Monday, March 17, 2025
HomeCrime Newsಮಹಿಳಾ PSI ಮೇಲೆ ಹಲ್ಲೆ ; ಹಲ್ಲೆಯ ವಿಡಿಯೋ ವೈರಲ್.!
spot_img
spot_img
spot_img
spot_img
spot_img

ಮಹಿಳಾ PSI ಮೇಲೆ ಹಲ್ಲೆ ; ಹಲ್ಲೆಯ ವಿಡಿಯೋ ವೈರಲ್.!

WhatsApp Channel Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ಡೆಸ್ಕ್ : ಮಹಿಳಾ ಪಿಎಸ್ಐ (PSI) ಒಬ್ಬರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದಲ್ಲದೇ ಹಲ್ಲೆ ನಡೆಸಿರುವ ಬಗ್ಗೆ ಆಂಧ್ರಪ್ರದೇಶದ ವಿಜಯನಗರ ಜಿಲ್ಲೆಯಲ್ಲಿ ನಡೆದಿದೆ ಎಂದು ವರದಿಯಾಗಿದೆ.

ಮಹಿಳಾ ಸಬ್​ಇನ್ಸ್​ಪೆಕ್ಟರ್ (SI) ಮೇಲೆ ಗಾಂಜಾ ನಶೆಯಲ್ಲಿದ್ದ ಯುವಕರ ಗುಂಪೊಂದು ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿದ ಘಟನೆ ಬೆಳಕಿಗೆ ಬಂದಿದ್ದು, ಘಟನೆಗೆ ಸಂಬಂಧಿಸಿದಂತೆ ಪೊಲೀಸರು 09 ಮಂದಿ ಶಂಕಿತರನ್ನು ಬಂಧಿಸಿದ್ದಾರೆ.

ಇದನ್ನು ಓದಿ : ಮನೆಗಾಗಿ ಮನವಿ ; ನೀ ಬಾ, ಇಲ್ಲಾ ನಿನ್ನ ಮಗಳನ್ನು ಕಳುಹಿಸು ಎಂದ ಗ್ರಾ.ಪಂ. Member.!

ಸದ್ಯ ಘಟನೆಯ ಕುರಿತಾದ ವಿಡಿಯೋ (video) ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಏನಿದೆ ವೈರಲ್ ವಿಡಿಯೋದಲ್ಲಿ .?

ಯುವಕರ ಗುಂಪೊಂದು ಮಹಿಳಾ ಸಬ್‌ಇನ್ಸ್​ಪೆಕ್ಟರ್ (SI) ದೇವಿ ಅವರೊಂದಿಗೆ ಗಲಾಟೆ ಮಾಡುತ್ತಿರುವುದ್ದು, ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿರುವುದನ್ನು ವೈರಲ್ ವಿಡಿಯೋದಲ್ಲಿ ನೋಡಬಹುದಾಗಿದೆ.

ಇದನ್ನು ಓದಿ : SEC Railway Recruitment : 1003 ಹುದ್ದೆಗಳಿಗೆ ಅರ್ಜಿ ಆಹ್ವಾನ.!

ಈ ಗಲಾಟೆ ಮಧ್ಯೆ ಯುವಕರ ಗುಂಪು SI ದೇವಿ ಅವರ ತಲೆಗೂದಲನ್ನು ಹಿಡಿದು ಹಲ್ಲೆ ನಡೆಸುತ್ತಿರುವುದನ್ನು Video ದಲ್ಲಿ ನೋಡಬಹುದಾಗಿದೆ.

ಹಲ್ಲೆ ನಡೆಯುತ್ತಿದಂತೆಯೇ ಸ್ಥಳದಲ್ಲಿದ್ದ ಮತ್ತೊಂದು ಗುಂಪು ಮಧ್ಯಪ್ರವೇಶಿಸಿ SI ದೇವಿ ಅವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಹಿನ್ನೆಲೆ :

ಆಂದ್ರದ ವಿಜಯನಗರ ಜಿಲ್ಲೆಯೊಂದರಲ್ಲಿ ಜಾತ್ರಾ ಪ್ರಯುಕ್ತವಾಗಿ ಡ್ಯಾನ್ಸ್ ಬೇಬಿ ಡ್ಯಾನ್ಸ್ ನೃತ್ಯ (Dance Baby Dance) ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಹೀಗೆ ನೃತ್ಯ ಕಾರ್ಯಕ್ರಮ ನಡೆಯುತ್ತಿರಬೇಕಾದರೆ ಯುವಕರ ಗುಂಪೊಂದು ವೇದಿಕೆ ಏರಿ ಡ್ಯಾನ್ಸರ್​ ಜತೆ ಅಸಭ್ಯವಾಗಿ ವರ್ತಿಸಿದ್ದಾರೆ.

ಇದನ್ನು ಓದಿ : ಪೊಲೀಸ್‌ ಠಾಣೆಯಲ್ಲಿ ಪೊಲೀಸರ Mobile ನ್ನೇ ಎಗರಿಸಿದ ಖತರ್ನಾಕ್ ಆಸಾಮಿ.!

ಆಗ ಕರ್ತವ್ಯದಲ್ಲಿದ್ದ ಎಸ್‌ಐ (SI) ದೇವಿ ಅವರು ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ಸರಿಪಡಿಸಲು ಪ್ರಯತ್ನಿಸಿದ್ದಾರೆ.

ಆಗ ಯುವಕರ ಗುಂಪು ಪೊಲೀಸ್ ಅಧಿಕಾರಿ
ನಡುವೆ ಮಾತಿಗೆ ಮಾತು ಬೆಳೆದು ಗಲಾಟೆ ಪ್ರಾರಂಭವಾಗಿದೆ. ಮಧ್ಯೆ ಯುವಕರ ಗುಂಪು ಪೊಲೀಸ್ ಅಧಿಕಾರಿಯ ಮೇಲೆ ಹಲ್ಲೆ ನಡೆಸಿದ್ದಾರೆ.

ಇದನ್ನು ಓದಿ : CDR ಸಂಗ್ರಹಿಸಿ ಮಾರಾಟ ಮಾಡಿದ ಆರೋಪ : ಹೆಡ್ ಕಾನ್ಸ್‌ಟೇಬಲ್ ಸೇರಿದಂತೆ ಇಬ್ಬರು ಅರೆಸ್ಟ್.!

ಹಲ್ಲೆ ಪ್ರಕರಣಕ್ಕರ ಸಂಬಂಧಿಸಿದಂತೆ 09 ಮಂದಿ ಆರೋಪಿಗಳನ್ನು ಬಂಧಿಸಲಾಗಿದ್ದು, ಓರ್ವ ತಲೆಮಾರಿಸಿಕೊಂಡಿದ್ದಾನೆ.

ಹಲ್ಲೆ ಮಾಡಿದ ಆರೋಪಿಗಳೆಲ್ಲರೂ ಘಟನೆ ನಡೆದಾಗ ಗಾಂಜಾ ಸೇವಿಸಿದ್ದರು ಎಂದು ತಿಳಿದು ಬಂದಿದೆ. ತಲೆ ಮರೆಸಿಕೊಂಡ ಇನ್ನೋರ್ವ ಆರೋಪಿ ಬಂಧನವಾದ ಕೂಡಲೇ ಕೋರ್ಟ್​​ಗೆ ಹಾಜರುಪಡಿಸಲಾಗುವುದು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಹಲ್ಲೆಯ ವಿಡಿಯೋ ಇಲ್ಲಿದೆ :

WhatsApp Channel Join Now
Telegram Group Join Now
Instagram Account Follow Now
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!