Friday, October 18, 2024
spot_img
spot_img
spot_img
spot_img
spot_img
spot_img
spot_img

ನಡು ಬೀದಿಯಲ್ಲೇ ಪುಟ್ಟ ಬಾಲಕನ ಮೇಲೆ ಮಂಗಗಳ ದಾಳಿ : ಸಹಾಯಕ್ಕೆ ಬಾರದ ಮಹಿಳೆಯರ ನಡೆಗೆ ನೆಟ್ಟಿಗರ ಆಕ್ರೋಶ ; Video ವೈರಲ್.!

spot_img
WhatsApp Group Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ನಡು ಬೀದಿಯಲ್ಲಿ ಓಡಿ ಹೋಗುತ್ತಿದ್ದ ಪುಟ್ಟ ಬಾಲಕನ ಮೇಲೆ ಮಂಗಗಳ ಗುಂಪೊಂದು ದಾಳಿ ಮಾಡಿ ಎಳೆದಾಡಿರುವ ಘಟನೆಯೊಂದು ನಡೆದಿದೆ.

ಇಂಥ ಸಂದರ್ಭದಲ್ಲಿ ಆ ಪುಟ್ಟ ಬಾಲಕನಿಗೆ ಸಹಾಯಕ್ಕೆ ಬರಬೇಕಾಗಿದ್ದ ಸ್ಥಳದಲ್ಲಿದ ಮಹಿಳೆಯರು ಓಡಿ ಹೋಗಿದ್ದಾರೆ. ಮಹಿಳೆಯರ ಈ ಅಮಾನವೀಯ ವರ್ತನೆಗೆ ಭಾರೀ ಆಕ್ರೋಶ ವ್ಯಕ್ತವಾಗಿದೆ. ಸದ್ಯ ಘಟನೆಯ ವಿಡಿಯೋ ಸಿಸಿಟಿವಿಯಲ್ಲಿ ದಾಖಲಾಗಿದ್ದು, ಅದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಮತ್ತಷ್ಟು ಓದಿ : ವಿಚ್ಛೇದನವಿಲ್ಲದೇ ಮದುವೆ : Supreme ಕೋರ್ಟಿನಿಂದ ಮಹತ್ವದ ತೀರ್ಪು.!

ಪುಟ್ಟ ಬಾಲಕನ್ನೋಬ್ಬ ತನ್ನಷ್ಟಕ್ಕೆ ತಾನು ಓಣಿಯಲ್ಲಿ ಓಡಿ ಹೋಗುತ್ತಿರುವ ಸಂದರ್ಭದಲ್ಲಿ ಅಲ್ಲಿಯೇ ಇದ್ದ ಮಂಗಗಳ ಗುಂಪೊಂದು ದಾಳಿ ಮಾಡಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ. ಇನ್ನು ಮಂಗಗಳ ದಾಳಿ ಮಾಡಿ ಎಳೆದಾಡುತ್ತಿರುವ ಪರಿಣಾಮ ಬಾಲಕ ಹೆದರಿ ಕಿರುಚಾಡಿದರೂ ಸಹ ಸ್ಥಳದಲ್ಲಿದ್ದ 3-4 ಮಹಿಳೆಯರು ತಮಗೇನಾದರು ಮಂಗಗಳು ಮಾಡಿಯ್ಯಾವು ಎಂದು ಎಸ್ಕೇಪ್‌ ಆದರೆ ಹೊರತು, ಬಾಲಕನ ಸಹಾಯಕ್ಕೆ ಬಾರದೆ ಅಮಾನವೀಯತೆ ತೋರಿದ್ದಾರೆ. ಮಹಿಳೆಯರ ನಡೆಗೆ ನೆಟ್ಟಿಗರು ಭಾರೀ ಆಕ್ರೋಶ ಹೊರಹಾಕಿದ್ದಾರೆ.

5 ವರ್ಷ ವಯಸ್ಸಿನ ಬಾಲಕನ ಮೇಲೆ ಮಂಗಗಳ ಗುಂಪೊಂದು ದಾಳಿ ನಡೆದಾಗ ಅಲ್ಲಿದ್ದ ಮೂರು ನಾಲ್ಕು ಹೆಂಗಸರು ಮಗುವಿನ ಸಹಾಯಕ್ಕೂ ಬಾರದೇ ಇದ್ದದನ್ನು ಗಮನಿಸಿದ ಸ್ಥಳೀಯ ವ್ಯಕ್ತಿಯೊಬ್ಬರು ಓಡಿ ಬಂದು ಬಾಲಕನನ್ನು ರಕ್ಷಣೆ ಮಾಡಿದ್ದಾರೆ. ಈ ದೃಶ್ಯ ಅಲ್ಲಿದ್ದ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಮತ್ತಷ್ಟು ಓದಿ : Video : ಪೆಟ್ರೋಲ್ ತುಂಬಿದಕ್ಕೆ ಹಣ ಕೇಳಿದ ಬಂಕ್ ಸಿಬ್ಬಂದಿ ; ಕಾರು ಗುದ್ದಿಸಿದ ಪೊಲೀಸ್ ಅಧಿಕಾರಿ ; ಬಂಧನ, ಅಮಾನತು.! 

gharkekalesh ಹೆಸರಿನ ಎಕ್ಸ್‌ ಖಾತೆಯಲ್ಲಿ ಈ ಘಟನೆಯ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಜುಲೈ 14 ರಂದು ಹಂಚಿಕೊಳ್ಳಲಾದ ಈ ವಿಡಿಯೋ 1.7 ಮಿಲಿಯನ್‌ ವೀಕ್ಷಣೆಗಳನ್ನು, 282.6K Views ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ.

ಒಬ್ಬ ಬಳಕೆದಾರರು ʼನೋಡಿ ಆ ಹೆಂಗಸರು ಅಷ್ಟು ಹತ್ತಿರದಲ್ಲಿದ್ದರೂ ಮಗುವಿಗೆ ಸಹಾಯ ಮಾಡಲಿಲ್ಲʼ ಎಂದು ಕಿಡಿ ಕಾರಿದ್ದಾರೆ. ಇನ್ನೂ ಅನೇಕರು ಮಗುವಿನ ಸಹಾಯಕ್ಕೆ ಧಾವಿಸದ ಆ ಹೆಂಗಸರ ನಡೆಗೆ ಭಾರೀ ಆಕ್ರೋಶ ವ್ಯಕ್ತಪಡಿಸಿದ್ದಾರೆ.

WhatsApp Group Join Now
Telegram Group Join Now
Instagram Account Follow Now
spot_img
spot_img
- Advertisment -spot_img