Sunday, December 22, 2024
HomeInternationalಪ್ರಪಂಚದಾದ್ಯಂತ ಪ್ರತಿ ವರ್ಷ ಸ್ಟ್ರೋಕ್ ನಿಂದ 50 ಲಕ್ಷಕ್ಕೂ ಅಧಿಕ ಮಂದಿ ಸಾವು : WHO.!
spot_img

ಪ್ರಪಂಚದಾದ್ಯಂತ ಪ್ರತಿ ವರ್ಷ ಸ್ಟ್ರೋಕ್ ನಿಂದ 50 ಲಕ್ಷಕ್ಕೂ ಅಧಿಕ ಮಂದಿ ಸಾವು : WHO.!

WhatsApp Channel Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ಡೆಸ್ಕ್ : ವಿಶ್ವ ಆರೋಗ್ಯ ಸಂಸ್ಥೆಯು (World Health Organization) ಜಗತ್ತಿನಾದ್ಯಂತ ಪ್ರತಿ ವರ್ಷ 50 ಲಕ್ಷಕ್ಕೂ ಹೆಚ್ಚು ಜನರು ಪಾರ್ಶ್ವವಾಯುನಿಂದ ಮೃತಪಡುತ್ತಿದ್ದಾರೆ ಎಂದು ತಿಳಿಸಿದೆ.

ಪ್ರತಿ ವರ್ಷ ಸುಮಾರು 50 ಲಕ್ಷ ಜನರು ಸ್ಟ್ರೋಕ್‌ನಿಂದ ಸಾವಿಗೀಡಾಗುತ್ತಿದ್ದು, ಅಷ್ಟೇ ಸಂಖ್ಯೆಯ ಮಂದಿ ಶಾಶ್ವತವಾಗಿ ಅಂಗವಿಕಲರಾಗುತ್ತಿದ್ದಾರೆ (Permanently disabled).

ಇದನ್ನು ಓದಿ : ಶಬರಿಮಲೆ ದೇವಸ್ಥಾನದಲ್ಲಿಯೇ ಕರ್ನಾಟಕದ ಭಕ್ತ ಆತ್ಮಹತ್ಯೆ ; ಶಾಕಿಂಗ್ Video ವೈರಲ್.!

ಪಾರ್ಶ್ವವಾಯುದಿಂದಾಗಿ (Paralysis) ಸಾವುಗಳು 43 ಪ್ರತಿಶತದಷ್ಟು ಹೆಚ್ಚಾಗಿದ್ದು, ಪಾರ್ಶ್ವವಾಯು ಸಂಭವವೂ 1990 ರಿಂದ 2019 ರವರೆಗೆ 70 ಪ್ರತಿಶತದಷ್ಟು ಹೆಚ್ಚಾಗಿದೆ. ಪಾರ್ಶ್ವವಾಯು ಹರಡುವಿಕೆಯು 102 ಪ್ರತಿಶತದಷ್ಟು ಹೆಚ್ಚಾಗಿದೆ. ಅಲ್ಲದೇ ಅಂಗವೈಕಲ್ಯ ಹೊಂದಾಣಿಕೆಯ ಜೀವನ (Disability Compatible Living) ವರ್ಷಗಳು 143 ಪ್ರತಿಶತದಷ್ಟು ಹೆಚ್ಚಾಗಿದೆ ಎಂದು WHO ಮಾಹಿತಿ ನೀಡಿದೆ.

ಸ್ಟ್ರೋಕ್ ಸಂಭವವೂ ಕಡಿಮೆ ಮತ್ತು ಮಧ್ಯಮ ಆದಾಯದ ದೇಶಗಳಲ್ಲಿ (Low and middle income countries) ಅಧಿಕವಾಗಿದ್ದು, ಇದಕ್ಕೆ ಹತ್ತು ಹಲವು ಕಾರಣಗಳಿವೆ.

* ತೀವ್ರವಾದ ಶಾಖದ ಒಡ್ಡುವಿಕೆ (Extreme heat exposure)
* ಅತಿಯಾದ ವಾಯುಮಾಲಿನ್ಯ (Excessive air pollution)
* ಹೆಚ್ಚುತ್ತಿರುವ ತಾಪಮಾನ
* ಕಳಪೆ ಆರೋಗ್ಯ
* ತರಕಾರಿಗಳ ಕಡಿಮೆ ಸೇವನೆ
* ಅತಿಯಾದ ಧೂಮಪಾನ ಮತ್ತು ಮದ್ಯಪಾನ
* ಸೀಮಿತ ಸಂಪನ್ಮೂಲಗಳು (Limited resources)
* ಅಸಮರ್ಪಕ ಮೂಲ ಸೌಕರ್ಯಗಳು ಇತ್ಯಾದಿ

ಇದನ್ನು ಓದಿ : Video : ಮೆಟ್ರೋ ನಿಲ್ದಾಣದಲ್ಲಿ ಲಿಪ್‌ ಟು ಲಿಪ್‌ ಕಿಸ್ ಮಾಡುತ್ತ ನಿಂತ ಜೊಡಿ ; ಸಾರ್ವಜನಿಕರು ಶಾಕ್.!

ಪಾರ್ಶ್ವವಾಯುವಿನ ಸಂಭವವೂ ಕಳೆದ ಹದಿನೇಳು ವರ್ಷಗಳಲ್ಲಿ ಶೇಕಡಾ 50 ರಷ್ಟು ಹೆಚ್ಚಾಗಿದೆ. ನಾಲ್ಕು ಜನರಲ್ಲಿ ಒಬ್ಬರು ತಮ್ಮ ಜೀವಿತಾವಧಿಯಲ್ಲಿ (lifetime) ಪಾರ್ಶ್ವವಾಯುವಿಗೆ ಒಳಗಾಗುವ ನಿರೀಕ್ಷೆಯಿದೆ ಎಂದು ಗ್ಲೋಬಲ್ ಸ್ಟ್ರೋಕ್ ಫ್ಯಾಕ್ಟ್‌ಶೀಟ್ (Global Stroke Factsheet) ತಿಳಿಸಿದೆ.

ಮೆದುಳು ಉತ್ತಮವಾಗಿ ಕಾರ್ಯನಿರ್ವಹಿಸಲು ಪೋಷಕಾಂಶಗಳ ನಿರಂತರ ಪೂರೈಕೆ ಮತ್ತು ಆಮ್ಲಜನಕ ಅಗತ್ಯವಿದೆ (constant supply of nutrients and oxygen is essential). ರಕ್ತ ಪೂರೈಕೆಯು ಸ್ವಲ್ಪ ಸಮಯದವರೆಗೆ ಸ್ಥಗಿತಗೊಂಡರೆ, ಅದು ತೊಂದರೆಗಳನ್ನು ಉಂಟು ಮಾಡುತ್ತದೆ ಎಂದು ಜಾನ್ಸ್ ಹಾಪ್ಕಿನ್ಸ್ ಮೆಡಿಸಿನ್ ಹೇಳಿದೆ.

ಹಿಂದಿನ ಸುದ್ದಿ : ಶಬರಿಮಲೆ ದೇವಸ್ಥಾನದಲ್ಲಿಯೇ ಕರ್ನಾಟಕದ ಭಕ್ತ ಆತ್ಮಹತ್ಯೆ ; ಶಾಕಿಂಗ್ ವೈರಲ್ ವೈರಲ್.!

ಜನಸ್ಪಂದನ ನ್ಯೂಸ್, ಡೆಸ್ಕ್ : ಶಬರಿಮಲೆಯಲ್ಲಿ ಕರ್ನಾಟಕದ (Karnataka) ಭಕ್ತರೊಬ್ಬರು ತುಪ್ಪದ ಅಭಿಷೇಕ ಕೌಂಟರ್‌ಗಳ ಮಂಟಪದಿಂದ ಹಾರಿ ಆತ್ಮಹತ್ಯೆಗೆ ಶರಣಾದ (suicide attempt) ಘಟನೆ ಸೋಮವಾರ ತಡರಾತ್ರಿ ನಡೆದಿದೆ ಎಂದು ವರದಿಯಿಂದ ತಿಳಿದು ಬಂದಿದೆ.

ಸಾವಿಗೀಡಾದ ಅಯ್ಯಪ್ಪ ಸ್ವಾಮಿಯ ಭಕ್ತ ಕರ್ನಾಟಕದ ಕನಕಪುರದ (Kanakapur) ನಿವಾಸಿ ಕುಮಾರಸ್ವಾಮಿ (40) ಎಂದು ತಿಳಿದು ಬಂದಿದೆ.

ಇದನ್ನು ಓದಿ : ತಾಕತ್ತಿದ್ದರೆ ನಮ್ಮ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಕಾಂಗ್ರೆಸ್ ಶಾಸಕರು, ಸಚಿವರನ್ನು ವಜಾ ಮಾಡಿ ; ಸ್ವಾಮೀಜಿ.!

ಶಬರಿಮಲೆಯಲ್ಲಿ ಎಲ್ಲ ಭಕ್ತರು ಅಯ್ಯಪ್ಪ ಸ್ವಾಮಿಯ ದರ್ಶನಕ್ಕೆ ತೆರಳುತ್ತಿದ್ದ ವೇಳೆ ಭಕ್ತನೋರ್ವ ಆತ್ಮಹತ್ಯೆಗೆ ಯತ್ನಿಸಿದ್ದಾರೆ.

ತುಪ್ಪದ ಅಭಿಷೇಕ ಕೌಂಟರ್‌ಗಳ ಮಂಟಪದಿಂದ (Hall of ghee anointing counters) ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ವರದಿಯಾಗಿದೆ.

ಇದನ್ನು ಓದಿ : ಹಾಸ್ಟೆಲ್‌ನಲ್ಲಿ ಹುಟ್ಟುಹಬ್ಬಕ್ಕೆ ಸ್ನೇಹಿತನಿಗೆ ಚಿತ್ರಹಿಂಸೆ ; ಎಂದೂ ನೋಡಿರದ Video ವೈರಲ್.!

ಭಕ್ತ ಶಬರಿಮಲೆಯ ತುಪ್ಪದ ಅಭಿಷೇಕ ಕೌಂಟರ್ ಗಳ ಮಂಟಪದಿಂದ ಜಿಗಿದು ಆತ್ಮಹತ್ಯೆಗೆ ಯತ್ನಿಸಿದಾಗ ಅಲ್ಲಿದ್ದವರು ತಕ್ಷಣ ಆತನನ್ನು ಸ್ಥಳೀಯ ಆಸ್ಪತ್ರೆಗೆ (local hospital) ಕರೆದೊಯ್ದರು. ಆದರೆ ಚಿಕಿತ್ಸೆ ಫಲಿಸದೇ ಅವರು ಮೃತಪಟ್ಟಿದ್ದಾರೆ ಎಂದು ವರದಿ ತಿಳಿಸಿದೆ.

ಕುಮಾರಸ್ವಾಮಿ ಖಿನ್ನತೆಯಿಂದ (depression) ಬಳಲುತ್ತಿದ್ದು, ಈ ಹಿನ್ನೆಲೆ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಇನ್ನೂ ಘಟನೆ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

WhatsApp Channel Join Now
Telegram Group Join Now
Instagram Account Follow Now
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments