Friday, March 14, 2025
HomeViral Videoಕೋರ್ಟ್‌ ಆವರಣದಲ್ಲಿಯೇ ಅತ್ತೆ - ಸೊಸೆ ಜಗಳ ; Vedio ನೋಡಿ.!
spot_img
spot_img
spot_img
spot_img
spot_img

ಕೋರ್ಟ್‌ ಆವರಣದಲ್ಲಿಯೇ ಅತ್ತೆ – ಸೊಸೆ ಜಗಳ ; Vedio ನೋಡಿ.!

WhatsApp Channel Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ಡೆಸ್ಕ್ : ಮನೆಗಳಲ್ಲಿ ಅತ್ತೆ (mother in law) ಸೊಸೆ ಮಧ್ಯೆ ಆಗಾಗ ಜಗಳ ನಡೆಯುತ್ತವೆ. ಇವರ ಗಲಾಟೆ ತಾರಕಕ್ಕೇರಿ ನ್ಯಾಯಾಲಯ, ಪೊಲೀಸ್‌ ಠಾಣೆಯ ಮೆಟ್ಟಿಲೇರಿದ ಉದಾಹರಣೆಗಳು ಸಾಕಷ್ಟಿವೆ.

ಇದೀಗ ಕೋರ್ಟ್ ಆವರಣದಲ್ಲಿಯೇ ಅತ್ತೆ ಸೊಸೆಯ (daughter in law) ಜಗಳವಾಡಿದ ವಿಡಿಯೋವೊಂದು ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ.‌

ಇದನ್ನು ಓದಿ : ಬಿಗ್ ಟ್ವಿಸ್ಟ್ ; ಬೆಳಗಾವಿಯಲ್ಲಿ ಹಲ್ಲೆಗೊಳಗಾಗಿದ್ದ ಕಂಡಕ್ಟರ್ ಮೇಲೆ ಬಿತ್ತು ಪೋಕ್ಸೋ ಕೇಸ್‌.!

ವಿಚಾರಣೆಗಾಗಿ ಬಂದಿದ್ದ ಸಂದರ್ಭ ಅತ್ತೆ- ಸೊಸೆ ಕೋರ್ಟ್‌ ಆವರಣದಲ್ಲಿಯೇ ಪರಸ್ಪರ ಕೈ ಮಿಲಾಯಿಸಿ ಜಗಳವಾಡಿದ್ದಾರೆ. ಇವರ ಜಗಳವನ್ನು ಕಂಡು ಅಲ್ಲಿದ್ದ ಜನರು ಒಂದು ಕ್ಷಣ ಬೆಚ್ಚಿ ಬಿದ್ದಿದ್ದಾರೆ.

ಮಹಾರಾಷ್ಟ್ರದ ನಾಸಿಕ್‌ನಲ್ಲಿ (In Nashik, Maharashtra) ಈ ಘಟನೆ ನಡೆದಿದ್ದು, ಕೋರ್ಟ್‌ ವಿಚಾರಣೆಗೆ ಹಾಜರಾಗಿದ್ದ ಅತ್ತೆ ಸೊಸೆ ಕೋರ್ಟ್ ಆವರಣದಲ್ಲಿಯೇ ಗಲಾಟೆ ಶುರು ಮಾಡಿದ್ದಾರೆ.

ಇದನ್ನು ಓದಿ : ಪೋನ್ ಪೇ ಮೂಲಕ ಲಂಚ ಪಡೆದ ಮಹಿಳಾ ಪೊಲೀಸ್ ಇನ್ಸ್‌ಪೆಕ್ಟರ್ ಲೋಕಾಯುಕ್ತ ಬಲೆಗೆ.!

ಮೊದಲು ಇಬ್ಬರ ಮಧ್ಯೆ ವಾಗ್ವಾದ ನಡೆದಿದ್ದು, ನಂತರ ಮಾತುಕತೆ ತಾರಕಕ್ಕೇರಿ ದೊಡ್ಡ ಜಗಳವೇ ನಡೆದಿದೆ. ಅತ್ತೆ ಸೊಸೆ ಪರಸ್ಪರ ದೈಹಿಕ ಹಲ್ಲೆ ನಡೆಸಿದ್ದಾರೆ. ಅಲ್ಲಿದ್ದ ಸಾರ್ವಜನಿಕರು ಗಲಾಟೆ ನಿಲ್ಲಿಸಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ (The public tried to stop the commotion but could not). ಅಂತಿಮವಾಗಿ ಪೊಲೀಸರು ಮಧ್ಯ ಪ್ರವೇಶಿಸಿ ಜಗಳ ನಿಲ್ಲಿಸಿದರು ಎಂದು ವರದಿಯಿಂದ ತಿಳಿದು ಬಂದಿದೆ.

Ghar ke kalesh ಹೆಸರಿನ ಎಕ್ಸ್‌ ಖಾತೆಯಲ್ಲಿ ಈ ವಿಡಿಯೋವನ್ನು ಶೇರ್‌ ಮಾಡಲಾಗಿದೆ. ಫೆಬ್ರವರಿ 21 ರಂದು ಹಂಚಿಕೊಳ್ಳಲಾದ ಈ ವಿಡಿಯೋ 4.3 ಲಕ್ಷ ವೀಕ್ಷಣೆ ಹಾಗೂ ಹಲವಾರು ಕಾಮೆಂಟ್ಸ್‌ (4.3 lakh views and many comments) ಪಡೆದುಕೊಂಡಿದೆ.

ಇದನ್ನು ಓದಿ : ಅರೆಸ್ಟ್ ಮಾಡಲು ಹೋದಾಗ ಹಲ್ಲೆ ಮಾಡಿದ ರೌಡಿಶೀಟರ್ ; ಗುಂಡು ಹಾರಿಸಿದ ಪೊಲೀಸ್.!

ಒಬ್ಬರು ನಿಜಕ್ಕೂ ಅತ್ತೆ ಸೊಸೆ ಜಗಳ ಭಯಾನಕ ಸಮಸ್ಯೆಯಾಗಿದೆ ಎಂದು ಕಮೆಂಟ್ ಮಾಡಿದರೆ, ಮಹಿಳಾ ಸಬಲೀಕರಣ (Women empowerment) ಎಂದು ಕಮೆಂಟ್‌ ಮಾಡಿದ್ದಾರೆ ಮತ್ತೊಬ್ಬರು.

ಜನಸ್ಪಂದನ ನ್ಯೂಸ್, ಬೆಳಗಾವಿ : ಬೆಳಗಾವಿಯಲ್ಲಿ KSRTC ಕಂಡಕ್ಟರ್ ಮೇಲೆ ಹಲ್ಲೆ ನಡೆದ ಪ್ರಕರಣ ಈಗ ಬಿಗ್ ಟ್ವಿಸ್ಟ್ (big twist) ಪಡೆದುಕೊಂಡಿದೆ. ಇದೀಗ ಯುವತಿಯೋರ್ವಳು ನೀಡಿದ ದೂರಿನನ್ವಯ ಕಂಡಕ್ಟರ್‌ನ ವಿರುದ್ಧವೇ ಪೊಲೀಸರು ಪೋಕ್ಸೋ (POCSO) ಕೇಸ್ ದಾಖಲಿಸಿದ್ದಾರೆ.

ನಿನ್ನೆ ದಿನ (ದಿ.21) ಯುವತಿಯೋರ್ವಳು KSRTC ಬಸ್ಸಿನಲ್ಲಿ ಟಿಕೇಟ್‌ (ticket) ಕೊಡುವಂತೆ ಮರಾಠಿಯಲ್ಲಿ ಕೇಳಿದ್ದಾರೆ. ಆಗ ಕಂಡಕ್ಟರ್ (conductor), ಏಕೆ ಕನ್ನಡ ಬರೋದಿಲ್ವ, ಕನ್ನಡದಲ್ಲೇ ಕೇಳಿ ಅಂತ ಬೆಳಗಾವಿಯ ಸುಳೇಬಾವಿ ಹಾಗೂ ಬಾಳೆಕುಂದ್ರಿ ಮಾರ್ಗ  (middle of the Sulebavi and Balekundri routes) ಮಧ್ಯದಲ್ಲಿ ಎಂದಿದ್ದಾರಂತೆ. ಇಷ್ಟಕ್ಕೆ ಕಂಡಕ್ಟರ್ ಮೇಲೆ ಮರಾಠಿ ಯುವಕರು ಬಸ್ ನಿಲ್ಲಿಸಿ ಹಲ್ಲೆ (attacked) ಮಾಡಿದ್ದರು ಅಂತ ಆರೋಪಿಸಲಾಗಿದೆ.‌

ಇದನ್ನು ಓದಿ : ಯುವತಿ ಜೊತೆ ಪಾಲಿಕೆ ಆಯುಕ್ತ ಚಕ್ಕಂದ : ಪತ್ನಿ ಎಂಟ್ರಿ ; ಮುಂದೆನಾಯ್ತು? ವಿಡಿಯೋ ನೋಡಿ.!

ಮರಾಠಿ ಯುವಕರ ಹಲ್ಲೆಯಿಂದ KSRTC ಬಸ್ ಕಂಡಕ್ಟರ್ ಮಹದೇವ ಹುಕ್ಕೇರಿ (Mahadeva Hukkeri) ಅವರನ್ನು ಬಿಮ್ಸ್ ಆಸ್ಪತ್ರೆಗೆ (BIMS Hospital) ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು.

ಇದೇ ವಿಷಯಕ್ಕೆ ಸಂಬಂಧಿಸಿದಂತೆ ಮೂವರನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ (judicial custody) ಒಪ್ಪಿಸಲಾಗಿದೆ.

ಇದನ್ನು ಓದಿ : Arrest ಮಾಡಲು ಹೋದಾಗ ಹಲ್ಲೆ ಮಾಡಿದ ರೌಡಿಶೀಟರ್ ; ಗುಂಡು ಹಾರಿಸಿದ ಪೊಲೀಸ್.!

ಇದೀಗ Conductor ನ ಮೇಲಿನ ಹಲ್ಲೆ ಪ್ರಕರಣ ತಿರುವು ಪಡೆದುಕೊಂಡಿದೆ. ಮರಾಠಿ ಯುವಕರನ್ನು ಕರೆಸಿ ಹಲ್ಲೆ ಮಾಡಿಸಿದ್ದಂತ ಬಾಲಕಿಯ ಮೇಲೆ ನಿರ್ವಾಹಕ (Conductor) ಮಹದೇವ ಹುಕ್ಕೇರಿ ದೌರ್ಜ್ಯನ್ಯಕ್ಕೆ ಯತ್ನಿಸಿದ್ದ ಎಂದು ಆರೋಪಿಸಿ ಯುವತಿಯೋರ್ವಳು ದೂರು ನೀಡಿದ್ದಾರೆ. ಈ ದೂರಿನ ಮೇರೆಗೆ ಮಾರಿಹಾಳ ಪೊಲೀಸರು ಕಂಡಕ್ಟರ್‌ ಮೇಲೆ POCSO Case ದಾಖಲು ಮಾಡಿದ್ದಾರೆಂದು ತಿಳಿದು ಬಂದಿದೆ.

WhatsApp Channel Join Now
Telegram Group Join Now
Instagram Account Follow Now
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!