Friday, July 11, 2025

Janaspandhan News

HomeBelagavi NewsMurder : 5 ವರ್ಷಗಳ ಹಿಂದೆ ನಡೆದಿದ್ದ ಕೊಲೆ ಪ್ರಕರಣ : ನಾಲ್ವರಿಗೆ ಜೀವಾವಧಿ ಶಿಕ್ಷೆ.!
spot_img
spot_img

Murder : 5 ವರ್ಷಗಳ ಹಿಂದೆ ನಡೆದಿದ್ದ ಕೊಲೆ ಪ್ರಕರಣ : ನಾಲ್ವರಿಗೆ ಜೀವಾವಧಿ ಶಿಕ್ಷೆ.!

- Advertisement -

ಜನಸ್ಪಂದನ ನ್ಯೂಸ್, ಬೆಳಗಾವಿ : 2020ರಲ್ಲಿ ನಡೆದಿದ್ದ ಕೊಲೆ (Murder) ಪ್ರಕರಣಕ್ಕೆ ಸಂಬಂಧಿಸಿ ನಾಲ್ವರಿಗೆ ಜೀವಾವಧಿ ಶಿಕ್ಷೆ ಹಾಗೂ ರೂ.1.40 ಲಕ್ಷ ದಂಡ ವಿಧಿಸಿ ಚಿಕ್ಕೋಡಿಯ 7ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಶುಕ್ರವಾರ ತೀರ್ಪು ನೀಡಿದೆ.

ನಿಪ್ಪಾಣಿ ತಾಲೂಕು ಹಂಚಿನಾಳ ಕೆ.ಎಸ್‌. ಗ್ರಾಮದಲ್ಲಿ ನಡೆದಿದ್ದ ಸಚಿನ ಭೋಪಳೆ (37) ಹತ್ಯೆ (Murder) ಪ್ರಕರಣದಲ್ಲಿ ಮೃತನ ಪತ್ನಿ ಅನಿತಾ ಭೋಪಳೆ (35), ಪತ್ನಿ ಸಹೋದರ ಕೃಷ್ಣಾತ ಘಾಟಗೆ (32), ವನಿತಾ ಚವ್ಹಾಣ (29), ಗಣೇಶ ರೇಡೆಕರ (21) ಶಿಕ್ಷೆಗೆ ಒಳಗಾಗಿದ್ದಾರೆ.‌

ಇದನ್ನು ಓದಿ : Forest guard Missing : 6 ದಿನಗಳಿಂದ ನಿಗೂಢವಾಗಿ ನಾಪತ್ತೆಯಾದ ಫಾರೆಸ್ಟ್ ಗಾರ್ಡ್.!

ಸಚಿನ ಭೋಪಳೆ ತನ್ನ ಪತ್ನಿ ಅನಿತಾ ಭೋಪಳ ಮೇಲೆ ಹಲ್ಲೆ ನಡೆಸಿ, ಹಿಂಸೆ ನೀಡುತ್ತಿದ್ದ. ಇದೇ ಕಾರಣಕ್ಕೆ ಅವನನ್ನು ಬಡಿಗೆಯಿಂದ ಹೊಡೆದು, ಕೈಕಾಲು ಕಟ್ಟಿ, ಕುತ್ತಿಗೆಗೆ ಉರುಳು ಹಾಕಿ ಕೊಲೆ (Murder) ಮಾಡಲಾಗಿತ್ತು.

ಜೆಸಿಬಿ ಮೂಲಕ ಗುಂಡಿ ತೋಡಿ, ಕೊಲೆ (Murder) ಮಾಡಿದ ನಂತರ ಶವ ಹೂಳಲು ಯತ್ನಿಸಿ ಸಾಕ್ಷ್ಯ ನಾಶ ಮಾಡಲು ಯತ್ನಿಸಲಾಗಿತ್ತು. ಜೆಸಿಬಿ ಚಾಲಕ ಸುನೀಲ ರಾಠೋಡ ಇದನ್ನು ಕಂಡು ಪೊಲೀಸರಿಗೆ ದೂರು ನೀಡಿದ್ದರು.

ನಿಪ್ಪಾಣಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ  ಕೊಲೆ (Murder) ಪ್ರಕರಣ ದಾಖಲಾಗಿತ್ತು. ಸಾಕ್ಷ್ಯಾಧಾರ ಪರಿಗಣಿಸಿ ನ್ಯಾಯಾಧೀಶ ತಾರಕೇಶ್ವರಗೌಡ ಪಾಟೀಲ ಅವರು ತೀರ್ಪು ನೀಡಿದ್ದಾರೆ. ಸರ್ಕಾರಿ ಅಭಿಯೋಜಕ ವೈ.ಜಿ. ತುಂಗಳ ವಾದ ಮಂಡಿಸಿದ್ದರು.

Astrology : ಹೇಗಿದೆ ಗೊತ್ತಾ.? ಜುಲೈ 05 ರ ದ್ವಾದಶ ರಾಶಿಗಳ ಫಲಾಫಲ.!

ಜನಸ್ಪಂದನ ನ್ಯೂಸ್, ಜೋತಿಷ್ಯ (Astrology) : 2025 ಜುಲೈ 05 ರ ಶನಿವಾರ ದಿನವಾದ ಇಂದು, ನಿಮ್ಮ ದಿನವು ಹೇಗಿರಲಿದೆ..? ಇಂದು ಯಾವ ರಾಶಿಯವರಿಗೆ ಶುಭ.? ಯಾವ ರಾಶಿಯವರು ಎಚ್ಚರಿಕೆ.? ಇಂದಿನ ದ್ವಾದಶ ರಾಶಿಗಳ ಫಲಾಫಲ (Astrology) ಹೇಗಿದೆ ನೋಡಿ.

ದೈನಂದಿನ ದ್ವಾದಶ ರಾಶಿಗಳ ಫಲಾಫಲ (ಜಾತಕ) ದ ಮೂಲಕ ಭವಿಷ್ಯ (Astrology) ವನ್ನು ಊಹಿಸುವುದು ಪ್ರಾಚೀನ ಕಾಲದಿಂದಲೂ ಇಂದಿನವರೆಗೆ ಪ್ರಸ್ತುತವಾಗಿದೆ. ಗ್ರಹಗಳ ಸ್ಥಾನಗಳು, ನಕ್ಷತ್ರಗಳು, ತಿಥಿ ಮತ್ತು ಇತರ ಜ್ಯೋತಿಷ್ಯ (Astrology) ಅಂಶಗಳ ಆಧಾರದ ಮೇಲೆ ರಾಶಿಗಳ ಫಲಾಫಲ (ಜಾತಕ) ವು ವ್ಯಕ್ತಿಯ ಭವಿಷ್ಯ (Astrology) ವನ್ನು ಮುನ್ಸೂಚಿಸುತ್ತದೆ.

ಇದನ್ನು ಓದಿ : Liver : ಈ ತರಕಾರಿಗಳನ್ನು 3 ತಿಂಗಳು ತಿನ್ನಿರಿ ; ಡ್ಯಾಮೇಜ್ ಆಗಿರುವ ಲಿವರ್‌ನಿಂದ ಮುಕ್ತಿ ಪಡೆಯಿರಿ.!
ಇಂದಿನ ದ್ವಾದಶ ರಾಶಿಗಳ ಫಲಾಫಲ (Astrology) ಹೇಗಿದೆ :

results of the twelve zodiac signs

*ಮೇಷ ರಾಶಿ*

ಮೇಷ ರಾಶಿಯವರಿಗೆ ಇಂದು ಮಿಶ್ರ ಫಲವಾಗಿರಲಿದೆ. ನಿಮ್ಮ ಎಲ್ಲಾ ಹೆಜ್ಜೆಗಳ ಕುರಿತು ಬಹಳ ಎಚ್ಚರಿಕೆಯಿಂದ ಇಡಬೇಕಾಗುತ್ತದೆ. ಸಂಬಂಧಿಕರು ನಿಮ್ಮ ಜೊತೆ ವಾದದಲ್ಲಿ ಇಂದು ತೊಡಗಬಹುದು. ನಿಮ್ಮ ಸಾಲಗಳ ಮರುಪಾವತಿಗೆ ಇಂದು ಸೂಕ್ತ ದಿನ. ವಾಹನ ಸಂಬಂಧಿ ಖರ್ಚುಗಳಿಂದ ಸಮಸ್ಯೆ ಇರುವುದಿಲ್ಲ ಸಂತಸ ಇರಬಹುದು. ಯಾವುದೇ ಅನಾರೋಗ್ಯವನ್ನು ನಿರ್ಲಕ್ಷ್ಯ ಮಾಡಬೇಡಿ. ಹಲವು ರೀತಿಯ ವಸ್ತುಗಳ ಖರೀದಿಯಲ್ಲಿ ನಿಮಗೆ ಲಾಭವಾಗುವ ನಿರೀಕ್ಷೆ ಇದೆ.

*ವೃಷಭ ರಾಶಿ*

ವೃಷಭ ರಾಶಿಯವರಿಗೆ ಇಂದು ಎಚ್ಚರಿಕೆಯಿಂದ ಯೋಚಿಸಿದ ನಂತರ ನಿರ್ಧಾರ ತೆಗೆದುಕೊಳ್ಳುವ ದಿನವಾಗಿರುತ್ತದೆ. ನಿಮ್ಮ ಮನೆಯ ನವೀಕರಣದ ಬಗ್ಗೆ ನೀವು ಯೋಚಿಸಬಹುದು. ಕುಟುಂಬಸ್ಥರೊಂದಿಗೆ ನೀವು ಸಂತಸ ಕ್ಷಣಗಳ ಆನಂದಿಸಬಹುದು. ಗೃಹಿಣಿಯರಲ್ಲಿ ಆರೋಗ್ಯ ಸುಧಾರಣೆ ನೋಡಬಹುದು. ಆಸ್ತಿ ವಿಚಾರದಲ್ಲಿ ಧನಾತ್ಮಕ ಬದಲಾವಣೆ ಇರಲಿದೆ.

ಇದನ್ನು ಓದಿ : Astrology : ಹೇಗಿದೆ ಗೊತ್ತಾ.? ಜುಲೈ 04 ರ ದ್ವಾದಶ ರಾಶಿಗಳ ಫಲಾಫಲ.!
*ಮಿಥುನ ರಾಶಿ*

ವ್ಯವಹಾರದ ವಿಷಯದಲ್ಲಿ ಇಂದು ನಿಮಗೆ ಉತ್ತಮ ದಿನವಾಗಲಿದೆ. ನಿಮ್ಮ ಬಹುದೊಡ್ಡ ಸಮಸ್ಯೆಗಳಲ್ಲಿ ಈ ದಿನ ಧನಾತ್ಮಕ ಬದಲಾವಣೆ ನೋಡಬಹುದು. ಇದು ನಿಮಗೆ ನೆಮ್ಮದಿ ತರಲಿದೆ. ನೀವು ಹಠಾತ್ ಪ್ರವಾಸ ಕೈಗೊಳ್ಳುವ ಸಾಧ್ಯತೆ ಇದೆ. ಮಕ್ಕಳ ಬಹುದಿನದ ಆಸೆಯೊಂದನ್ನು ನೀವು ಈಡೇರಿಸಬಹುದು. ಆದಾಯದಲ್ಲಿ ಸುಧಾರಣೆ ನೋಡುವಿರಿ.

*ಕಟಕ ರಾಶಿ*

ಕಟಕ ರಾಶಿಯವರು ಈ ದಿನ ಅನುಕೂಲಕರ ದಿನ ನೋಡಬಹುದು. ಕೆಲಸದ ನಿಮಿತ್ತ ನೀವು ಪ್ರಯಾಣ ಮಾಡಬೇಕಾಗುತ್ತದೆ. ಶತ್ರುಗಳಿಂದ ಇಂದು ದೂರ ಇದ್ದಷ್ಟು ನಿಮಗೆ ಒಳಿತು. ನೀವು ಪ್ರವಾಸಕ್ಕೆ ಹೋದರೆ ಸ್ವಲ್ಪ ಎಚ್ಚರಿಕೆಯಿಂದ ವಾಹನಗಳನ್ನು ಬಳಸಿ. ಆಧ್ಯಾತ್ಮಿಕವಾಗಿ ಇಂದು ನಿಮಗೆ ಉತ್ತಮ ದಿನ. ದಾಂಪತ್ಯದಲ್ಲಿನ ಸಮಸ್ಯೆಗಳ ಬಗೆಹರಿಸಿಕೊಳ್ಳುವಿರಿ. ಆರ್ಥಿಕ ಸ್ಥಿತಿ ಸುಧಾರಿಸಲಿದೆ.

ಇದನ್ನು ಓದಿ : Hukkeri : ಶ್ರೀರಾಮ ಸೇನೆ ಕಾರ್ಯಕರ್ತರ ಮೇಲೆ ಹಲ್ಲೆ ಪ್ರಕರಣ ; ಪಿಎಸ್‌ಐ ಸಸ್ಪೆಂಡ್.!
*ಸಿಂಹ ರಾಶಿ*

ಸಿಂಹ ರಾಶಿಯವರಿಗೆ ಇಂದು ಸಮಸ್ಯೆಗಳಿಂದ ತುಂಬಿದ ದಿನವಾಗಿರುತ್ತದೆ. ನಿಮ್ಮ ಕೆಲಸಗಳಲ್ಲಿ ಅಡೆತಡೆ ಎದುರಾಗುತ್ತವೆ. ಸರ್ಕಾರಿ ಕೆಲಸದಲ್ಲಿ ವಿಳಂಬಗಳ ನೋಡಬಹುದು. ವ್ಯಾಪಾರ ಸಂಬಂಧವಾಗಿ ನಿಮ್ಮ ಪಾಲುದಾರರು ಅಥವಾ ಹಣಕಾಸು ನೆರವು ನೀಡಿದ್ದವರೊಂದಿಗೆ ವಾಗ್ವಾದಕ್ಕೆ ಇಂದು ಕಾರಣವಾಗಬಹುದು. ಆರೋಗ್ಯದಲ್ಲೂ ಏರುಪೇರು ಸಂಭವ.

*ಕನ್ಯಾ ರಾಶಿ*

ಹೊಸ ವಸ್ತು ಖರೀದಿಸಲು ಇಂದು ನಿಮಗೆ ಒಳ್ಳೆಯ ದಿನವಾಗಿರುತ್ತದೆ. ಮಕ್ಕಳ ಶಿಕ್ಷಣದ ಬಗ್ಗೆ ನೀವು ಸಂಪೂರ್ಣ ಗಮನ ಹರಿಸಬೇಕಾಗುತ್ತದೆ. ಪ್ರತಿಕೂಲ ಸಂದರ್ಭಗಳಲ್ಲಿಯೂ ಸಹ ನೀವು ತಾಳ್ಮೆಯನ್ನು ಕಾಪಾಡಿಕೊಳ್ಳಬೇಕು. ಬಹಳ ದಿನಗಳಿಂದ ಬಯಸಿದ್ದ ಕೆಲಸವೊಂದು ಕೈಗೂಡಲಿದೆ. ಸಮಯಕ್ಕೆ ಸರಿಯಾಗಿ ಎಲ್ಲಾ ಕೆಲಸಗಳು ಈಡೇರಲಿವೆ. ಗೃಹಿಣಿಯರಲ್ಲಿ ಕಾಲು ನೋವಿನ ಸಂಭವವಿದೆ.

ಇದನ್ನು ಓದಿ : ಮೇಕೆಯನ್ನು ನುಂಗಿದ 20 ಅಡಿ ದೈತ್ಯ Python ; ಮುಂದೆನಾಯ್ತು ವಿಡಿಯೋ ನೋಡಿ.!
*ತುಲಾ ರಾಶಿ*

ಇಂದು ನಿಮಗೆ ಬಹಳ ಫಲಪ್ರದ ದಿನವಾಗಲಿದೆ. ನಿಮ್ಮ ದೀರ್ಘಕಾಲದಿಂದ ಬಾಕಿ ಉಳಿದಿರುವ ಕೆಲಸಗಳನ್ನು ಪೂರ್ಣಗೊಳಿಸುವಲ್ಲಿ ನೀವು ನಿರತರಾಗಿರುತ್ತೀರಿ. ಮನೆಯ ವಾತಾವರಣವು ಆಹ್ಲಾದಕರವಾಗಿರಲಿದೆ. ದಾಂಪತ್ಯದಲ್ಲಿನ ಮುನಿಸು ದೂರಾಗಲಿದೆ. ಮನೆಗೆ ಅನಿರೀಕ್ಷಿತ ಸಂಬಂಧಿಗಳ ಆಗಮನ ಆಗಬಹುದು.

*ವೃಶ್ಚಿಕ ರಾಶಿ*

ಆರೋಗ್ಯದ ವಿಷಯದಲ್ಲಿ ಇಂದು ನಿಮಗೆ ದುರ್ಬಲ ದಿನವಾಗಿರುತ್ತದೆ. ಸಣ್ಣ ಪುಟ್ಟ ಅನಾರೋಗ್ಯವು ನಿಮ್ಮ ದೈನಂದಿನ ಕೆಲಸ ಕಾರ್ಯಗಳಿಗೆ ಅಡ್ಡಿಯಾಗಬಹುದು. ಪ್ರಯಾಣಗಳಲ್ಲಿ ನೀವು ಬಯಸಿದಂತಹ ಫಲಿತಾಂಶ ಪಡೆಯದೆ ಇರಬಹುದು. ಮಕ್ಕಳ ಕುರಿತಾದ ಚಿಂತೆಯೊಂದು ಕಾಡಬಹುದು.

ಇದನ್ನು ಓದಿ : Forest guard Missing : 6 ದಿನಗಳಿಂದ ನಿಗೂಢವಾಗಿ ನಾಪತ್ತೆಯಾದ ಫಾರೆಸ್ಟ್ ಗಾರ್ಡ್.!
*ಧನುಸ್ಸು ರಾಶಿ*

ಆರೋಗ್ಯದ ವಿಷಯದಲ್ಲಿ ಇಂದು ನಿಮಗೆ ದುರ್ಬಲ ದಿನವಾಗಿರುತ್ತದೆ. ಸಣ್ಣ ಪುಟ್ಟ ಅನಾರೋಗ್ಯವು ನಿಮ್ಮ ದೈನಂದಿನ ಕೆಲಸ ಕಾರ್ಯಗಳಿಗೆ ಅಡ್ಡಿಯಾಗಬಹುದು. ಪ್ರಯಾಣಗಳಲ್ಲಿ ನೀವು ಬಯಸಿದಂತಹ ಫಲಿತಾಂಶ ಪಡೆಯದೆ ಇರಬಹುದು. ಮಕ್ಕಳ ಕುರಿತಾದ ಚಿಂತೆಯೊಂದು ಕಾಡಬಹುದು.

*ಮಕರ ರಾಶಿ*

ಧನು ರಾಶಿಯವರಿಗೆ ಇಂದು ಮಿಶ್ರಫಲದ ದಿನ. ಇಂದು ನಿಮ್ಮ ಕೌಟುಂಬಿಕ ವಿಚಾರವಾಗಿ ಬಹಳ ಉತ್ತಮ ದಿನ. ನಿಮಗೆ ಹಣಕಾಸಿನ ನೆರವು ಬೇಕಿದ್ದರೆ ಕುಟುಂಬ ಸದಸ್ಯರು ಸಹಾಯಕ್ಕೆ ಬರಬಹುದು. ದಾಂಪತ್ಯದಲ್ಲಿ ಸುಖ ಇರಲಿದೆ. ವ್ಯಾಪಾರ ಸಂಬಂಧವಾಗಿ ನೀವು ತೆಗೆದುಕೊಳ್ಳುವ ನಿರ್ಧಾರ ನಿಮಗೆ ಲಾಭ ತರಬಹುದು.

ಇದನ್ನು ಓದಿ : ವಯಕ್ತಿಕ ಕಾರಣ : Councilor ಪತ್ನಿಯನ್ನೇ ಕೊಚ್ಚಿ ಕೊಂದ ಪತಿ.!
*ಕುಂಭ ರಾಶಿ*

ಮಕರ ರಾಶಿ ಇಂದು ನಿಮಗೆ ಕಷ್ಟಗಳಿಂದ ತುಂಬಿದ ದಿನವಾಗಿರುತ್ತದೆ. ಕೆಲವು ಕೆಲಸಗಳನ್ನು ಪೂರ್ಣಗೊಳಿಸುವಲ್ಲಿ ನೀವು ಸಮಸ್ಯೆಗಳನ್ನು ಎದುರಿಸುತ್ತೀರಿ. ಪ್ರಯಾಣಗಳಲ್ಲಿ ನಿಮಗೆ ಅಶುಭವಾಗಬಹುದು. ಉದ್ಯೋಗದ ಸ್ಥಳದಲ್ಲಿ ಮನಸ್ತಾಪಗಳು ಮೂಡಬಹುದು. ನಿಮ್ಮ ಬುದ್ದಿವಂತಿಕೆಯಿಂದ ಕೆಲಸಗಳ ಮುಗಿಸುವಿರಿ.

*ಮೀನ ರಾಶಿ*

ಕುಂಭ ರಾಶಿಯವರಿಗೆ ಮಿಶ್ರ ಫಲ ತುಂಬಿದ ದಿನವಾಗಿರಲಿದೆ. ನಿಮ್ಮ ಹಲವು ಕೆಲಸಗಳಿಗೆ ಹಣಕಾಸು ವಿಚಾರದಲ್ಲಿ ಅಡ್ಡಿ ಎದುರಾಗಬಹುದು. ಅನಗತ್ಯ ವಿಚಾರದಲ್ಲಿ ನಿಮಗೆ ಚಿಂತೆಗಳು ಕಾಡಬಹುದು. ಪ್ರೀತಿಯ ವಿಚಾರದಲ್ಲಿ ನಿಮಗೆ ಅನಾನುಕೂಲತೆ ಇರಲಿದೆ. ವಾಹನ ಸಂಬಂಧಿ ಖರ್ಚು ಇರಬಹುದು.

- Advertisement -
spot_img
spot_img
spot_img
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments