ಜನಸ್ಪಂದನ ನ್ಯೂಸ್, ಡೆಸ್ಕ್ : ಕೋಲ್ಕತ್ತಾ ಮೂಲದ ಮಾಡೆಲ್ ಹಾಗೂ ಪ್ರಭಾವಿಯಾಗಿರುವ ಸನ್ನತಿ ಮಿತ್ರಾ (Sannati Mitra) 2017ರಲ್ಲಿ ಮಿಸ್ ಕೋಲ್ಕತ್ತಾ (Miss Kolkata) ಕಿರೀಟವನ್ನೂ ಗೆದ್ದಿದ್ದಾರೆ. ಹಲವು ರೀತಿಯಲ್ಲಿ ಹೆಸರು ಮಾಡಿರುವ ಸನ್ನತಿ ಮಿತ್ರ ಇದೀಗ ಕ್ವಾಬೋ ಮೇ ಜೋ ಆಯೆ (Mere Kwabo Mein Jo Aaye) ಹಾಡಿಗೆ ಡ್ಯಾನ್ಸ್ ಮಾಡಿರುವ ವಿಡಿಯೋ ಭಾರೀ ವಿವಾದ ಸೃಷ್ಟಿಸಿದೆ.
ದೆಹಲಿಯ ಇಂಡಿಯಾ ಗೇಟ್ ಬಳಿ ಶಾರುಖ್ ಮತ್ತು ಕಾಜೋಲ್ ಅಭಿನಯದ ದಿಲ್ವಾಲೆ ದುಲ್ಹನಿಯಾ ಲೇ ಜಾಯೇಂಗೆ (Dilwale Dulhania Le Jayenge) ಚಿತ್ರದ ಕ್ವಾಬೋ ಮೇ ಜೋ ಆಯೆ, ಕೇವಲ ಟವೆಲ್ (towel) ಧರಿಸಿದ್ದು, ಆಕೆ ಡ್ಯಾನ್ಸ್ ಮಾಡುವಾಗ India Gate ಬಳಿ ದೊಡ್ಡ ಜನ ಸೇರಿದ್ದರು. ವಿಡಿಯೋದಲ್ಲಿ ಆಕೆಯ ಕುಟುಂಬ ಸದಸ್ಯರು ಮಕ್ಕಳೊಂದಿಗೆ ಇದ್ದಾರೆ. ಇದೆಲ್ಲದರ ನಡುವೆ ಯುವತಿ ಸೊಂಟಕ್ಕೆ ಕೇವಲ ಟವೆಲ್ ಕಟ್ಟಿಕೊಂಡು ಡ್ಯಾನ್ಸ್ (Dance) ಮಾಡಿದ್ದಾಳೆ.
ಇದನ್ನು ಓದಿ : ಬೆಳಗಾವಿ : ASI ನೇಣಿಗೆ ಶರಣು.!
ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣವಾದ Instagramದಲ್ಲಿ ವೈರಲ್ ಆಗಿದ್ದು, 4.8 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ವಿಡಿಯೋ ಅಪ್ಲೋಡ್ ಮಾಡಿರುವ ಸನ್ನತಿ ಅದಕ್ಕೆ “ಹ್ಯಾಪಿ ಇಂಟರ್ ನ್ಯಾಷನಲ್ ಮೆನ್ಸ್ ಡೇ” (Happy International Men’s Day) ಎಂದು ಶೀರ್ಷಿಕೆ ನೀಡಿದ್ದಾರೆ. ಈ ವೀಡಿಯೋ ಈಗ ಪರ ಮತ್ತು ವಿರುದ್ಧ ಪ್ರತಿಕ್ರಿಯೆಗಳ ಅಲೆಗೆ ಸಾಕ್ಷಿಯಾಗಿದೆ. ಸಭ್ಯತೆಯ ಎಲ್ಲ ಎಲ್ಲೆಗಳನ್ನು ದಾಟಿದೆ ಎಂದು ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪೋಸ್ಟ್ ಮಾಡಿದ ಕೇವಲ ಎರಡು ಗಂಟೆಗಳಲ್ಲಿ ಈ ವಿಡಿಯೋ 2 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದೆ. ಸನ್ನತಿ ಮಿತ್ರ ಅವರ ಪೋಸ್ಟ್ ವಿರುದ್ಧ ಅಷ್ಟೇ ಸಂಖ್ಯೆಯ ಜನರು ಕಮೆಂಟ್ ಮಾಡಿದ್ದಾರೆ. ಇದು ಜನಪ್ರಿಯತೆಗಾಗಿ ಮಾಡಿದ ಅಗ್ಗದ ಪಬ್ಲಿಕ್ ಸ್ಟಂಟ್ (cheap public stunt) ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದು ಅಶ್ಲೀಲತೆಯ ಪರಮಾವಧಿ (height of obscenity ) ಎಂದು ಹಲವರು ಪ್ರತಿಕ್ರಿಯಿಸಿದ್ದು, ಕೂಡಲೇ ಸನ್ನತಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಇದನ್ನು ಓದಿ : Suspend : ಕರ್ತವ್ಯ ಲೋಪ : PSI ಅಮಾನತು.!
ಸನ್ನತಿ ಮಿತ್ರ ವಿವಾದಕ್ಕೆ ಕಾರಣವಾಗಿರುವುದು ಇದೇ ಮೊದಲೇನಲ್ಲ. ದಸರಾ ಸಂದರ್ಭದಲ್ಲಿ ಸನ್ನತಿ ಮಿತ್ರ ಅವರು ಅರೆಬೆತ್ತಲೆಯಾಗಿ ದುರ್ಗಾ ಮಂಟಪ (Durga pandal ) ದ ಮುಂದೆ ನಿಂತು high heels ಧರಿಸಿ ದೇವರ ಚಿತ್ರಗಳನ್ನು ತೆಗೆಸಿಕೊಂಡು ವಿವಾದಕ್ಕೆ (controversy) ಕಾರಣರಾಗಿದ್ದರು. ಇದೀಗ ಇಂಡಿಯಾ ಗೇಟ್ ಬಳಿ ಟವೆಲ್ ಸುತ್ತಿಕೊಂಡು ಡ್ಯಾನ್ಸ್ ಮಾಡುವ ಮೂಲಕ ಮತ್ತೊಂದು ವಿವಾದ, ಆಕ್ರೋಶ, ವಿರೋಧವನ್ನು (controversy, outrage, and opposition) ಮೈಮೇಲೆ ಎಳೆದುಕೊಂಡಿದ್ದಾಳೆ.
View this post on Instagram