Monday, October 27, 2025

Janaspandhan News

HomeHealth & FitnessSaliva : ಮೊಡವೆ ಸಮಸ್ಯೆಗೆ ನೈಸರ್ಗಿಕ ಪರಿಹಾರ ; ಬೆಳಗಿನ ಎಂಜಲಿನಿಂದ ನಿಜವಾಗಿಯೂ ಪರಿಹಾರ ಸಿಗುತ್ತಾ.?
spot_img
spot_img
spot_img

Saliva : ಮೊಡವೆ ಸಮಸ್ಯೆಗೆ ನೈಸರ್ಗಿಕ ಪರಿಹಾರ ; ಬೆಳಗಿನ ಎಂಜಲಿನಿಂದ ನಿಜವಾಗಿಯೂ ಪರಿಹಾರ ಸಿಗುತ್ತಾ.?

- Advertisement -

ಜನಸ್ಪಂದನ ನ್ಯೂಸ್‌, ಆರೋಗ್ಯ : ಪಿಂಪಲ್ ಸಮಸ್ಯೆಗೆ ಬೆಳಗಿನ ಎಂಜಲು (Saliva) ಪರಿಹಾರವೇ? ನಟಿ ತಮನ್ನಾ ಭಾಟಿಯಾದ ಟಿಪ್‌ ಮೇಲೆ ತಜ್ಞರ ಅಭಿಪ್ರಾಯವೇನು? ಬನ್ನಿ ಈ ಬಗ್ಗೆ ತಿಳಿಯೋಣ.!

ಚರ್ಮದ ಮೆರುಗು ಕಾಪಾಡಿಕೊಳ್ಳುವುದು ಎಲ್ಲರಿಗೂ ಮುಖ್ಯ. ಆದರೆ ಮುಖದ ಮೇಲೆ ಮೊಡವೆಗಳು (Pimples) ಕಾಣಿಸಿಕೊಳ್ಳುವುದು ಸಾಮಾನ್ಯವಾದ ಸಮಸ್ಯೆ. ಇವು ವ್ಯಕ್ತಿಯ ಮುಖದ ಆಕರ್ಷಕತೆಯನ್ನೇ ಹಾಳುಮಾಡಬಹುದು.

ಇದನ್ನು ಓದಿ : “ಕಾಲಿನ ನೋವಿನ ಜೊತೆ ಈ 5 ಲಕ್ಷಣಗಳು ಕಂಡುಬಂದರೆ ನಿರ್ಲಕ್ಷಿಸಬೇಡಿ ; ಅದು Kidney ಫೆಲ್ಯೂರ್‌ನ ಸೂಚನೆ ಆಗಿರಬಹುದು”

ಮೊಡವೆ ಮತ್ತು ಅದರಿಂದ ಉಂಟಾಗುವ ಕಲೆಗಳನ್ನು ನಿವಾರಿಸಲು ಜನರು ದುಬಾರಿ ಕ್ರೀಮ್‌, ಫೇಸ್ ಪ್ಯಾಕ್‌ಗಳ ಕಡೆಗೆ ಮುಖ ಮಾಡುತ್ತಿದ್ದರು. ಆದರೆ ನಟಿ ತಮನ್ನಾ ಭಾಟಿಯಾ ಬಳಸುವ ಸರಳ ಮನೆಮದ್ದು ಇದೀಗ ಎಲ್ಲರ ಗಮನ ಸೆಳೆದಿದೆ.

ಮೊಡವೆಗೆ ತಮನ್ನಾ ಭಾಟಿಯಾ ಉಪಯೋಗಿಸುವ ಮನೆಮದ್ದು ಯಾವುದು?

ಇತ್ತೀಚಿಗೆ ನಡೆದ ಸಂದರ್ಶನವೊಂದರಲ್ಲಿ ತಮನ್ನಾ ಭಾಟಿಯಾ ಅವರು ತಮ್ಮ ಮೊಡವೆಯ ಸಮಸ್ಯೆಯನ್ನು ನಿಯಂತ್ರಿಸಲು ಬಳಸುವ ಮನೆಮದ್ದು ಹಂಚಿಕೊಂಡಿದ್ದಾರೆ. ಅವರ ಪ್ರಕಾರ, ಬೆಳಗ್ಗೆ ಎದ್ದ ತಕ್ಷಣ ಹಲ್ಲು ಜಜ್ಜಿ ಮುಗಿಸುವ ಮೊದಲು ಮುಖದಲ್ಲಿರುವ ಮೊಡವೆಗಳ ಮೇಲೆ ತಮ್ಮ ಬಾಯಿಯ ಎಂಜಲ (Saliva) ನ್ನು ಹಚ್ಚುವ ಅಭ್ಯಾಸವಿದೆ. ಈ ವಿಧಾನದಿಂದ ಅವರಿಗೆ ಉತ್ತಮ ಫಲಿತಾಂಶಗಳು ಸಿಕ್ಕಿವೆ ಎಂದು ಅವರು ಹೇಳಿದ್ದಾರೆ.

 

View this post on Instagram

 

A post shared by Simple🌷 (@simplee.girl_01)

ಇದನ್ನು ಓದಿ : Vande-Bharat : ಬೆಳಗಾವಿ – ಬೆಂಗಳೂರು ವಂದೇ ಭಾರತ್ ರೈಲಿಗೆ ಆ.10 ರಂದು ಪ್ರಧಾನಿಯಿಂದ ಚಾಲನೆ.!
ಬೆಳಗಿನ ಎಂಜಲಿ (Saliva) ನಲ್ಲಿ ಇರುವ ವಿಶೇಷತೆ ಏನು?

ಆಯುರ್ವೇದದ ಪ್ರಕಾರ ಬೆಳಗಿನ ಎಂಜಲಿ (Saliva) ನಲ್ಲಿ ಬ್ಯಾಕ್ಟೀರಿಯಾ ವಿರೋಧಿ (Antibacterial) ಹಾಗೂ ಶಿಲೀಂಧ್ರ ವಿರೋಧಿ (Antifungal) ಗುಣಗಳು ಇರುತ್ತವೆ. ರಾತ್ರಿ ನಿದ್ರೆ ಸಮಯದಲ್ಲಿ ಬಾಯಿಯಲ್ಲಿ ರೂಪುಗೊಳ್ಳುವ ಲಾಲಾರಸ (Saliva) ದಲ್ಲಿ ಲೈಸೋಜೈಮ್ (Lysozyme), ಇಮ್ಯುನೊಗ್ಲಾಬುಲಿನ್ (Immunoglobulin) ಮತ್ತು ಪೆಪ್ಟೈಡ್‌ಗಳಂತಹ ರಾಸಾಯನಿಕ ಘಟಕಗಳು ಇರುತ್ತವೆ. ಇವು ಚರ್ಮದ ಮೇಲೆ ಇರುವ ಹಾನಿಕರ ಬ್ಯಾಕ್ಟೀರಿಯಾದೊಂದಿಗೆ ಹೋರಾಡುವ ಶಕ್ತಿಯನ್ನು ಹೊಂದಿವೆ ಎಂದು ಕೆಲವು ಸಂಶೋಧನೆಗಳು ಸೂಚಿಸುತ್ತವೆ.

ಚರ್ಮ ತಜ್ಞರ ಅಭಿಪ್ರಾಯ ಏನು?

ಚರ್ಮ ತಜ್ಞರ ಪ್ರಕಾರ, ಬೆಳಗಿನ ಎಂಜಲಿ (Saliva) ನಲ್ಲಿರುವ ಕೆಲವು ಕಿಣ್ವಗಳು ಸೌಮ್ಯವಾದ ಮೊಡವೆಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಆದರೆ ಪ್ರತಿಯೊಬ್ಬರ ಚರ್ಮದ ಧರ್ಮ ವಿಭಿನ್ನವಾಗಿರುವುದರಿಂದ ಈ ಪರಿಹಾರ ವಿಧಾನ ಎಲ್ಲರಿಗೂ ಸರಿಹೊಂದುತ್ತದೆಯೆಂಬುದಕ್ಕೆ ಸ್ಪಷ್ಟವಾದ ವೈಜ್ಞಾನಿಕ ಪ್ರಮಾಣವಿಲ್ಲ. ಕೆಲವರಲ್ಲಿ ಲಾಲಾರಸದ ಬಳಕೆ ಚರ್ಮದ ಅಲರ್ಜಿ, ರೆಡ್‌ನೆಸ್ ಅಥವಾ ಉರಿ ಉಂಟುಮಾಡುವ ಸಾಧ್ಯತೆ ಇದೆ. ಆದ್ದರಿಂದ, ತೀವ್ರ ಮೊಡವೆ ಸಮಸ್ಯೆ ಎದುರಿಸುತ್ತಿರುವವರು ವೈದ್ಯರ ಸಲಹೆ ಪಡೆಯುವುದು ಉತ್ತಮವಾಗಿದೆ.

ಇದನ್ನು ಓದಿ : ಬೆಳಗಾವಿಯಲ್ಲಿ 5 ವರ್ಷದ ಬಾಲಕಿ ಮೇಲಿನ ಅತ್ಯಾಚಾರ ಪ್ರಕರಣ ; maulvi ಬಂಧನ.!
ಸಂಪಾದಕೀಯ :

ತಮನ್ನಾ ಭಾಟಿಯಾ ಅವರ ಈ ನೈಸರ್ಗಿಕ ಮನೆಮದ್ದು ಕೆಲವರಿಗೆ ಉಪಯೋಗವಾಗಬಹುದು. ಆದರೆ ಎಲ್ಲರ ಚರ್ಮ ಒಂದೇ ರೀತಿ ಪ್ರತಿಕ್ರಿಯೆ ನೀಡುವುದಿಲ್ಲ ಎಂಬುದು ಗಮನದಲ್ಲಿರಲಿ. ನಿಮ್ಮ ಚರ್ಮದ ಧರ್ಮವನ್ನು ತಿಳಿದು, ಹೊಸ ರೀತಿಯ ಪರಿಹಾರಗಳನ್ನು ಬಳಸುವ ಮೊದಲು ತಜ್ಞರ ಸಲಹೆ ಪಡೆಯುವುದು ಉತ್ತಮವಾಗಿದೆ.

Disclaimer : ಈ ಲೇಖನದಲ್ಲಿ ನೀಡಲಾದ ಮಾಹಿತಿ ಸಾರ್ವಜನಿಕ ಮೂಲಗಳ ಆಧಾರಿತವಾಗಿದ್ದು, ವೈದ್ಯಕೀಯ ಸಲಹೆಯ ಸ್ಥಾನದಲ್ಲ. ಯಾವುದೇ ಚರ್ಮ ಸಮಸ್ಯೆಗೆ ನಿಖರ ಪರಿಹಾರ ಬೇಕಾದರೆ ತಜ್ಞರನ್ನು ಸಂಪರ್ಕಿಸುವುದು ಸೂಕ್ತ.


ಬೆಳಗಾವಿಯಲ್ಲಿ 5 ವರ್ಷದ ಬಾಲಕಿ ಮೇಲಿನ ಅತ್ಯಾಚಾರ ಪ್ರಕರಣ ; maulvi ಬಂಧನ.!

belagavi-maulvi-arrested-child-rape-case

ಜನಸ್ಪಂದನ ನ್ಯೂಸ್‌, ಬೆಳಗಾವಿ : ಬೆಳಗಾವಿ ಜಿಲ್ಲೆಯ ಯರಗಟ್ಟಿ ಮಸೀದಿಯಲ್ಲಿ ನಡೆದಿದ್ದ 5 ವರ್ಷದ ಬಾಲಕಿ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಮೌಲ್ವಿ (maulvi) ಯೋರ್ವನನ್ನು ಪೊಲೀಸರು ಬಂಧಿಸಿದ್ದಾರೆ. ಈ ಘಟನೆ ಸುಮಾರು ಎರಡು ವರ್ಷಗಳ ಹಿಂದೆ ನಡೆದಿದ್ದರೂ, ಇದೀಗ ಸಿಸಿಟಿವಿ ದೃಶ್ಯ ಮತ್ತು ಆಡಿಯೋ ಸಾಕ್ಷಿಗಳ ಆಧಾರದ ಮೇಲೆ ಪ್ರಕರಣ ಬೆಳಕಿಗೆ ಬಂದಿದೆ.

ಬಂಧಿತ (maulvi) ನನ್ನು ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪುರದ ತುಫೇಲ್ ಅಹ್ಮದ್ ದಾದಾಫೀರ್ ನಗರ್ಚಿ (22) ಎಂದು ಗುರುತಿಸಲಾಗಿದೆ. 2023ರ ಅಕ್ಟೋಬರ್ 5ರಂದು, ಮಸೀದಿ ಪಕ್ಕದ ಮನೆಯಲ್ಲಿ ಆಟವಾಡುತ್ತಿದ್ದ ಬಾಲಕಿಯನ್ನು ಪುಸಲಾಯಿಸಿ ಮಸೀದಿಯೊಳಗೆ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ದುಷ್ಕೃತ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಇದನ್ನು ಓದಿ : “ಕಾಲಿನ ನೋವಿನ ಜೊತೆ ಈ 5 ಲಕ್ಷಣಗಳು ಕಂಡುಬಂದರೆ ನಿರ್ಲಕ್ಷಿಸಬೇಡಿ ; ಅದು Kidney ಫೆಲ್ಯೂರ್‌ನ ಸೂಚನೆ ಆಗಿರಬಹುದು”

ಪ್ರಕರಣ ನಡೆದ ಬಳಿಕ ಆರೋಪಿ, ಬಾಲಕಿಯ ಕುಟುಂಬಕ್ಕೆ ಬೆದರಿಕೆ ಹಾಕಿ ದೂರು ನೀಡದಂತೆ ಮೌಲ್ವಿ (maulvi) ತಡೆಗಟ್ಟಿದ್ದ. ಮಸೀದಿಯ ಕೆಲವು ಸದಸ್ಯರು ಸಹ ರಾಜಿ ಪಂಚಾಯಿತಿ ಮೂಲಕ ಪ್ರಕರಣ ಮುಚ್ಚಲು ಯತ್ನಿಸಿದ್ದರಿಂದ, ಘಟನೆ ತಡವಾಗಿ ಬಹಿರಂಗವಾಯಿತು.

ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಈ ಪ್ರಕರಣಕ್ಕೆ ಸಂಬಂಧಿಸಿದ ವಿಡಿಯೋ ಮತ್ತು ಆಡಿಯೋ ತುಣುಕು ಹರಿದಾಡಿದ್ದು, ಹಿಂದೂ ಸಂಘಟನೆಯ ಕಾರ್ಯಕರ್ತರು ಇದನ್ನು ಹಂಚಿಕೊಂಡು ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು. ವಿಷಯ ತಿಳಿದ ಕೂಡಲೇ ಮುರಗೋಡ ಠಾಣೆ ಪೊಲೀಸರು ಮೂರು ವಿಶೇಷ ತಂಡಗಳನ್ನು ರಚಿಸಿ ಆರೋಪಿಯನ್ನು ಬಂಧಿಸಿ ಹಿಂಡಲಗಾ ಜೈಲಿಗೆ ಕಳುಹಿಸಿದ್ದಾರೆ.

ಇದನ್ನು ಓದಿ : Vande-Bharat : ಬೆಳಗಾವಿ – ಬೆಂಗಳೂರು ವಂದೇ ಭಾರತ್ ರೈಲಿಗೆ ಆ.10 ರಂದು ಪ್ರಧಾನಿಯಿಂದ ಚಾಲನೆ.!

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಭೀಮಶಂಕರ್ ಗುಳೇದ ಅವರು, “ಆಡಿಯೋ ಮತ್ತು ಸಿಸಿಟಿವಿ ದೃಶ್ಯಗಳನ್ನು ಸಾಕ್ಷಿಯಾಗಿ ಬಳಸಿಕೊಂಡು ತನಿಖೆ ನಡೆಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮಸೀದಿಯವರ ನೇರ ಕೈವಾಡ ಪತ್ತೆಯಾಗಿಲ್ಲ, ಆದರೆ ಸಂಧಾನ ಯತ್ನಿಸಿದವರ ವಿಚಾರಣೆ ನಡೆಯುತ್ತಿದೆ” ಎಂದು ತಿಳಿಸಿದ್ದಾರೆ.

ಬಾಲಕಿಯ ಪೋಷಕರು ಪ್ರಾರಂಭದಲ್ಲಿ ದೂರು ನೀಡಲು ನಿರಾಕರಿಸಿದರೂ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಮತ್ತು ಅಂಗನವಾಡಿ ಕಾರ್ಯಕರ್ತೆಯ ಸಹಕಾರದಿಂದ ಪ್ರಕರಣವನ್ನು ದಾಖಲಿಸಲಾಗಿದೆ. ಐಪಿಸಿ ಕಾನೂನು ಅಡಿಯಲ್ಲಿ ಪ್ರಕರಣ ದಾಖಲಿಸಿ ಮುಂದಿನ ತನಿಖೆ ನಡೆಯುತ್ತಿದೆ.

- Advertisement -
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments