ಜನಸ್ಪಂದನ ನ್ಯೂಸ್, ನೌಕರಿ : ದಿ ನ್ಯೂ ಇಂಡಿಯಾ ಅಶ್ಯೂರೆನ್ಸ್ ಕಂಪನಿ ಲಿಮಿಟೆಡ್ (NIACL) 2025 ನೇಮಕಾತಿ ಪ್ರಕಟಣೆ ಹೊರಬಿದ್ದಿದೆ. ಅರ್ಹ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸಲು ಅವಶ್ಯವಿರುವ ಮಾಹಿತಿಯನ್ನು ಇಲ್ಲಿ ನೋಡಬಹುದಾಗಿದ್ದು, ಆದರೂ NIACL ಅಧಿಕೃತ ವೆಬ್‌ಸೈಟ್ (Official website) ನಲ್ಲಿ ಪರೀಕ್ಷಿಸಿ ಅರ್ಜಿ ಸಲ್ಲಿಸಿ. ಅರ್ಜಿ ಸಲ್ಲಿಸಲು ಬೇಕಾದ ವಿವರಗಳನ್ನು ಇಲ್ಲಿ ಕೊಡಲಾಗಿದೆ. ಅಭ್ಯರ್ಥಿಗಳು ನಿಗದಿತ ದಿನಾಂಕಕ್ಕೊಳಗಾಗಿ ಅರ್ಜಿ ಸಲ್ಲಿಸುವುದು ಮುಖ್ಯವಾಗಿದೆ.
ಇದನ್ನು ಓದಿ : ಪತಿ ಇಲ್ಲದ ವೇಳೆ ಅತ್ತೆ ಮೇಲೆ ಅಮಾನುಷ ಹಲ್ಲೆ ನಡೆಸಿದ ಸೊಸೆ : CCTV ದೃಶ್ಯ ವೈರಲ್.!
ದಿ ನ್ಯೂ ಇಂಡಿಯಾ ಅಶ್ಯೂರೆನ್ಸ್ ಕಂಪನಿ ಲಿಮಿಟೆಡ್ ನೇಮಕಾತಿ ವಿವರಗಳು :
- ಇಲಾಖೆ ಹೆಸರು : ದಿ ನ್ಯೂ ಇಂಡಿಯಾ ಅಶ್ಯೂರೆನ್ಸ್ ಕಂಪನಿ ಲಿಮಿಟೆಡ್ (NIACL).
- ಒಟ್ಟು ಹುದ್ದೆಗಳು : 550.
- ಹುದ್ದೆಯ ಹೆಸರು : ಆಡಳಿತ ಅಧಿಕಾರಿ (Administrative Officer).
- ಉದ್ಯೋಗ ಸ್ಥಳ : ಅಖಿಲ ಭಾರತ.
- ಅರ್ಜಿಯ ವಿಧಾನ : ಆನ್‌ಲೈನ್.
ವರ್ಗವಾರು NIACL ಸಹಾಯಕ ಹುದ್ದೆಗಳ ಮಾಹಿತಿಯನ್ನು ಇಲ್ಲಿ ಪರಿಶೀಲಿಸಿ :
| Category | SC | ST | OBC | EWS | GEN | Total |
| Vacancy | 91 | 51 | 48 | 50 | 260 | 500 |
ವೇತನ ಶ್ರೇಣಿ :
ನ್ಯೂ ಇಂಡಿಯಾ ಅಶ್ಯೂರೆನ್ಸ್ ಕಂಪನಿ ಲಿಮಿಟೆಡ್ (NIACL) ನಲ್ಲಿ ಸಹಾಯಕ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಈ ರೀತಿ ವೇತನ ನೀಡಲಾಗುವುದು. ರೂ.22405-1305(1)-23710-1425(2)-26560-1605(5)-34585-1855(2)-38295-2260(3)-45075-2345(2)-49765-2500(5)-62265.
ಮೆಟ್ರೋ ನಗರಗಳಲ್ಲಿ ಕೆಲಸ ಪ್ರಾರಂಭಿಸುವ ಆಯ್ಕೆಯಾದ ಅಭ್ಯರ್ಥಿಗಳಿಗೆ ಆರಂಭಿಕ ಮಾಸಿಕ ಸಂಬಳವು ಸರಾಸರಿ ರೂ.40,000/- ಇರುತ್ತದೆ. ಇದು ವಿಮಾ ಮತ್ತು ಬ್ಯಾಂಕಿಂಗ್ ಕ್ಷೇತ್ರದಲ್ಲಿ ವೃತ್ತಿಜೀವನ ಆರಂಭಿಸಲು ಆಕರ್ಷಕವಾದ ಪ್ಯಾಕೇಜ್ ಆಗಿದೆ.
ವಯೋಮಿತಿ (07.08.2025 ರಂತೆ) :
- ಕನಿಷ್ಠ ವಯಸ್ಸು : 21 ವರ್ಷ.
- ಗರಿಷ್ಠ ವಯಸ್ಸು : 30 ವರ್ಷ.
ಇದನ್ನು ಓದಿ : ISRO (LPSC) ದಲ್ಲಿ 10ನೇ ತರಗತಿಯಿಂದ ಡಿಪ್ಲೊಮಾ/ಬಿ.ಎಸ್ಸಿ ಅರ್ಹತೆ ಹೊಂದಿರುವ ಅಭ್ಯರ್ಥಿಗಳಿಗೆ ಉದ್ಯೋಗವಕಾಶ.!
ವಯೋಮಿತಿ ಸಡಿಲಿಕೆ :
- OBC (NCL) : 3 ವರ್ಷ.
- SC/ST : 5 ವರ್ಷ.
- PwBD (UR & EWS) : 10 ವರ್ಷ.
- PwBD (OBC-NCL) : 13 ವರ್ಷ.
- PwBD (SC/ST) : 15 ವರ್ಷ.
ಶೈಕ್ಷಣಿಕ ಅರ್ಹತೆ :
- ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಮಂಡಳಿಯಿಂದ ಪದವಿ (Degree) ಪೂರೈಸಿರಬೇಕು.
ಅರ್ಜಿ ಶುಲ್ಕ :
- SC/ST/PwBD ಅಭ್ಯರ್ಥಿಗಳಿಗೆ : ರೂ.100/-
- ಸಾಮಾನ್ಯ/OBC/EWS ಅಭ್ಯರ್ಥಿಗಳಿಗೆ : ರೂ.850/-
ಅರ್ಜಿ ಸಲ್ಲಿಸುವ ವಿಧಾನ :
- ಅಧಿಕೃತ ವೆಬ್‌ಸೈಟ್ (Website) ಗೆ ಭೇಟಿ ನೀಡಿ ಮತ್ತು ಅಧಿಸೂಚನೆಯನ್ನು ಡೌನ್‌ಲೋಡ್ ಮಾಡಿ.
- ಸೂಚನೆಯನ್ನು ಸಂಪೂರ್ಣ ಓದಿ.
- ಆನ್‌ಲೈನ್ ಅಪ್ಲಿಕೇಶನ್ ಲಿಂಕ್‌ಗೆ ಕ್ಲಿಕ್ ಮಾಡಿ.
- ಅಗತ್ಯ ವಿವರಗಳನ್ನು ಸರಿಯಾಗಿ ಭರ್ತಿ ಮಾಡಿ.
- ಬೇಡಿಕೆಯಿದ್ದಲ್ಲಿ ಅರ್ಜಿ ಶುಲ್ಕ (Application fee) ಪಾವತಿಸಿ.
- ಫೋಟೋ ಮತ್ತು ಸಹಿ ಅಪ್‌ಲೋಡ್ ಮಾಡಿ.
- ಫಾರ್ಮ್ ಪರಿಶೀಲಿಸಿ ಮತ್ತು ಸಲ್ಲಿಸಿ.
- ಮುದ್ರಣ (Print) ಪ್ರತಿಯನ್ನು ಭದ್ರಪಡಿಸಿ.
ಇದನ್ನು ಓದಿ : Modelಗೆ ಖಾಸಗಿ ಅಂಗ ತೋರಿಸಿ ವಿಕೃತಿ ಮೆರೆದ ಯುವಕ ; ಅನಾಚಾರದ ವಿಡಿಯೋ ವೈರಲ್.!
ಮುಖ್ಯ ದಿನಾಂಕಗಳು :
- ಆನ್‌ಲೈನ್ ಅರ್ಜಿ ಪ್ರಾರಂಭ : 07 ಆಗಸ್ಟ್ 2025.
- ಆನ್‌ಲೈನ್ ಅರ್ಜಿ ಕೊನೆ : 30 ಆಗಸ್ಟ್ 2025.
ಪ್ರಮುಖ ಲಿಂಕ್‌ಗಳು :
- ಅರ್ಜಿಗಾಗಿ ಲಿಂಕ್ : ಇಲ್ಲಿ ಕ್ಲಿಕ್ ಮಾಡಿ
- ಅಧಿಕೃತ ಅಧಿಸೂಚನೆ : ಇಲ್ಲಿ ಕ್ಲಿಕ್ ಮಾಡಿ
- ಅಧಿಕೃತ ವೆಬ್‌ಸೈಟ್ : newindia.co.in
ಪರೀಕ್ಷೆಯ ಮಾದರಿ :
ಅಭ್ಯರ್ಥಿಗಳು NIACL ಸಹಾಯಕ ಪೂರ್ವಭಾವಿ ಪರೀಕ್ಷೆಯ ಪ್ರತಿಯೊಂದು ಪರೀಕ್ಷೆಯಲ್ಲಿ ಉತ್ತೀರ್ಣ ಅಂಕಗಳನ್ನು ಗಳಿಸುವ ಮೂಲಕ ಅರ್ಹತೆ ಪಡೆಯಬೇಕು. ಪರೀಕ್ಷೆಯ ಅವಧಿ 1 ಗಂಟೆಯಾಗಿದ್ದು, ಪ್ರತಿ ವಿಭಾಗಕ್ಕೆ 20 ನಿಮಿಷಗಳಾಗಿ ವಿಂಗಡಿಸಲಾಗಿದೆ. ಪ್ರತಿ ತಪ್ಪು ಉತ್ತರಕ್ಕೆ ¼ ನೇ ಅಂಕ ಕಡಿಮೆ ಮಾಡಲಾಗುವುದು.
| NIACL Assistant 2025 Prelims Exam Pattern | ||||
| Sr. No. | Name of Test | No. of Questions | Maximum Marks | Duration |
| 1. | English Language | 30 | 30 | 20 minutes |
| 2. | Reasoning Ability | 35 | 35 | 20 minutes |
| 3. | Numerical Ability | 35 | 35 | 20 minutes |
| Total | 100 | 100 | 60 minutes | |
Disclaimer : The above given information is available On online, candidates should check it properly before applying. This is for information only.
Driver : ಬಸ್ ಚಾಲಕನ ಮೇಲೆ ಹಲ್ಲೆ : ಹೆಡ್ ಕಾನ್ಸ್‌ಟೆಬಲ್ ವಿರುದ್ಧ FIR.!
ಜನಸ್ಪಂದನ ನ್ಯೂಸ್, ಕೂಡ್ಲಿಗಿ : ಬಸ್ ಚಾಲಕ (Driver) ನೋರ್ವನ ಮೇಲೆ ಹಲ್ಲೆ ಮಾಡಿದ ಆರೋಪದ ಮೇಲೆ ಹೆಡ್ ಕಾನ್ಸ್‌ಟೆಬಲ್ ವಿರುದ್ಧ FIR ದಾಖಲಾಗಿರುವ ಘಟನೆ ಕೂಡ್ಲಿಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಹರಿಹರ ಡಿಪೋಗೆ ಸೇರಿದ ಸಾರಿಗೆ ಬಸ್ ಬಳ್ಳಾರಿಗೆ ಹೋಗುತ್ತಿದ್ದ ವೇಳೆ ಕೊಟ್ಟೂರಿನಿಂದ ಕೂಡ್ಲಿಗಿ ಬರುವ ರಸ್ತೆಯಲ್ಲಿನ ಮಲ್ಲನಾಯಕಹಳ್ಳಿ ಬಳಿ ಬಂದಾಗ ಬಸ್ ಚಾಲಕ (Driver) ರಾಮಲಿಂಗಪ್ಪ ಕೂಡ್ಲಿಗಿ ಠಾಣೆಯ ಹೆಡ್ ಕಾನ್ಸ್ಟೆಬಲ್ ಮಂಜುನಾಥ ಹಾಗೂ ಇನ್ನೊಬ್ಬ ಕಾನ್‌ಸ್ಟೆಬಲ್ ಇದ್ದ ಬೈಕ್‌ನ್ನು ಹಿಂದಿಕ್ಕಲು ಪ್ರಯತ್ನಿಸಿದ್ದಾರೆ.
ಇದನ್ನು ಓದಿ : Affair : ಅಕ್ರಮ ಸಂಬಂಧಕ್ಕೆ ಒಪ್ಪದ ಮಹಿಳೆ ಹತ್ಯೆ : ಬಳಿಕ ಆರೋಪಿ ನೇಣಿಗೆ ಶರಣು.!
ಆಗ ಇನ್ನೇನು ಬೈಕ್ ಹಿಂದಿಕ್ಕಬೇಕು ಅನ್ನುವಷ್ಟರಲ್ಲಿ ಎದುರಿನಿಂದ ಕಾರೊಂದು ಬಂದಿದೆ. ಕೂಡಲೇ ಗಮನಿಸಿದ ಬಸ್ ಚಾಲಕ (Driver) ರಾಮಲಿಂಗಪ್ಪ ಬಸ್‌ನ್ನು ಎಡಕ್ಕೆ ಎಳೆದುಕೊಂಡಿದ್ದಾರೆ. ಈ ವೇಳೆ ಬಸ್‌ನ ಹಿಂಭಾಗ ಬೈಕ್‌ನ ಹ್ಯಾಂಡಲ್‌ಗೆ ಸ್ವಲ್ಪ ತಾಗಿದಂತೆ ಆಯಿತು.
ಆಗ ಚಾಲಕ (Driver) ಮಿರರ್‌ನಲ್ಲಿ ಪರಿಶೀಲಿಸಿದರೂ ಅಂತಹ ಅವಘಡದ ಲಕ್ಷಣ ಕಾಣದೇ ಇದ್ದ ಕಾರಣ ಬಸ್ ಮುಂದುವರಿಸಿದರು. ಕೆಲವೇ ಹೊತ್ತಿನಲ್ಲಿ ಗಜಾಪೂರ ಹತ್ತಿರ ಮಂಜುನಾಥ ಬಸ್ ನಿಲ್ಲಿಸಿ ಒಳಗೆ ಬಂದು, ಚಾಲಕನಿಗೆ ಪ್ರಶ್ನೆ ಮಾಡದೆ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದರು. ನಂತರ ಕಾಲಿನಲ್ಲಿದ್ದ ಚಪ್ಪಲಿ ತೆಗೆದು ಚಾಲಕ (Driver) ನ ಮೇಲೆ ಹಲ್ಲೆ ನಡೆಸಿ, ಜೇಬಿನಲ್ಲಿದ್ದ ಮೊಬೈಲ್‌ನ್ನು ಕಿತ್ತುಕೊಂಡು “ಸ್ಟೇಷನ್‌ಗೆ ಬಾ” ಎಂದು ಹೇಳಿ ಇಳಿದು ಹೋದರು.
ಇದನ್ನು ಓದಿ : ಬೆಳಗಾವಿಯಲ್ಲಿ 5 ವರ್ಷದ ಬಾಲಕಿ ಮೇಲಿನ ಅತ್ಯಾಚಾರ ಪ್ರಕರಣ ; maulvi ಬಂಧನ.!
ಚಾಲಕ (Driver) ಮೊಬೈಲ್ ಮರಳಿಸುವಂತೆ ವಿನಂತಿಸಿದಾಗ, ಮಂಜುನಾಥ ಮತ್ತಷ್ಟು ಆಕ್ರೋಶಗೊಂಡು ಹೆಲ್ಮೆಟ್‌ನಿಂದ ಹಲ್ಲೆ ನಡೆಸಿದ ಆರೋಪ ಕೇಳಿಬಂದಿದೆ. ಈ ಘಟನೆ ಕುರಿತು ಕೂಡ್ಲಿಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಡ್ ಕಾನ್ಸ್ಟೆಬಲ್ ಮಂಜುನಾಥ ವಿರುದ್ಧ ಎಫ್‌ಐಆರ್ ನೋಂದಾಯಿಸಲಾಗಿದೆ.
ಮಾಹಿತಿಯ ಪ್ರಕಾರ, ಘಟನೆಯ ಸಮಯದಲ್ಲಿ ಮಂಜುನಾಥ ಕರ್ತವ್ಯದಲ್ಲಿರಲಿಲ್ಲ. ಕರ್ತವ್ಯ ನಿರತ ಸರ್ಕಾರಿ ನೌಕರನ ಮೇಲೆ ಹಲ್ಲೆ ನಡೆಸಿದ ಘಟನೆಗೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಾರಿಗೆ ನೌಕರರು, ಆರೋಪಿಯನ್ನು ತಕ್ಷಣ ಬಂಧಿಸಿ ಸೇವೆಯಿಂದ ವಜಾ ಮಾಡುವಂತೆ ಆಗ್ರಹಿಸಿದ್ದಾರೆ.






