಮಂಡಗಳ ಮೇಲೆ ಪರಿಣಾಮ ಬೀರುತ್ತದೆ. ಅಲ್ಲದೆ ಯಕೃತ್ತು ಮತ್ತು ಮೂತ್ರಪಿಂಡದ ಹಾನಿಗೆ ಕಾರಣವಾಗಬಹುದು. ಜೊತೆಗೆ ಪೇಪರ್ ಕಪ್‌ಗಳಲ್ಲಿ ಟೀ, ಕಾಫಿ ಕುಡಿಯುವುದರಿಂದ ಹೃದಯಕ್ಕೆ ಸಂಬಂಧಿಸಿದ ಸಮಸ್ಯೆ, ಬಿಪಿ, ಶುಗರ್ ಎಲ್ಲವೂ ಬರಬಹುದು.

ಇದನ್ನು ಓದಿ : DCC : ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನ.!

ಒಂದು ಅಧ್ಯಯನದ ಪ್ರಕಾರ, ಒಬ್ಬ ವ್ಯಕ್ತಿಯು ದಿನಕ್ಕೆ 2 ರಿಂದ 3 ಬಾರಿ ಪೇಪರ್ ಕಪ್‌ನಿಂದ ಚಹಾವನ್ನು ಸೇವಿಸಿದರೆ, ಅವನ ದೇಹವು 75,000 ಸೂಕ್ಷ್ಮ ಕಣಗಳನ್ನು ಪಡೆಯುತ್ತದೆಯಂತೆ. ಪೇಪರ್ ಕಪ್‌ನ್ನು ಮೃದುಗೊಳಿಸಲು ಮತ್ತು ಅಂಟಿಸಲು ಫೆವಿಕಾಲ್‌ನಂತಹ ರಾಸಾಯನಿಕ ಗಮ್ ಅನ್ನು ಸಹ ಬಳಸಲಾಗುತ್ತದೆ. ಆ ಕಪ್‌ಗೆ ಬಿಸಿಯಾದ ಟೀ ಸುರಿದಾಗ ಚಹಾದಲ್ಲಿ ಹಲವು ಬಗೆಯ ರಾಸಾಯನಿಕಗಳು ಬಿಡುಗಡೆಯಾಗುತ್ತವೆ.

Disclaimer : ಈ ಲೇಖನವು ಅಂತರ್ಜಾಲದಲ್ಲಿ ಲಭ್ಯವಿರುವ ವರದಿಗಳು, ಮಾಹಿತಿಯನ್ನು ಆಧರಿಸಿದೆ. ಜನಸ್ಪಂದನ ನ್ಯೂಸ್ ಗೂ ಇದಕ್ಕೂ ಸಂಬಂಧವಿಲ್ಲ ಮತ್ತು ಇದಕ್ಕೆ ಜವಾಬ್ದಾರಿಯಲ್ಲ.

WhatsApp Group Join Now
Telegram Group Join Now
Instagram Account Follow Now
spot_img
spot_img
- Advertisment -spot_img