ಜನಸ್ಪಂದನ ನ್ಯೂಸ್, ಸಿನೆಮಾ : ಅರೆಸ್ಟ್ ಆದ್ಮೇಲೆ ದರ್ಶನ್-ಪವಿತ್ರಾಗೌಡ ಹೇಗಿದ್ದಾರೆ ಎಂಬ ಪೋಟೋ (Exclusive photo reveal) ಒಂದು ಸದ್ಯ ವೈರಲ್ ಆಗಿದೆ.
ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಪ್ರಮುಖ ಆರೋಪಿಗಳಾದ ನಟ ದರ್ಶನ್, ಪವಿತ್ರಾ ಗೌಡ ಮತ್ತು ಇತರರನ್ನು ಮತ್ತೆ ಬಂಧಿಸಿ ಪರಪ್ಪನ ಅಗ್ರಹಾರ ಜೈಲಿಗೆ ಕಳಿಸಲಾಗಿದೆ.
ಬಂಧನದ ಪ್ರಕ್ರಿಯೆ :
ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯವರು ಆರೋಪಿಗಳನ್ನು ಬಂಧಿಸಿ, ನ್ಯಾಯಾಧೀಶರ ಮುಂದೆ ಹಾಜರುಪಡಿಸಿದರು. ಬಳಿಕ ಎಲ್ಲರನ್ನೂ ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಲಾಯಿತು.
ನ್ಯಾಯಾಂಗ ಬಂಧನಕ್ಕೆ ಕಳಿಸುವ ಮುನ್ನ, ನಿಯಮದಂತೆ ಆರೋಪಿಗಳ ಫೋಟೋ (Photo), ಬೆರಳಚ್ಚು ಮತ್ತು ವೈದ್ಯಕೀಯ ಪರೀಕ್ಷೆ ನಡೆಸಲಾಯಿತು.
ಮಳೆಗಾಲದಲ್ಲಿ ಬಟ್ಟೆಗಳಿಂದ bad-smell ಬರುತ್ತಿದೆಯೇ? ಈ 3 ಮನೆಮದ್ದುಗಳಿಂದ 5 ನಿಮಿಷದಲ್ಲಿ ಪರಿಹಾರ.!
ವೈರಲ್ ಆದ ಚಿತ್ರಗಳು :
ಬಂಧನಕ್ಕೂ ಮುನ್ನ ತೆಗೆದ ಕೆಲವು ಚಿತ್ರ (Photo) ಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
- ನಟ ದರ್ಶನ್ ತಮ್ಮ ತಲೆಗೂದಲು ಸಂಪೂರ್ಣ ಬೋಳಿಸಿಕೊಂಡು ಹೊಸ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಮೂಲಗಳ ಪ್ರಕಾರ, ಅವರು ಮಾದೇಶ್ವರ ಬೆಟ್ಟಕ್ಕೆ ತೆರಳಿ ದೇವರಿಗೆ ಮುಡಿ ಕೊಟ್ಟು ಬಂದ ನಂತರ ಪೊಲೀಸರಿಗೆ ಶರಣಾಗಿದ್ದರು.
- ಪವಿತ್ರಾ ಗೌಡ ಅವರ ಚಿತ್ರ (Photo) ವೂ ವೈರಲ್ ಆಗಿದ್ದು, ಇನ್‌ಸ್ಟಾಗ್ರಾಂ ಶೈಲಿಯ ಫೋಟೋಗಳಿಗಿಂತ ವಿಭಿನ್ನವಾಗಿದೆ. ಒಂದು ಚಿತ್ರದಲ್ಲಿ ಅವರು ನಗುತ್ತಿರುವುದು ಮತ್ತು ಲಿಪ್‌ಸ್ಟಿಕ್ ಸ್ಪಷ್ಟವಾಗಿ ಕಾಣುವುದು ಗಮನ ಸೆಳೆದಿದೆ.
ಬೆಂಗಳೂರು : ನಿಗೂಢ blast ; 8 ವರ್ಷದ ಬಾಲಕನ ಸಾವು, ಹಲವರಿಗೆ ಗಾಯ.!
ಸುಪ್ರೀಂಕೋರ್ಟ್ ತೀರ್ಪು :
ಇದಕ್ಕೂ ಮೊದಲು ಜಾಮೀನಿನ ಮೇಲೆ ಬಿಡುಗಡೆಯಾದ ಆರೋಪಿಗಳ ಜಾಮೀನನ್ನು ಸುಪ್ರೀಂಕೋರ್ಟ್ ರದ್ದುಪಡಿಸಿದೆ. ಹೈಕೋರ್ಟ್ ಜಾಮೀನು ನೀಡುವ ವೇಳೆ ಸರಿಯಾದ ನಿಯಮಗಳನ್ನು ಪಾಲಿಸಿಲ್ಲವೆಂದು ಸುಪ್ರೀಂಕೋರ್ಟ್ ಅಭಿಪ್ರಾಯಪಟ್ಟಿದೆ. ಒಟ್ಟು ಏಳು ಮಂದಿ ಆರೋಪಿಗಳ ಜಾಮೀನು ರದ್ದುಗೊಂಡಿದೆ.
ದರ್ಶನ್, ಪವಿತ್ರಾ ಗೌಡ ಜೈಲು ಸೇರುವ ಮೊದಲಿನ ಪೋಟೋ (Photo) :
Kills : ಬೆಳಗಾವಿ ; ವಿವಾಹಿತ ಪ್ರೇಯಸಿಯನ್ನು ಹತ್ಯೆಗೈದು ಆತ್ಮಹತ್ಯೆಗೆ ಶರಣಾದ ವಿವಾಹಿತ.!
ಜನಸ್ಪಂದನ ನ್ಯೂಸ್, ಬೆಳಗಾವಿ : ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಬೀಡಿ ಪಟ್ಟಣದಲ್ಲಿ ಆಘಾತಕಾರಿ ಘಟನೆ ನಡೆದಿದೆ. ವಿವಾಹಿತ ಮಹಿಳೆಯೊಂದಿಗೆ ಸಂಬಂಧ ಹೊಂದಿದ್ದ ವ್ಯಕ್ತಿಯೊಬ್ಬಳು ತನ್ನಿಂದ ದೂರವಾದ ಹಿನ್ನೆಲೆಯಲ್ಲಿ ಕೋಪಗೊಂಡು ಆಕೆಯನ್ನೇ ಕೊಲೆ (Kill /Murder) ಮಾಡಿ ತಾನೂ ಆತ್ಮಹತ್ಯೆಗೆ ಶರಣಾಗಿದ್ದಾನೆ.
ಈ ಘಟನೆಯಲ್ಲಿ ಕೊಲೆಯಾದ (Kill) ವಿವಾಹಿತೆynfnu ರೇಶ್ಮಾ (29) ಎಂದು, ಆನಂದ ಸುತಾರ (31) ಆತ್ಮಹತ್ಯೆಗೆ ಶರಣಾದ ಕೊಲೆ ಆರೋಪಿ ವ್ಯಕ್ತಿ ಎಂದು ಗುರುತಿಸಲಾಗಿದೆ.
Coaching ಸೆಂಟರ್‌ನಲ್ಲಿ ವಿದ್ಯಾರ್ಥಿನಿ ಜೊತೆ ಶಿಕ್ಷಕನ ಅಸಭ್ಯ ವರ್ತನೆ ; ವಿಡಿಯೋ ವೈರಲ್.!
ಘಟನೆ ಹೇಗೆ ನಡೆದಿದೆ?
ಆನಂದ-ರೇಶ್ಮಾ ಇವರಿಬ್ಬರು ಒಂದೇ ಗ್ರಾಮದವರಾಗಿದ್ದು ಇಬ್ಬರ ನಡುವೆ ಮೊದಲಿನಿಂದಲೂ ಅನೈತಿಕ ಸಂಬಂಧವಿತ್ತು ಎನ್ನಲಾಗಿದೆ ಇವರಿಬ್ಬರೂ ವಿವಾಹಿತರಾಗಿದ್ದು, ಇಬ್ಬರಿಗೂ ಮಕ್ಕಳಿದ್ದಾರೆ. ರೇಶ್ಮಾ ವಿವಾಹಿತೆ ಎಂದು ಗೊತ್ತಿದ್ದರೂ ಆನಂದ ಅವಳ ಜೊತೆ ಸಂಬಂಧವನ್ನು ಮುಂದುವರೆಸಿದ್ದ.
ಇವರಿಬ್ಬರೂ ಮೇಲಿಂದ ಮೇಲೆ ಭೇಟಿಯಾಗುತ್ತಿದ್ದರು ಮತ್ತು ಮೊಬೈಲ್ ನಲ್ಲಿ ದಿನನಿತ್ಯ ಮಾತಾಡುತ್ತಿದ್ದರು. ರೇಶ್ಮಾಳ ಮನೆಗೆ ಆನಂದ ಮೇಲಿಂದ ಮೇಲೆ ಭೇಟಿ ನೀಡುತ್ತಿದ್ದ ಎಂದು ತಿಳಿದು ಬಂದಿದೆ. ರೇಶ್ಮಾ ಮತ್ತು ಆನಂದ ಅವರ ಸಂಬಂಧದ ವಿಷಯ ರೇಶ್ಮಾಳ ಪತಿಗೆ ಕೆಲ ದಿನಗಳ ಹಿಂದೆ ತಿಳಿದಿದೆ.
ಬೆಂಗಳೂರು : ನಿಗೂಢ blast ; 8 ವರ್ಷದ ಬಾಲಕನ ಸಾವು, ಹಲವರಿಗೆ ಗಾಯ.!
ರೇಶ್ಮಾಳ ಪತಿ ಈ ಸಂಬಂಧದ ಬಗ್ಗೆ ಹಿರಿಯರ ಮೂಲಕ ನಂದಗಡ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರು ಸ್ವೀಕರಿಸಿದ ಪೊಲೀಸರು ಆನಂದನನ್ನು ಠಾಣೆಗೆ ಕರೆಸಿ ಎಚ್ಚರಿಕೆ ನೀಡಿ, ರೇಶ್ಮಾಳ ಜೀವನದಲ್ಲಿ ತೊಂದರೆ ಮಾಡಬಾರದೆಂದು ತಪ್ಪೊಪ್ಪಿಗೆ ಪತ್ರ ಬರೆಸಿಕೊಂಡು ಬಿಡಿಸಿದ್ದರು. ಈ ಘಟನೆ ಬಳಿಕ ರೇಶ್ಮಾ ಮತ್ತು ಆನಂದ ಹಲವಾರು ದಿನಗಳ ಕಾಲ ಪರಸ್ಪರ ಸಂಪರ್ಕದಲ್ಲಿರಲಿಲ್ಲ.
ಇದರಿಂದ ಅಸಮಾಧಾನಗೊಂಡ ಆನಂದ, ಶುಕ್ರವಾರ ರೇಶ್ಮಾಳ ಮನೆಯಲ್ಲಿ ನುಗ್ಗಿ ಚಾಕುವಿನಿಂದ ಹೊಟ್ಟೆ ಮತ್ತು ಎದೆಗೆ 9 ಬಾರಿ ಇರಿದು ಹತ್ಯೆ (Kill /Murder)ಗೈದಿದ್ದಾನೆ.
ಸ್ವಾತಂತ್ರ್ಯೋತ್ಸವ ದಿನವೇ PSI ಪತ್ನಿ ಆತ್ಮಹತ್ಯೆ.!
ಆತ್ಮಹತ್ಯೆಗೆ ಶರಣಾದ ಆನಂದ :
ಪ್ರೇಯಸಿಯನ್ನು ಹತ್ಯೆ (Kill /Murder) ಗೈದ ನಂತರ ಆನಂದ ತಾನೂ ಚಾಕುವಿನಿಂದ ಇರಿದು ಆತ್ಮಹತ್ಯೆಗೆ ಯತ್ನಿಸಿದನು. ರಕ್ತದ ಮಡುವಿನಲ್ಲಿ ಬಿದ್ದಿದ್ದ ಅವನನ್ನು ಆಸ್ಪತ್ರೆಗೆ ಸಾಗಿಸುವ ವೇಳೆ ಮಾರ್ಗಮಧ್ಯದಲ್ಲೇ ಮೃತಪಟ್ಟಿದ್ದಾನೆ ಎಂದು ನಂದಗಡ ಪೊಲೀಸ್ ಠಾಣೆ ಮಾಹಿತಿ ನೀಡಿದೆ.
ಘಟನೆಯ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣದ ಕುರಿತು ತನಿಖೆ ಕೈಗೊಂಡಿದ್ದಾರೆ.